ಮಲ ಮಗಳೊಂದಿಗೇ ಸಂಬಂಧ: ಎಲಾನ್ ಮಸ್ಕ್‌ ತಂದೆಗಿದ್ದರು ಸೀಕ್ರೆಟ್ ಮಕ್ಕಳು!

ಜಾನಾ ಬೆಝುಯಿಡೆನ್‌ಹೌಟ್ ಎರೋಲ್‌ ಮಸ್ಕ್ ಅವರ ಎರಡನೇ ಪತ್ನಿ ಹೈಡ್ ಬೆಜುಡೆನ್‌ಹೌಟ್‌ನ ಮಗಳು. ಎಲೋನ್‌ನ ತಾಯಿ ಮಾಯೆ ಹಾಲ್ಡೆಮನ್ ಮಸ್ಕ್‌ನಿಂದ ಬೇರ್ಪಟ್ಟ ನಂತರ ಅವರು 1979 ರಲ್ಲಿ ಹೈಡ್ ಬೆಜುಡೆನ್‌ಹೌಟ್‌ ಅವರನ್ನು ವಿವಾಹವಾಗಿದ್ದರು.
 

Elon Musk father Errol Musk admitted relationship with step daughter jana Bezuidenhout also two secret children san

ನ್ಯೂಯಾರ್ಕ್‌ (ಜುಲೈ 15): ಸ್ಪೇಸ್‌ ಎಕ್ಸ್‌, ಟೆಸ್ಲಾದಂಥ ವಿಶ್ವದ ಮೌಲ್ಯಯುತ ಕಂಪನಿಗಳ ಮಾಲೀಕ ಎಲಾನ್‌ ಮಸ್ಕ್‌ ಅವರ ತಂದೆ ಎರಾಲ್‌ ಮಸ್ಕ್‌ ಅಚ್ಚರಿಯ ಸುದ್ದಿಯೊಂದನ್ನು ಜಗತ್ತಿಗೆ ತಿಳಿಸಿದ್ದಾರೆ. ತನ್ನ ಮಲಮಗಳಾಗಿರುವ ಜಾನಾ ಬೆಝುಯಿಡೆನ್‌ಹೌಟ್ ಅವರೊಂದಿಗೆ 2019ರಲ್ಲಿ 2ನೇ ಮಗುವನ್ನು ಪಡೆದುಕೊಂಡಿದ್ದಾಗಿ ಸ್ಪೋಟಕ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. 76 ವರ್ಷದ ಎಲಾನ್‌ ಮಸ್ಕ್‌, ತನ್ನ ಮಗಳಾದ 35 ವರ್ಷದ ಜಾನಾ ಬೆಝುಯಿಡೆನ್‌ಹೌಟ್ ಅವರೊಂದಿಗೆ ಇಬ್ಬರು ಮಕ್ಕಳನ್ನು ಪಡೆದುಕೊಂಡಿದ್ದು, ಇದು ಪೂರ್ವಯೋಜಿತವಾಗಿರಲಿಲ್ಲ ಎಂದು ಹೇಳಿದ್ದಾರೆ. ಜಾನಾಳ ಜೊತೆ ನಾನು ಲೈಂಗಿಕ ಸಂಬಂಧ ಹೊಂದಿದ್ದೆ, ಮಗುವಿನ ತನಕ ಮುಂದುವರಿಯುವುದು ನಮ್ಮ ಯೋಜನೆಯಾಗಿರಲಿಲ್ಲ. ಆದರೆ, ಮೂರು ವರ್ಷದ ಹಿಂದೆ ಆಕೆ 2ನೇ ಮಗುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿಸಿರುವ ಎರಾಲ್‌ ಇಲ್ಲಿಯವರೆಗೂ ನಾನು ಈ ವಿಷಯವನ್ನು ರಹಸ್ಯವಾಗಿರಿಸಿದ್ದೆ ಎಂದು ತಿಳಿಸಿದ್ದಾರೆ. 2ನೇ ಮಗುವು ಹೆಣ್ಣು ಮಗುವಾಗಿದೆ ಎಂದು ಬ್ರಿಟನ್‌ನ ಟ್ಯಾಬ್ಲಾಯ್ಡ್‌ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಎರೋಲ್ ಮಸ್ಕ್ ಪ್ರಕಾರ, ಅವರ ಮತ್ತು ಜಾನಾ ಸಂಬಂಧದ ಮೊದಲ ಮಗು  2017 ರಲ್ಲಿ ಜನಿಸಿದೆ. ಆ ಸಮಯದಲ್ಲಿ ಎರಾಲ್‌ ಹಾಗೂ ಜಾನಾ, ಎಲಿಯಟ್ ರಶ್ ಹೆಸರಿನ ಮಗನಿಗೆ ಜನ್ಮ ನೀಡಿದ್ದರು. ಎಲಾನ್‌ ಮಸ್ಕ್‌ ಅವರ ತಾಯಿ ಮಾಯೆ ಹಾಲ್ಡೆಮನ್ ಅವರಿಂದ ಎರಾಲ್‌ ಮಸ್ಕ್‌ನಿಂದ ಬೇರ್ಪಟ್ಟ ನಂತರ ಅವರು 1979 ರಲ್ಲಿ ಹೈಡ್ ಬೆಜುಡೆನ್‌ಹೌಟ್‌ ಅವರನ್ನು ವಿವಾಹವಾಗಿದ್ದರು. 

41 ವರ್ಷ ವಯಸ್ಸಿನ ಅಂತರ: ಎರಾಲ್‌ ಮಸ್ಕ್‌ ಹಾಗೂ ಹೈಡ್ ಬೆಜುಡೆನ್‌ಹೌಟ್‌ (Heide Bezuidenhout ) ವಿವಾಹವಾದ ಸಮಯದಲ್ಲಿ ಜಾನಾ ಬೆಝುಯಿಡೆನ್‌ಹೌಟ್‌ಗೆ (Jana Bezuidenhout) ನಾಲ್ಕು ವರ್ಷವಾಗಿತ್ತು. ಎರಾಲ್‌ ಮಸ್ಕ್‌ ಹಾಗೂ ಹೈಡ್ ಬೆಜುಡೆನ್‌ಹೌಟ್‌ 18 ವರ್ಷ ಸಂಸಾರ ಮಾಡಿದ್ದರು. ಈ ಸಂಸಾರದಲ್ಲಿ ಇಬ್ಬರು ಮಕ್ಕಳು ಹುಟ್ಟಿದ್ದರು. ಜಾನಾ ಬೆಝುಯಿಡೆನ್‌ಹೌಟ್ ತನ್ನ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದರೂ, ಆಕೆಯೊಂದಿಗೆ ತಾನು ಸಂಸಾರ ಮಾಡುತ್ತಿಲ್ಲ ಎಂದು ಎರಾಲ್‌ ಮಸ್ಕ್‌ ಹೇಳಿದ್ದಾರೆ. ಅದಕ್ಕೆ 41 ವರ್ಷದ ವಯಸ್ಸಿನ ಅಂತರ ಇರುವುದು ಅವರ ಮಾತು. "ಈ ಭೂಮಿಯ ಮೇಲೆ ನಾವು ಇರೋದೆ ಮಕ್ಕಳು ಮಾಡೋದಿಕ್ಕೆ" ಎಂದು ಎರಾಲ್‌ ಮಸ್ಕ್‌ (Errol Musk ) ಸಂದರ್ಶನದಲ್ಲಿ ಹೇಳಿದ್ದಾರೆ.

"ಮುಂದಿನ ತಿಂಗಳು ಅವಳಿಗೆ 35 ವರ್ಷ. ಆದ್ದರಿಂದ ಅವಳು ಕೂಡ ಬೆಳೆಯುತ್ತಿದ್ದಾಳೆ. ಆದರೆ, ಆಕೆಯೊಂದಿಗೆ ನಾನು ವಾಸ ಮಾಡುತ್ತಿಲ್ಲ' 2ನೇ ಮಗು ಜನಿಸಿದಾಗ ನಾನು ಆಕೆಯೊಂದಿಗೆ 18 ತಿಂಗಳ ಕಾಲ ಒಟ್ಟಿಗೆ ಇದ್ದೆ ಎಂದು ಬಹಿರಂಗಪಡಿಸಿದ್ದಾರೆ. ಎರಾಲ್‌ ಮಸ್ಕ್‌, ದಕ್ಷಿಣ ಆಫ್ರಿಕಾದ (South Africa) ಪ್ರಖ್ಯಾತ ಇಂಜಿನಿಯರ್‌ ಆಗಿ ಹೆಸರು ಮಾಡಿದ್ದಾರೆ.

ಇದನ್ನೂ ಓದಿ: ಮಗಳು ಹುಟ್ಟಿದ ಐದು ತಿಂಗಳಿಗೆ ಎಲಾನ್ ಮಸ್ಕ್ ಗೆ ಹೊಸ ಗೆಳತಿ, ಯಾರೀಕೆ ನತಾಶಾ ಬ್ಯಾಸೆಟ್?

ತಂದೆಯನ್ನು ದ್ವೇಷಿಸುವ ಎಲಾನ್‌ ಮಸ್ಕ್‌: ಆಘಾತಕಾರಿ ಸುದ್ದಿಗೆ ಅವರ ಕುಟುಂಬ ಹೇಗೆ ಪ್ರತಿಕ್ರಿಯಿಸಿತು ಎಂದು ಕೇಳಿದಾಗ, 2017 ರಲ್ಲಿ ಎರಾಲ್‌ ಮಸ್ಕ್‌ ಅವರು ಜಾನಾ ತನ್ನ ಮಗುವಿಗೆ ಜನ್ಮ ನೀಡುತ್ತಿದ್ದಾಳೆ ಎಂದು ಎಲಾನ್‌ ಮಸ್ಕ್‌ಗೆ (Elon Musk) ಹೇಳಿದರು. ಇದರ ಬೆನ್ನಲ್ಲಿಯೇ ಎಲಾನ್‌ ಮಸ್ಕ್‌ ಹಾಗೂ ಎರಾಲ್‌ ಮಸ್ಕ್‌ ನಡುವೆ ಭಿನ್ನಾಭಿಪ್ರಾಯ ಆರಂಭವಾಯಿತು. ಏನೇ ಆಗಿರಲು, ಜಾನಾ ಬೆಝುಯಿಡೆನ್‌ಹೌಟ್ ತನ್ನ ತಂಗಿ ಎನ್ನುವ ಅರ್ಥದಲ್ಲಿ ಕಾಣುತ್ತಿದ್ದ ಎಲಾನ್‌ ಮಸ್ಕ್‌, ತನ್ನ ತಂದೆ ಆಕೆಯನ್ನು ಗರ್ಭಿಣಿ ಮಾಡಿದನ್ನು ಒಪ್ಪಿರಲಿಲ್ಲ. ಅದರ ಬೆನ್ನಲ್ಲಿಯೇ ತಂದೆಯನ್ನು ದ್ವೇಷಿಸಲು ಆರಂಭಿಸಿದ್ದರು.

ಇದನ್ನೂ ಓದಿ: ಸಾವಿನ ಬಗ್ಗೆ ಎಲಾನ್ ಮಸ್ಕ್ ಟ್ವೀಟ್: ತಾಯಿಯ ಬುದ್ಧಿವಾದದ ಬಳಿಕ 'Sorry' ಎಂದ ಟೆಸ್ಲಾ ಸಿಇಓ

ಎಲಾನ್‌ ಮಸ್ಕ್‌ಗೆ 9 ಮಕ್ಕಳು: ಎರಾಲ್‌ ಮಸ್ಕ್‌ ಒಟ್ಟಾರೆಯಾಗಿ ಏಳು ಮಕ್ಕಳ ತಂದೆಯಾಗಿದ್ದರೆ, ಎಲಾನ್‌ ಮಸ್ಕ್‌ ಈವರೆಗೂ 9 ಮಕ್ಕಳಿಗೆ ತಂದೆಯಾಗಿದ್ದಾರೆ. ಇಲ್ಲಿಯವರೆಗೂ ಎಲಾನ್‌ ಮಸ್ಕ್‌ ಕೇವಲ 7 ಮಕ್ಕಳ ತಂದೆ ಎಂದು ಹೇಳಲಾಗಿತ್ತು. ಆದರೆ, ಇತ್ತೀಚೆಗೆ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದ್ದು, ಎಲೋನ್ ತನ್ನ ಕಂಪನಿ ನ್ಯೂರಾಲಿಂಕ್‌ನಲ್ಲಿ ಕೆಲಸ ಮಾಡುವ ಕಾರ್ಯ ನಿರ್ವಾಹಳೊಂದಿಗೆ ಸಂಬಂಧವನ್ನು ಹೊಂದಿದ್ದು, ಅವರ ಮೂಲಕ ಇಬ್ಬರು ಮಕ್ಕಳನ್ನು ಪಡೆದುಕೊಂಡಿದ್ದಾರೆ. ಈ ರೀತಿಯಾಗಿ, ಎಲಾನ್‌ ಮಸ್ಕ್‌ಗೆ ಒಟ್ಟು ಒಂಬತ್ತು ಮಕ್ಕಳಿದ್ದಾರೆ, ಆದರೆ, ಅವರ ತಾಯಂದಿರು ವಿಭಿನ್ನರಾಗಿದ್ದಾರೆ. ಈಗ ಅವರ ತಂದೆಯ ಈ ಆಘಾತಕಾರಿ ಸುದ್ದಿ ಬಹಿರಂಗಗೊಂಡ ನಂತರ, ಸ್ಪೇಸ್‌ಎಕ್ಸ್ ಮಾಲೀಕರ ಅಧಿಕೃತ ಹೇಳಿಕೆಯನ್ನು ನಿರೀಕ್ಷಿಸಲಾಗುತ್ತಿದೆ.

Latest Videos
Follow Us:
Download App:
  • android
  • ios