Asianet Suvarna News Asianet Suvarna News

ಲೋಕಸಭಾ ಚುನಾವಣೆ 2024: ಏ.29 ರಂದು ಮೋದಿ ಬಾಗಲಕೋಟೆಗೆ, 100 ಎಕರೆ ಜಾಗದಲ್ಲಿ ಸಮಾವೇಶ

ಪ್ರಚಾರ ಸಭೆಗೆ ವಿಜಯಪುರ-ಬಾಗಲಕೊಟೆ ಜಿಲ್ಲೆಯಿಂದ 1.50 ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ. ರಾಜ್ಯದ ಮುಖಂಡರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳುವರು. 

PM Narendra Modi Will be Come to Bagalkot on April 29th for Lok Sabha Elections 2024 Campaign grg
Author
First Published Apr 27, 2024, 7:26 AM IST | Last Updated Apr 27, 2024, 7:27 AM IST

ಬಾಗಲಕೋಟೆ(ಏ.27):  ಬಾಗಲಕೋಟೆ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಹಾಗೂ ವಿಜಯಪುರ ಅಭ್ಯರ್ಥಿ ರಮೇಶ ಜಿಗಜಿಣಗಿ ಪರವಾಗಿ ಪ್ರಚಾರ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ಏ.29 ರಂದು ಬಾಗಲಕೋಟೆಗೆ ಆಗಮಿಸಲಿದ್ದಾರೆ.

ನವನಗರದಲ್ಲಿ ನಡೆಯುವ ಮೋದಿ ಅವರ ವೇದಿಕೆ ಕಾರ್ಯಕ್ರಮದ ಸಿದ್ಧತೆ ಕುರಿತು ಶುಕ್ರವಾರ ಮಾಹಿತಿ ನೀಡಿದ ಬೆಳಗಾವಿ ವಿಭಾಗದ ಚುನಾವಣೆ ಸಂಯೋಜಕ, ಶಾಸಕ ಮಹೇಶ ಟೆಂಗಿನಕಾಯಿ, ನವನಗರದ ತೋಟಗಾರಿಕೆ ವಿವಿ ಸಮೀಪದ ನೂರು ಎಕರೆ ಜಾಗದಲ್ಲಿ ಸಮಾವೇಶ ನಡೆಯಲಿದೆ. 

ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂ, ಗೋವುಗಳಿಗೂ ರಕ್ಷಣೆ ಇಲ್ಲ: ಮುರುಗೇಶ ನಿರಾಣಿ

ಅಂದು ಬೆಳಗ್ಗೆ 10 ಗಂಟೆಗೆ ನಡೆಯುವ ಪ್ರಚಾರ ಸಭೆಗೆ ವಿಜಯಪುರ-ಬಾಗಲಕೊಟೆ ಜಿಲ್ಲೆಯಿಂದ 1.50 ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ. ರಾಜ್ಯದ ಮುಖಂಡರು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳುವರು ಎಂದು ಹೇಳಿದರು.

Latest Videos
Follow Us:
Download App:
  • android
  • ios