Cricket  

(Search results - 5931)
 • ಉದ್ಘಾಟನಾ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್, ಮೈಸೂರ್ ವಾರಿಯರ್ಸ್ ಹೋರಾಟ

  SPORTS17, Aug 2019, 10:49 PM IST

  KPL 2019: ಬೆಳಗಾವಿಗೆ ಆಘಾತ; ಬಳ್ಳಾರಿಗೆ ಗೆಲುವಿನ ಪುಳಕ!

  ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯ 3ನೇ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್ ಹಾಗೂ ಬಳ್ಳಾರಿ ಟಸ್ಕರ್ಸ್ ಹೋರಾಟ ನಡೆಸಿತು. ಆರಂಭಿಕ ಹಂತದಲ್ಲಿ ರನ್ ವೇಗ ಕಡಿಮೆಯಾಗಿದ್ದರೂ, ಅಂತ್ಯದಲ್ಲಿ ರೋಚಕ ಘಟ್ಟ ತಲುಪಿತು. ಬೆಳಗಾವಿ ಹಾಗೂ ಬಳ್ಳಾರಿ ನಡುವಿನ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • Dhoni army

  SPORTS17, Aug 2019, 8:50 PM IST

  ಲೇಹ್ ಮಕ್ಕಳ ಜೊತೆ ಕ್ರಿಕೆಟ್ ಆಡಿದ ಧೋನಿ!

  ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ, ಲಡಾಕ್‌ಗೆ ಬೇಟಿ ನೀಡಿದ್ದರು. ಈ ವೇಳೆ ಮಕ್ಕಳ ಜೊತೆ ಕ್ರಿಕೆಟ್ ಆಡಿರುವ ಫೋಟೋ ವೈರಲ್ ಆಗಿದೆ. 
   

 • Nihal ullal

  SPORTS17, Aug 2019, 6:57 PM IST

  ಕೆಪಿಎಲ್ 2019: ಹುಬ್ಳಿಗೆ ಶಾಕ್ ಕೊಟ್ಟ ಶಿವಮೊಗ್ಗ ಲಯನ್ಸ್

  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಹುಬ್ಳಿ ಟೈಗರ್ಸ್ ಕೆ.ಬಿ ಪವನ್[53], ಕೆ.ಎಲ್ ಶಿರ್ಜಿತ್[33] ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ತಂಡ ಗೌರವಾನ್ವಿತ ಮೊತ್ತ ಕಲೆಹಾಕಲು ನೆರವಾದರು.

 • jadeja run out

  SPORTS17, Aug 2019, 5:59 PM IST

  ಅರ್ಜುನ ಪ್ರಶಸ್ತಿಗೆ ರವೀಂದ್ರ ಜಡೇಜಾ ಹೆಸರು ಶಿಫಾರಸು

  ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಹೆಸರನ್ನು ಕ್ರೀಡಾ ಕ್ಷೇತ್ರದ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಹರ್ಭಜನ್ ಸಿಂಗ್ ಹೆಸರು ತಿರಸ್ಕೃತಗೊಂಡ ಬೆನ್ನಲ್ಲೇ, ಜಡೇಜಾ ಹೆಸರು ಶಿಫಾರಸು ಮಾಡಲಾಗಿದೆ.

 • Dhoni leh airport1

  SPORTS17, Aug 2019, 5:24 PM IST

  ಸೇನೆಯಲ್ಲಿ ಸೇವೆ ಸಲ್ಲಿಸಿ ರಾಂಚಿಗೆ ಮರಳಿದ ಸೈನಿಕ ಧೋನಿ!

  ಭಾರತೀಯ ಸೇನೆ ಸೇರಿಕೊಂಡಿದ್ದ ಕ್ರಿಕೆಟಿಗ ಎಂ.ಎಸ್.ಧೋನಿ ಸೇವೆ ಪೂರ್ಣಗೊಳಿಸಿ ತಾಯ್ನಾಡಿಗೆ ವಾಪ್ಸಾಸಾಗಿದ್ದಾರೆ.  ಜಮ್ಮು ಮತ್ತು ಕಾಶ್ಮೀರದ ಅಪಾಯಕಾರಿ ಗಡಿ ಪ್ರದೇಶದಲ್ಲಿ ಧೋನಿ ಸಾಹಸ ಮೆರೆದಿದ್ದಾರೆ. ರಾಂಚಿಗೆ ಮರಳಿದ ಧೋನಿಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ.

 • kohli rahane

  SPORTS17, Aug 2019, 4:11 PM IST

  ಗಾಯಗೊಂಡಿರುವ ಕೊಹ್ಲಿಗೆ ರೆಸ್ಟ್; ರಹಾನೆಗೆ ನಾಯಕ ಪಟ್ಟ?

  ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಗೆದ್ದಿರುವ ಕೊಹ್ಲಿ ಸೈನ್ಯ, ಟೆಸ್ಟ್ ಪಂದ್ಯಕ್ಕೆ ತಯಾರಿ ಆರಂಭಿಸಿದೆ. ಆದರೆ ಏಕದಿನ ಸರಣಿಯಲ್ಲಿ ಇಂಜುರಿಗೆ ತುತ್ತಾಗಿರುವ ನಾಯಕ ವಿರಾಟ್ ಕೊಹ್ಲಿ  ಬದಲು ಅಜಿಂಕ್ಯ ರಹಾನೆಗೆ ನಾಯಕ ಪಟ್ಟ ನೀಡುವ ಸಾಧ್ಯತೆ ಇದೆ.
   

 • pandya lambo 1

  SPORTS17, Aug 2019, 3:39 PM IST

  ಪಾಂಡ್ಯ ಖರೀದಿಸಿದ 4 ಕೋಟಿ ಮೌಲ್ಯದ ನೂತನ ಕಾರಿನ ಮೈಲೇಜ್ 7 ಕಿ.ಮೀ!

  ವೆಸ್ಟ್ ಇಂಡೀಸ್ ಸರಣಿಯಿಂದ ವಿಶ್ರಾಂತಿ ಪಡೆದಿರುವ ಪಾಂಡ್ಯ, ನೂತನ ಲ್ಯಾಂಬೋರ್ಗಿನಿ ಹುರಕಾನ್ ಕಾರು ಖರೀದಿಸಿದ್ದಾರೆ. ಹಲವು ದುಬಾರಿ ಕಾರುಗಳನ್ನು ಹೊಂದಿರುವ ಪಾಂಡ್ಯ ಇದೀಗ 4 ಕೋಟಿ ಮೌಲ್ಯದ ಕಾರಿಗೆ ಬೋಲ್ಡ್ ಆಗಿದ್ದಾರೆ. ನೂನತ ಕಾರು ಹಾಗೂ ಪಾಂಡ್ಯ ಬಳಿಯಿರುವ ಲಕ್ಸುರಿ ಕಾರುಗಳ ವಿವರ ಇಲ್ಲಿದೆ. 

 • Video Icon

  SPORTS17, Aug 2019, 2:23 PM IST

  ಮೊದಲೇ ಫಿಕ್ಸ್ ಆಗಿತ್ತಾ ಟೀಂ ಇಂಡಿಯಾ ಕೋಚ್ ಆಯ್ಕೆ..?

  ನಿರೀಕ್ಷೆಯಂತೆಯೇ ರವಿಶಾಸ್ತ್ರಿ ಟೀಂ ಇಂಡಿಯಾ ಕೋಚ್ ಆಗಿ ನೇಮಕವಾಗಿದ್ದಾರೆ. ವಿಶ್ವಕಪ್ ಸೆಮಿಫೈನಲ್’ನಲ್ಲಿ ವಿರಾಟ್ ಪಡೆ ಆಘಾತ ಅನುಭವಿಸಿದ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳು ರವಿಶಾಸ್ತ್ರಿ ತಲೆದಂಡವಾಗಬಹುದು ಎಂದು ಭಾವಿಸಿದ್ದರು. ಇದರ ಬೆನ್ನಲ್ಲೇ ಕೋಚ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿತ್ತು. ಆದರೆ ಫಲಿತಾಂಶವೇನು ಭಿನ್ನವಾಗಿರಲಿಲ್ಲ. ಕೊಹ್ಲಿ ಎದುರು ಮಂಡಿಯೂರಿತಾ ಬಿಸಿಸಿಐ ಎನ್ನುವ ಮಾತುಗಳು ಬಲವಾಗಿ ಕೇಳಿ ಬರುತ್ತಿದೆ. ಜತೆಗೆ ಮೊದಲೇ ಟೀಂ ಇಂಡಿಯಾ ಕೋಚ್ ಆಯ್ಕೆ ನಿರ್ಧಾರವಾಗಿತ್ತಾ ಎನ್ನುವ ಅನುಮಾನ ಮೂಡತೊಡಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
   

 • shastri shock

  SPORTS17, Aug 2019, 1:38 PM IST

  ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಮುಂದಿವೆ 4 ಸವಾಲುಗಳು..!

  ರವಿಶಾಸ್ತ್ರಿ ಈಗಾಗಲೇ 2 ವರ್ಷ ಟೀಂ ಇಂಡಿಯಾ ಪೂರ್ಣಾವಧಿ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಅದರಲ್ಲೂ ಇತ್ತೀಚೆಗೆ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಮಾತುಗಳು ಹರಿದಾಡುತ್ತಿವೆ. 

 • Virat Kohli, Ravi Shastri

  SPORTS17, Aug 2019, 12:46 PM IST

  ರವಿಶಾಸ್ತ್ರಿ ಕೋಚ್ ಪುನರಾಯ್ಕೆಗೆ ಕಾರಣವೇನು?

  ರವಿಶಾಸ್ತ್ರಿ ಭಾರತ ತಂಡದ ಕೋಚ್‌ ಆಗುತ್ತಿರುವುದು ಇದು 4ನೇ ಬಾರಿ. 2007ರ ಬಾಂಗ್ಲಾದೇಶ ಪ್ರವಾಸಕ್ಕೆ ಅವರು ತಂಡದ ವ್ಯವಸ್ಥಾಪಕರಾಗಿದ್ದರು. 2014ರಿಂದ 2016ರ ವರೆಗೂ ತಂಡದ ನಿರ್ದೇಶಕರಾಗಿದ್ದ ಶಾಸ್ತ್ರಿ, 2017ರಿಂದ 2019ರ ವರೆಗೂ ಪ್ರಧಾನ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದರು.

 • rain in lords

  SPORTS17, Aug 2019, 11:35 AM IST

  ಆ್ಯಷಸ್‌ 2ನೇ ಟೆಸ್ಟ್‌: ಮಳೆಗೆ ಆಹುತಿಯಾದ 3ನೇ ದಿನದಾಟ

  2ನೇ ದಿನದಂತ್ಯಕ್ಕೆ 1 ವಿಕೆಟ್‌ ನಷ್ಟಕ್ಕೆ 38 ರನ್‌ ಗಳಿಸಿದ್ದ ಆಸೀಸ್‌, 3ನೇ ದಿನವಾದ ಶುಕ್ರವಾರ ಬ್ಯಾಟಿಂಗ್‌ ಮುಂದುವರಿಸಿ, ಭೋಜನ ವಿರಾಮದ ವೇಳೆಗೆ 4 ವಿಕೆಟ್‌ ನಷ್ಟಕ್ಕೆ 80 ರನ್‌ ಗಳಿಸಿತು. ಬ್ಯಾನ್‌ಕ್ರಾಫ್ಟ್‌ (13), ಖವಾಜ (36), ಟ್ರಾವಿಡ್‌ ಹೆಡ್‌ (07) ವಿಕೆಟ್‌ ಕಳೆದುಕೊಂಡರು. ಮೊದಲ ಪಂದ್ಯದಲ್ಲಿ ಶತಕ ಸಿಡಿಸಿದ್ದ ಸ್ಟೀವ್‌ ಸ್ಮಿತ್‌ 40 ಎಸೆತಗಳಲ್ಲಿ 13 ರನ್‌ ಗಳಿಸಿ ಅಜೇಯರಾಗಿ ಉಳಿದರು.

 • shreyas gopal

  SPORTS17, Aug 2019, 10:30 AM IST

  ಇಂದಿನಿಂದ ಬೆಂಗ್ಳೂರಲ್ಲಿ ದುಲೀಪ್‌ ಟ್ರೋಫಿ

  4 ದಿನಗಳ ಪಂದ್ಯ ಇದಾಗಿದ್ದು, ಭಾರತ ಬ್ಲೂ ತಂಡವನ್ನು ಶುಭ್‌ಮನ್‌ ಗಿಲ್‌ ಮುನ್ನಡೆಸಲಿದ್ದಾರೆ. ಭಾರತ ಗ್ರೀನ್‌ ತಂಡಕ್ಕೆ ಫೈಯಜ್‌ ಫಜಲ್‌ ನಾಯಕರಾಗಿದ್ದಾರೆ. ಭಾರತ ತಂಡದ ಕದ ತಟ್ಟುತ್ತಿರುವ ಋುತುರಾಜ್‌ ಗಾಯಕ್ವಾಡ್‌, ಶ್ರೇಯಸ್‌ ಗೋಪಾಲ್‌, ಬಸಿಲ್‌ ಥಂಪಿ, ಧೃವ್‌ ಶೋರೆ, ಅಂಕಿತ್‌ ರಜಪೂತ್‌, ರಾಹುಲ್‌ ಚಹಾರ್‌ ಸೇರಿದಂತೆ ಇನ್ನೂ ಅನೇಕ ಯುವ ಪ್ರತಿಭೆಗಳು ಈ ಪಂದ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

 • KPL Bengaluru mysore

  SPORTS16, Aug 2019, 10:36 PM IST

  KPL 2019: ಉದ್ಘಾಟನಾ ಪಂದ್ಯ ಮಳೆಯಿಂದ ರದ್ದು!

  ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಆದರೆ ಮೊದಲ ಪಂದ್ಯವೇ ಮಳೆಗೆ ಆಹುತಿಯಾಗೋ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಹೋರಾಡಿದ ಬೆಂಗಳೂರು ಬ್ಲಾಸ್ಟರ್ಸ್ ಹಾಗೂ ಮೈಸೂರ್ ವಾರಿಯರ್ಸ್ ಫಲಿತಾಂಶ ಕಾಣದೆ ಅಂಕ ಹಂಚಿಕೊಂಡಿತು.

 • Ravi Shastri-Kohli

  SPORTS16, Aug 2019, 7:01 PM IST

  ರವಿ ಶಾಸ್ತ್ರಿ ಪುನರ್ ಆಯ್ಕೆ; ರೋಸಿ ಹೋದ ಅಭಿಮಾನಿಗಳಿಂದ ಟ್ವೀಟ್!

  ಟೀಂ ಇಂಡಿಯಾ ಮುಖ್ಯ ಕೋಚ್ ಆಗಿ ರವಿ ಶಾಸ್ತ್ರಿ ಆಯ್ಕೆಯಾಗುತ್ತಿದ್ದಂತೆ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ. ಶಾಸ್ತ್ರಿ ಆಯ್ಕೆಗೆ ಬಹುತೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಟ್ವೀಟ್ ಇಲ್ಲಿದೆ.
   

 • SPORTS16, Aug 2019, 6:25 PM IST

  ಟೀಂ ಇಂಡಿಯಾ ನೂತನ ಕೋಚ್ ಆಗಿ ರವಿ ಶಾಸ್ತ್ರಿ ಪುನರ್ ಆಯ್ಕೆ!

  ಟೀಂ ಇಂಡಿಯಾ ನೂತನ ಕೋಚ್ ಆಯ್ಕೆ ಪ್ರಕ್ರಿಯೆ ಮುಗಿದಿದೆ. ಕ್ರಿಕೆಟ್ ಸಲಹಾ ಸಮಿತಿ ಸಂದರ್ಶನದ ಮೂಲಕ ಕೋಚ್ ಆಯ್ಕೆ ಪ್ರಕ್ರಿಯೆ ನಡೆದಿತ್ತು. ಐವರ ನಡುವೆ ತೀವ್ರ ಸ್ಪರ್ಧೆ ಎರ್ಪಟ್ಟಿತ್ತು. ಅಂತಿಮವಾಗಿ ಭಾರತ ತಂಡದ ನೂತನ ಕೋಚ್ ರವಿ ಶಾಸ್ತ್ರಿ ಪುನರ್ ಆಯ್ಕೆಯಾಗಿದ್ದಾರೆ.