Asianet Suvarna News Asianet Suvarna News

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದ ನಯನತಾರಾ, ಬಹುಮುಖ ಪ್ರತಿಭೆ ಎನಿಸಿಕೊಂಡ ಲೇಡಿ ಸೂಪರ್‌ ಸ್ಟಾರ್!

2022ರಲ್ಲಿ ನಟಿ ನಯನತಾರಾ, ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದ್ವೆಯಾದ ಬೆನ್ನಲ್ಲೇ  ಅವಳಿ ಮಕ್ಕಳಿಗೆ ಪೋಷಕರಾದರು. ಬಾಡಿಗೆ ತಾಯ್ತನದ ಮೂಲಕ ನಯನತಾರಾ ಇಬ್ಬರು ಗಂಡು ಮಕ್ಕಳನ್ನು ಹೊಂದಿ..

Actress Nayanthara honored with Most Versatile Actress of Dadasaheb Phalke Awards 2024 srb
Author
First Published May 5, 2024, 6:58 PM IST

ಈ ವಾರದ ಆರಂಭದಲ್ಲಿ ನಡೆದ 'ದಾದಾಸಾಹೇಬ್ ಫಾಲ್ಕೆ ಇಂಟರ್‌ನ್ಯಾಷನಲ್ ಫಿಲಂ ಫೆಸ್ಟಿವಲ್‌ ಅವಾರ್ಡ್ಸ್‌'ನಲ್ಲಿ ನಟಿ ನಯನತಾರಾಗೆ 'ಬೆಸ್ಟ್ ವರ್ಸಟೈಲ್ ನಟಿ ' ಪ್ರಶಸ್ತಿ ನೀಡಲಾಗಿದೆ. ವಿಭಿನ್ನ ಪಾತ್ರಗಳ ಮೂಲಕ ಸೌತ್ ಹಾಗೂ ನಾರ್ತ್‌ ಚಿತ್ರರಂಗಗಳಲ್ಲಿ ಬಹುಬೇಡಿಕೆಯಲ್ಲಿರುವ ನಟಿ ನಯನತಾರಾ (Nayanthara) ಇದೀಗ  'ಅತ್ಯುತ್ತಮ ಬಹುಮಖ ಪ್ರತಿಭೆಯುಳ್ಳ ನಟಿ' ಪ್ರಶಸ್ತಿ ಗಳಿಸಿದ್ದಾರೆ. ಇತ್ತೀಚಿಗಷ್ಟೇ ಬಾಲಿವುಡ್‌ 'ಜವಾನ್' ಚಿತ್ರದಲ್ಲಿ ನಟ ಶಾರುಖ್ ಖಾನ್ ಅವರೊಂದಿಗೆ ನಟಿಸಿ ಬಾಲಿವುಡ್‌ ದಿಗ್ಗಜರನ್ನೂ ಬೆರಗಾಗಿಸಿದ್ದರು ನಟಿ ನಯನತಾರಾ. 'ಅನಿಮಲ್' ಚಿತ್ರಕ್ಕಾಗಿ ಸಂದೀಪ್ ರೆಡ್ಡಿ ವಂಗಾ ಅವರು ಬೆಸ್ಟ್ ಡೈರೆಕ್ಟರ್' ಪ್ರಶಸ್ತಿ ಪಡೆದಿದ್ದಾರೆ.

ದಕ್ಷಿಣದ ಭಾರತದ ಲೇಡಿ ಸೂಪರ್ ಸ್ಟಾರ್ ಪಟ್ಟವನ್ನು ಅಲಂಕರಿಸಿರುವ ನಯನತಾರಾ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚಿಗಷ್ಟೇ ತಮ್ಮ ಸ್ವಂತ ಇನ್‌ಸ್ಟಾಗ್ರಾಂ ಅಕೌಂಟ್ ಮಾಡಿಕೊಂಡಿರುವ ನಟಿ ನಯನತಾರಾ, ಈ ಮೊದಲು ತಮ್ಮ ಪತಿ ವಿಘ್ನೇಶ್ ಶಿವನ್‌ ಅಕೌಂಟ್‌ನಿಂದ ತಮ್ಮ ಮಾಹಿತಿ ಹಾಗೂ ಫೋಟೋಗಳನ್ನು ಶೇರ್ ಮಾಡುತ್ತಿದ್ದರು. ಈಗ ತಮ್ಮದೇ ಅಕೌಂಟ್ ಮೂಲಕ ಬಹಳಷ್ಟು ಪೋಸ್ಟ್‌ ಶೇರ್ ಮಾಡುತ್ತಿರುವ ನಯನತಾರಾ, ಇತ್ತೀಚಿಗೆ ಗಂಡ ವಿಘ್ನೇಶ್ ಶಿವನ್ ಜೊತೆಗಿರುವ ಕ್ಯೂಟ್ ಫೋಟೋಗಳನ್ನು ಹಂಚಿಕೊಂಡಿದ್ದರು.

ಕೋವಿಡ್ ವ್ಯಾಕ್ಸಿನ್ ಅಡ್ಡ ಪರಿಣಾಮ, ಶ್ರೇಯಸ್ ತಲ್ಪಾಡೆ ಕಾರ್ಡಿಯಾಕ್ ಅರೆಸ್ಟ್‌ ಹಿಂದಿದ್ಯಾ ಲಸಿಕೆ ಎಫೆಕ್ಟ್?

2022ರಲ್ಲಿ ನಟಿ ನಯನತಾರಾ, ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದ್ವೆಯಾದ ಬೆನ್ನಲ್ಲೇ  ಅವಳಿ ಮಕ್ಕಳಿಗೆ ಪೋಷಕರಾದರು. ಬಾಡಿಗೆ ತಾಯ್ತನದ ಮೂಲಕ ನಯನತಾರಾ ಇಬ್ಬರು ಗಂಡು ಮಕ್ಕಳನ್ನು ಹೊಂದಿದ್ದು, ಮಕ್ಕಳಿಗೆ ಉಯಿರ್‌ ಮತ್ತು ಉಳಗಂ ಎಂದು ಹೆಸರಿಡಲಾಗಿದೆ. ನಯನತಾರಾ ಆಗಾಗ ತಮ್ಮ ಮಕ್ಕಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. 'ಜವಾನ್' ಚಿತ್ರದ ಸಮಯದಲ್ಲಿ ಇನ್‌ಸ್ಟಾಗ್ರಾಮ್‌ ಖಾತೆ ತೆರೆದಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಚಂದನ್-ಕವಿತಾ ಜೋಡಿ, ಪ್ರಗ್ನೆನ್ಸಿ ಕನ್ಫರ್ಮ್‌ ಮಾಡಿದ ದಂಪತಿ!

ಹೊರಬಂದಿರುವ ಸುದ್ದಿಗಳ ಪ್ರಕಾರ ನಟಿ ನಯನತಾರಾ ಟಾಟಾ ಸ್ಕೈನ 50 ಸೆಕೆಂಡ್‌ ಜಾಹೀರಾತಿಗೆ 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಇನ್ನು,  ಒಂದು ಸಿನಿಮಾಗೆ ನಯನತಾರಾ ಅಂದಾಜು 10 ಕೋಟಿ ರೂಪಾಯಿ ಸಂಭಾವನೆ ಕೇಳುತ್ತಾರೆ ಎಂದು ವರದಿಯಾಗಿದೆ.

ಆಲಿಯಾ ಭಟ್ ನಟನೆಗೆ 'ಶಭಾಷ್' ಅಂದ್ಬಿಟ್ರು, 'ಗಂಗೂಬಾಯಿ ಕಥಿಯಾವಾಡಿ' ಬಗ್ಗೆ ರಶ್ಮಿಕಾ ಹೇಳಿದ್ದೇನು?

Latest Videos
Follow Us:
Download App:
  • android
  • ios