Asianet Suvarna News Asianet Suvarna News

ಅನನ್ಯಾ- ಆದಿತ್ಯ ಬ್ರೇಕಪ್​ ಕನ್​ಫರ್ಮ್​? ಬಾಯ್​ಫ್ರೆಂಡ್​​ ಜಾಗದಲ್ಲಿ ನಾಯಿ ಇಟ್ಟುಕೊಂಡ ನಟಿ!

ಬಾಲಿವುಡ್​ ನಟರಾದ ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್​ ಕಪೂರ್​ ತಮ್ಮ ಎರಡು ವರ್ಷಗಳ ಲಿವ್​ ಇನ್​ ಸಂಬಂಧವನ್ನು ಅಂತ್ಯಗೊಳಿಸಿದ್ದಾರೆ. ಆಗಿದ್ದೇನು?
 

Aditya Roy Kapoor Ananya Panday broke up almost a month ago were going quite strong suc
Author
First Published May 5, 2024, 5:17 PM IST

ಸದಾ ಹಾಟ್​, ಬೋಲ್ಡ್​ ಲುಕ್​ನಿಂದಲೇ ಫೇಮಸ್​ ಆಗಿರೋ ನಟಿ ಅನನ್ಯಾ ಪಾಂಡೆ, ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್​ ಆಗಿದ್ದಾರೆ.  ಆಗಾಗ್ಗೆ ತಮ್ಮ ಬೋಲ್ಡ್​ ಫೋಟೋಶೂಟ್​ಗಳನ್ನು ಶೇರ್​ ಮಾಡಿ ಹಲವು ಬಾರಿ ಟ್ರೋಲ್​ಗೆ ಒಳಗಾಗುವುದೂ ಇದೆ. ಅನನ್ಯಾ ಪಾಂಡೆ ಬಾಲಿವುಡ್ ಹಿರಿಯ ನಟ ಚಂಕಿ ಪಾಂಡೆ ಮಗಳಾಗಿದ್ದು, ಸ್ಟಾರ್ ಕಿಡ್ ಆಗಿ ಬಾಲಿವುಡ್ ಗೆ ಎಂಟ್ರಿ ಕೊಟ್ಟವರು. ಕಡಿಮೆ ಸಮಯದಲ್ಲಿಯೇ ನಟಿ ಫೇಮಸ್ ಆದವರು.  ನೆಪೊಟಿಸಂ ಪ್ರಾಡಕ್ಟ್ ಆಗಿರುವ ಕಾರಣಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗುತ್ತಿದ್ದರೂ ಸಹ ಬಾಲಿವುಡ್​ನಲ್ಲಿ ಅನನ್ಯಾಗೆ ಅವಕಾಶಗಳಿಗೇನೂ ಕೊರತೆ ಇಲ್ಲ.  ಕರಣ್ ಜೋಹರ್ ಸೇರಿದಂತೆ ಹಲವು ಗಾಡ್​ಫಾದರ್​ಗಳು ಅನನ್ಯಾಗೆ ಇರುವುದೇ ಇದಕ್ಕೆ ಕಾರಣ ಎನ್ನುವ ಮಾತುಗಳೂ ಇವೆ. 

ಅಂದಹಾಗೆ ಅನನ್ಯಾ ಮತ್ತು ಆದಿತ್ಯ ರಾಯ್​ ಕಪೂರ್​ ಹಲ ವರ್ಷಗಳಿಂದ ಸಂಬಂಧದಲ್ಲಿದ್ದಾರೆ. ಈ ಜೋಡಿಯ ಮದುವೆ ಯಾವಾಗ ಎಂದು ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ.  ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಅವರು ಕಳೆದ ವರ್ಷ ಕಾಫಿ ವಿತ್ ಕರಣ್ ಷೋನಲ್ಲಿ ತಮ್ಮ ರಿಲೇಶನ್ ಶಿಪ್ ಬಗ್ಗೆ ಹಿಂಟ್ ಕೂಡ ನೀಡಿದ್ದರು. ಇನ್ನಾದರೂ ಜೊತೆಯಾಗಿ ಕಾಲ ಕಳೆದದ್ದು, ಓಡಾಡಿದ್ದು ಸಾಕು, ಈಗಲಾದ್ರೂ ಮದುವೆಯಾಗಿ ಸಂಸಾರ ಮಾಡಿ ಅಂತಿದ್ದಾರೆ ಅಭಿಮಾನಿಗಳು. ಆದಿತ್ಯ ಕಪೂರ್​ಗೂ ಮೊದಲದು ನಟಿ ಅನನ್ಯಾ ಪಾಂಡೆ (Ananya Panday) ಅವರು  ಇಶಾನ್ ಕಟ್ಟರ್ ಜೊತೆ ಸಂಬಂಧದಲ್ಲಿದ್ದರು.  ‘ಸ್ಟುಡೆಂಟ್ ಆಫ್ ದಿ ಇಯರ್ 2’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದರು ಅನನ್ಯಾ ಪಾಂಡೆ. ‘ಖಾಲಿ ಪೀಲಿ’ ಮೊದಲಾದ ಚಿತ್ರಗಳಲ್ಲಿ ಅವರು ಕಾಣಿಸಿಕೊಂಡರು. ‘ಲೈಗರ್’ ಸಿನಿಮಾ ಕೂಡ ಅಷ್ಟು ಸದ್ದು ಮಾಡಲಿಲ್ಲ. ಇನ್ನು ಆದಿತ್ಯ ರಾಯ್ ಕಪೂರ್ ಅವರು 2009ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ಲಂಡನ್ ಡ್ರೀಮ್ಸ್’ ಅವರ ಮೊದಲ ಸಿನಿಮಾ. ಅನನ್ಯಾ ಪಾಂಡೆಗಿಂತ ಆದಿತ್ಯ ರಾಯ್ ಕಪೂರ್ ಶ್ರೀಮಂತ. ಅವರು ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. 

ಆನ್​ಲೈನ್​ನಲ್ಲಿ ಖಾಸಗಿಯಾಗಿ ಮತ ಹಾಕಿದ್ರಂತೆ ನಟಿ ಜ್ಯೋತಿಕಾ! ಕೋಲು ಕೊಟ್ಟು ಬಾರಿಸಿಕೊಳ್ಳೋದು ಬೇಕಿತ್ತಾ?

ಆದರೆ ಇದೀಗ ಇಂಟರೆಸ್ಟಿಂಗ್​ ವಿಷಯವೊಂದು ಹೊರ ಬಂದಿದೆ. ಅದೇನೆಂದರೆ ಈ ಜೋಡಿ ಬ್ರೇಕಪ್​ ಆಗಿದೆ ಎನ್ನುವುದು.  ಇಬ್ಬರೂ ಬ್ರೇಕಪ್ ಮಾಡಿಕೊಂಡಿರುವ ಸುದ್ದಿ ಸ್ವಲ್ಪ ಸಮಯದಿಂದಲೇ ಕೇಳಿ ಬರುತ್ತಿದ್ದರೂ ಆದರೆ ಈಗ ಅದು ಕನ್ಫರ್ಮ್ ಆಗಿದೆ. ಸಂಬಂಧದಲ್ಲಿ ತಮ್ಮ ಕ್ರೇಜಿಯೆಸ್ಟ್ ವಿಷಯ ಏನು ಎಂದು ಈ ಹಿಂದೆ ಹೇಳಿದ್ದ ಅನನ್ಯಾ  ಕರೆಯನ್ನು ಸ್ವೀಕರಿಸದ ಕಾರಣ ಒಮ್ಮೆ ತನ್ನ ಗೆಳೆಯನಿಗೆ 50-75 ಬಾರಿ ಕರೆ ಮಾಡಿರುವುದಾಗಿ ತಿಳಿಸಿದ್ದರು. 'ನನಗೊಂದು ಸಮಸ್ಯೆಯಿದೆ. ಆ ನಿಮಿಷದಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕಾದ ವ್ಯಕ್ತಿ ನಾನು. ಜನರಿಗೆ ಜಾಗ ಕೊಡುವುದು ನನಗೆ ಇಷ್ಟವಿಲ್ಲ. ಆದರೆ ಇದು ಒಳ್ಳೆಯ ಅಭ್ಯಾಸವಲ್ಲ' ಎಂದು ನನಗೆ ಗೊತ್ತು ಎಂದು ಅನನ್ಯ ಹೇಳಿದ್ದರು. ಆದರೆ  ಇದೀಗ ಜೋಡಿ ಬ್ರೇಕಪ್​ ಆಗಿದೆ ಎನ್ನಲಾಗುತ್ತಿದೆ.  

ಮಾಹಿತಿ ಪ್ರಕಾರ, ಆದಿತ್ಯ ಮತ್ತು ಅನನ್ಯಾ ಮಾರ್ಚ್‌ನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ನ ಜಾಮ್‌ನಗರದಲ್ಲಿ ಮದುವೆಯ ಪ್ರೀ ವೆಡ್ಡಿಂಗ್ ಸೆಲೆಬ್ರೇಷನ್​​ಗಳಲ್ಲಿ ಒಟ್ಟಿಗೆ ಭಾಗವಹಿಸಿದ ಕೆಲವು ದಿನಗಳ ನಂತರ ಬೇರ್ಪಟ್ಟರು. ಮೂರು ದಿನಗಳ ಸಂಭ್ರಮಾಚರಣೆಯಲ್ಲಿ ಇಬ್ಬರೂ ಬ್ರೇಕಪ್ ಮಾಡಿಕೊಂಡಿರಲಿಲ್ಲ. ಇಬ್ಬರೂ ಜೋಡಿಯಾಗಿ ಜೊತೆಯಾಗಿ ಖುಷಿಯಾಗಿಯೇ ಇದ್ದರು. ಎಲ್ಲವೂ ಚೆನ್ನಾಗಿತ್ತು. ಹಲವಾರು ಫೋಟೋಗಳು ಮತ್ತು ವೀಡಿಯೊಗಳಲ್ಲಿ, ಅವರು ಒಟ್ಟಿಗೆ ಪೋಸ್ ಮಾಡುವುದನ್ನು ಕಾಣಬಹುದು. ಆದರೂ ಮದುವೆ ಮುಗಿಸಿ ಮುಂಬೈಗೆ ಹಿಂದಿರುಗಿದ ನಂತರ ಇಬ್ಬರ ನಡುವೆ ವೈಮನಸ್ಸು ಉಂಟಾಗಿದೆ ಎಂದು ತೋರುತ್ತದೆ. ಅಂತಿಮವಾಗಿ ಅವರು ತಮ್ಮ ಸಂಬಂಧವನ್ನು ಕೊನೆಗೊಳಿಸುವುದು ಉತ್ತಮ ಎಂದು ನಿರ್ಧರಿಸಿದರು ಎಂದೇ ಹೇಳಲಾಗುತ್ತಿದೆ. ಈ ಬ್ರೇಕಪ್​ ನೋವಿನಿಂದ ಹೊರಬರಲು ನಟಿ ಹೊಸ ನಾಯಿ ಖರೀದಿಸಿದ್ದಾರೆ. ಅನನ್ಯಾ ಇತ್ತೀಚೆಗೆ ತನ್ನ ಸೋಷಿಯಲ್ ಮೀಡಿಯಾ ಹ್ಯಾಂಡಲ್‌ನಲ್ಲಿ ಪರಿಚಯಿಸಿದ ತನ್ನ ಹೊಸ ಸಾಕು ನಾಯಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ ಎನ್ನಲಾಗಿದೆ.

ಲೈವ್​ ಕಾರ್ಯಕ್ರಮದಲ್ಲಿಯೇ ಗಾಯಕಿ ಸುನಿಧಿ ಚೌಹಾಣ್​ ಮೇಲೆ ಬಾಟಲಿ ಎಸೆತ! ವಿಡಿಯೋ ವೈರಲ್​
 

Latest Videos
Follow Us:
Download App:
  • android
  • ios