ಹಬ್ಬ, ಹರಿದಿನ ಸೇರಿದಂತೆ ವಿಶೇಷ ದಿನಗಳು ಬಂದರೆ ಸಾಕು ಖಾಸಗಿ ಬಸ್‌ಗಳು ಹಗಲು ದರೋಡೆಗೆ ಇಳಿಯುತ್ತವೆ. ಅನಿವಾರ್ಯ ಕಾರಣದಿಂದ ಸಾಮಾನ್ಯರು ಸಾವಿರಾರು ರೂಪಾಯಿ ಕೊಟ್ಟು ಬಸ್ ಬುಕ್ ಮಾಡ್ತಾರೆ. ಅಷ್ಟೆಲ್ಲ ದುಡ್ಡು ಇಸ್ಕೊಂಡು ಸರಿಯಾಗಿ ಕರೆದುಕೊಂಡು ಹೋಗ್ತಾರಾ? ಚಾನ್ಸೇ ಇಲ್ಲ. ಈ ಅನುಭವ ಖ್ಯಾತ ಗಾಯಕ ಸುನಿಲ್‌ಗೂ ಆಗಿದೆ. ಸ್ಟೋರಿ ಓದಿ..

ಬೆಂಗಳೂರು: 'ಸ ರಿ ಗ ಮ ಪ' ಖ್ಯಾತಿಯ ಜನಪ್ರಿಯ ಗಾಯಕ ಸುನಿಲ್ ಖಾಸಗಿ ಬಸ್‌ ಸಂಸ್ಥೆ ಒಂದರ ವಿರುದ್ಧ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ತಾವು ಬೆಂಗಳೂರಿಗೆ ಪ್ರಯಾಣಿಸಬೇಕಿದ್ದ ಬಸ್ ಬರೋಬ್ಬರಿ 6 ಗಂಟೆ ತಡವಾಗಿ ಬಂದು ತಲುಪಿರೋದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.

ಸುನಿಲ್ ಅವರ ವಿಡಿಯೋದಲ್ಲಿ ಏನಿದೆ?

ಸುನೀಲ್ ಫೇಸ್‌ಬುಕ್‌ನಲ್ಲಿ ತಮ್ಮ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ. ಈ video ಮಾಡ್ತಿರೋ ಉದ್ದೇಶ ಒಂದು ಮುಖ್ಯವಾದ ಒಂದು ವಿಷಯ ಮಾತಾಡ್ತಾ ಇದ್ದೀನಿ. ನಾನು ಇಲ್ಲಿಯವರೆಗೂ ಈತರದ ಯಾವುದೇ ಥರದ ವಿಷಯವನ್ನು ಮಾತನ್ನಾಡಿಲ್ಲ. ನಾನಾಯ್ತು ನನ್ನ singing ಇದ್ದು professional life ಅಂತ ಇರ್ತೀನಿ. ನಾನು ಮಾತಾಡ್ತಿರೋದು ನಮ್ಮ Karnataka ಒಂದು ದೊಡ್ಡ ಸಂಸ್ಥೆ ಸಂಸ್ಥೆ ಬಗ್ಗೆ..

ನಾನು ನಿನ್ನೆ ಊರಿಗೆ ಬರಬೇಕು ಅಂತ ಬಸ್ ಬುಕ್ ಮಾಡಿದ್ದೆ. ಬಸ್ ಬರಬೇಕಾಗಿದ್ದು ಒಂಬತ್ತು ನಲವತ್ತೈದಕ್ಕೆ. ಬಸ್ ಬಂದಿರೋದು ಬೆಳಗ್ಗೆ ಮೂರು ಗಂಟೆಗೆ. ನಾನೊಬ್ಬನೇ ಇರಲಿಲ್ಲ. ಸಾವಿರಾರು ಜನರು ಬಸ್ಸಿಗಾಗಿ ಕಾಯುತ್ತಿದ್ದರು. ಇದು ನಾನು ಹೋಗಬೇಕಾಗಿರೋ ಬಸ್ಸಿನ ಕತೆ ಮಾತ್ರವಲ್ಲ. ನಾನು ಕಾಯುತ್ತಿದ್ದ ಬಸ್ ಬರೋಬ್ಬರಿ 6 ಗಂಟೆ ತಡವಾಗಿ ಬಂತು. ಬೆಂಗಳೂರಿನಲ್ಲಿ ತುಂಬಾ ಟ್ರಾಫಿಕ್ ಇತ್ತು. ಎಲ್ಲರೂ ರಜೆ ಇರೋ ಸಲುವಾಗಿ ಊರಿಗೆ ಹೋಗುತ್ತಿದ್ದರು. ಬೆಂಗಳೂರು ನಮಗೆ ಅರ್ಥ ಆಗುತ್ತೆ. ಒಂದು, ಎರಡು ಗಂಟೆ ಲೇಟು ಅಂತಾ ಹೇಳೋಣ.

ಆದರೆ ಇಲ್ಲಿ ನಮ್ಮನ್ನ ಆರು ನಿಲ್ಲಿಸಿ ತಡವಾಗಿ ಕರೆದುಕೊಂಡು ಬಂದಿದ್ದಾರೆ. ಬೆಳಗಿನ ಜಾವ ಮೂರು ಗಂಟೆಗೆ ಬಸ್ ಬಂದಿರೋದು. ಕೇಳಿದ್ರೆ ಒಂದು response ಇಲ್ಲ, ಎಲ್ಲಿದೆ ಅಂತಾನೂ ಹೇಳ್ತಿಲ್ಲ. ಇಲ್ಲಿ ORION mall ಹತ್ರ ಇದೆ ISKCON temple ಹತ್ರ ಇದೆ, ಅಲ್ಲಿದೆ ಇಲ್ಲಿದೆ ಅಂತಾನೆ ಹೇಳ್ತಾರೆ. ಇದು ನನ್ನ ಒಬ್ಬನ ನೋವು ಮಾತ್ರವಲ್ಲ, ತುಂಬಾ ವಯಸ್ಸಾದವರಿದ್ರು, ಚಿಕ್ಕ ಚಿಕ್ಕ ಮಕ್ಕಳಿದ್ರು ಅಲ್ಲಿ ಕೂರೋಕೆ ಜಾಗ ಇಲ್ಲ. Govardhan theatre ಹತ್ರ ನಿಮಗೆಲ್ಲರಿಗೂ ಗೊತ್ತಿರುತ್ತೆ ತುಂಬಾ ಜನ ಅಲ್ಲಿ ಸಾವಿರಾರು ಜನರಿದ್ದರು.

ಒಂದು ಬಸ್ಸನ್ನು ನಂಬಿ ಪ್ರಯಾಣಿಸ್ತೀವಿ ಅಂದ್ರೆ ಅಷ್ಟು ಟ್ರಸ್ಟ್ ಮಾಡಿರುತ್ತೀವಿ. ಎಲ್ಲಾದ್ರೂ ಹೋಗ್ತೀವಿ ಅಂದ್ರೆ ನಮ್ಮ ಮನೆಯಲ್ಲಿ ತಾಯಿ ತಂದೆ ಆಗ್ಲಿ ಅಥವಾ ಯಾರೇ ಮನೆಯವರಾಗ್ಲಿ, ನಮ್ಮ ಮಕ್ಕಳು ಸೇಫ್ ಆಗಿ ಹೋಗ್ತಾರೆ. ಆ ಬಸ್ ಅಲ್ಲಿ ಒಳ್ಳೆ ಕಂಪನಿ ಚೆನ್ನಾಗಿ ಸೇಫ್ ಆಗಿ ಕರ್ಕೊಂಡು ಹೋಗ್ತಾರೆ ಅಂತ ಹೇಳಿ. ಆದರೆ ನೀವು ಆ company ಒಳ್ಳೆ ಹೆಸರು ಇದೆ ಅಂತ ಹೇಳಿ ಈ ತರ ಮಾಡಿಬಿಟ್ಟರೆ ಹೇಗೆ? ಹಣ ಮಾತ್ರ ಚೆನ್ನಾಗಿ ತಗೊಂಡಿದ್ದಾರೆ. ಇನ್ನೆರಡು ಸಾವಿರ ಹಾಕಿದ್ರೆ ಫ್ಲೈಟ್‌ ಅಲ್ಲಿ ಹೋಗಬಹುದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುನೀಲ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಿದೆ. ಅವರ ವಿಡಿಯೋಗೆ ಸಾರ್ವಜನಿಕರು ಮತ್ತು ಪ್ರಯಾಣಿಕರಿಂದ ದೊಡ್ಡ ಮೊಟ್ಟದಲ್ಲಿ ಬೆಂಬಲ ವ್ಯಕ್ತವಾಗ್ತಿದೆ. ಜನರು ಬಸ್ ಪ್ರಯಾಣದ ತಮ್ಮ ತಮ್ಮ ಜರ್ನಿ ಅನುಭವವನ್ನು ಹಂಚಿಕೊಳ್ತಿದ್ದಾರೆ.