ಗೂಗಲ್‌ ಸಹ ಸಂಸ್ಥಾಪಕ ಸೆರ್ಗೆ ಬ್ರಿನ್‌ ಅವರ ಪತ್ನಿ ನಿಕೋಲ್‌ ಶನಹಾನ್‌ ಅವರೊಂದಿಗೆ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಕೆಲ ಕಾಲ ಅಕ್ರಮ ಸಂಬಂಧದಲ್ಲಿದ್ದರು ಎಂಬ ಆರೋಪ ಕೇಳಿಬಂದಿದೆ. ಎಲಾನ್ ಮಸ್ಕ್‌ ಹಾಗೂ ಗೂಗಲ್‌ ಸಹ ಸಂಸ್ಥಾಪಕ ಸೆರ್ಗೆ ಬ್ರಿನ್‌ ಇಬ್ಬರೂ ಆತ್ಮೀಯ ಗೆಳೆಯರಾಗಿದ್ದರು. ಆದರೆ, ತನ್ನ ಪತ್ನಿಯೊಂದಿಗೆ ಎಲಾನ್‌ ಮಸ್ಕ್‌ ಸಂಬಂಧ ಹೊಂದಿದ್ದಾರೆ ಎಂಬ ವಿಚಾರ ಅವರ ಬೆಳಕಿಗೆ ಬಂದ ನಂತರ ಅವರಿಬ್ಬರ ನಡುವಿನ ಗೆಳೆತನ ಹಳಸಿತು ಎಂದೂ ಕೆಲ ಮಾಧ್ಯಮಗಳು ವರದಿ ಮಾಡಿವೆ.

ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ನಾನಾ ಕಾರಣಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಎಲಾನ್‌ ಮಸ್ಕ್‌ ಸುತ್ತ ವಿವಾದಗಳು ಆಗಾಗ್ಗೆ ಸುತ್ತುತ್ತಿರುತ್ತದೆ. ಈಗ ಎಲಾನ್‌ ಮಸ್ಕ್‌ ಅಕ್ರಮ ಸಂಬಂಧವೊಂದರ ಬಗ್ಗೆ ಸುದ್ದಿ ಹೊರಹೊಮ್ಮುತ್ತಿದೆ. ಎಲಾನ್‌ ಮಸ್ಕ್‌ ವಿರುದ್ಧ ಅಕ್ರಮ ಸಂಬಂಧ ಆರೋಪ ಬಂದಿರುವುದು ಇದೇ ಮೊದಲ ಬಾರಿಯಲ್ಲವಾದರೂ, ಈ ಬಾರಿ ಟೆಸ್ಲಾ ಸಿಇಒ ವಿರುದ್ಧ ಕೇಳಿಬಂದಿರುವ ಅಕ್ರಮ ಸಂಬಂಧ ಯಾರ ಜೊತೆಗೆ ಗೊತ್ತಾ..? ಮುಂದೆ ಓದಿ..

ಗೂಗಲ್‌ ಸಹ ಸಂಸ್ಥಾಪಕ ಸೆರ್ಗೆ ಬ್ರಿನ್‌ ಅವರ ಪತ್ನಿ ನಿಕೋಲ್‌ ಶನಹಾನ್‌ ಅವರೊಂದಿಗೆ ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಕೆಲ ಕಾಲ ಅಕ್ರಮ ಸಂಬಂಧದಲ್ಲಿದ್ದರು (Extra Marital Affair) ಎಂಬ ಆರೋಪ ಕೇಳಿಬಂದಿದೆ. ಎಲಾನ್ ಮಸ್ಕ್‌ ಹಾಗೂ ಗೂಗಲ್‌ ಸಹ ಸಂಸ್ಥಾಪಕ ಸೆರ್ಗೆ ಬ್ರಿನ್‌ ಇಬ್ಬರೂ ಆತ್ಮೀಯ ಗೆಳೆಯರಾಗಿದ್ದರು. ಆದರೆ, ತನ್ನ ಪತ್ನಿಯೊಂದಿಗೆ ಎಲಾನ್‌ ಮಸ್ಕ್‌ ಸಂಬಂಧ ಹೊಂದಿದ್ದಾರೆ ಎಂಬ ವಿಚಾರ ಅವರ ಬೆಳಕಿಗೆ ಬಂದ ನಂತರ ಅವರಿಬ್ಬರ ನಡುವಿನ ಗೆಳೆತನ (Friendship) ಹಳಸಿತು ಎಂದೂ ಕೆಲ ಮಾಧ್ಯಮಗಳು ವರದಿ ಮಾಡಿವೆ.

ಇದನ್ನು ಓದಿ: ಮಲ ಮಗಳೊಂದಿಗೇ ಸಂಬಂಧ: ಎಲಾನ್ ಮಸ್ಕ್‌ ತಂದೆಗಿದ್ದರು ಸೀಕ್ರೆಟ್ ಮಕ್ಕಳು!

ಅಲ್ಲದೆ, ಜನವರಿ 2022ರಲ್ಲಿ ವಿಚ್ಛೇದನಕ್ಕೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಸೆರ್ಗೆ ಬ್ರಿನ್‌, ತಾನು ಈಗ ನಿಕೋಲ್‌ ಶನಹಾನ್‌ ಅವರೊಂದಿಗಿಲ್ಲ. ನಾವಿಬ್ಬರೂ ಡಿಸೆಂಬರ್ 2021 ರಿಂದ ಬೇರೆಯಾಗಿರುವುದಾಗಿಯೂ ತಿಳಿಸಿದ್ದಾರೆ. ಅಲ್ಲದೆ, ಮಗಳನ್ನು ಜಂಟಿ ಪಾಲನೆಗೆ (Joint Custody) ನೀಡುವಂತೆಯೂ ಕೋರ್ಟ್‌ಗೆ ಅವರು ಮನವಿ ಸಲ್ಲಿಸಿದ್ದಾರೆ. 

ಸೆರ್ಗೆ ಬ್ರಿನ್‌ಗೆ ಕ್ಷಮೆ ಕೇಳಿದ್ದ ಎಲಾನ್‌ ಮಸ್ಕ್..!
ಅಲ್ಲದೆ, ಈ ವಿವಾದದ ಬಗ್ಗೆ ಗೂಗಲ್‌ ಸಹ ಸಂಸ್ಥಾಪಕನಿಗೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುವ ಎಲಾನ್‌ ಮಸ್ಕ್‌ ಪಾರ್ಟಿಯೊಂದರಲ್ಲಿ ಕ್ಷಮೆ ಕೋರಿದ್ದರು ಎಂದೂ ವರದಿಯಾಗಿದೆ. ಬ್ರಿನ್‌ ಹಾಗೂ ಮಸ್ಕ್‌ ಅವರಿಬ್ಬರ ಗೆಳೆತನ ಹೇಗಿತ್ತೆಂದರೆ ಟೆಸ್ಲಾ ತನ್ನ ಮೊದಲ ಎಲೆಕ್ಟ್ರಿಕ್‌ ಕಾರನ್ನು ಉತ್ಪಾದನೆ ಮಾಡಿದಾಗ ಸೆರ್ಗೆ ಬ್ರಿನ್‌ಗೆ ಉಚಿತವಾಗಿ ನೀಡಲಾಗಿತ್ತು ಎನ್ನಲಾಗಿದೆ. ಅಲ್ಲದೆ, 2008ರಲ್ಲಿ ಟೆಸ್ಲಾ ಕಂಪನಿ ನಡೆಸಲು ಕಷ್ಟವಾದಾಗ (Financial Crisis) ಅವರ ಕಂಪನಿ ನಡೆಸಲು ಗೂಗಲ್‌ ಸಹ ಸಂಸ್ಥಾಪಕ ಸೆರ್ಗೆ ಬ್ರಿನ್‌ ಬರೋಬ್ಬರಿ 500 ಸಾವಿರ ಡಾಲರ್‌ ಹಣಕಾಸು ನೆರವು ನೀಡಿದ್ದರು ಎಂದೂ ತಿಳಿದುಬಂದಿದೆ.

ಕೆನಡಾದ ಗಾಯಕಿ ಗ್ರಿಮ್ಸ್‌ ಎಲಾನ್‌ ಮಸ್ಕ್‌ ಅವರ ಮಾಜಿ ಗರ್ಲ್‌ಫ್ರೆಂಡ್‌ ಆಗಿದ್ದು, ಅವರೊಂದಿಗೆ ಬ್ರೇಕಪ್‌ ಆದ ಬಳಿಕ ಸೆರ್ಗೆ ಬ್ರಿನ್‌ ಪತ್ನಿ ನಿಕೋಲ್‌ ಜತೆ ಎಲಾನ್‌ ಮಸ್ಕ್‌ ಅಕ್ರಮ ಸಂಬಂಧದಲ್ಲಿದ್ದರು (Illegal Affair) ಎಂದು ಹೇಳಲಾಗಿದೆ. ಕೆನಡಾ ಗಾಯಕಿ ಹಾಗೂ ಎಲಾನ್‌ ಮಸ್ಕ್‌ಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ (Children) . 

ಇದನ್ನೂ ಓದಿ: ಮಗಳು ಹುಟ್ಟಿದ ಐದು ತಿಂಗಳಿಗೆ ಎಲಾನ್ ಮಸ್ಕ್ ಗೆ ಹೊಸ ಗೆಳತಿ, ಯಾರೀಕೆ ನತಾಶಾ ಬ್ಯಾಸೆಟ್?

ಮಾಧ್ಯಮ ವರದಿ ಅಲ್ಲಗಳೆದ ಎಲಾನ್‌ ಮಸ್ಕ್‌
ಗೂಗಲ್‌ ಸಹ ಸಂಸ್ಥಾಪಕ ಹಾಗೂ ಬಿಲಿಯನೇರ್‌ ಸೆರ್ಗೆ ಬ್ರಿನ್‌ ಅವರ ಪತ್ನಿ ನಿಕೋಲ್‌ ಅವರೊಂದಿಗೆ ಅಕ್ರಮ ಸಂಬಂಧದಲ್ಲಿದ್ದರು ಎಂಬ ಮಾಧ್ಯಮ ವರದಿಯನ್ನು ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಅಲ್ಲಗಳೆದಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿದ ಎಲಾನ್‌ ಮಸ್ಕ್‌, ‘’ಇದು ಸಂಪೂರ್ಣ ಆಧಾರರಹಿತ. ತಾನು ಹಾಗೂ ಸೆರ್ಗೆ ಈಗಲೂ ಸಹ ಸ್ನೇಹಿತರಾಗಿದ್ದು, ನಿನ್ನೆ ರಾತ್ರಿಯಷ್ಟೇ ಇಬ್ಬರೂ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದೆವು. ಮೂರು ವರ್ಷಗಳಲ್ಲಿ ನಿಕೋಲ್‌ ಅನ್ನು ಕೇವಲ 2 ಬಾರಿ ನೋಡಿದ್ದೇನೆ. ಆ ಸಮಯದಲ್ಲಿ ನಮ್ಮ ಜತೆಗೆ ಎಷ್ಟೋ ಮಂದಿ ಇದ್ದರು. ರೊಮ್ಯಾಂಟಿಕ್‌ (Romantic) ಸಂಬಂಧ ಇಲ್ಲವೇ ಇಲ್ಲ’’ ಎಂದು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಟೆಸ್ಲಾ ಸಿಇಒ ಪ್ರತಿಕ್ರಿಯೆ ನೀಡಿದ್ದಾರೆ. 

Scroll to load tweet…

ಟ್ವಿಟ್ಟರ್‌ ಕಂಪನಿಯನ್ನು ಕೊಂಡುಕೊಳ್ಳುವುದಿಲ್ಲ ಎಂದು ಎಲಾನ್‌ ಮಸ್ಕ್‌ ಹೇಳಿದ ಬಳಿಕ ಮೈಕ್ರೋ ಬ್ಲಾಗಿಂಗ್ ಜಾಲತಾಣ ಕಂಪನಿಯಾದ ಟ್ವಿಟ್ಟರ್‌ ಎಲಾನ್‌ ಮಸ್ಕ್‌ ವಿರುದ್ಧ ಕಾನೂನು ಮೊಕದ್ದಮೆ ಹೂಡಿದೆ. ಟ್ವಿಟ್ಟರ್‌ ವಿಚಾರವಾಗಿಯೂ ಕಳೆದ ಕೆಲ ತಿಂಗಳುಗಳಿಂದ ಎಲಾನ್‌ ಮಸ್ಕ್‌ ಸುದ್ದಿಯಲ್ಲಿದ್ದರು.