Asianet Suvarna News Asianet Suvarna News

ಗ್ಯಾರೇಜ್‌ನಲ್ಲಿ ಮಲಗಿದ್ರಂತೆ ಬಿಲಿಯೇನರ್ ಎಲಾನ್‌ ಮಸ್ಕ್ ತಾಯಿ !

ಎಲಾನ್‌ ಮಸ್ಕ್‌ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಹಾಗೂ ಟೆಸ್ಲಾ, ಸ್ಪೇಸ್‌ ಎಕ್ಸ್ ಮುಖ್ಯಸ್ಥ. ಒಂದಲ್ಲಾ ಒಂದು ವಿಚಾರದಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ಈ ಬಿಲಿಯೇನರ್ ತಾಯಿ ಗ್ಯಾರೇಜ್‌ನಲ್ಲಿ ಮಲಗಿದ್ದೆ ಎಂದು ಹೇಳಿರೋದು ಎಲ್ಲೆಡೆ ಸುದ್ದಿಯಾಗ್ತಿದೆ.
 

Elon Musks Mother Sleeps In Garage When She Visits Him Vin
Author
First Published Aug 28, 2022, 4:06 PM IST

ಟೆಸ್ಲಾ ಮುಖ್ಯಸ್ಥ ಎಲಾನ್‌ ಮಸ್ಕ್‌ ಸದಾ ಸುದ್ದಿಯಲ್ಲಿರುತ್ತಾರೆ. ಸದ್ಯ ವಿಶ್ವದ ಅತಿ ಶ್ರೀಮಂತ ವ್ಯಕ್ತಿ ಅಂದ್ರೆ ಇವರೇ. ಎಲೆಕ್ಟ್ರಿಕ್‌ ಕಾರುಗಳ ಉತ್ಪಾದನೆ, ಮಾನವರನ್ನು ಮಂಗಳ ಗ್ರಹಕ್ಕೆ ಕಳಿಸಬೇಕೆಂದು ತುಡಿಯುತ್ತಿರುವ ಸ್ಪೇಸ್‌ ಎಕ್ಸ್ ಮಾಲೀಕ ಅಂದ್ರೆ ಹಲವರಿಗೆ ಹೆಮ್ಮೆ ಇದೆ. ಆದರೂ, ಇವರು ಆಗಾಗ್ಗೆ ವಿವಾದಕ್ಕೂ ಸಿಲುಕುತ್ತಿರುತ್ತಾರೆ. ಸದ್ಯ ಎಲಾನ್ ಮಸ್ಕ್‌ ತಾಯಿ ಹೇಳಿರೋ ಮಾತು ಹೆಚ್ಚು ಸುದ್ದಿಯಲ್ಲಿದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಅವರ ತಾಯಿ ಅವರನ್ನು ಭೇಟಿ ಮಾಡಿದಾಗ ಗ್ಯಾರೇಜ್‌ನಲ್ಲಿ ಮಲಗಿದ್ದರಂತೆ ಎಲಾನ್ ಮಸ್ಕ್ ಅವರ ತಾಯಿ, ಮಾಯೆ ಮಸ್ಕ್ ಅವರು ತಮ್ಮ ಮಗನನ್ನು ಭೇಟಿ ಮಾಡಿದಾಗ ತಾವು ಗ್ಯಾರೇಜ್‌ನಲ್ಲಿ ಮಲಗಿದ್ದಾಗಿ ಹೇಳಿಕೊಂಡಿದ್ದಾರೆ. 

ಗ್ಯಾರೇಜ್‌ನಲ್ಲಿ ಮಲಗಿದ್ದರು ಬಿಲಿಯನೇರ್ ತಾಯಿ
74 ವರ್ಷ ವಯಸ್ಸಿನ ಸೂಪರ್ ಮಾಡೆಲ್ ದಿ ಟೈಮ್ಸ್ ಯುಕೆಗೆ ಅವರು ಬೋಕಾ ಚಿಕಾದಲ್ಲಿ ಸ್ಪೇಸ್‌ಎಕ್ಸ್ ಸಿಇಒಗೆ ಭೇಟಿ ನೀಡಿದಾಗ ಐಷಾರಾಮಿ ಬೆಡ್‌ರೂಮ್‌ನಲ್ಲಿ ಮಲಗಲ್ಲಿಲ್ಲ. ಬದಲಿಗೆ ಗ್ಯಾರೇಜ್‌ನಲ್ಲಿ ಮಲಗಿದ್ದಾಗಿ ಹೇಳಿಕೊಂಡಿದ್ದಾರೆ.  ಇದು ಕಂಪನಿಯ ಟೆಕ್ಸಾಸ್ ಪ್ರಧಾನ ಕಚೇರಿ ಮತ್ತು ಸ್ಟಾರ್‌ಬೇಸ್ ಲಾಂಚ್ ಸೈಟ್‌ನ ಸ್ಥಳವಾಗಿದೆ. ನಾವು ರಾಕೆಟ್ ಸೈಟ್ ಬಳಿ ಐಷಾರಾಮಿ ಮನೆ ಹೊಂದಿರಲು ಸಾಧ್ಯವಿಲ್ಲ ಎಂದು ಎಲಾನ್‌ ಮಸ್ಕ್ ತಾಯಿ (Mother) ಹೇಳಿದ್ದಾರೆ.

ಜಗತ್ತಿನ ಶ್ರೀಮಂತ ವ್ಯಕ್ತಿಗಳ ಸರಳ ಅಭ್ಯಾಸಗಳಿವು, ಅಳವಡಿಸಿಕೊಂಡರೆ ಜೀವನ ಬಿಂದಾಸ್!

ಬಹು-ಶತಕೋಟ್ಯಾಧಿಪತಿ, ವಿಶ್ವದ ಅತ್ಯಂತ ಶ್ರೀಮಂತ (Rich person) ವ್ಯಕ್ತಿಯಾಗಿದ್ದರೂ,  ಆಸ್ತಿಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿಲ್ಲ. ಏಪ್ರಿಲ್‌ನಲ್ಲಿ ಈ ಕುರಿತು ಮಾತನಾಡಿದ್ದ ಎಲಾನ್ ಮಸ್ಕ್, ತಾನು ಪ್ರಸ್ತುತ ಸ್ವಂತ ಮನೆಯನ್ನೇ ಹೊಂದಿಲ್ಲ. ಈಗಲೂ ಸ್ನೇಹಿತರ ಮನೆಯಲ್ಲಿ ವಾಸಿಸುತ್ತಾರೆ ಎಂದು ತಿಳಿಸಿದ್ದರು. ಬೋಕಾ ಚಿಕಾದಲ್ಲಿ ತಾವು ಅತಿ ಚಿಕ್ಕ ಮನೆ (House)ಯಲ್ಲಿ ವಾಸಿಸುತ್ತಿರುವುದಾಗಿ ಎಲೋನ್ ಮಸ್ಕ್‌ ತಿಳಿಸಿದ್ದಾರೆ. ಮನೆ ಕಾನೂನುಬದ್ಧವಾಗಿ ಮೂರು ಮಲಗುವ ಕೋಣೆಯಾಗಿದ್ದರೂ, ಅದರ ಗ್ಯಾರೇಜ್ ಅನ್ನು ಪರಿವರ್ತಿಸುವ ಮೊದಲು ಅದು ಮೂಲತಃ ಎರಡು ಮಲಗುವ ಕೋಣೆಯಾಗಿತ್ತು ಎಂದು ಅವರು ಹೇಳಿದ್ದಾರೆ. ಇದು 800 ರಿಂದ 900 ಚದರ ಅಡಿ ಗಾತ್ರದಲ್ಲಿದೆ. ಬಹು-ಶತಕೋಟ್ಯಾಧಿಪತಿ ಎಲಾನ್ ಮಸ್ಕ್‌ 375-ಚದರ ಅಡಿ ಸಣ್ಣ ಮನೆಯನ್ನು ಸಹ ಹೊಂದಿದ್ದಾನೆ, ಅದನ್ನು ಅವನು ಸಂದರ್ಶಕರಿಗೆ ಬಾಡಿಗೆಗೆ ನೀಡುತ್ತಾನೆ.

ಮಾಯೆ ಮಸ್ಕ್ ತನ್ನ ಮಾಜಿ ಪತಿ ಎರೋಲ್ ಮಸ್ಕ್‌ರಿಂದ ಎಲೋನ್, ಕಿಂಬಾಲ್ ಮತ್ತು ಟೋಸ್ಕಾ ಎಂವ ಮೂವರು ಮಕ್ಕಳನ್ನು ಹೊಂದಿದ್ದಾರೆ. ಈ ಬಗ್ಗೆ ಮಾತನಾಡಿದ ಮಾಯೆ,' ಎರೋಲ್‌ನೊಂದಿಗಿನ ತನ್ನ ಮದುವೆಯ (Marriage) ಅಂತ್ಯದ ನಂತರ ನಾನು ಅತಿ ಕಷ್ಟದ ಸಮಯವನ್ನು ಎದುರಿಸಿದೆ. ನನ್ನ ಮಕ್ಕಳಿಗೆ ಆಹಾರ ನೀಡಲು ಸಾಧ್ಯವಾಗದೆ ನಾನು ತುಂಬಾ ಭಯಭೀತಳಾಗಿದ್ದೆ' ಎಂದು ತಿಳಿಸಿದ್ದಾರೆ.

ಗೂಗಲ್‌ ಸಹ ಸಂಸ್ಥಾಪಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಲಾನ್‌ ಮಸ್ಕ್..?

ಎಲಾನ್‌ ಮಸ್ಕ್‌ ಬಗ್ಗೆ ನನಗೆ ಹೆಮ್ಮೆ ಇಲ್ಲ ಎಂದ ಅಪ್ಪ
ಎಲಾನ್‌ ಮಸ್ಕ್‌ ಬಗ್ಗೆ ತನಗೆ ಹೆಮ್ಮೆ ಇಲ್ಲ ಅಂತಿದ್ದಾರೆ ಅವರ ಹೆತ್ತ ತಂದೆ.  ಹೌದು,‘ಕೈಲ್‌ ಹಾಗೂ ಜ್ಯಾಕಿ ಓ ಶೋ’ ಎಂಬ ಕಾರ್ಯಕ್ರಮವೊಂದರಲ್ಲಿ 76 ವರ್ಷದ ಎಲಾನ್‌ ಮಸ್ಕ್‌ ಅವರ ತಂದೆ ಎರ್ರೋಲ್‌ ಮಸ್ಕ್‌ ಈ ಮಾತುಗಳನ್ನಾಡಿದ್ದಾರೆ. ಆಸ್ಟ್ರೇಲಿಯಾದ ರೇಡಿಯೋ ಸ್ಟೇಷನ್‌ ಕೆಐಐಎಸ್‌ ಎಫ್‌ಎಂ ನಲ್ಲಿ ಪ್ರಸಾರವಾಗುವ ಶೋ ವೇಳೆ ಈ ಹೇಳಿಕೆ ನೀಡಿದ್ದಾರೆ. 20 ನಿಮಿಷಗಳ ಕಾಲ ನಡೆದ ಸಂದರ್ಶನದ ವೇಳೆ ಎಲಾನ್‌  ಮಸ್ಕ್‌ ಬಗ್ಗೆ ಹಾಗೂ ತನ್ನ ಇಡೀ ಕುಟುಂಬದ ಬಗ್ಗೆ ಎರ್ರೋಲ್‌ ಮಸ್ಕ್‌ ಹೇಳಿದ್ದಾರೆ. ಎಲಾನ್‌ ಮಸ್ಕ್‌ ಅವರ ವೃತ್ತಿ ಮಾರ್ಗದ ಹಾಗೂ ಅವರ ದೈಹಿಕ ನೋಟದ ಬಗ್ಗೆಯೂ ತಂದೆ ಮಾತನ್ನಾಡಿದ್ದಾರೆ.

ಬುದ್ಧಿವಂತ ಮಸ್ಕ್ (ಎಲಾನ್‌ ಮಸ್ಕ್‌) ಬಗ್ಗೆ ನಿಮಗೆ ಹೆಮ್ಮೆ ಇದೆಯೇ ಎಂದು ಸಂದರ್ಶಕರು ಕೇಳಿದ್ದಕ್ಕೆ, ಎಂಜಿನಿಯರ್‌ ಆಗಿರುವ ತಂದೆ ಎರ್ರೋಲ್‌ ಮಸ್ಕ್‌ ‘ಇಲ್ಲ’ ಎಂದು ನೇರವಾಗಿ ಹೇಳಿದ್ದಾರೆ. ಎಲಾನ್‌  ಮಸ್ಕ್‌ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಯಾಗಿದ್ದು, ಲಕ್ಷಾಂತರ ಕೋಟಿ ರೂ. ಒಡೆಯರಾಗಿದ್ದಾರೆ. ‘’ಇಲ್ಲ, ನಿಮಗೆ ಗೊತ್ತಾ, ನಮ್ಮ ಕುಟುಂಬ ಬಹಳ ಸಮಯದಿಂದಲೂ ಹಲವು ಕೆಲಸಗಳನ್ನು ಮಾಡುತ್ತಿದೆ, ನಾವು ದಿಢೀರನೇ ಇದನ್ನೆಲ್ಲ ಮಾಡಲು ಆರಂಭಿಸಿದ್ದೇವೆ ಎಂದಲ್ಲ’’ ಎಂದು ಎರ್ರೋಲ್‌ ಜ್ಯಾಕಿ ಓ ಅವರಿಗೆ ಹೇಳಿದ್ದಾರೆ. 

ಮಲ ಮಗಳೊಂದಿಗೇ ಸಂಬಂಧ: ಎಲಾನ್ ಮಸ್ಕ್‌ ತಂದೆಗಿದ್ದರು ಸೀಕ್ರೆಟ್ ಮಕ್ಕಳು!

ಅಲ್ಲದೆ, ತನ್ನ ಮೊದಲ ಪತ್ನಿ ಮೇಯ್‌ ಮಸ್ಕ್‌ ಅವರ ಮೂಲಕ ಜನಿಸಿದ ತನ್ನ ಮಕ್ಕಳಾದ ಎಲಾನ್‌, ಟೋಸ್ಕಾ ಹಾಗೂ ಕಿಂಬಾಲ್‌ ಚಿಕ್ಕವರಿದ್ದಾಗಲೇ ತನ್ನ ಜತೆಗೆ ಪ್ರಪಂಚ ಸುತ್ತಿದ್ದಾರೆ. ಅಮೆಜಾನ್‌ ಮಳೆ ಕಾಡು ಹಾಗೂ ಚೀನಾದಂತಹ ಸ್ಥಳಗಳಿಗೂ ಹೋಗಿದ್ದಾರೆ ಎಂದು ಎರ್ರೋಲ್‌ ಮಸ್ಕ್‌ ಹೇಳಿದ್ದಾರೆ. ತನ್ನ ಮಕ್ಕಳು ಹಲವು ವಿಷಯಗಳನ್ನು ನೋಡಿದ್ದಾರೆ ಹಾಗೂ ನಾವು ಒಟ್ಟಿಗೆ ಹಲವು ವಿಷಯಗಳನ್ನು ಮಾಡಿದ್ದೇವೆ, ಆದರೂ ಎಲಾನ್‌ ಗಡಿ ದಾಟಿ ಮುನ್ನುಗ್ಗಿದ್ದಾರೆ ಎಂದು ಅಪ್ಪ ಹೇಳಿಕೊಂಡಿದ್ದಾರೆ. 

Follow Us:
Download App:
  • android
  • ios