MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Karnataka Weather Update
Karnataka Water Crisis
Bengaluru Drone Survey
Karnataka Marriage Registration Rules
Karnataka Lokayukta Raid
Mangaluru Railway Division
Kushtagi-Hubballi New Train
Kadamba Era Inscription
Today's Horoscope
108 Ambulance Strike Karnataka
Kasturirangan Report
Dharmasthala Case Re-investigation
Ayodhya Ram Mandir Theft Case
  • Home
  • Technology
  • Mobiles
  • 200MP ಲೈಕಾ ಕ್ಯಾಮೆರಾ, 8500mAh ಬ್ಯಾಟರಿಯೊಂದಿಗೆ ಬರ್ತಿದೆ ಶಿಯೋಮಿ 18 ಪ್ರೊ! iPhoneಗೆ ಶುರುವಾಯ್ತು ನಡುಕ!

200MP ಲೈಕಾ ಕ್ಯಾಮೆರಾ, 8500mAh ಬ್ಯಾಟರಿಯೊಂದಿಗೆ ಬರ್ತಿದೆ ಶಿಯೋಮಿ 18 ಪ್ರೊ! iPhoneಗೆ ಶುರುವಾಯ್ತು ನಡುಕ!

ಶಿಯೋಮಿ 18 ಪ್ರೊ ಸರಣಿ ಸೆಪ್ಟೆಂಬರ್ 23ರಂದು ಲಾಂಚ್ ಆಗ್ತಿದೆ. 8,500 mAh ಬ್ಯಾಟರಿ, 200 MP ಲೈಕಾ ಕ್ಯಾಮೆರಾದಂತಹ ಸಖತ್ ಫೀಚರ್ಸ್ ಈ ಫೋನ್‌ನಲ್ಲಿದೆ. ಆದ್ರೆ ಇದರ ಬೆಲೆ ಮಾತ್ರ ಸದ್ಯಕ್ಕೆ ಸಸ್ಪೆನ್ಸ್.

3 Min read
Author : Sathish Kumar KH
Published : Sep 22 2026, 11:11 AM IST
Share this Photo Gallery
  • FB
  • TW
  • Linkdin
  • Whatsapp
15
ಶಿಯೋಮಿ 18 ಪ್ರೊ
Image Credit : Memeburn

ಶಿಯೋಮಿ 18 ಪ್ರೊ

ಶಿಯೋಮಿ 18 ಪ್ರೊ ಸರಣಿಯ ಲಾಂಚ್ ಡೇಟ್ ಫಿಕ್ಸ್ ಆಗಿದೆ. ಸೆಪ್ಟೆಂಬರ್ 23, 2026ರಂದು ಚೀನಾದಲ್ಲಿ ಶಿಯೋಮಿ 18 ಪ್ರೊ ಹಾಗೂ ಶಿಯೋಮಿ 18 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಫೋನ್‌ಗಳು ರಿಲೀಸ್ ಆಗ್ತಿವೆ. ಚೀನಾ ಕಾಲಮಾನ ಸಂಜೆ 7 ಗಂಟೆಗೆ (ಭಾರತೀಯ ಕಾಲಮಾನ ಸಂಜೆ 4.30) ಕಾರ್ಯಕ್ರಮ ಶುರುವಾಗಲಿದೆ. ಸದ್ಯದ ಮಾಹಿತಿ ಪ್ರಕಾರ, ರೆಗ್ಯುಲರ್ ಶಿಯೋಮಿ 18 ಮಾಡೆಲ್ ಈಗಲೇ ಬರ್ತಿಲ್ಲ. ಆ ಫೋನ್ 2026ರ ಕೊನೆಗೆ ಅಥವಾ 2027ರ ಆರಂಭದಲ್ಲಿ ಬರಬಹುದು. ಹೊಸ ಪ್ರೊ ಸರಣಿಯ ದೊಡ್ಡ ಹೈಲೈಟ್ ಅಂದ್ರೆ ಅದರ ಬ್ಯಾಟರಿ. ಶಿಯೋಮಿ 18 ಪ್ರೊ ಫೋನ್‌ನಲ್ಲಿ 7,000 mAh ಬ್ಯಾಟರಿ ಇದ್ರೆ, ಶಿಯೋಮಿ 18 ಪ್ರೊ ಮ್ಯಾಕ್ಸ್‌ನಲ್ಲಿ ಬರೋಬ್ಬರಿ 8,500 mAh ಬ್ಯಾಟರಿ ಕೊಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಪ್ರೊ ಮಾಡೆಲ್‌ಗಿಂತ 1,500 mAh ಹೆಚ್ಚು ಬ್ಯಾಟರಿ
Image Credit : Twitter

ಪ್ರೊ ಮಾಡೆಲ್‌ಗಿಂತ 1,500 mAh ಹೆಚ್ಚು ಬ್ಯಾಟರಿ

ಇನ್ನು ಶಿಯೋಮಿ 18 ಪ್ರೊ ಮಾಡೆಲ್‌ಗಿಂತ ಪ್ರೊ ಮ್ಯಾಕ್ಸ್‌ನಲ್ಲಿ 1,500 mAh ಹೆಚ್ಚು ಬ್ಯಾಟರಿ ಸಿಗುತ್ತೆ. ಹಳೆಯ ಶಿಯೋಮಿ 17 ಪ್ರೊ ಮ್ಯಾಕ್ಸ್‌ಗೆ ಹೋಲಿಸಿದ್ರೂ ಹೊಸ ಫೋನ್‌ನಲ್ಲಿ 1,000 mAh ಹೆಚ್ಚು ಬ್ಯಾಟರಿ ಸಾಮರ್ಥ್ಯ ಇದೆ. ಬ್ಯಾಟರಿ ಸೆಲ್‌ಗಳಲ್ಲಿ ಶೇ.32ರಷ್ಟು ಸಿಲಿಕಾನ್ ಬಳಸಿದ್ದಾರೆ. ಸಾಮಾನ್ಯ ಗ್ರಾಫೈಟ್ ಬ್ಯಾಟರಿಗಳಿಗಿಂತ ಸಿಲಿಕಾನ್ ತಂತ್ರಜ್ಞಾನದಲ್ಲಿ ಹೆಚ್ಚು ಪವರ್ ಸೇವ್ ಮಾಡಬಹುದು. ಇದರಿಂದ ಫೋನ್ ದಪ್ಪ ಆಗದಂತೆ ದೊಡ್ಡ ಬ್ಯಾಟರಿ ಕೊಡೋಕೆ ಸಾಧ್ಯವಾಗಿದೆ. ಆದ್ರೆ 8,500 mAh ಬ್ಯಾಟರಿ ಇದೆ ಅಂದಾಕ್ಷಣ 7,000 mAh ಮಾಡೆಲ್‌ಗಿಂತ ನಿಖರವಾಗಿ ಶೇ.21ರಷ್ಟು ಹೆಚ್ಚು ಬ್ಯಾಟರಿ ಬ್ಯಾಕಪ್ ಸಿಗುತ್ತೆ ಅಂತ ಲೆಕ್ಕ ಹಾಕೋಕೆ ಆಗಲ್ಲ.

Related Articles

Related image1
8,000mAh ದೈತ್ಯ ಬ್ಯಾಟರಿ, 200MP ಕ್ಯಾಮೆರಾ: ಮಾರುಕಟ್ಟೆಗೆ ಲಗ್ಗೆ ಇಟ್ಟ ಶಿಯೋಮಿ 17 ಮ್ಯಾಕ್ಸ್ ಸ್ಮಾರ್ಟ್‌ಫೋನ್!
Related image2
Xiaomi 18 Fold Mobile: ಸ್ಯಾಮ್‌ಸಂಗ್, ಐಫೋನ್‌ಗೆ ಟಕ್ಕರ್ ಕೊಡಲಿದೆ ಶಿಯೋಮಿ ಫೋಲ್ಡಿಂಗ್ ಫೋನ್!
35
ಶಿಯೋಮಿ 18 ಪ್ರೊ ಫೀಚರ್ಸ್, ಕ್ಯಾಮೆರಾ
Image Credit : Memeburn

ಶಿಯೋಮಿ 18 ಪ್ರೊ ಫೀಚರ್ಸ್, ಕ್ಯಾಮೆರಾ

ಸ್ಕ್ರೀನ್ ಬ್ರೈಟ್‌ನೆಸ್, ಮೊಬೈಲ್ ನೆಟ್‌ವರ್ಕ್, ಗೇಮಿಂಗ್, ಕ್ಯಾಮೆರಾ ಬಳಕೆ, ಪ್ರೊಸೆಸರ್ ಹಾಗೂ ಸಾಫ್ಟ್‌ವೇರ್ ಮೇಲೆ ಅಸಲಿ ಬ್ಯಾಟರಿ ಬ್ಯಾಕಪ್ ನಿರ್ಧಾರ ಆಗುತ್ತೆ. ಪವರ್ ಬಳಕೆ ಕಡಿಮೆ ಮಾಡಲು ಶಿಯೋಮಿ ಹೊಸ ಡಿಸ್‌ಪ್ಲೇ ತಂತ್ರಜ್ಞಾನ ಬಳಸಿದೆ. ಒಮ್ಮೆ ಚಾರ್ಜ್ ಮಾಡಿದ್ರೆ ಫೋನ್ ಎಷ್ಟು ಹೊತ್ತು ಬರುತ್ತೆ ಅನ್ನೋದು ಲಾಂಚ್ ಆದ್ಮೇಲೆ ಗೊತ್ತಾಗಲಿದೆ.

ಕ್ಯಾಮೆರಾ ವಿಚಾರದಲ್ಲೂ ಶಿಯೋಮಿ ಈ ಬಾರಿ ದೊಡ್ಡ ಗೇಮ್ ಪ್ಲಾನ್ ಮಾಡಿದೆ. ಶಿಯೋಮಿ 18 ಪ್ರೊ ಹಾಗೂ ಪ್ರೊ ಮ್ಯಾಕ್ಸ್ ಎರಡೂ ಫೋನ್‌ಗಳಲ್ಲಿ 200 MP ಮೇನ್ ಕ್ಯಾಮೆರಾ ಹಾಗೂ 200 MP ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಇರಲಿದೆ ಅಂತ ಕಂಪನಿ ಹೇಳಿದೆ. ಎರಡರಲ್ಲೂ ಲೈಕಾ (Leica) ಕ್ಯಾಮೆರಾ ಸೆಟಪ್ ಇದೆ. ಹೀಗಾಗಿ ಕ್ಯಾಮೆರಾ ಈ ಫೋನ್‌ನ ಅತಿದೊಡ್ಡ ಹೈಲೈಟ್. ಎರಡೂ ಕ್ಯಾಮೆರಾಗಳು 200 MP ಅಂದಾಕ್ಷಣ ಒಂದೇ ಥರ ಫೋಟೋ ಬರುತ್ತೆ ಅಂತ ಅಂದುಕೊಳ್ಳಬಾರದು. ಸೆನ್ಸಾರ್ ಸೈಜ್, ಅಪರ್ಚರ್, ಲೆನ್ಸ್, ಪ್ರೊಸೆಸಿಂಗ್ ಹಾಗೂ ಸಾಫ್ಟ್‌ವೇರ್ ಮೇಲೆ ಫೋಟೋ ಕ್ವಾಲಿಟಿ ನಿಂತಿದೆ. ವಿಶೇಷವಾಗಿ ನೈಟ್ ಫೋಟೋಗ್ರಫಿ, ಪೋರ್ಟ್ರೇಟ್ ಹಾಗೂ ಜೂಮ್ ಫೋಟೋಗಳಲ್ಲಿ ಲೈಕಾ ಕ್ಯಾಮೆರಾ ಮ್ಯಾಜಿಕ್ ಮಾಡೋದು ಪಕ್ಕಾ.

45
ಶಿಯೋಮಿ 18 ಪ್ರೊ ಸರಣಿಯ ವಿಶೇಷತೆಗಳು
Image Credit : Twitter

ಶಿಯೋಮಿ 18 ಪ್ರೊ ಸರಣಿಯ ವಿಶೇಷತೆಗಳು

ಶಿಯೋಮಿ 18 ಪ್ರೊ ಸರಣಿಯ ಮತ್ತೊಂದು ಸಖತ್ ಫೀಚರ್ ಅಂದ್ರೆ ಹಿಂಬದಿ ಇರುವ ಎರಡನೇ ಡಿಸ್‌ಪ್ಲೇ. ಶಿಯೋಮಿ 17 ಪ್ರೊ ಸರಣಿಯಲ್ಲಿದ್ದ ಈ ರಿಯರ್ ಡಿಸ್‌ಪ್ಲೇ, ಹೊಸ ಫೋನ್‌ನಲ್ಲಿ ಇನ್ನಷ್ಟು ದೊಡ್ಡದಾಗಿರಲಿದೆ. ಇದು ಕ್ಯಾಮೆರಾ ಮಾಡ್ಯೂಲ್ ಜೊತೆಯೇ ಮಿಕ್ಸ್ ಆದಂತೆ ಕಾಣಬಹುದು. ಹೈಪರ್‌ಓಎಸ್ 4 (HyperOS 4) ಮೂಲಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಸಿ, ಬಳಕೆದಾರರು ಈ ಹಿಂಬದಿ ಸ್ಕ್ರೀನ್‌ನಲ್ಲಿ ತಮಗೆ ಬೇಕಾದ ಕಾರ್ಡ್‌ಗಳನ್ನು ಸೆಟ್ ಮಾಡಿಕೊಳ್ಳಬಹುದು. ಮೇನ್ ಡಿಸ್‌ಪ್ಲೇಯಲ್ಲೂ ಅಪ್‌ಡೇಟ್ ಇದೆ. ಹೊಸ M11 ಪ್ಯಾನೆಲ್, 4,000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹಾಗೂ ಕೇವಲ 0.99 ಎಂಎಂ ಬೆಜೆಲ್ಸ್ ಇರಲಿದೆ. ಜೊತೆಗೆ ಪ್ರೈವೆಸಿ ಕಾಪಾಡುವ ಹೊಸ ಡಿಸ್‌ಪ್ಲೇ ತಂತ್ರಜ್ಞಾನವೂ ಇದೆ. ಶಿಯೋಮಿ 18 ಪ್ರೊ ಸರಣಿಯಲ್ಲಿ 2 ನ್ಯಾನೋಮೀಟರ್ ಪ್ಲಾಟ್‌ಫಾರ್ಮ್ ಬಳಸಲಾಗಿದೆ. ಆದ್ರೆ ಯಾವ ಚಿಪ್‌ಸೆಟ್ ಅಂತ ಇನ್ನೂ ಕನ್ಫರ್ಮ್ ಆಗಿಲ್ಲ. ಸೆಪ್ಟೆಂಬರ್ 22 ರಿಂದ 24ರವರೆಗೆ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ (Qualcomm Snapdragon) ಕಾರ್ಯಕ್ರಮ ನಡೆಯಲಿರುವುದರಿಂದ, ಪ್ರೊಸೆಸರ್ ಡೀಟೇಲ್ಸ್ ಲಾಂಚ್ ಇವೆಂಟ್‌ನಲ್ಲೇ ಗೊತ್ತಾಗಬಹುದು.

55
ಐಫೋನ್ 19 ಸರಣಿಗೆ ಟಕ್ಕರ್
Image Credit : Twitter

ಐಫೋನ್ 19 ಸರಣಿಗೆ ಟಕ್ಕರ್

ಬೆಲೆ ವಿಚಾರ ಸದ್ಯಕ್ಕೆ ಸಸ್ಪೆನ್ಸ್. ಹಳೆಯ ಶಿಯೋಮಿ 17 ಪ್ರೊ 4,999 ಚೀನೀ ಯುವಾನ್‌ಗೆ ಹಾಗೂ 17 ಪ್ರೊ ಮ್ಯಾಕ್ಸ್ 5,999 ಚೀನೀ ಯುವಾನ್‌ಗೆ ಲಾಂಚ್ ಆಗಿತ್ತು. ಈ ಬಾರಿ ದೊಡ್ಡ ಬ್ಯಾಟರಿ, ಡ್ಯುಯಲ್ 200 MP ಕ್ಯಾಮೆರಾ ಇರೋದ್ರಿಂದ ಬೆಲೆ ಎಷ್ಟಿರಬಹುದು ಅನ್ನೋ ಕುತೂಹಲ ಇದೆ. 12GB RAM ಮತ್ತು 512GB ಸ್ಟೋರೇಜ್ ಫೋನ್‌ನ ಮೆಮೊರಿ ಬಿಡಿಭಾಗಗಳ ಬೆಲೆ 2025ರ ಆರಂಭಕ್ಕೆ ಹೋಲಿಸಿದ್ರೆ ಸುಮಾರು 1,500 ಚೀನೀ ಯುವಾನ್ ಹೆಚ್ಚಾಗಿದೆ (ಅಂದರೆ ಒಟ್ಟಾರೆ 1,07,300 ರೂ.) ಅಂತ ಶಿಯೋಮಿ ಅಧ್ಯಕ್ಷ ಲು ವೀಬಿಂಗ್ (Lu Weibing) ಹೇಳಿದ್ದಾರೆ.

ಈ ಬೆಲೆ ಏರಿಕೆ ಶಿಯೋಮಿ 18 ಪ್ರೊ ಸರಣಿ ಮೇಲೆ ಎಷ್ಟು ಪ್ರಭಾವ ಬೀರಲಿದೆ ಅಂತ ಕಾದುನೋಡಬೇಕು. ಭಾರತದಲ್ಲಿ ಲಾಂಚ್ ಆಗುವ ದಿನಾಂಕ ಹಾಗೂ ಬೆಲೆ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ಸದ್ಯಕ್ಕೆ 7,000 mAh ಮತ್ತು 8,500 mAh ಬ್ಯಾಟರಿ, ಡ್ಯುಯಲ್ 200 MP ಲೈಕಾ ಕ್ಯಾಮೆರಾ, ರಿಯರ್ ಡಿಸ್‌ಪ್ಲೇ, ಹೈಪರ್‌ಓಎಸ್ 4 ಹಾಗೂ 2 ನ್ಯಾನೋಮೀಟರ್ ಪ್ಲಾಟ್‌ಫಾರ್ಮ್ ಈ ಫೋನ್‌ನ ಪ್ರಮುಖ ಹೈಲೈಟ್ಸ್ ಆಗಿದೆ. ಈ ಮಾಡೆಲ್ ಇದೀಗ ಐಫೋನ್ 18 ಸರಣಿಗೆ ಮಾತ್ರ ಖಂಡಿತವಾಗಿ ಟಕ್ಕರ್ ಕೊಡಲಿದೆ.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಮೊಬೈಲ್
ಐಫೋನ್
ತಂತ್ರಜ್ಞಾನ
 

Latest Videos
Recommended Stories
Recommended image1
ಕೇವಲ ₹50ಕ್ಕೆ ನಿಮ್ಮಿಷ್ಟದ ಜಿಯೋ VIP ನಂಬರ್ ಬುಕ್ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಗೈಡ್!
Recommended image2
20 ಸಾವಿರಕ್ಕಿಂತ ಕಮ್ಮಿ ಬೆಲೆಗೆ 4 ಬೆಸ್ಟ್ ಸೆಲ್ಫಿ ಫೋನ್‌ಗಳು, ಸಾಟಿ ಇಲ್ಲದ ಅದ್ಭುತ ಮೊಬೈಲ್‌ಗಳು
Recommended image3
ಸತತ 5ನೇ ಬಾರಿಗೆ iPhone ಕಳೆದುಕೊಂಡ ಭಾರತೀಯ ಮಹಿಳೆ, ಮತ್ತೆ ಮತ್ತೆ ಫೋನ್ ಹುಡುಕಿಕೊಂಡ ಸಿಕ್ರೇಟ್ ರಿವೀಲ್
Related Stories
Recommended image1
8,000mAh ದೈತ್ಯ ಬ್ಯಾಟರಿ, 200MP ಕ್ಯಾಮೆರಾ: ಮಾರುಕಟ್ಟೆಗೆ ಲಗ್ಗೆ ಇಟ್ಟ ಶಿಯೋಮಿ 17 ಮ್ಯಾಕ್ಸ್ ಸ್ಮಾರ್ಟ್‌ಫೋನ್!
Recommended image2
Xiaomi 18 Fold Mobile: ಸ್ಯಾಮ್‌ಸಂಗ್, ಐಫೋನ್‌ಗೆ ಟಕ್ಕರ್ ಕೊಡಲಿದೆ ಶಿಯೋಮಿ ಫೋಲ್ಡಿಂಗ್ ಫೋನ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved