Asianet Suvarna News Asianet Suvarna News

ಐಪಿಎಲ್ ‌2021: ತಂಡದಲ್ಲಿ 5 ವಿದೇಶಿ ಆಟಗಾರನ್ನು ಸೇರಿಸಲು ಫ್ರಾಂಚೈಸಿ ಒತ್ತಾಯ

14ನೇ ಆವೃತ್ತಿಯ ಐಪಿಎಲ್ ಟೂರ್ನಿ 4 ವಿದೇಶಿ ಆಟಗಾರರ ಬದಲಿಗೆ 5 ವಿದೇಶಿ ಆಟಗಾರರಿಗೆ ಅವಕಾಶ ನೀಡಬೇಕು ಎಂದು ಕೆಲವು ಫ್ರಾಂಚೈಸಿಗಳು ಒತ್ತಾಯಿಸಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

IPL 2021 franchises reportedly want 5 foreign players in playing XIs kvn
Author
New Delhi, First Published Nov 24, 2020, 9:19 AM IST | Last Updated Nov 24, 2020, 9:19 AM IST

ನವದೆಹಲಿ(ನ.24): 2021ರಲ್ಲಿ ನಡೆಯಲಿರುವ 14ನೇ ಆವೃತ್ತಿ ಐಪಿಎಲ್‌ ಟೂರ್ನಿಯಲ್ಲಿ ಅಂತಿಮ 11ರ ಬಳಗದಲ್ಲಿ ಐವರು ವಿದೇಶಿ ಆಟಗಾರರಿಗೆ ಅವಕಾಶ ನೀಡಬೇಕು ಎಂದು ಫ್ರಾಂಚೈಸಿಗಳು ಒ್ತತಾಯಿಸಿವೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. 

ವಿಶ್ವ ಕ್ರಿಕೆಟ್‌ನಲ್ಲಿ ಟಿ20 ಲೀಗ್‌ ಹೆಚ್ಚು ಸ್ಪರ್ಧಾತ್ಮಕವಾಗಿದೆ. ಆರಂಭದಲ್ಲಿ 8 ಫ್ರಾಂಚೈಸಿಗಳಿದ್ದವು. 2011ರಲ್ಲಿ 10 ಫ್ರಾಂಚೈಸಿಗಳು ಪ್ರಶಸ್ತಿಗಾಗಿ ಸೆಣಸಿದ್ದವು. 2012, 2013ರಲ್ಲಿ 9 ತಂಡಗಳು ಆಡಿದ್ದವು. ಇದೀಗ 14ನೇ ಆವೃತ್ತಿಯಲ್ಲಿ ಮತ್ತಷ್ಟು ಫ್ರಾಂಚೈಸಿಗಳನ್ನು ಸೇರಿಸಲು ಬಿಸಿಸಿಐ ಕೂಡಾ ಚಿಂತನೆ ನಡೆಸಿದೆ ಎನ್ನಲಾಗಿದೆ. 

ಐಪಿಎಲ್‌ ಸಕ್ಸಸ್‌ ಹಿಂದೆ ಅಮಿತ್‌ ಶಾ ಪುತ್ರನ ತಂತ್ರ: ರಹಸ್ಯ ಬಿಚ್ಚಿಟ್ಟ ಬಿಸಿಸಿಐ ಖಜಾಂಚಿ!

ಇದರ ನಡುವೆ ತಂಡಗಳು ನಾಲ್ಕರ ಬದಲು, ಐವರು ವಿದೇಶಿ ಆಟಗಾರರಿಗೆ ಅಂತಿಮ 11ರಲ್ಲಿ ಅವಕಾಶ ನೀಡಬೇಕು ಎನ್ನುವ ಬೇಡಿಕೆ ಇರಿಸಿವೆ. ಕಳೆದ 13 ಐಪಿಎಲ್‌ ಆವೃತ್ತಿಗಳಲ್ಲೂ 4 ವಿದೇಶಿ ಹಾಗೂ 7 ದೇಸಿ ಆಟಗಾರರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಗುತಿತ್ತು. ಆದರೆ ಟೂರ್ನಿಯನ್ನು ಮತ್ತಷ್ಟು ರೋಚಕವಾಗಿಸುವ ನಿಟ್ಟಿಸಲ್ಲಿ ಬಿಸಿಸಿಐ ಫ್ರಾಂಚೈಸಿಗಳ ಒತ್ತಡಕ್ಕೆ ಮಣಿಯುವ ಸಾಧ್ಯೆತೆಯಿದೆ.

Latest Videos
Follow Us:
Download App:
  • android
  • ios