ಗುಜರಾತ್(ಅ.11): ದುಬೈನಲ್ಲಿ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿಗಿಂತ ಹೆಚ್ಚು ಸೋಲನ್ನೇ ಕಾಣುತ್ತಿದೆ. ಕೆಕೆಆರ್ ವಿರುದ್ದ ಸಿಎಸ್‌ಕೆ ಸೋಲಿನ ಬೆನ್ನಲ್ಲೇ ಎಂ.ಎಸ್.ಧೋನಿ ಪುತ್ರಿ ಝಿವಾ ಧೋನಿಗೆ ಸಾಮಾಜಿಕ ಜಾಲತಾಣದಲ್ಲಿ ರೇಪ್ ಬೆದರಿಕೆ ಬಂದಿತ್ತು. ಬೆದರಿಕೆ ಬೆನ್ನಲ್ಲೇ ಧೋನಿ ಪತ್ನಿ ಸಾಕ್ಷಿ ಧೋನಿ ಹಾಗೂ ಝಿವಾ ಧೋನಿ ವಾಸವಿರವು ರಾಂಚಿಯ ಫಾರ್ಮ್ ಹೌಸ್‌ಗೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿತ್ತು. ಇಷ್ಟೇ ಸುಮ್ಮನಾಗದ ಪೊಲೀಸ್ ಸದ್ದಿಲ್ಲದೆ ಕಾರ್ಯಚರಣೆ ನಡೆಸಿ ಇದೀಗೆ ಬೇದರಿಕೆ ಹಾಕಿದ ಅಪ್ರಾಪ್ತನನ್ನು ವಶಕ್ಕೆ ಪಡೆದಿದ್ದಾರೆ.

ಚೆನ್ನೈ ವಿರುದ್ಧ ಘರ್ಜಿಸಿದ ಆರ್‌ಸಿಬಿ, ಕೊಹ್ಲಿ ಪಡೆಗೆ 37 ರನ್ ಗೆಲುವು!

ಗುಜರಾತ್‌ನ ಮುಂದ್ರಾ ಜಿಲ್ಲೆಯ ಕಚ್ ವಲಯದಲ್ಲಿನ 16 ವರ್ಷದ ಅಪ್ರಪ್ತನನ್ನು ಗುಜರಾತ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೇಪ್ ಬೆದರಿಕೆ ಬಂದ ಹಿನ್ನಲೆಯಲ್ಲಿ ರಾಂಚಿ ಪೊಲೀಸರು ತನಿಖೆ ಆರಂಭಿಸಿದ್ದರು. ಐಟಿ ಸೆಲ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ರೇಪ್ ಬೆದರಿಕೆ ಹಾಕಿದವನ ಪತ್ತೆ ಹಚ್ಚಿ ಗುಜರಾತ್ ಪೊಲೀಸರಿಗೆ ಸೂಚನೆ ನೀಡಲಾಗಿತ್ತು.

ಇತ್ತ ಕಾರ್ಯಚರಣೆಗೆ ಇಳಿದ ಗುಜರಾತ್ ಪೊಲೀಸರು 16 ವರ್ಷದ ಅಪ್ರಾಪ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ದ್ವಿತೀಯ ಪಿಯುಸಿ ಒದುತ್ತಿರುವ ಹುಡುಗ ಈ ರೀತಿ ಎಂ.ಎಸ್.ಧೋನಿಯ 5 ವರ್ಷದ ಪುತ್ರಿ ಝಿವಾ ಧೋನಿಗೆ ರೇಪ್ ಬೆದರಿಕೆ ಹಾಕಿದ್ದ. ಅಪ್ರಾಪ್ತನಾದ ಕಾರಣ ಬಂಧಿಸಲು ಸಾಧ್ಯವಿಲ್ಲ. ಹೀಗಾಗಿ ವಶಕ್ಕೆ ಪಡೆದಿದ್ದೇವೆ.  ಈಗಾಗಲೇ ಅಪ್ರಾಪ್ರ ತಪ್ಪನ್ನು ಒಪ್ಪಿಕೊಂಡಿದ್ದಾನೆ. ರಾಂಚಿ ಪೊಲೀಸರು ಆಗಮಿಸಿದ ಬಳಿಕ ಅವರಿಗೆ ಹಸ್ತಾಂತರಿಸಲಿದ್ದೇವೆ ಎಂದು ಗುಜರಾತ್ ಪೊಲೀಸರು ಹೇಳಿದ್ದಾರೆ.