Asianet Suvarna News Asianet Suvarna News

ಜಗತ್ತಿನ ಶ್ರೀಮಂತ ವ್ಯಕ್ತಿಗಳ ಸರಳ ಅಭ್ಯಾಸಗಳಿವು, ಅಳವಡಿಸಿಕೊಂಡರೆ ಜೀವನ ಬಿಂದಾಸ್!

ಜಗತ್ತಿನ ಇಂದಿನ ಬಿಲಿಯನೇರ್‌ಗಳು ಸರಳ ಬದುಕಿನ ಹಿನ್ನೆಲೆಯಿಂದಲೇ ಬಂದವರು. ಅವರು ತಮ್ಮ ದೈನಂದಿನ ಕೆಲವು ಅಭ್ಯಾಸಗಳನ್ನು ರಿಚ್ ಆದ ಬಳಿಕವೂ ಬಿಟ್ಟುಕೊಟ್ಟಿಲ್ಲ. ಅದರಿಂದಲೇ ಅವರು ಶ್ರೀಮಂತರಾಗಲು ಸಹಾಯವಾಯಿತು ಎನ್ನಲೂಬಹುದು. ಬನ್ನಿ, ಅಂಥ ಕೆಲವು ಕುಬೇರರ ಹವ್ಯಾಸಗಳ ಬಗ್ಗೆ ನೋಡೋಣ.

 

World rich Elon musk Jeff Bezos Gowtham Adani simpliciy to be adopted
Author
Bengaluru, First Published Aug 2, 2022, 3:44 PM IST

ಉಳಿದವರಿಗಿಂತ ಹೆಚ್ಚು ಜೀವನದಲ್ಲಿ ಯಶಸ್ವಿಯಾದವರು (success) ಜೀವನದ ಕಡೆಗೆ ವಿಭಿನ್ನ ದೃಷ್ಟಿಕೋನ ಮತ್ತು ನಿಲುವು ಹೊಂದಿರುತ್ತಾರೆ. ಅವರು ತುಂಬಾ ಕಷ್ಟಪಟ್ಟು ದುಡಿಯುವ ಮತ್ತು ಸಕಾರಾತ್ಮಕ ಮನಸ್ಥಿತಿ ಹೊಂದಿರುತ್ತಾರೆ. ಅವರ ಸರಳ ಅಭ್ಯಾಸಗಳಿಂದ ನೀವು ಆಶ್ಚರ್ಯ ಪಡುತ್ತೀರಿ! ಉಳಿದವರಿಗಿಂತ ಹೆಚ್ಚು ಯಶಸ್ವಿಯಾದವರು ಜೀವನದ ಕಡೆಗೆ ವಿಭಿನ್ನ ದೃಷ್ಟಿಕೋನ ಮತ್ತು ನಿಲುವು ಹೊಂದಿರುತ್ತಾರೆ. ಅವರು ತುಂಬಾ ಕಷ್ಟಪಟ್ಟು ದುಡಿಯುವ ಮತ್ತು ಸಕಾರಾತ್ಮಕ ಮನಸ್ಥಿತಿಯನ್ನು ಹೊಂದಿರುತ್ತಾರೆ. ಅದು ಯಶಸ್ಸಿನ ಏಣಿಯನ್ನು ಏರಲು ಸಹಾಯ ಮಾಡುತ್ತದೆ. ಅದೃಷ್ಟದೊಂದಿಗೆ ಒಟ್ಟಾರೆ ಯಶಸ್ಸು ಮತ್ತು ಸಮೃದ್ಧಿಗೆ ಕೊಡುಗೆ ನೀಡುವ ಕೆಲವು ಸಾಮಾನ್ಯ ಅಭ್ಯಾಸಗಳು ಅವರಲ್ಲಿ ಇರುತ್ತವೆ. ಬಿಲ್ ಗೇಟ್ಸ್‌ನಿಂದ ಹಿಡಿದು ಮುಖೇಶ್ ಅಂಬಾನಿಯವರೆಗೆ, ವಿಶ್ವದ ಕೆಲವು ಶ್ರೀಮಂತ ಜನರ ಅಭ್ಯಾಸಗಳನ್ನು ಪರಿಶೀಲಿಸೋಣ.

ಎಲೋನ್ ಮಸ್ಕ್ (Elon musk)
260 ಶತಕೋಟಿ ಡಾಲರ್‌ಗಳ ಮೌಲ್ಯದ ಆಸ್ತಿ ಹೊಂದಿರುವ ಎಲೋನ್ ಮಸ್ಕ್ ಅವರು ಪ್ರತಿದಿನ ಓದಲು ಒಂದು ನಿರ್ದಿಷ್ಟ ಸಮಯವನ್ನು ಮೀಸಲಿಡುತ್ತಾರೆ. ಅವರು ಹೊಟ್ಟೆಬಾಕನಂತೆ ಓದುತ್ತಾರೆ. ಜಗತ್ತನ್ನು ಮುನ್ನಡೆಸಲು ಜ್ಞಾನ ಅಗತ್ಯ ಎಂದು ನಂಬುತ್ತಾರೆ.

ಜೆಫ್ ಬೆಜೋಸ್ (Jeff Bezos)
ಅಮೆಜಾನ್ ಯಶಸ್ಸಿನ ಕಥೆಯೊಂದಿಗೆ, ಜೆಫ್ ಬೆಜೋಸ್ ಅಗ್ರಸ್ಥಾನಕ್ಕೆ ಏರಿದ್ದಾರೆ. ಅತ್ಯಂತ ಬ್ಯುಸಿ ಜನರಲ್ಲಿ ಒಬ್ಬರಾಗಿರುವಾಗಲೂ ತಮ್ಮ ಇಡೀ ದಿನದ ವೇಳಾಪಟ್ಟಿಯಲ್ಲಿ ಮಾಡಲು ಇಷ್ಟಪಡುವ ಒಂದು ಕೆಲಸವನ್ನು ಮಾಡಲು ಸಮಯ ಮೀಸಲಿಡುತ್ತಾರೆ. ಇಷ್ಟಪಡುವ ಕೆಲಸಗಳನ್ನು ಮಾಡುವ ಯಾರೇ ಆಗಲಿ ಮಾನಸಿಕ ಒತ್ತಡದಲ್ಲಿ ಕುಸಿಯುವುದಿಲ್ಲ ಎಂಬುದು ಅವರ ನಂಬಿಕೆ. ಗಾಲ್ಫ್ ಅವರ ಮೆಚ್ಚಿನ ಕ್ರೀಡೆ. 

ಗೌತಮ್ ಅದಾನಿ (Gowtham Adani)
ಅದಾನಿ ಇತ್ತೀಚೆಗೆ ಭಾರತದ ಶ್ರೀಮಂತ ವ್ಯಕ್ತಿ ಎಂದು ಘೋಷಿಸಲಾಗಿದೆ. ವಿಶ್ವದ ಅಗ್ರ 10 ಶ್ರೀಮಂತ ವ್ಯಕ್ತಿಗಳಲ್ಲಿ ಸ್ಥಾನ ಪಡೆದಿದ್ದಾರೆ. ಗೌತಮ್ ಅತ್ಯುತ್ತಮ ಸಂವಹನ ಮತ್ತು ಸಮಾಲೋಚನಾ ಕೌಶಲ್ಯಗಳನ್ನು ಹೊಂದಿದ್ದಾರೆ. ಅದು ಅವರ ಗುರಿಗಳನ್ನು ನಿಖರವಾಗಿ ಹೇಗೆ ಮತ್ತು ಯಾವಾಗ ಸಾಧಿಸಬೇಕು ಎಂಬುದನ್ನು ಗುರುತಿಸಲು ಸಹಾಯ ಮಾಡುತ್ತದೆ.

ಏಷ್ಯಾದ ಶ್ರೀಮಂತ ಪುರುಷ ಮಾತ್ರವಲ್ಲ, ಮಹಿಳೆ ಕೂಡ ಭಾರತೀಯರೆ;ಹುಯಿಯಾನ್ ಹಿಂದಿಕ್ಕಿದ ಸಾವಿತ್ರಿ ಜಿಂದಾಲ್

ಬಿಲ್ ಗೇಟ್ಸ್ (Bill Gates)
ಬಿಲ್ ಗೇಟ್ಸ್ ತಮ್ಮ ಯಶಸ್ಸಿನ ಕಥೆಯೊಂದಿಗೆ ಅನೇಕರಿಗೆ ಸ್ಫೂರ್ತಿ. ಶತಕೋಟ್ಯಾಧಿಪತಿಗಳು ಸಾಮಾನ್ಯವಾಗಿ ಖರ್ಚು ಮಾಡುವುದು ಹೆಚ್ಚು ಎಂಬುದು ನಂಬಿಕೆ. ಇದಕ್ಕೆ ವಿರುದ್ಧವಾಗಿ, ಇವರು ಹಣವನ್ನು ಸಂರಕ್ಷಿಸುವುದನ್ನು ಬಲವಾಗಿ ನಂಬುತ್ತಾರೆ. ಆದರೆ ದಾನ ದತ್ತಿಗಾಗಿ ಶತಕೋಟಿ ಡಾಲರ್‌ಗಳನ್ನು ದಾನ ಮಾಡುತ್ತಾರೆ.

ಬರ್ನಾರ್ಡ್ ಅರ್ನಾಲ್ಟ್ (Bernard Arnalt)
ವಿಶ್ವದ ಅತಿದೊಡ್ಡ ಐಷಾರಾಮಿ ಸರಕುಗಳ ಕಂಪನಿಯ ಸ್ಥಾಪಕರು. ಧಾರ್ಮಿಕವಾಗಿ ತಾಳ್ಮೆಯನ್ನು ಅಭ್ಯಾಸ ಮಾಡುತ್ತಾರೆ. ವ್ಯವಹಾರವನ್ನು ಅರ್ಥಮಾಡಿಕೊಳ್ಳಲು ಸಮಯ, ಬದ್ಧತೆ ಮತ್ತು ತಾಳ್ಮೆ ತೆಗೆದುಕೊಳ್ಳುತ್ತದೆ ಎಂದು ಬರ್ನಾರ್ಡ್ ನಂಬುತ್ತಾರೆ. ಬ್ರ್ಯಾಂಡ್ ಹೇಗೆ ಕೆಲಸ ಮಾಡುತ್ತದೆ ಮತ್ತು ಪ್ರೇಕ್ಷಕರನ್ನು ಆಕರ್ಷಿಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಇದು ಅಗತ್ಯವಂತೆ. 

ವಾರೆನ್ ಬಫೆಟ್ (Warren Buffet)
ವಾರೆನ್ ಬಫೆಟ್ ವಿಶ್ವದ ಶ್ರೀಮಂತ ಹೂಡಿಕೆದಾರರಲ್ಲಿ ಒಬ್ಬರು. ಅವರ ಅತ್ಯಂತ ಆಶ್ಚರ್ಯಕರ ಅಭ್ಯಾಸವೆಂದರೆ ಅವರು ತಮ್ಮ ದೈನಂದಿನ ಊಟಕ್ಕೆ ಹೆಚ್ಚು ಖರ್ಚು ಮಾಡಲು ಇಷ್ಟಪಡುವುದಿಲ್ಲ. ವಾಸ್ತವವಾಗಿ, ಕೆಲಸಕ್ಕೆ ಹೋಗುವ ದಾರಿಯಲ್ಲಿ ಸಿಗುವ 5 ಡಾಲರ್ ಬರ್ಗರ್ ಖರೀದಿಸಿ ಸೇವಿಸುತ್ತಾರೆ. ಪ್ರತಿಯೊಬ್ಬರೂ ಖಂಡಿತವಾಗಿಯೂ ಹಣವನ್ನು ಸಂರಕ್ಷಿಸಲು ಕಲಿಯಬೇಕು ಎಂಬುದು ಅವರ ನಂಬಿಕೆ. 

ಮಾರ್ಕ್ ಜುಕರ್‌ಬರ್ಗ್‌ (Mark Zukerberg)
ವಿಶ್ವದ ದೊಡ್ಡ ಸಂಸ್ಥೆಗಳನ್ನು ನಡೆಸುತ್ತಿದ್ದರೂ ಮಾರ್ಕ್ ಜುಕರ್‌ಬರ್ಗ್ ತಮ್ಮ ಬೆಳಗಿನ ಅಭ್ಯಾಸಗಳು, ಪ್ರಯಾಣ, ವ್ಯಾಯಾಮಗಳಿಗೆ ಸಮಯ ಮೀಸಲಿಡುತ್ತಾರೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ತಮ್ಮ ಮಗಳನ್ನು ಹಾಸಿಗೆಯಲ್ಲಿ ಮಲಗಿಸಿ ಹೊದಿಕೆ ಹೊದಿಸಲು ಮರೆಯುವುದಿಲ್ಲ. ಯಶಸ್ವಿ ವ್ಯಕ್ತಿಗಳಿಗೆ ಫ್ಯಾಮಿಲಿ ಮುಖ್ಯ ಎಂಬುದು ಅವರ ಬಲವಾದ ನಂಬಿಕೆ. 

ಏಷ್ಯಾದ ಶ್ರೀಮಂತ ಮಹಿಳೆಗೆ ಹೊಡೆತ ನೀಡಿದ ಚೀನಾದ ರಿಯಲ್ ಎಸ್ಟೇಟ್ ಬಿಕ್ಕಟ್ಟು; ಕರಗಿತು ಅರ್ಧಕ್ಕಿಂತಲೂ ಹೆಚ್ಚಿನ ಸಂಪತ್ತು
 

Follow Us:
Download App:
  • android
  • ios