ಐಸ್‌ಕ್ರೀಂ ಬಾಕ್ಸ್‌ನಲ್ಲಿ ಜಿರಳೆ, ಫಂಗಸ್ ಬಂದ ಕ್ಯಾರೆಟ್; ಹೊಟೇಲ್ ರೈಡ್ ಮಾಡಿದ ಆರೋಗ್ಯ ಅಧಿಕಾರಿಗಳೇ ಬೆಚ್ಚಿಬಿದ್ರು!
ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಆಹಾರ ತಯಾರಿಸುವ ರೀತಿ, ಸ್ಥಳ, ಅಲ್ಲಿಯ ಗುಣಮಟ್ಟವನ್ನು ಪರಿಶೀಲಿಸಲು ಆರೋಗ್ಯ ಅಧಿಕಾರಿಗಳು ಆಗಾಗ ರೈಡ್ ಮಾಡುವುದು ಸಾಮಾನ್ಯ. ಆದ್ರೆ ಇಲ್ಲೊಂದೆಡೆ ರೈಡ್‌ಗೆ ಬಂದ ಅಧಿಕಾರಿಗಳೇ ಹೊಟೇಲ್‌ನ ಅವ್ಯವಸ್ಥೆ ನೋಡಿ ಬೆಚ್ಚಿಬಿದ್ರು. ಇಷ್ಟಕ್ಕೂ ಅಲ್ಲಿನ ಸ್ಥಿತಿ ಹೇಗಿತ್ತು?
ಹೊಟೇಲ್, ರೆಸ್ಟೋರೆಂಟ್‌ಗಳಲ್ಲಿ ಆಹಾರ ತಯಾರಿಸುವ ರೀತಿ, ಸ್ಥಳ, ಅಲ್ಲಿಯ ಗುಣಮಟ್ಟವನ್ನು ಪರಿಶೀಲಿಸಲು ಆರೋಗ್ಯ ಅಧಿಕಾರಿಗಳು ಆಗಾಗ ರೈಡ್ ಮಾಡುವುದು ಸಾಮಾನ್ಯ. ಆದ್ರೆ ಇಲ್ಲೊಂದೆಡೆ ರೈಡ್‌ಗೆ ಬಂದ ಅಧಿಕಾರಿಗಳೇ ಹೊಟೇಲ್‌ನ ಅವ್ಯವಸ್ಥೆ ನೋಡಿ ಬೆಚ್ಚಿಬಿದ್ರು. ಯಾಕಂದೆರೆ ಇಲ್ಲಿನ ಅಡುಗೆ ಕೋಣೆಯಲ್ಲಿ ಎಲ್ಲವೂ ಜಿರಳೆ ಇತರ ಕೀಟಗಳಿಂದ ತುಂಬಿತ್ತು. ತರಕಾರಿಗಳಿಗೆ ಫಂಗಸ್ ಬಂದಿತ್ತು. ಹೈದರಾಬಾದ್‌ನ ಹಿಮಾಯತ್‌ನಗರ ಪ್ರದೇಶದ ಜನಪ್ರಿಯ ವೆಜ್ ರೆಸ್ಟೋರೆಂಟ್‌ನಲ್ಲಿ ನಡೆಸಿದ ತಪಾಸಣೆಯಲ್ಲಿ, ಆಹಾರ ಸುರಕ್ಷತಾ ಅಧಿಕಾರಿಗಳು ಉಪಾಹಾರ ಗೃಹದ ಕೆಟ್ಟ ಪರಿಸ್ಥಿತಿಯನ್ನು ಪತ್ತೆಹಚ್ಚಿದರು.
ರೆಸ್ಟೋರೆಂಟ್‌ನ ಕಿಚನ್ ಅವಧಿ ಮೀರಿದ ಪದಾರ್ಥಗಳು, ಹಳಸಿದ ಆಹಾರ ತಯಾರಿಕೆಗಳು ಮತ್ತು ಜಿರಳೆಗಳಿಂದ ತುಂಬಿತ್ತು. ಅಧಿಕಾರಿಗಳು ತಕ್ಷಣ ನೋಟಿಸ್ ಜಾರಿಗೊಳಿಸಿದರು. ಉಪಾಹಾರ ಗೃಹದ ವಿರುದ್ಧ ನ್ಯಾಯಾಂಗ ಪ್ರಕರಣವನ್ನು ದಾಖಲಿಸಲಾಯಿತು.
ಮೊನ್ನೆ ಸಮೋಸಾದಲ್ಲಿ ಕಾಂಡೋಮ್.. ಇಂದು ಹೊಟೇಲ್‌ಗಳಿಗೆ ಪೂರೈಕೆ ಮಾಡಿದ್ದ ಐಸ್‌ಬ್ಲಾಕ್‌ನಲ್ಲಿ ಸತ್ತ ಇಲಿ ಪತ್ತೆ
ಅಧಿಕಾರಿಗಳು ಕ್ಲೋವ್ ವೆಜಿಟೇರಿಯನ್ ಫೈನ್ ಡೈನ್‌ಗೆ ಭೇಟಿ ನೀಡಿದರು. ಅಲ್ಲಿ ಆಹಾರ ತಯಾರಿಕೆ ಮತ್ತು ಸಂಗ್ರಹಣೆಯ ಅನೈರ್ಮಲ್ಯ ಪರಿಸ್ಥಿತಿಗಳನ್ನು ಗಮನಿಸಿದರು. ತೆಲಂಗಾಣದ ಆಹಾರ ಸುರಕ್ಷತಾ ಆಯುಕ್ತರು ತಮ್ಮ ಭೇಟಿಯ ಸಂಕ್ಷಿಪ್ತ ವರದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ರೆಸ್ಟೋರೆಂಟ್‌ನ ಅಡುಗೆಮನೆ ಮತ್ತು ಸಂಗ್ರಹಣೆಗೆ ಸಂಬಂಧಿಸಿದ ಅಂಶಗಳನ್ನು ಹೈಲೈಟ್ ಮಾಡಿದ್ದಾರೆ.
ಹೈದರಾಬಾದ್ ಮೂಲದ ಉಪಾಹಾರ ಗೃಹದಲ್ಲಿ ಉಪಯೋಗಿಸುತ್ತಿದ್ದ ಚೀಸ್, ಬ್ರೆಡ್‌ಗಳು, ಶುಗರ್ ಮತ್ತು ಹೆಚ್ಚಿನ ಉತ್ಪನ್ನಗಳ ಅವಧಿ ಮುಗಿದಿತ್ತು ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ. ದಿನಾಂಕದ ಪ್ರಕಾರ ತಯಾರಿಕೆ ಮತ್ತು ಬಳಕೆ ಸೇರಿದಂತೆ ಐಟಂ ವಿವರಗಳನ್ನು ಸೂಚಿಸುವ ಲೇಬಲ್‌ಗಳನ್ನು ಹೊಂದಿರದ ಉತ್ಪನ್ನಗಳೂ ಇವೆ. ಅಲ್ಲದೆ, ಬೇಯಿಸಿದ ವೆಜ್ ಬಿರಿಯಾನಿಯನ್ನು ರೆಫ್ರಿಜರೇಟರ್‌ನಲ್ಲಿ ಇಡಲಾಗಿದ್ದು,ಇದನ್ನು ಬಿಸಿ ಮಾಡಿ ಗ್ರಾಹಕರಿಗೆ ಬಡಿಸಲಾಗುತ್ತಿತ್ತು.
ರೆಸ್ಟೋರೆಂಟ್‌ನಲ್ಲಿ ಡ್ರೈ ಐಸ್ ತಿಂದು ರಕ್ತ ಕಕ್ಕಿದ ಐವರು, ಹೊಟೆಲ್ ಮ್ಯಾನೇಜರ್ ಅರೆಸ್ಟ್!
ಇದಲ್ಲದೆ, ಆಹಾರ ತಯಾರಿಕೆಗೆ ಬಳಸಲಾಗುವ ಕ್ಯಾರೆಟ್‌ಗಳು ಶಿಲೀಂಧ್ರದಿಂದ ಸೋಂಕಿಗೆ ಒಳಗಾಗಿದ್ದವು. ಐಸ್ ಕ್ರೀಮ್ ಶೇಖರಣಾ ಘಟಕದಲ್ಲಿ ಜಿರಳೆಗಳು ಕಂಡು ಬಂದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಹೊಟೇಲ್ ಈ ಎಲ್ಲಾ ಅವ್ಯವಸ್ಥೆಯ ದೃಶ್ಯಗಳನ್ನು ರೆಕಾರ್ಡ್ ಮಾಡಿದರು ಮತ್ತು ಅವುಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ.