ಕನ್ನಡ ಸಿನಿಮಾರಂಗದಲ್ಲಿ ಈ ಎರಡು ಕರ್ನಾಟಕ ರತ್ನಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಡಾ ರಾಜ್‌ಕುಮಾರ್ (Dr Rajkumar) ಹಾಗೂ ಡಾ ವಿಷ್ಣುವರ್ಧನ್ (Dr Vishnuvardhan) ಈ ಇಬ್ಬರೂ ಮೇರುನಟರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಮೂಲ್ಯ ಹಾಗೂ ಅಪಾರ. ಇವರಿಬ್ಬರ ಮಧ್ಯೆ ಬರೋಬ್ಬರಿ 20 ವರ್ಷಕ್ಕಿಂತಲೂ ಹೆಚ್ಚಿನ ವಯಸ್ಸಿನ ಅಂತರವಿದ್ದಾಗಲೂ ಅವರಿಬ್ಬರೂ ಚಿತ್ರರಂಗದ ಧ್ರುವತಾರೆಗಳಾಗಿ ಮಿಂಚಿದವರು!
ಎರಡು ಕರ್ನಾಟಕ ರತ್ನಗಳ ಮಾತುಕತೆಯ ಸ್ಟೋರಿ ಇಲ್ಲಿದೆ ನೋಡಿ!
ಕನ್ನಡ ಸಿನಿಮಾರಂಗದಲ್ಲಿ ಈ ಎರಡು ಕರ್ನಾಟಕ ರತ್ನಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಡಾ ರಾಜ್‌ಕುಮಾರ್ (Dr Rajkumar) ಹಾಗೂ ಡಾ ವಿಷ್ಣುವರ್ಧನ್ (Dr Vishnuvardhan) ಈ ಇಬ್ಬರೂ ಮೇರುನಟರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಅಮೂಲ್ಯ ಹಾಗೂ ಅಪಾರ. ಇವರಿಬ್ಬರ ಮಧ್ಯೆ ಬರೋಬ್ಬರಿ 20 ವರ್ಷಕ್ಕಿಂತಲೂ ಹೆಚ್ಚಿನ ವಯಸ್ಸಿನ ಅಂತರವಿದ್ದಾಗಲೂ ಅವರಿಬ್ಬರೂ ಚಿತ್ರರಂಗದ ಧ್ರುವತಾರೆಗಳಾಗಿ ಮಿಂಚುತ್ತ ಮಿಂಚುತ್ತ ಒಬ್ಬರನ್ನೊಬ್ಬರು ಗೌರವಿಸುತ್ತ ಸಾಗುತ್ತಿದ್ದರು. ಹೊರಗಡೆ ಅವರಿಬ್ಬರ ಮಧ್ಯೆ ದ್ವೇಷವಿದೆ ಎಂಬ ಸುದ್ದಿ ಹರಿದಾಡುತ್ತಿದ್ದರೂ ಅಂತರಂಗದಲ್ಲಿ ಹಾಗೂ ತೆರೆಮರೆಯಲ್ಲಿ ಅವರಿಬ್ಬರ ಸಂಬಂಧ ಚೆನ್ನಾಗಿಯೇ ಇತ್ತು ಎಂದು ಅಮದು ಅವರನ್ನು ಬಲ್ಲವರು ಹೇಳುವುದು ಈಗ ಗುಟ್ಟಿನ ಸಂಗತಿಯೇನಲ್ಲ.
ಈ ಮಾತಿಗೆ ಸಾಕ್ಷಿ ಎಂಬಂತೆ, ವಿಷ್ಣುವರ್ಧನ್ ಅವರಿಗೆ ಹಿರಿಯಣ್ಣ ಎಂಬಂತಿದ್ದ ಡಾ ರಾಜ್‌ಕುಮಾರ್ ಅವರೊಮ್ಮೆ ತಮ್ಮನಂತಿದ್ದ ವಿಷ್ಣುವರ್ಧನ್ ಬೇಸರದಲ್ಲಿದ್ದಾಗ ಆ ಒಂದು ಕಿವಿಮಾತು ಹೇಳಿದ್ದರಂತೆ. ಅಂದು ಹೇಳಿದ ಆ ಮಾತು ಅಂದಿನವರು ಎಲ್ಲೋ ಹಂಚಿಕೊಂಡಿದ್ದು ಇಂದು ಸೋಷಿಯಲ್ ಮೀಡಿಯಾಗಳ ಇಡೀ ಜಗತ್ತನ್ನು ಸುತ್ತುತ್ತಿದೆ. ಹಾಗಿದ್ದರೆ, ಆ ದಿನ ನಟ ವಿಷ್ಣುವರ್ಧನ್ ಅವರು ಏಕೆ ರಾಜ್‌ಕುಮಾರ್ ಅವರಿಂದ ಕಿವಿಮಾತು ಕೇಳಬೇಕಾಗಿ ಬಂತು? ಇಲ್ಲಿದೆ ಆ ರಹಸ್ಯ ಸಂಗತಿ ನೋಡಿ..
‘ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಡಾ. ರಾಜ್‌ಕುಮಾರ್ ಅಂದು ಹೇಳಿದ ಆ ಒಂದು ಕಿವಿಮಾತು ಏನು? ಇಂದಿಗೂ ಯಾರಿಗೂ ತಿಳಿಯದ ಆ ರಹಸ್ಯ ಘಟನೆ ಇಲ್ಲಿದೆ!’
ಕನ್ನಡ ಚಿತ್ರರಂಗದ ಇಬ್ಬರು ದ್ರುವತಾರೆಗಳಾದ ಡಾ. ರಾಜ್‌ಕುಮಾರ್ ಮತ್ತು ವಿಷ್ಣುವರ್ಧನ್ ಅವರ ನಡುವಿನ ಸ್ನೇಹ ಮತ್ತು ಗೌರವದ ಬಗ್ಗೆ ಇಂದಿಗೂ ಅನೇಕ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಗಾಂಧಿನಗರದ ಹಳೆಯ ನೆನಪುಗಳನ್ನು ಕೆದಕಿದಾಗ, ಒಂದು ರೋಚಕ ವಿಷಯ ಹೊರಬರುತ್ತದೆ.
ಹೆಗಲ ಮೇಲೆ ಕೈಹಾಕಿ ಒಂದು ಹೇಳಿದ್ದ ಆ ಒಂದು ಅಮೂಲ್ಯವಾದ ಮಾತು!
ಒಮ್ಮೆ ವಿಷ್ಣುವರ್ಧನ್ ಅವರು ಸಿನಿಮಾದಲ್ಲಿನ ಸಣ್ಣ ಗೊಂದಲವೊಂದರಿಂದ ಬೇಸರಗೊಂಡಿದ್ದಾಗ, ಅಣ್ಣಾವ್ರು ಅವರ ಹತ್ತಿರ ಬಂದು ಹೆಗಲ ಮೇಲೆ ಕೈಹಾಕಿ ಒಂದು ಅಮೂಲ್ಯವಾದ ಮಾತು ಹೇಳಿದ್ದರಂತೆ. "ವಿಷ್ಣು, ಈ ಬಣ್ಣದ ಪ್ರಪಂಚದಲ್ಲಿ ಏನೇ ಟೀಕೆಗಳು ಬಂದರೂ ನಾವು ಜನರ ಪ್ರೀತಿಯನ್ನು ಮಾತ್ರ ನೋಡಬೇಕು. ತಾಳ್ಮೆಯೇ ನಮಗೆ ಶ್ರೀರಕ್ಷೆ" ಎಂದು ಸಮಾಧಾನಪಡಿಸಿದ್ದರು. ಈ ಒಂದು ಕಿವಿಮಾತು ವಿಷ್ಣು ಅವರ ವೃತ್ತಿಜೀವನದಲ್ಲಿ ದೊಡ್ಡ ಧೈರ್ಯ ತುಂಬಿತ್ತು ಎನ್ನಲಾಗುತ್ತದೆ.
ಈ ಮಾತು ಸದ್ಯ ಫೇಸ್‌ಬುಕ್ ಪೇಜ್ 'ವಿವಿಧ ವಿಸ್ಮಯ'ದಲ್ಲಿ ಓಡಾಡುತ್ತಿದೆ. ಇದನ್ನು ಮೆಚ್ಚಿ ಸಾಕಷ್ಟು ಕಾಮೆಂಟ್‌ಗಳು ಹರಿದುಬರುತ್ತಿವೆ. ಒಟ್ಟಿನಲ್ಲಿ ಡಾ ರಾಜ್‌ಕುಮಾರ್ ಹಾಗೂ ವಿಷ್ಣುವರ್ಧನ್ ಅವರಿಬ್ಬರಿಗೆ ಸಂಬಂಧಿಸಿದ ಎಲ್ಲಾ ಸಂಗತಿಗಳು ಇಂದಿಗೂ ಕೂಡ ಬಹಳಷ್ಟು ಕುತೂಹಲ ಕೆರಳಿಸುವುದರ ಜೊತೆಗೆ ಚರ್ಚೆಗೆ ದಾರಿ ಮಾಡಿಕೊಡುತ್ತವೆ ಎನ್ನಬಹುದು.
ಸುದ್ದಿ ಕೃಪೆ- ವಿವಿಧ ವಿಸ್ಮಯ (ಫೇಸ್‌ಬುಕ್ ಪೇಜ್)
ಮಾಲಾಶ್ರೀಯಲ್ಲಿ 'ಅದೊಂದು ಸೀಕ್ರೆಟ್' ಇತ್ತು, ಅದ್ರಿಂದ್ಲೇ ಟಾಪ್ ಸ್ಟಾರ್ ಆದ್ರು! ಯಾರೂ ಹೇಳದ ರಹಸ್ಯ ಹೇಳಿದ ವಾಣಿಶ್ರೀ
















