ಐಪಿಎಲ್ ಸಕ್ಸಸ್ ಹಿಂದೆ ಅಮಿತ್ ಶಾ ಪುತ್ರನ ತಂತ್ರ: ರಹಸ್ಯ ಬಿಚ್ಚಿಟ್ಟ ಬಿಸಿಸಿಐ ಖಜಾಂಚಿ!
ಐಪಿಎಲ್ ಸಕ್ಸಸ್ ಹಿಂದೆ ಅಮಿತ್ ಶಾ ಪುತ್ರನ ತಂತ್ರ!| ಕೊರೋನಾ ಕಾಲದಲ್ಲಿ ದೇಸೀ ಟಿ20 ಟೂರ್ನಿ ಯಶಸ್ಸಿನ ರಹಸ್ಯ ಬಿಚ್ಚಿಟ್ಟಬಿಸಿಸಿಐ ಖಜಾಂಚಿ ಅರುಣ್ ಧುಮಾಲ್| ಗೊಂದಲದಲ್ಲಿದ್ದ ಬಿಸಿಸಿಐಗೆ ಧೈರ್ಯ ತುಂಬಿದ್ದ ಜಯ್ ಶಾ| ಅಬುಧಾಬಿಯ ನಿಯಮ ಸಡಿಲಿಕೆಯಲ್ಲಿ ಪ್ರಮುಖ ಪಾತ್ರ
ನವದೆಹಲಿ(ನ.24): ಕೊರೋನಾ ಆತಂಕದ ನಡುವೆಯೂ 2020ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿ ಭರ್ಜರಿ ಯಶಸ್ಸು ಕಾಣಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಪರಿಶ್ರಮವೇ ಕಾರಣ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.
ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಧುಮಾಲ್, ಕೊರೋನಾದಿಂದಾಗಿ ಶುರುವಾಗಿದ್ದ ಆತಂಕ ಹಾಗೂ ಗೊಂದಲಗಳನ್ನು ಸಮರ್ಥವಾಗಿ ಎದುರಿಸಿ, ಅತ್ಯಂತ ಹೆಚ್ಚು ಟೀವಿ ವೀಕ್ಷಣೆಗೆ ಸಾಕ್ಷಿಯಾದ ಐಪಿಎಲ್ ಟೂರ್ನಿ ಆಯೋಜಿಸಲು ಜಯ್ ಶಾ ತೆಗೆದುಕೊಂಡ ನಿರ್ಧಾರಗಳು, ಅವರ ರೂಪಿಸಿದ ಕಾರ್ಯತಂತ್ರಗಳ ಬಗ್ಗೆ ವಿವರಿಸಿದ್ದಾರೆ.
ಆಸೀಸ್ ಪ್ರವಾಸಕ್ಕೆ ಸೂರ್ಯಕುಮಾರ್ ಆಯ್ಕೆಯಾಗಬೇಕಿತ್ತು: ಬ್ರಿಯಾನ್ ಲಾರಾ
ಐಪಿಎಲ್‌ಗೆ ಜಯ್ ಜೈ!: ಟೆನಿಸ್ ದಿಗ್ಗಜ ನೋವಾಕ್ ಜೋಕೋವಿಚ್‌ಗೆ ಸರ್ಬಿಯಾದಲ್ಲಿ ಪ್ರದರ್ಶನ ಟೆನಿಸ್ ಟೂರ್ನಿ ಆಯೋಜಿಸುವ ವೇಳೆ ಕೋವಿಡ್ ಸೋಂಕಿಗೆ ತುತ್ತಾಗಿದ್ದರು. ಈ ಬೆಳವಣಿಗೆ ಬಿಸಿಸಿಐ ಅಧಿಕಾರಿಗಳಲ್ಲಿ ಭಯ ಮೂಡಿಸಿತ್ತು. ‘ಜೋಕೋವಿಚ್ ಕೋವಿಡ್ ಸೋಂಕಿಗೆ ತುತ್ತಾದ ವಿಷಯ ಕೇಳಿ ಹೆದರಿದ್ದೆವು. ಐಪಿಎಲ್ ನಡೆಸಬೇಕೋ ಬೇಡವೂ ಎನ್ನುವ ಬಗ್ಗೆ ಗೊಂದಲ ಶುರುವಾಗಿತ್ತು. ಆದರೆ ಜಯ್ ಶಾ, ಐಪಿಎಲ್ ಅಯೋಜನೆಯಿಂದ ಹಿಂದೆ ಸರಿಯುವುದು ಬೇಡ, ಸುರಕ್ಷಿತ ಕ್ರಮಗಳೊಂದಿಗೆ ಟೂರ್ನಿ ನಡೆಸಿ ನಮ್ಮ ಸಾಮರ್ಥ್ಯ ತೋರಿಸೋಣ ಎಂದು ಧೈರ್ಯ ಹೇಳಿದರು. ನಮ್ಮೆಲ್ಲರಿಗಿಂತ ಅವರು ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು’ ಎಂದು ಧುಮಾಲ್ ಹೇಳಿದ್ದಾರೆ.
ಶಾ ಮಾತಿಗೆ ಒಪ್ಪಿದ ಅಬುಧಾಬಿ!: ಐಪಿಎಲ್ ವೇಳಾಪಟ್ಟಿವಿಳಂಬಗೊಳ್ಳಲು ಅಬುಧಾಬಿ ಆಡಳಿತ ಹಾಕಿದ್ದ ಕಠಿಣ ಕ್ವಾರಂಟೈನ್ ನಿಯಮಗಳೇ ಕಾರಣ. ಯಾರೇ ಅಬುಧಾಬಿ ಪ್ರವೇಶಿಸಿದರೂ ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕು. ಅಲ್ಲದೇ ಪ್ರತಿಬಾರಿ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ತರಬೇಕು ಎನ್ನುವ ನಿಯಮ ಜಾರಿ ಮಾಡಿತ್ತು. ‘ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತಾ ನೈಟ್ರೈಡರ್ಸ್ ತಂಡಗಳು ಅಬುಧಾಬಿಯಲ್ಲಿ ವಾಸ್ತವ್ಯ ಹೂಡಿದ್ದವು. ಅಲ್ಲಿನ ಆಡಳಿತದೊಂದಿಗೆ ಚರ್ಚಿಸಿ, ಕ್ವಾರಂಟೈನ್ ನಿಯಮ ಸಡಿಲಿಕೆ ಮಾಡಲು ಜಯ್ ಶಾ ಒಪ್ಪಿಸಿದರು. ಇದರಿಂದ ಯಾವುದೇ ತೊಂದರೆಯಿಲ್ಲದೆ ಐಪಿಎಲ್ ಆಯೋಜಿಸಲು ಸಾಧ್ಯವಾಯಿತು’ ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಹೇಳಿದ್ದಾರೆ.
T20 ಟೂರ್ನಿ ಮೂಲಕ ಶ್ರೀಶಾಂತ್ ಕ್ರಿಕೆಟ್‌ಗೆ ಕಮ್‌ಬ್ಯಾಕ್; ಹೊಸ ಅಧ್ಯಾಯ ಆರಂಭ!
ಐಪಿಎಲ್‌ನಿಂದ ಬಿಸಿಸಿಐಗೆ 4000 ಕೋಟಿ ಗಳಿಕೆ!
ಕೊರೋನಾ ಸೋಂಕಿನಿಂದಾಗಿ ಎಲ್ಲ ಕ್ಷೇತ್ರಗಳು, ಉದ್ಯಮಗಳು ನಷ್ಟಅನುಭವಿಸಿದ್ದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಾತ್ರ, ಕೊರೋನಾ ಆತಂಕದ ನಡುವೆಯೇ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯನ್ನು ಯುಎಇನಲ್ಲಿ ಯಶಸ್ವಿಯಾಗಿ ಆಯೋಜಿಸಿ ಬರೋಬ್ಬರಿ 4000 ಕೋಟಿ ರುಪಾಯಿ ಸಂಪಾದಿಸಿದೆ. ಈ ವಿಷಯವನ್ನು ಸ್ವತಃ ಬಿಸಿಸಿಐನ ಖಜಾಂಚಿ ಅರುಣ್ ಧುಮಾಲ್ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ಆದಾಯದ ವಿವರಗಳನ್ನು ಧುಮಾಲ್ ನೀಡಿಲ್ಲ. ಆದರೆ, ‘2019ರ ಆವೃತ್ತಿಗೆ ಹೋಲಿಸಿದರೆ ಶೇ.35ರಷ್ಟುಖರ್ಚು ಕಡಿತಗೊಳಿಸುವಲ್ಲಿ ಬಿಸಿಸಿಐ ಯಶಸ್ವಿಯಾಗಿದೆ. ಐಪಿಎಲ್ ನಡೆಸುವುದು ಬೇಡ ಎಂದವರು ಬಳಿಕ ನಮ್ಮನ್ನು ಅಭಿನಂದಿಸಿದರು. ಟೂರ್ನಿ ನಡೆಯದಿದ್ದರೆ ಕ್ರಿಕೆಟಿಗರ ವೃತ್ತಿಬದುಕಿನ ಒಂದು ವರ್ಷ ವ್ಯರ್ಥವಾಗುತ್ತಿತ್ತು’ ಎಂದು ಧುಮಾಲ್ ಹೇಳಿದ್ದಾರೆ. ಶೀರ್ಷಿಕೆ ಪ್ರಾಯೋಜಕತ್ವ ಸೇರಿದಂತೆ ಇತರ ಪ್ರಾಯೋಜಕತ್ವದ ಮೊತ್ತ ಕಳೆದ ಆವೃತ್ತಿಗೆ ಹೋಲಿಸಿದರೆ ಕಡಿಮೆಯಾದರೂ ನಿರೀಕ್ಷಿತ ಆದಾಯ ಗಳಿಸುವಲ್ಲಿ ಬಿಸಿಸಿಐ ಯಶಸ್ವಿಯಾಗಿದ್ದು ಅಚ್ಚರಿ ಮೂಡಿಸಿದೆ.
30000 ಕೋವಿಡ್ ಪರೀಕ್ಷೆ!
ಐಪಿಎಲ್ ವೇಳೆ 1800 ಮಂದಿಗೆ ಬರೋಬ್ಬರಿ 30000 ಆರ್‌ಟಿ-ಪಿಸಿಆರ್ ಕೋವಿಡ್ ಪರೀಕ್ಷೆ ನಡೆಸಿದ್ದಾಗಿ ಧುಮಾಲ್ ತಿಳಿಸಿದ್ದಾರೆ. ಯುಇಎಗೆ ತೆರಳಿ, ಟೂರ್ನಿ ಆರಂಭಗೊಳ್ಳುವ ಮೊದಲು ಪ್ರತಿಯೊಬ್ಬರನ್ನೂ ತಲಾ 3 ಬಾರಿ ಪರೀಕ್ಷೆಗೆ ಒಳಪಡಿಸಿದ್ದ ಬಿಸಿಸಿಐ, ಟೂರ್ನಿಗೆ ಚಾಲನೆ ದೊರೆತ ಮೇಲೆ ಪ್ರತಿ 5 ದಿನಕ್ಕೊಮ್ಮೆ ಪರೀಕ್ಷೆ ನಡೆಸಿತು.
ಲಗಾನ್ ಸಿನಿಮಾ ನೆನಪಿಸಿ ಅಶ್ವಿನ್‌ರನ್ನು ಟ್ರೋಲ್ ಮಾಡಿದ ವಾಸೀಂ ಜಾಫರ್..!
150 ಜನರನ್ನು ಒಯ್ದಿದ್ದ ಮುಂಬೈ ಇಂಡಿಯನ್ಸ್!
ಬಯೋ ಸೆಕ್ಯೂರ್ ವಾತಾವರಣದಲ್ಲಿ ಟೂರ್ನಿ ನಡೆದ ಕಾರಣ, ತಂಡಗಳು ತಮಗೆ ಅಗತ್ಯವಿದ್ದ ಎಲ್ಲ ಸಿಬ್ಬಂದಿಯನ್ನು ಯುಎಇಗೆ ಕರೆದೊಯ್ದಿದ್ದವು. ಕೆಲ ತಂಡಗಳು 40 ಮಂದಿಯೊಂದಿಗೆ ಆಗಮಿಸಿದ್ದರೆ, ಮುಂಬೈ ಇಂಡಿಯನ್ಸ್ ದರ್ಜಿ (ಟೈಲರ್), ಮೇಕ್-ಅಪ್ ಸಿಬ್ಬಂದಿ ಹಾಗೂ ಕೇಶ ವಿನ್ಯಾಸಕರೂ ಸೇರಿ ಬರೋಬ್ಬರಿ 150 ಜನರನ್ನು ಕರೆತಂದಿತ್ತು ಎಂದು ಧುಮಾಲ್ ಮಾಹಿತಿ ನೀಡಿದ್ದಾರೆ.
ಜೋಕೋಗೆ ಸೋಂಕು: ಹೆದರಿದ್ದ ಬಿಸಿಸಿಐ!
ಜೋಕೋವಿಚ್‌ಗೆ ಸೋಂಕು ತಗುಲಿದ್ದರಿಂದ ಹೆದರಿದ್ದೆವು. ಐಪಿಎಲ್ ನಡೆಸುವ ಬಗ್ಗೆ ಗೊಂದಲ ಶುರುವಾಗಿತ್ತು. ಆದರೆ, ಜಯ್ ಶಾ ಧೈರ್ಯ ತುಂಬಿದರು. ಹಿಂದೆ ಸರಿಯುವುದು ಬೇಡ, ಸುರಕ್ಷಿತ ಕ್ರಮ ಅನುಸರಿಸಿ ಟೂರ್ನಿ ನಡೆಸೋಣ. ನಮ್ಮ ಸಾಮರ್ಥ್ಯ ತೋರೋಣ ಎಂದರು. ಅವರು ನಮ್ಮೆಲ್ಲರಿಗಿಂತ ಹೆಚ್ಚು ಆತ್ಮವಿಶ್ವಾಸ ಹೊಂದಿದ್ದರು.
- ಅರುಣ್ ಧುಮಾಲ್, ಬಿಸಿಸಿಐ ಖಜಾಂಚಿ