ನವದೆಹಲಿ(ನ.22): ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ವಾಸೀಂ ಜಾಫರ್ ತಮ್ಮ ಹಾಸ್ಯ ಪ್ರವೃತ್ತಿಯ ಮೂಲಕ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ಬಾಲಿವುಡ್‌ನ ಖ್ಯಾತ ಸಿನೆಮಾ ಲಗಾನ್‌ ಚಿತ್ರವನ್ನು ನೆನಪಿಸಿಕೊಂಡು ರವಿಚಂದ್ರನ್ ಅಶ್ವಿನ್ ಅವರನ್ನು ಜಾಫರ್ ಟ್ರೋಲ್ ಮಾಡಿದ್ದಾರೆ.

ಹೌದು, ಭಾನುವಾರವಷ್ಟೇ ಖ್ಯಾತ ಕ್ರಿಕೆಟ್‌ ವೆಬ್‌ಸೈಟ್‌ ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಸಾಮಾಜಿಕ ಜಾಲತಾಣವಾದ ಟ್ವಿಟರ್‌ನಲ್ಲಿ ಶನಿವಾರ(ನ.21)ದಂದು ಯಾವುದೇ ಆಟಗಾರರ ಹೆಸರು ಹಾಗೂ ತಂಡದ ಹೆಸರು ಹೇಳದೇ ನಿಮ್ಮ ನೆಚ್ಚಿನ ಪಂದ್ಯವನ್ನು ಹೆಸರಿಸಿ ಎಂದು ಪ್ರಶ್ನೆ ಕೇಳಿತ್ತು.

14ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಹರಾಜು ನಡೆದರೆ RCB ಯಾವ 5 ಆಟಗಾರರನ್ನು ಉಳಿಸಿಕೊಳ್ಳುತ್ತೆ..?

ಈ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ವಾಸೀಂ ಜಾಫರ್ ಟೀಂ ಇಂಡಿಯಾ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಕಾಲೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲಿವುಡ್ ಸಿನೆಮಾ ಲಗಾನ್ ಸನ್ನಿವೇಷದ ಚಿತ್ರವನ್ನು ಪೋಸ್ಟ್ ಮಾಡಿ ರವಿಚಂದ್ರನ್ ಅಶ್ವಿನ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ಲಗಾನ್ ಚಿತ್ರದಲ್ಲಿ ಇಂಗ್ಲೀಷ್ ಆಟಗಾರರೊಬ್ಬ ಭಾರತೀಯ ಬ್ಯಾಟ್ಸ್‌ಮನ್‌ವೊಬ್ಬರನ್ನು ಮಂಕಡಿಂಗ್ ಮೂಲಕ ಔಟ್‌ ಮಾಡುತ್ತಾರೆ. ಅದೇ ರೀತಿ 12ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್‌ ತಂಡದ ನಾಯಕರಾಗಿದ್ದ ರವಿಚಂದ್ರನ್ ಅಶ್ವಿನ್ ರಾಜಸ್ಥಾನ ರಾಯಲ್ಸ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಅವರನ್ನು ರನೌಟ್‌ ಮಾಡಿದ್ದರು. ಈ ಮಂಕಡಿಂಗ್ ಕ್ರಿಕೆಟ್‌ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. 

ಇನ್ನು ವಾಸೀಂ ಜಾಫರ್‌ ಈ ಟ್ವೀಟ್‌ಗೆ ರವಿಚಂದ್ರನ್ ಅಶ್ವಿನ್ ಕೂಡಾ ವಾಸೀಂ ನೀವು ಟ್ರೋಲ್‌ ಮಾಡಿದ್ರಾ ಎನ್ನುವಂತೆ ಪ್ರತಿಕ್ರಿಯೆ ನೀಡಿದ್ದಾರೆ.