IPL 2024 ಕೆಕೆಆರ್‌ ಆರ್ಭಟಕ್ಕೆ ಲಖನೌ ಸೂಪರ್ ಜೈಂಟ್ಸ್ ತಬ್ಬಿಬ್ಬು..!

ಮೊದಲು ಬ್ಯಾಟ್ ಮಾಡಿದ ಕೋಲ್ಕತಾ ಕಲೆಹಾಕಿದ್ದು ಬರೋಬ್ಬರಿ 236 ರನ್‌. ಈ ಆವೃತ್ತಿಯಲ್ಲಿ ಲಖನೌ ಪಿಚ್‌ನಲ್ಲಿದು ಮೊದಲ 200+ ಸ್ಕೋರ್‌. ಲಖನೌನಲ್ಲಿ ಐಪಿಎಲ್‌ನ ಗರಿಷ್ಠ ರನ್‌ ಕೂಡಾ ಹೌದು. ಬೃಹತ್‌ ಮೊತ್ತವನ್ನು ಬೆನ್ನತ್ತಲು ಕ್ರೀಸ್‌ಗಿಳಿದ ಲಖನೌ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್‌ ನಡೆಸಿ, 16.1 ಓವರಲ್ಲಿ 137 ರನ್‌ಗೆ ಆಲೌಟ್‌ ಆಯಿತು.

IPL 2024 KKR thrash Lucknow Super Giants by 98 runs kvn

ಲಖನೌ: ಬೌಲಿಂಗ್‌ ಸ್ನೇಹಿ ಲಖನೌ ಕ್ರೀಡಾಂಗಣದ ಪಿಚ್‌ನಲ್ಲೂ ಆಕ್ರಮಣಕಾರಿ ಬ್ಯಾಟಿಂಗ್‌ ಪ್ರದರ್ಶಿಸಿದ 2 ಬಾರಿ ಚಾಂಪಿಯನ್‌ ಕೋಲ್ಕತಾ, ಆತಿಥೇಯ ಲಖನೌ ಸೂಪರ್‌ ಜೈಂಟ್ಸ್‌ಗೆ 98 ರನ್‌ಗಳ ಸೋಲುಣಿಸಿದೆ. 11ರಲ್ಲಿ 8ನೇ ಗೆಲುವಿನೊಂದಿಗೆ ಕೋಲ್ಕತಾ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದು, ಪ್ಲೇ-ಆಫ್‌ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿದೆ. ನಿರ್ಣಾಯಕ ಪಂದ್ಯದಲ್ಲಿ ಎಡವಿದ ಲಖನೌ 11ರಲ್ಲಿ 5ನೇ ಸೋಲು ಕಂಡು, 5ನೇ ಸ್ಥಾನದಲ್ಲಿದೆ.

ಮೊದಲು ಬ್ಯಾಟ್ ಮಾಡಿದ ಕೋಲ್ಕತಾ ಕಲೆಹಾಕಿದ್ದು ಬರೋಬ್ಬರಿ 236 ರನ್‌. ಈ ಆವೃತ್ತಿಯಲ್ಲಿ ಲಖನೌ ಪಿಚ್‌ನಲ್ಲಿದು ಮೊದಲ 200+ ಸ್ಕೋರ್‌. ಲಖನೌನಲ್ಲಿ ಐಪಿಎಲ್‌ನ ಗರಿಷ್ಠ ರನ್‌ ಕೂಡಾ ಹೌದು. ಬೃಹತ್‌ ಮೊತ್ತವನ್ನು ಬೆನ್ನತ್ತಲು ಕ್ರೀಸ್‌ಗಿಳಿದ ಲಖನೌ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್‌ ನಡೆಸಿ, 16.1 ಓವರಲ್ಲಿ 137 ರನ್‌ಗೆ ಆಲೌಟ್‌ ಆಯಿತು.

IPL 2024 ಸುನಿಲ ತರಂಗಕ್ಕೆ ತಲ್ಲಣಿಸಿದ ಲಖನೌ, 236 ರನ್ ಟಾರ್ಗೆಟ್

ನಾಯಕ ಕೆ.ಎಲ್‌.ರಾಹುಲ್‌(25), ಮಾರ್ಕಸ್‌ ಸ್ಟೋಯ್ನಿಸ್‌(21 ಎಸೆತಗಳಲ್ಲಿ 36) ಕೆಲ ಹೊತ್ತು ಕ್ರೀಸ್‌ನಲ್ಲಿದ್ದರೂ ತಂಡವನ್ನು ಗೆಲುವಿನ ಸನಿಹಕ್ಕೂ ತರಲಾಗಲಿಲ್ಲ. ನಿಕೋಲಸ್‌ ಪೂರನ್(10), ದೀಪಕ್‌ ಹೂಡಾ(05) ಕೂಡಾ ವಿಫಲರಾಗಿದ್ದು ತಂಡವನ್ನು ಸೋಲಿಸಿತು.

ನರೈನ್‌ ಅಬ್ಬರ: ತಮ್ಮ ಎಂದಿನ ಸ್ಫೋಟಕ ಆಟಕ್ಕೆ ಒತ್ತುಕೊಟ್ಟ ನರೈನ್‌, ಲಖನೌ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. ಕೇವಲ 39 ಎಸೆತಗಳಲ್ಲಿ 6 ಬೌಂಡರಿ, 7 ಸಿಕ್ಸರ್‌ನೊಂದಿಗೆ 81 ರನ್‌ ಚಚ್ಚಿ ನರೈನ್‌ ಔಟಾದರು. ಫಿಲ್‌ ಸಾಲ್ಟ್‌(32), ರಘುವಂಶಿ(32), ಶ್ರೇಯಸ್‌ ಅಯ್ಯರ್‌(23), ರಮಣ್‌ದೀಪ್‌(6 ಎಸೆತಗಳಲ್ಲಿ ಔಟಾಗದೆ 25) ತಂಡವನ್ನು 230ರ ಗಡಿ ದಾಟಿಸಿದರು. ನವೀನ್‌ 3 ವಿಕೆಟ್‌ ಕಿತ್ತರು.

ಸ್ಕೋರ್‌: ಕೆಕೆಆರ್‌ 20 ಓವರಲ್ಲಿ 235/6 (ನರೈನ್‌ 81, ಸಾಲ್ಟ್‌ 32, ನವೀನ್‌ 3-49),

ಲಖನೌ 16.1 ಓವರಲ್ಲಿ 137/10 (ಸ್ಟೋಯ್ನಿಸ್‌ 36, ರಾಹುಲ್‌ 25, ಹರ್ಷಿತ್‌ 3-24, ವರುಣ್‌ 3-30)

ಪಂದ್ಯಶ್ರೇಷ್ಠ: ನರೈನ್‌
 

Latest Videos
Follow Us:
Download App:
  • android
  • ios