ಹಾವೇರಿಯ ರಾಣೇಬೆನ್ನೂರಿನಲ್ಲಿ ನಸುಕಿನ ಜಾವ ಜಿಮ್‌ಗೆ ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ ಕಳ್ಳರು, ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದಾರೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.

ಹಾವೇರಿ (ಸೆ.10): ನಸುಕಿನ ಜಾವ ಅಥವಾ ರಾತ್ರಿ ವೇಳೆ ಒಬ್ಬಂಟಿಯಾಗಿ ಜಿಮ್‌ಗೆ ಹೋಗುವ ಮಹಿಳೆಯರೇ ಎಚ್ಚರ. ಕೊರಳಲ್ಲಿ ಚಿನ್ನ ಇದ್ರೆ ಜೀವಕ್ಕೆ ಅಪಾತ್ತು. ಚಿನ್ನದ ಸರಳ ಕೊರಳಲ್ಲಿದ್ರೆ ಈಗ ಫ್ಯಾಶನ ಅಲ್ಲ, ಪ್ರಾಣಕ್ಕೆ ಕುತ್ತು. ಹೌದು. ಹಾವೇರಿ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆ ಒಂದು ತಾಜಾ ಉದಾಹರಣೆ. ನಸುಕಿನ ಜಾವ ಜಿಮ್‌ಗೆ ಒಬ್ಬಂಟಿಯಾಗಿ ಜಿಮ್‌ಗೆ ಹೊರಡ್ತೀರಾ? ಹೋಗೋ ಮುನ್ನ ಈ ಪ್ರಕರಣದ ಬಗ್ಗೆ ತಿಳ್ಕೊಳ್ಳಿ.

ಜಿಮ್‌ ಹೊಗ್ತಿದ್ದ ಮಹಿಳೆಯ ಚಿನ್ನದ ಸರ ಕಿತ್ತ ಕಳ್ಳರು

ಜಿಮ್‌ಗೆ ಹೊರಟಿದ್ದ ಮಹಿಳೆಯನ್ನ ಹಿಂಬಾಲಿಸಿ ಕದೀಮರು ಆಕೆಯ ಕೊರಳಲ್ಲಿದ್ದ ಚಿನ್ನದ ಸರ ಕಿತ್ತು ಪರಾರಿಯಾದ ಘಟನೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಗರದ ಬಸ್ ನಿಲ್ದಾಣದ ಬಳಿ ನಡೆದಿದೆ. ಕೊರಳಿಗೆ ಕೈ ಹಾಕಿದ ಖದೀಮರು ಸರ ಕಿತ್ತುವಾಗ ಮಹಿಳೆ ಪ್ರತಿರೋದಿಸಿದರೂ, ಅತ್ತರೂ ಬಿಡದೆ ನೆಲಕ್ಕೆ ಕೆಡವಿ ಕಿತ್ತು ಪರಾರಿಯಾಗಿದ್ದಾರೆ. ಕಳ್ಳರು ಎಳೆದಾಡಿದ ರಭಸಕ್ಕೆ ನೆಲಕ್ಕೆ ಬಿದ್ದು ಮಹಿಳೆ ಒದ್ದಾಡಿದ್ದಾರೆ.

ಇದನ್ನೂ ಓದಿ:ಆಸ್ತಿ ಮಾಲೀಕರೇ ಎಚ್ಚರ! ನಕಲಿ ದಾಖಲೆ ಸೃಷ್ಟಿಸಿ ಯಾರದೋ ಆಸ್ತಿ ಮಂಗಮಾಯ ಮಾಡೋ ಗ್ಯಾಂಗ್ ಇದು!

ಸಿಸಿಟಿವಿಯಲ್ಲಿ ದಾಖಲಾಯ್ತು ಖದೀಮರ ಕೃತ್ಯ

ಘಟನೆಯ ಸ್ಥಳದಲ್ಲಿ ಶಾಪ್ ಒಂದರ ಸಿಸಿಟಿವಿಯಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಕಳ್ಳರ ಈ ಕೃತ್ಯ ಸೆರೆಯಾಗಿ ಇಕ್ಕಟ್ಟಾದ ಓಣಿಯಂತಹ ದಾರಿ, ಬೆಳಗಿನ ಜಾವ ಇರಬೇಕು. ಸುತ್ತಮುತ್ತ ನಿರ್ಜನ ಭಯಾನಕ ಮೌನದ ವಾತಾವರಣವಿದೆ. ಇದೇ ವೇಳೆ ಮಂಜುಳಾ ಹೆಸರಿನ ಮಹಿಳೆ ಎಂದಿನಂತೆ ಜಿಮ್‌ ಹೋಗುತ್ತಿದ್ದಾಳೆ. ಆಕೆಯ ಕೊರಳಲ್ಲಿ ಸುಮಾರು ಎರಡೂವರೆ ಲಕ್ಷ ಮೌಲ್ಯದ ಚಿನ್ನದ ಸರವಿದೆ. ಪಳಪಳ ಹೊಳೆಯುವ ಚಿನ್ನದ ಸರದ ಖದೀಮರ ಕಣ್ಣು ಬಿದ್ದಿದೆ. ಮೊದಲೇ ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಹೋಗ್ತಿರೋ ಮಹಿಳೆ, ಈ ಅವಕಾಶಕ್ಕೆ ಕಾದು ಕುಳಿತುಕೊಂಡಿರೋ ಖದೀಮರು ಬೈಕ್‌ನಲ್ಲಿ ಮಹಿಳೆಯನ್ನ ಹಿಂಬಾಲಿಸಿ ಕುತ್ತಿಗೆಗೆ ಕೈಹಾಕಿಯೇ ಬಿಟ್ಟಿದ್ದಾರೆ. ಕುತ್ತಿಗೆ ಹಾಕಿದ ತಕ್ಷಣ ಮಹಿಳೆ ಆಘಾತಗೊಂಡಿದ್ದಾರೆ ಕ್ಷಣಮಾತ್ರದಲ್ಲಿ ಚಿನ್ನದ ಸರ ಕಿತ್ತು ಕಳ್ಳರು ಪರಾರಿಯಾಗಿದ್ದಾರೆ.

ಇದನ್ನೂ ಓದಿ: ತುಮಕೂರು: ಈ ಸರ್ಕಾರದಲ್ಲಿ ಅನುದಾನ ತರಲು ಮುಖ್ಯಮಂತ್ರಿಗೇ ಲಂಚ ಕೊಡಬೇಕು! ಶಾಸಕನ ಹೇಳಿಕೆ ಸಂಚಲನ

ಸ್ಥಳಕ್ಕೆ ಡಿವೈಎಸ್ಪಿ ಲೋಕೇಶ್ ಭೇಟಿ

ಈ ಘಟನೆ ಸ್ಥಳೀಯರನ್ನೇ ಬೆಚ್ಚಿಬಿಳಿಸಿದೆ. ಕಳ್ಳರ ಕೃತ್ಯದ ಮಾಹಿತಿ ತಿಳಿಯುತ್ತಿದ್ದಂತೆ ಹಾವೇರಿ ಡಿವೈಎಸ್‌ಪಿ ಲೋಕೇಶ್ ರಾಣೆಬೆನ್ನೂರು ನಗರ ಪೊಲೀಸರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೃತ್ಯ ನಡೆದ ಸ್ಥಳದಲ್ಲಿ ಬಸ್‌ ನಿಲ್ದಾಣದ ಸುತ್ತಮುತ್ತ ಅಳವಡಸಲಾದ ಸಿಸಿಟಿವಿಗಳನ್ನ ಪರಿಶೀಲನೆ ನಡೆಸಿದ್ದಾರೆ. ಕಳ್ಳರ ಸುಳಿವು ಸಿಕ್ಕಿದ್ದು ಶೀಘ್ರದಲ್ಲೇ ಬಂಧಿಸಲು ಪೊಲೀಸರು ಕಾರ್ಯಾಚರಣೆಗಳಿದಿದ್ದಾರೆ. ಘಟನೆ ಸಂಬಂಧ ರಾಣೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.