ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಪವಿತ್ರಾ ಗೌಡ ಅವರನ್ನು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಭೇಟಿಯಾದರು. ಪವಿತ್ರಾ ಮಾನಸಿಕವಾಗಿ ಕುಗ್ಗಿದ್ದು, ಅವರ ಸ್ಥಿತಿ ನೋವು ತಂದಿದೆ ಎಂದು ನಾಗಲಕ್ಷ್ಮೀ ಭಾವುಕರಾಗಿ ನುಡಿದರು. ಇದೇ ವೇಳೆ ಅವರು ಜೈಲಿನಲ್ಲಿದ್ದ ಇತರೆ ಮಹಿಳಾ ಕೈದಿಗಳ ಯೋಗಕ್ಷೇಮವನ್ನೂ ವಿಚಾರಿಸಿದರು.

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ದರ್ಶನ್​ ಜೊತೆ ಜೈಲಿನಲ್ಲಿ ಇರುವವರು ಪವಿತ್ರಾ ಗೌಡ (Pavitra Gowda) ಅವರಿಗೆ ಕೆಲ ದಿನಗಳಿಂದ ಲೋ ಬಿಪಿ ಸಮಸ್ಯೆ ಆಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರ ನಡುವೆಯೇ, ಅವರು ಬಂಧಿಯಾಗಿರುವ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಭೇಟಿ ನೀಡಿದ್ದರು. ಈ ಸಮಯದಲ್ಲಿ ಅವರು, ಪವಿತ್ರಾ ಗೌಡ ಸೇರಿದಂತೆ ಮಹಿಳಾ ಕೈದಿಗಳ ಯೋಗಕ್ಷೇಮ ಹಾಗೂ ಸಮಸ್ಯೆಗಳನ್ನು ಪರಿಶೀಲಿಸಿದರು.

ಆ ನಂತರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಪವಿತ್ರಾಗೌಡ ಸೇರಿದಂತೆ ಎಲ್ಲ ಮಹಿಳಾ ಕೈದಿಗಳ ಜೊತೆ ಮಾತನಾಡಿರುವುದಾಗಿ ತಿಳಿಸಿದರು. ಸಾಮಾನ್ಯವಾಗಿ ಜೈಲುಗಳಿಗೆ ಭೇಟಿ ನೀಡುತ್ತೇನೆ. ಇಂದು ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿದ್ದೆ. 200 ಮಂದಿ ಮಹಿಳಾ ಖೈದಿಗಳು ಜೈಲಿನಲ್ಲಿದ್ದಾರೆ. ಇಂದು ಆರು ಮಂದಿ ರಿಲೀಸ್ ಆಗಿದ್ದಾರೆ. ಮಹಿಳಾ ಕೈದಿಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಮಹಿಳಾ ಕೈದಿಗಳಿಗೆ ನೀಡುವ ಊಟವನ್ನು ಸ್ವತಃ ಸೇವಿಸಿ ಪರಿಶೀಲನೆ ಮಾಡಿದ್ದೇನೆ. ತರಕಾರಿ ದಿನಸಿ ಸ್ಟೋರ್ ರೂಮ್ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದು ಹೇಳಿದರು.

ಪವಿತ್ರಾ ಗೌಡ ಮಗಳಿದ್ದಂತೆ

ಇದೇ ವೇಳೆ ಪವಿತ್ರಾ ಗೌಡ ಅವರ ಸ್ಥಿತಿಗೆ ಕಂಬನಿ ಮಿಡಿದ ಸಚಿವೆ, ಜೈಲಿನಲ್ಲಿ ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ. ಆಕೆ ನನಗೆ ಮಗಳ ಸಮಾನ. ಅವರ ಸ್ಥಿತಿ ನೋವಿನಿಂದ ಕೂಡಿದೆ. ತಾಯಿಯಾಗಿ ನಮಗೆ ಪವಿತ್ರಾಗೌಡ ಅಥವಾ ಇತರ ಯಾವುದೇ ಹೆಣ್ಣುಮಗಳು ಇರಲಿ ಎಲ್ಲರೂ ಒಂದೇ ಎಂದು ಭಾವುಕರಾದರು. ಪವಿತ್ರಾ ಗೌಡ ಸೇರಿದಂತೆ ಹಲವು ಕೈದಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡೆ. ಅವರ ಸ್ಥಿತಿ ಹೇಳಬಾರದು. ಪವಿತ್ರಾ ನನಗೆ ಮಗಳ ಸಮಾನ. ಕಾನೂನು ಪ್ರಕಾರ ಏನು ಆಗಬೇಕೊ ಅದು ಆಗುತ್ತದೆ. ಮಹಿಳೆಯರು ಭಾವನಾತ್ಮಕ ಜೀವಿಗಳು. ಇತರೆ ಮಹಿಳಾ ಕೈದಿಗಳ ಸಮಸ್ಯೆಯನ್ನೂ ಆಲಿಸಿದ್ದೇನೆ ಎಂದು ಪ್ರಶ್ನೆಗೆ ಉತ್ತರಿಸಿದರು. ಒಂದು ತಪ್ಪನ್ನು ಮಾಡಿ ಜೈಲಿಗೆ ಹೋಗಿರುತ್ತಾರೆ. ಮತ್ತೆ ನಾವು ಅವರ ಬಗ್ಗೆ ಹೆಚ್ಚಾಗಿ ಮಾತನಾಡಿದಾಗ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ ಎಂದು ಹೇಳಿದರು.

200 ಮಂದಿ ಮಹಿಳಾ ಕೈದಿಗಳು

200 ಮಂದಿ ಮಹಿಳಾ ಕೈದಿಗಳು ಜೈಲಿನಲ್ಲಿದ್ದಾರೆ. ಇಂದು ಆರು ಮಂದಿ ರಿಲೀಸ್ ಆಗಿದ್ದಾರೆ. ಮಹಿಳಾ ಕೈದಿಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಮಹಿಳಾ ಕೈದಿಗಳಿಗೆ ನೀಡುವ ಊಟವನ್ನು ಸ್ವತಃ ಸೇವಿಸಿ ಪರಿಶೀಲನೆ ಮಾಡಿದ್ದೇನೆ. ತರಕಾರಿ ದಿನಸಿ ಸ್ಟೋರ್ ರೂಮ್ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಲಾಗಿದೆ ಎಂದರು. ಮಹಿಳಾ ಕೈದಿಗಳನ್ನು ಇಟ್ಟಿರುವ ಬ್ಯಾರಕ್‌ಗಳನ್ನು ಪರಿಶೀಲಿಸಿದ್ದೇನೆ. ಕೈದಿಗಳಿಗೆ ನೀಡುವ ಊಟ, ಸೋಪು, ಪೇಸ್ಟ್‌ ಸೇರಿದಂತೆ ಇತರೆ ಸೌಲಭ್ಯಗಳನ್ನೂ ಪರಿಶೀಲಿಸಿದ್ದೇನೆ. ಇದೇ ವೇಳೆ ಸೊಳ್ಳೆಗಳ ಕಾಟ ವಿಪರೀತವಿದೆ ಎಂಬುದಾಗಿ ಹಲವು ಕೈದಿಗಳು ನೋವು ತೋಡಿಕೊಂಡರು ಎಂದು ಹೇಳಿದರು.

ಜೈಲು ಸಿಬ್ಬಂದಿ ಹೊರಗಿಟ್ಟು ಮಹಿಳಾ ಕೈದಿಗಳ ಜೊತೆ ಚರ್ಚೆ ಮಾಡಲಾಯಿತು. ತಪ್ಪು ಮಾಡದವರು ಯಾರೂ ಇಲ್ಲ, ಬಹುತೇಕ ಮಹಿಳಾ ಖೈದಿಗಳು ತಮ್ಮವರ ಅಪ್ಪುಗೆಗಾಗಿ ಕಾಯುತ್ತಿದ್ದಾರೆ. ಈ ವೇಳೆ ಬಹುತೇಕ ಮಹಿಳಾ ಕೈದಿಗಳು ಸೊಳ್ಳೆಕಾಟದ ಬಗ್ಗೆ ತಿಳಿಸಿದರು. ನಿಷೇಧಿತ ವಸ್ತುಗಳು ಪತ್ತೆ ಬಗ್ಗೆ ದೊಡ್ಡ ಸುದ್ದಿ ಇದೆ. ಆದರೆ ಇಂದಿನ ಭೇಟಿ ವೇಳೆ ಯಾವುದೇ ನಿಷೇಧಿತ ವಸ್ತುಗಳು ಕಂಡಿಲ್ಲ ಎಂದರು. ಎಷ್ಟೋ ಮಂದಿಗೆ ಜಾಮೀನು ಸಿಕ್ಕರೂ ಶ್ಯೂರಿಟಿಗೆ ದುಡ್ಡಿಲ್ಲ. ಹಣ ಕಟ್ಟಲಾಗದೆ ಜೈಲಿನಲ್ಲಿದ್ದಾರೆ. ನೈಜೀರಿಯಾ, ಸೌತ್ ಆಫ್ರಿಕಾ ಸೇರಿದಂತೆ ಹತ್ತು ಮಂದಿ ಪುಟ್ಟ ಮಕ್ಕಳಿದ್ದಾರೆ. ಅಂಗನವಾಡಿಯಲ್ಲಿ ನಾಲ್ಕು ಮಂದಿ ಟೀಚರ್ಸ್ ಇದ್ದಾರೆ. ಮಕ್ಕಳು ಕನ್ನಡ, ಇಂಗ್ಲಿಷ್ ಭಾಷೆ ಮಾತನಾಡುವುದನ್ನು ಕಂಡರೆ ಖುಷಿಯಾಗುತ್ತದೆ. ಜೈಲು ಭೇಟಿ ಒಂದು ಭಾವನಾತ್ಮಕ ಕ್ಷಣ. ಟೈಮ್‌ ಪಾಸ್​ಗಾಗಿ ಮಾಡುವ ಕರಕುಶಲ ವಸ್ತುಗಳು ಅದ್ಭುತ ಎಂದು ಹೇಳಿದರು.