ಜಿಯೋ ಬಳಕೆದಾರರು ತಮಗೆ ಇಷ್ಟವಾದ VIP ಅಥವಾ ಚಾಯ್ಸ್ ನಂಬರ್‍ಗಳನ್ನು (Jio VIP Number) ಸುಲಭವಾಗಿ ಆಯ್ಕೆ ಮಾಡಿಕೊಳ್ಳಬಹುದು. ಹಾಗಿದ್ದರೆ ವಿಐಪಿ ನಂಬರ್ ಎಂದರೇನು? ಇದರ ಬೆಲೆ ಎಷ್ಟು? ಮತ್ತು ಇದನ್ನು ಪಡೆಯುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ.
ಹೊಸ ಸಿಮ್ ಖರೀದಿಸಲು ಹೋದರೆ..ಟೆಲಿಕಾಂ ಕಂಪನಿಗಳು ಕಂಪ್ಯೂಟರ್‌ನಿಂದ ಆಟೋಮ್ಯಾಟಿಕ್ ಆಗಿ ಜನರೇಟ್ ಆಗಿರುವ ಒಂದು ಮೊಬೈಲ್ ಸಂಖ್ಯೆಯನ್ನು ನೀಡುತ್ತವೆ. ಇಂಥ ಸಂಖ್ಯೆಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟಕರ. ಹುಟ್ಟಿದ ದಿನಾಂಕ, ವಾಹನ ನೋಂದಣಿ ಸಂಖ್ಯೆ, ಅದೃಷ್ಟದ ಸಂಖ್ಯೆ (Lucky Number) ಅಥವಾ ನೆನಪಿಟ್ಟುಕೊಳ್ಳಲು ಅತ್ಯಂತ ಸುಲಭವಾದ ಫ್ಯಾನ್ಸಿ ನಂಬರ್ ಹೊಂದಬೇಕೆಂಬ ಆಸೆ ನಿಮಗಿದೆಯೇ? ಹಾಗಿದ್ದರೆ ರಿಲಯನ್ಸ್ ಜಿಯೋ (Reliance Jio) ತನ್ನ ಗ್ರಾಹಕರಿಗೆ ಇಂತಹದ್ದೊಂದು ಸುವರ್ಣಾವಕಾಶ ನೀಡುತ್ತಿದೆ.
ಜಿಯೋ VIP ನಂಬರ್ ಎಂದರೇನು?
ನಾವು ಹೊಸ ಸಿಮ್ ಖರೀದಿಸಲು ಹೋದಾಗಿ Random ಆಗಿ ಯಾವುದೋ ನಂಬರ್ ಆಯ್ಕೆ ಮಾಡಿಕೊಳ್ಳುವ ಬದಲಾಗಿ, ಇಷ್ಟವಾದ ನಂಬರ್‍ಗಳನ್ನ ಹೊಂದಿರುವ ಸಂಖ್ಯೆಯನ್ನು ಪಡೆಯುವುದೇ ವಿಐಪಿ ಅಥವಾ ಫ್ಯಾನ್ಸಿ ನಂಬರ್ ಆಗಿದೆ.
ಉದಾಹರಣೆಗೆ: 777, 888, 666, 9999 ನಂತಹ ಪುನರಾವರ್ತಿತ ಅಂಕಿಗಳುಳ್ಳ ನಂಬರ್‌ಗಳು. ಇನ್ನೂ ಸರಳವಾಗಿ ಹೇಳೋದಾರೆ ನೀವು ಸುಲಭವಾಗಿ ನೆನಪಿಟ್ಟುಕೊಳ್ಳಲು ಸಾಧ್ಯವಿರುವ ನಂಬರ್‍ಗಳು. ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ತಮ್ಮ ಸಂಪರ್ಕ ಸಂಖ್ಯೆ ಎಲ್ಲರಿಗಿಂತ ಭಿನ್ನವಾಗಿರಬೇಕು ಎಂದು ಬಯಸುವವರಿಗೆ ವಿಐಪಿ ನಂಬರ್‌ಗಳು ಹೆಚ್ಚು ಆಕರ್ಷಕವಾಗಿರುತ್ತವೆ.
ಬೆಲೆ ಎಷ್ಟು?
ಜಿಯೋ ಸಂಸ್ಥೆಯು ವಿಐಪಿ ಸಂಖ್ಯೆಗಳಿಗೆ ನಿಗದಿಪಡಿಸುವ ದರವು.. ಆಯ್ಕೆ ಸಂಖ್ಯೆಯ ಪ್ಯಾಟರ್ನ್ ಮತ್ತು ಮಾರುಕಟ್ಟೆಯಲ್ಲಿ ಅದಕ್ಕಿರುವ ಬೇಡಿಕೆಯ ಆಧಾರದ ಮೇಲೆ ನಿರ್ಧಾರವಾಗುತ್ತದೆ ಎಂದು ಸಂಸ್ಥೆ ಹೇಳಿದೆ. ಅದರ ಕನಿಷ್ಠದರ 50 ರೂಪಾಯಿಯಿಂದ ಪ್ರಾರಂಭವಾಗತ್ತದೆ.
ಸಾಮಾನ್ಯ ಪ್ಯಾಟರ್ನ್‌ಗಳು: ಉದಾಹರಣೆಗೆ 686, 777, 888 ಇಂಥ ಸಂಖ್ಯೆಗಳು ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತವೆ.
ಪ್ರೀಮಿಯಂ ಮತ್ತು ರೇರ್ ನಂಬರ್‌ಗಳು: ಅತ್ಯಂತ ಅಪರೂಪದ ಮತ್ತು ಭಾರಿ ಬೇಡಿಕೆಯಿರುವ ಸಂಖ್ಯೆಗಳಾದ 0000, 1000 ಅಥವಾ ಸೂಪರ್ ಫ್ಯಾನ್ಸಿ ಸರಣಿಯ ನಂಬರ್‌ಗಳ ಬೆಲೆ ಬರೋಬ್ಬರಿ ₹15,000 ದವರೆಗೂ ಇರಲಿದೆ.
VIP ನಂಬರ್ ಹುಡುಕೋದು ಹೇಗೆ?
- ನಿಮ್ಮ ನೆಚ್ಚಿನ ಸಂಖ್ಯೆಗೆ ಜಿಯೋ ಸ್ಟೋರ್‌ಗೆ ಅಲೆಯಬೇಕಾಗಿಲ್ಲ
- ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಮೂಲಕವೇ ಹುಡುಕಬಹುದು
- ಮೊಬೈಲ್‌ನಲ್ಲಿ MyJio App ಓಪನ್ ಮಾಡಿ
- ಅಥವಾ ಜಿಯೋದ ಅಧಿಕೃತ ವೆಬ್‌ಸೈಟ್‌ಗೆ (jio.com) ಭೇಟಿ ನೀಡ
- ಅಲ್ಲಿ ಕಾಣಿಸುವ ‘Choice Number’ ಅಥವಾ ‘VIP Number’ ಆಯ್ಕೆ ಇರುತ್ತೆ
- ನಂತರ ನಿಮ್ಮ ಹಾಲಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿ
- ಬರುವ OTP (One Time Password) ಹಾಕಿ ಲಾಗಿನ್ ಆಗಿ
- ಸರ್ಚ್ ಬಾಕ್ಸ್‌ನಲ್ಲಿ ನಿಮಗೆ ಇಷ್ಟವಾದ 4 ಅಥವಾ 5 ಅಂಕಿಗಳನ್ ಹಾಕಿ
- ಅಲ್ಲಿ ನಿಮ್ಮ ಆಯ್ಕೆಯ ನಂಬರ್ ಲಭ್ಯವಿದ್ದರೆ ತೋರಿಸುತ್ತದೆ
ಖರೀದಿ ಮಾಡೋದು ಹೇಗೆ?
- ಲಭ್ಯವಿರುವ ಪಟ್ಟಿಯಲ್ಲಿ ಇಷ್ಟವಾದ ಸಂಖ್ಯೆಯನ್ನು ಆಯ್ಕೆ ಮಾಡಿ
- ಅಲ್ಲಿ ತೋರಿಸಲಾದ ಬೆಲೆ ಮತ್ತು ನಿಯಮಗಳನ್ನು ಸರಿಯಾಗಿ ಓದಿಕೊಳ್ಳಿ
- 'Pay' ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಯುಪಿಐ (UPI),
- ನೆಟ್ ಬ್ಯಾಂಕಿಂಗ್ ಅಥವಾ ಕಾರ್ಡ್ ಮೂಲಕ ಹಣ ಪಾವತಿಸಿ
- ನಂತರ ಒಂದು ಬುಕಿಂಗ್ ಕೋಡ್ ಅಥವಾ ರೆಫರೆನ್ಸ್ ನಂಬರ್ ಸಿಗಲಿದೆ
- ಈ ಕೋಡ್ ತೆಗೆದುಕೊಂಡು ಜಿಯೋ ಸ್ಟೋರ್‌ಗೆ ಭೇಟಿ ನೀಡಿ
- ಅವರು ನಿಮ್ಮಿಷ್ಟ ನಂಬರ್ ಹೊಂದಿರುವ ಸಿಮ್ ಕಾರ್ಡ್ ಕೊಡ್ತಾರೆ
- ಹೋಮ್ ಡೆಲಿವರಿ ಲಭ್ಯವಿದ್ದರೆ ಮನೆ ಬಾಗಿಲಿಗೇ ತರಿಸಿಕೊಳ್ಳಬಹುದು


