ಮೊಬೈಲ್ ಖರೀದಿ ಪ್ಲಾನ್‌ನಲ್ಲಿ ಇರೋರಿಗೆ ಒನ್ ಪ್ಲಸ್‌ ಭರ್ಜರಿ ಸುದ್ದಿ ನೀಡಿದೆ. ತನ್ನ OnePlus N6 5G ಸ್ಮಾರ್ಟ್‌ ಫೋನ್ ಬೆಲೆಯಲ್ಲಿ ಭಾರೀ ಕಡಿತ ಮಾಡಲಾಗಿದೆ. ಈ ಕುರಿತ ಸ್ಟೋರಿ ಇಲ್ಲಿದೆ. ಓದಿ..

ದಸರಾ, ದೀಪಾವಳಿ.. ಸೇರಿದಂತೆ ಹಬ್ಬದ ಸೀಸನ್‌ಗಳು ಇನ್ನೇನು ಶುರವಾಗಲಿವೆ. ಈ ಹಬ್ಬ ಹುಣ್ಣಿಮೆ ಸೀಸನ್ ಬಂತು ಅಂದ್ರೆ ಸಾಕು ಇ-ಕಾಮರ್ಸ್ ಬ್ಯುಸಿನೆಸ್‌ ಪ್ಲಾಟ್‌ಫಾರ್ಮ್‌ಗಳಿಗೆ ದೊಡ್ಡ ಹಬ್ಬದ ಸಂಭ್ರಮ. ಅಮೇಜಾನ್, ಫ್ಲಿಪ್‌ಕಾರ್ಟ್‌ನಂಥ ದೈತ್ಯ ಸಂಸ್ಥೆಗಳು ಮಾರ್ಕೆಟಿಂಗ್ ಲಾಭದ ಲೆಕ್ಕಾಚಾರ ಹಾಕುತ್ತ ಇರುತ್ತಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅಮೇಜಾನ್ ಫೆಸ್ಟಿವಲ್ ಸೇಲ್ ಮಾಡೋದಾಗಿ ಘೋಷಿಸಿದೆ. ಈ ಮಧ್ಯೆ ಒನ್ ಪ್ಲಸ್ ಗ್ರಾಹಕರಿಗೆ ಭರ್ಜರಿ ಆಫರ್ ನೀಡಿದೆ..

ಬ್ಯಾಂಕ್ ಕಾರ್ಡ್, ಹಳೆಯ ಫೋನ್ ಇದ್ದರೆ ಇನ್ನೂ ಕಡಿಮೆ ಬೆಲೆ 

OnePlus N6 5G ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಕಡಿತ ಮಾಡಿದೆ. ಕೆಲವು ತಿಂಗಳುಗಳ ಹಿಂದಷ್ಟೇ OnePlus N6 5G ಫೋನ್ ಲಾಂಚ್ ಆಗಿತ್ತು. 4GB RAM + 128GB ಸ್ಟೋರೇಜ್ ಸಿರೀಸ್‌ನ ಮೊದಲ ಬೆಲೆ 22,999 ರೂಪಾಯಿ ಆಗಿತ್ತು. 6GB RAM ಆವೃತ್ತಿಯು 24,999 ರೂಪಾಯಿ ಬೆಲೆ ಇತ್ತು. ಇತ್ತೀಚೆಗೆ ಬೆಲೆ ಏರಿಕೆ ಮಾಡಲಾಗಿತ್ತು. ಬೆಲೆ ಏರಿಕೆ ನಂತರ ಅಮೆಜಾನ್‌ನಲ್ಲಿ ಇದರ ಬೆಲೆ 30,999 ರೂ.ಗೆ ತಲುಪಿತ್ತು. ಇದೀಗ ಈ ಫೋನ್ ಬೆಲೆಯಲ್ಲಿ 6,000 ರೂಪಾಯಿ ಇಳಿಕೆ ಮಾಡಲಾಗಿದೆ. ಇದೀಗ ಆ ಫೋನ್ ಅನ್ನು ನೀವು 24,999 ರೂಪಾಯಿಗೆ ಖರೀದಿ ಮಾಡಬಹುದಾಗಿದೆ.

ಇನ್ನು, ಆಯ್ದ ಕೆಲವು ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿಕೊಂಡು ಖರೀದಿಸಿದ್ರೆ ಹೆಚ್ಚುವರಿಯಾಗಿ 1,500 ರೂಪಾಯಿಗಳ ಡಿಸ್ಕೌಂಟ್ ಸಿಗಲಿದೆ. ಒಂದು ವೇಳೆ ಫೋನ್ ಖರೀದಿ ವೇಳೆ ನೀವು ಬ್ಯಾಂಕ್ ಕಾರ್ಡ್‌ ಬಳಸಿದ್ರೆ ಕೇವಲ 23,499 ರೂಪಾಯಿಗೆ ಇಳಿಯಲಿದೆ. ಇನ್ನು, ತಮ್ಮ ಹಳೆಯ ಮೊಬೈಲ್ ಕೊಟ್ಟು ಹೊಸ ಫೋನ್ ಖರೀದಿಸೋರಿಗೂ ಇಲ್ಲಿ ಅವಕಾಶ ಇದೆ. ಆ ಮೂಲಕ ನೀವು ಇನ್ನಷ್ಟು ಕಡಿಮೆ ಬೆಲೆಗೆ ಫೋನ್ ಖರೀದಿ ಮಾಡಬಹುದಾಗಿದೆ.

OnePlus N6 5G ವಿಶೇಷತೆಗಳು ಏನು?

  • ಸ್ಮಾರ್ಟ್‌ಫೋನ್ 6.8 ಇಂಚಿನ HD+ LCD ಡಿಸ್ಪ್ಲೇ
  • 120Hz ರಿಫ್ರೆಶ್ ರೇಟ್, 1,200 ನಿಟ್ಸ್ ಪೀಕ್ ಬ್ರೈಟ್‌ನೆಸ್ ಸಪೋರ್ಟ್
  • 8.88mm ಸ್ಲಿಮ್ ಆಗಿದ್ದರೂ, ಗಟ್ಟಿಮುಟ್ಟಾದ ಫೋನ್
  • ಫೋನ್‌ನ ಪ್ರಮುಖ ಆಕರ್ಷಣೆ 8,000mAh ಬ್ಯಾಟರಿ ಸಾಮರ್ಥ್ಯ
  • 45W SuperVOOC ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ನೀಡಲಾಗಿದೆ
  • ಮೀಡಿಯಾಟೆಕ್ ಡೈಮೆನ್ಸಿಟಿ 6360 ಅಪೆಕ್ಸ್ ಪ್ರೊಸೆಸರ್
  • 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್
  • ಸುರಕ್ಷತೆಗಾಗಿ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್
  • 10x ಡಿಜಿಟಲ್ ಜೂಮ್ ಸಾಮರ್ಥ್ಯದ 50MP ಪ್ರಮುಖ ಕ್ಯಾಮೆರಾ
  • ಸೆಕೆಂಡರಿ ಸೆನ್ಸಾರ್ ಒಳಗೊಂಡ ಡ್ಯುಯಲ್ ಕ್ಯಾಮೆರಾ ಸೆಟಪ್
  • ಸೆಲ್ಫಿ, ವಿಡಿಯೋ ಕರೆಗಳಿಗಾಗಿ 8MP ಫ್ರಂಟ್ ಕ್ಯಾಮೆರಾ ಲಭ್ಯವಿದೆ
  • 7 ವರ್ಷಗಳ ಕಾಲ ಸೆಕ್ಯುರಿಟಿ ಅಪ್ಡೇಟ್ಸ್ ಸಿಗಲಿದೆ

25 ಸಾವಿರ ಬೆಲೆಯೊಳಗೆ ಮೊಬೈಲ್ ಖರೀದಿ ಮಾಡುವ ಪ್ಲಾನ್‌ನಲ್ಲಿ ನೀವೇನಾದರೂ ಇದ್ದರೆ ಒಳ್ಳೆಯ ಆಫರ್ ಇದಾಗಿದೆ. ದೀಪಾವಳಿಗೆ ಮೊಬೈಲ್ ಅಥವಾ ದಸರಾಗೆ ಮೊಬೈಲ್ ಖರೀದಿ ಮಾಡಬೇಕು ಅಂದ್ಕೊಂಡವರಿಗೆ ಒಳ್ಳೆಯ ಅವಕಾಶ.