ಪ್ರವಾಸಕ್ಕೆ ಮಗನ ಜೊತೆ ತೆರಳಿದ ಮಹಿಳೆ ದಿಢೀರ್ ಕಾರ್ಗಿಲ್ ಗಡಿಯಲ್ಲಿ ನಾಪತ್ತೆಯಾಗಿದ ಘಟನೆ ನಡೆದಿದೆ. ಮಗ ಕಾರ್ಗಿಲ್ ಪಟ್ಟಣದ ಹೊಟೆಲ್‌ನಲ್ಲಿದ್ದರೆ ತಾಯಿ ನಾಪತ್ತೆಯಾಗಿದ್ದಾರೆ. ಇತ್ತ ತಾಯಿಗಾಗಿ ಮಗ ಕಾಯುತ್ತಿದ್ದರೆ, ತನಿಖೆ ಕೆಲ ಸ್ಫೋಟಕ ಮಾಹಿತಿ ಕಲೆ ಹಾಕಿದೆ.
ಪೂರ್ತಿ ಓದಿ- Home
- News
- India News
- Operation Sindoor Live: ಪ್ರವಾಸಕ್ಕೆ ಹೋದ ಮಹಿಳೆ ಕಾರ್ಗಿಲ್ ಗಡಿಯಲ್ಲಿ ನಾಪತ್ತೆ, ತಾಯಿಗಾಗಿ ಕಾಯುತ್ತಿರುವ ಮಗ
Operation Sindoor Live: ಪ್ರವಾಸಕ್ಕೆ ಹೋದ ಮಹಿಳೆ ಕಾರ್ಗಿಲ್ ಗಡಿಯಲ್ಲಿ ನಾಪತ್ತೆ, ತಾಯಿಗಾಗಿ ಕಾಯುತ್ತಿರುವ ಮಗ

ನವದೆಹಲಿ: ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಮತ್ತು ಸೈನಿಕರನ್ನು ಪೂರೈಸಿ ದ್ರೋಹವೆಸಗಿದ್ದ ಟರ್ಕಿಗೆ ಭಾರತ ಮೊದಲ ದೊಡ್ಡ ಪೆಟ್ಟು ನೀಡಿದ್ದು, ದೇಶದ 9 ವಿಮಾನ ನಿಲ್ದಾಣಗಳಲ್ಲಿ ಸೇವೆ ಒದಗಿಸುತ್ತಿದ್ದ ಟರ್ಕಿ ಮೂಲದ ಕಂಪನಿಯ ಭದ್ರತಾ ಪರವಾನಗಿ ರದ್ದು ಮಾಡಿದೆ. ಟರ್ಕಿ ಮೂಲದ ಸೆಲೆಬಿ ಕಂಪನಿಯು ಮೌಂಟೆಡ್ ಸಲಕರಣೆಗಳ ಸ್ಥಾಪನೆ, ಸರಕು ನಿರ್ವಹಣೆ ಸೇರಿದಂತೆ ಗ್ರೌಂಡ್ ಹ್ಯಾಂಡಲಿಂಗ್ ಸೇವೆಯನ್ನು ಬೆಂಗಳೂರು, ದೆಹಲಿ, ಮುಂಬೈ, ಕೊಚ್ಚಿ ಸೇರಿದಂತೆ ಭಾರತದ 9 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಒದಗಿಸು ತ್ತಿದೆ. ಪಾಕ್ಗೆ ಟರ್ಕಿ ಬೆಂಬಲ ನೀಡಿರುವುದು ಬಯಲಾದ ಬೆನ್ನಲ್ಲೇ ಈ ಕಂಪನಿಯ ಭದ್ರತಾ ಅನುಮತಿಯನ್ನು ನಾಗರಿಕ ವಿಮಾನಯಾನ ಸಚಿವಾಲಯ ತಕ್ಷಣದಿಂದ ಜಾರಿಗೆ ಬರುವಂತೆ ಭದ್ರತಾ ಕಾರಣ ನೀಡಿ ರದ್ದುಪಡಿಸಿದೆ. 2023ರಲ್ಲಿ ಟರ್ಕಿ ಭೀಕರ ಭೂಕಂಪಕ್ಕೆ ತುತ್ತಾದಾಗ ಅದಕ್ಕೆ ಮೊತ್ತಮೊದಲ ನೆರವು ನೀಡಿದ ದೇಶಗಳ ಪೈಕಿ ಭಾರತ ಕೂಡ ಒಂದು. ಆಪರೇಷನ್ ದೋಸ್ತ್ (ಮಿತ್ರ) ಹೆಸರಲ್ಲಿ ಭಾರತವು ಟರ್ಕಿಗೆ ಸಾಮಗ್ರಿಗಳನ್ನು ರವಾನಿಸಿತ್ತು. ಎನ್ಡಿಆರ್ಎಫ್ ತಂಡ, ಶ್ವಾನಪಡೆಗಳನ್ನೂ ಕಳುಹಿಸಿಕೊಟ್ಟಿತ್ತು.
ಪ್ರವಾಸಕ್ಕೆ ಹೋದ ಮಹಿಳೆ ಕಾರ್ಗಿಲ್ ಗಡಿಯಲ್ಲಿ ನಾಪತ್ತೆ, ತಾಯಿಗಾಗಿ ಕಾಯುತ್ತಿರುವ ಮಗ
ಜೆಎನ್‌ಯು, ಜಾಮಿಯಾ ಬಳಿಕ ಟರ್ಕಿ ಜೊತೆಗಿನ ಒಪ್ಪಂದ ರದ್ದುಗೊಳಿಸಿದ ಐಐಟಿ ರೂರ್ಕಿ
ಪಾಕಿಸ್ತಾನ ಬೆಂಬಲಿಸಿದ ಟರ್ಕಿ ವಿರುದ್ದ ಭಾರತದಲ್ಲಿ ಆಕ್ರೋಶ ಭುಗಿಲೆದ್ದಿದೆ. ಹಲವು ಬಹಿಷ್ಕಾರ, ನಿರ್ಬಂಧ ಹೆಚ್ಚಾಗುತ್ತಿದೆ. ಇದೀಗ ಜೆಎನ್‌ಯು, ಜಾಮಿಯಾ ಸೇರಿದಂತೆ ಕೆಲ ವಿಶ್ವಿವಿದ್ಯಾಲಯಗಳ ಬಳಿಕ ಇದೀಗ ಐಐಟಿ ರೂರ್ಕಿ , ಟರ್ಕಿಶ್ ಶಿಕ್ಷಣ ಸಂಸ್ಥೆ ಜೊತೆಗಿನ ಒಪ್ಪಂದ ರದ್ದುಗೊಳಿಸಿದೆ.
ಪೂರ್ತಿ ಓದಿಭಾರತ-ಪಾಕ್ ಮಿಲಿಟರಿ ಸಂಘರ್ಷದ ಬೆನ್ನಲ್ಲೇ ದಾಖಲೆ ಮಟ್ಟಕ್ಕೆ ಏರಿದ Rafale Dassault Aviation ಷೇರು!
ಪ್ಯಾರಿಸ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಡಸಾಲ್ಟ್ ಏವಿಯೇಷನ್ ದಿನದ ಮಧ್ಯದಲ್ಲಿ €309.40 ತಲುಪಿತು, ಅದರ ದಾಖಲೆಯ ಗರಿಷ್ಠ €332.20 ರ ಸಮೀಪಕ್ಕೆ ಬಂದಿದೆ. ಇದು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕಿಂತ ಕೇವಲ 10% ಕಡಿಮೆ.
ಪೂರ್ತಿ ಓದಿತನ್ನ ಹೆಸರಿನ ಸ್ಟ್ಯಾಂಡ್ ಉದ್ಘಾಟಿಸಲು ಪೋಷಕರನ್ನೇ ವೇದಿಕೆಗೆ ಆಹ್ವಾನಿಸಿದ ರೋಹಿತ್ ಶರ್ಮಾ
ರೋಹಿತ್ ಶರ್ಮಾ ಕೊಡುಗೆ ಪರಿಗಣಿಸಿ ವಾಂಖೆಡೆ ಕ್ರೀಡಾಂಗಣದಲ್ಲಿ ರೋಹಿತ್ ಶರ್ಮಾ ಸ್ಟಾಂಡ್ ಉದ್ಘಾಟನೆಯಾಗಿದೆ. ಖುದ್ದು ರೋಹಿತ್ ಶರ್ಮಾ ಈ ಸ್ಟ್ಯಾಂಡ್ ಉದ್ಘಾಟಿಸಬೇಕಿತ್ತು. ಆದರೆ ವೇದಿಕೆ ಕೆಳಗೆ ಕೂತಿದ್ದ ಪೋಷಕರನ್ನು ರೋಹಿತ್ ವೇದಿಕೆಗೆ ಆಹ್ವಾನಿಸಿ ಅವರ ಹಸ್ತಗಳಿಂದ ಸ್ಟ್ಯಾಂಡ್ ಉದ್ಘಾಟಿಸಿದ ವಿಶೇಷ ಘಟನೆ ನಡೆದಿದೆ.
ಪೂರ್ತಿ ಓದಿಕೆ9 ರೋಲೋ: ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ವೀರಮರಣ
ಭಾರತದ ಅತಿದೊಡ್ಡ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಸಿಆರ್‌ಪಿಎಫ್‌ನ ಶ್ವಾನ ರೋಲೋ ಜೇನುನೊಣ ದಾಳಿಯಿಂದಾಗಿ ಮೃತಪಟ್ಟಿದೆ. ಕಾರ್ಯಾಚರಣೆಯಲ್ಲಿ ಶೋಧ ಕಾರ್ಯದಲ್ಲಿದ್ದಾಗ ಈ ಘಟನೆ ಸಂಭವಿಸಿದೆ.
ಪೂರ್ತಿ ಓದಿಬ್ರಹ್ಮೋಸ್ ಕ್ಷಿಪಣಿಗೂ, ಶಬರಿಮಲೆಯ ಅಯ್ಯಪ್ಪನಿಗೂ ಇರುವ ಲಿಂಕ್ ಎನು?
ಆಪರೇಷನ್ ಸಿಂಧೂರದಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಶಕ್ತಿ ಪ್ರದರ್ಶಿತವಾಗಿದೆ. ಜಗತ್ತಿನಾದ್ಯಂತ ಬೇಡಿಕೆ ಹೆಚ್ಚಿರುವ ಈ ಕ್ಷಿಪಣಿಯ ವಾರ್ ಕ್ರೈ 'ಸ್ವಾಮಿಯೇ ಶರಣಂ ಅಯ್ಯಪ್ಪ' ಎಂಬುದು ವಿಶೇಷ.
ಪೂರ್ತಿ ಓದಿಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ, ಇದುವರೆಗೆ ನೋಡಿದ್ದು, ಜಸ್ಟ್ ಟ್ರೈಲರ್: ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಆಪರೇಷನ್ ಸಿಂದೂರ್ ಇನ್ನೂ ಮುಗಿದಿಲ್ಲ, ಇದುವರೆಗೆ ನಡೆದಿದ್ದೆಲ್ಲವೂ ಕೇವಲ ಟ್ರೈಲರ್ ಎಂದು ಹೇಳಿದ್ದಾರೆ. ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಭಾರತ ದೃಢವಾಗಿದೆ ಮತ್ತು IMF ಪಾಕಿಸ್ತಾನಕ್ಕೆ ನೀಡುವ ಆರ್ಥಿಕ ನೆರವು ಭಯೋತ್ಪಾದನೆಗೆ ನೆರವಾಗಬಹುದು ಎಂಬ ಕಳವಳವನ್ನು ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿಆಪರೇಷನ್ ಸಿಂದೂರ್: ಭಾರತೀಯ ಸೇನೆಗೆ ₹50,000 ಕೋಟಿ ಹೆಚ್ಚುವರಿ ಅನುದಾನ
ಆಪರೇಷನ್ ಸಿಂದೂರ್ ನಂತರ ಭಾರತೀಯ ಸೇನೆಯ ಬಜೆಟ್‌ನಲ್ಲಿ ₹50,000 ಕೋಟಿ ಹೆಚ್ಚಳವಾಗುವ ಸಾಧ್ಯತೆಯಿದೆ. ಹೊಸ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಈ ಹಣವನ್ನು ಬಳಸಿಕೊಳ್ಳಲಾಗುತ್ತದೆ.
ಪೂರ್ತಿ ಓದಿತಾಲಿಬಾನ್ FM ಜೊತೆ ಮೊದಲ ಬಾರಿಗೆ ಮಾತನಾಡಿದ ಎಸ್.ಜೈಶಂಕರ್!
ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ನಡುವೆ ಮೊದಲ ಬಾರಿಗೆ ಮಾತುಕತೆ ನಡೆದಿದೆ. ಈ ಸಂದರ್ಭದಲ್ಲಿ, ಜೈಶಂಕರ್ ಅವರು ಅಫ್ಘಾನ್ ಜನರೊಂದಿಗಿನ ಭಾರತದ ದೀರ್ಘಕಾಲದ ಸಂಬಂಧಗಳನ್ನು ಒತ್ತಿ ಹೇಳಿದರು ಮತ್ತು ಅಫ್ಘಾನಿಸ್ತಾನದ ಅಭಿವೃದ್ಧಿ ಅಗತ್ಯಗಳಿಗೆ ಭಾರತದ ನಿರಂತರ ಬೆಂಬಲವನ್ನು ಪುನರುಚ್ಚರಿಸಿದರು. ಮುತ್ತಕಿ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಖಂಡಿಸಿದರು.
ಪೂರ್ತಿ ಓದಿಮೋದಿ ಟೀಕಿಸುವ ಸಂತೋಷ್ ಲಾಡ್ ಪ್ರಯತ್ನ ಆಕಾಶಕ್ಕೆ ಉಗುಳುವಂತಿದೆ ; ಬಿ.ವೈ. ವಿಜಯೇಂದ್ರ!
ಬಿಜೆಪಿಯ ತಿರಂಗಾ ಯಾತ್ರೆ ಕುರಿತು ಸಚಿವ ಸಂತೋಷ್ ಲಾಡ್ ಮಾಡಿದ ಲೇವಡಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ಪ್ರಧಾನಿ ಮೋದಿಯವರನ್ನು ಪ್ರಶ್ನಿಸುವುದು ಆಕಾಶಕ್ಕೆ ಉಗುಳಿದಂತೆ ಎಂದು ವಿಜಯೇಂದ್ರ ಹೇಳಿದ್ದಾರೆ. ಕಾಶ್ಮೀರ ವಿಚಾರದಲ್ಲಿ ಕಾಂಗ್ರೆಸ್‌ನ ಪಾತ್ರವನ್ನು ಪ್ರಶ್ನಿಸಿದ್ದಾರೆ.
ಪೂರ್ತಿ ಓದಿನಿನ್ನೆ ಅಮೆರಿಕ ಟರ್ಕಿಗೆ 300 ಮಿಸೈಲ್ ಕೊಟ್ಟಿದೆ; 'ಟ್ರಂಪ್ ಮೈ ಫ್ರೆಂಡ್ ಅಂದ್ರಲ್ಲ ಮೋದಿ ಈಗ ಏನು ಹೇಳ್ತಾರೆ?: ಖರ್ಗೆ ತೀವ್ರ ಟೀಕೆ
ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಪ್ರಿಯಾಂಕ್ ಖರ್ಗೆ ತೀವ್ರವಾಗಿ ಟೀಕಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಹೇಳಿಕೆಗಳಿಗೆ ಪ್ರಧಾನಿ ಮೋದಿ ಯಾಕೆ ಉತ್ತರಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಜಮ್ಮು ಕಾಶ್ಮೀರ ವಿಷಯವನ್ನು ಅಂತರರಾಷ್ಟ್ರೀಯ ವಿಷಯವನ್ನಾಗಿ ರೂಪಿಸಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪೂರ್ತಿ ಓದಿಕದನ ವಿರಾಮ ಮೇ.18ರವರೆಗೆ ವಿಸ್ತರಣೆ: ಮತ್ತೊಮ್ಮೆ ಭಾರತ-ಪಾಕ್ ಡಿಜಿಎಂಒ ಮಟ್ಟದ ಸಭೆ
ಭಾರತ-ಪಾಕಿಸ್ತಾನ ಗಡಿಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಕದನ ವಿರಾಮವನ್ನು ಮೇ 18, 2025 ರವರೆಗೆ ವಿಸ್ತರಿಸಲಾಗಿದೆ. ಡಿಜಿಎಂಒ ಮಟ್ಟದಲ್ಲಿ ಮತ್ತೊಂದು ಮಾತುಕತೆ ನಡೆಯಲಿದೆ.
ಪೂರ್ತಿ ಓದಿಭಾರತ-ಪಾಕಿಸ್ತಾನ ಉದ್ವಿಗ್ನತೆಯ ನಡುವೆ ಕರಾಚಿ ಬೇಕರಿ ಹೆಸರು ಬದಲಾವಣೆಗೆ ಆಗ್ರಹ, ಹೈದರಾಬಾದ್‌ನ ಬಳಿಕ ಬೆಂಗಳೂರು ಸರದಿ!
ಭಾರತ-ಪಾಕಿಸ್ತಾನ ಗಡಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಕರಾಚಿ ಬೇಕರಿ ಹೆಸರು ಬದಲಿಸಲು ಒತ್ತಡ ಹೆಚ್ಚಾಗಿದೆ. ಮಾಲೀಕರು ತಮ್ಮ ಭಾರತೀಯತೆಯನ್ನು ಸಮರ್ಥಿಸಿಕೊಂಡರೂ, ಸ್ಥಳೀಯ ಸಂಘಟನೆಗಳು ಹೆಸರು ತೆಗೆಯುವಂತೆ ಆಗ್ರಹಿಸಿವೆ.
ಪೂರ್ತಿ ಓದಿಭಾರತದ ದಾಳಿಗೆ ಬಾಲ ಮುದುಡಿದ ನಾಯಿ ರೀತಿ ಆಗಿತ್ತು ಪಾಕ್ ಕಥೆ: ಅಮೆರಿಕಾ ಅಧಿಕಾರಿ
ಭಾರತದ ದಾಳಿಯಿಂದ ಪಾಕಿಸ್ತಾನ ಬಾಲಮುದುಡಿಕೊಂಡು ಬೆದರಿದ ನಾಯಿಯ ರೀತಿಯಲ್ಲಿ ಕದನ ವಿರಾಮಕ್ಕಾಗಿ ಅಲೆದಾಡಿತ್ತು ಎಂದು ಅಮೆರಿಕದ ರಕ್ಷಣಾ ಇಲಾಖೆಯ ಮಾಜಿ ಅಧಿಕಾರಿಯೊಬ್ಬರು ಪಾಕಿಸ್ತಾನದ ಸ್ಥಿತಿಯನ್ನು ಬಣ್ಣಿಸಿದ್ದಾರೆ.
ಪೂರ್ತಿ ಓದಿಎಂಥದ್ದೇ ಪರಿಸ್ಥಿತಿ ಬಂದರೂ ನಾವು ಪಾಕ್ ಪರ: ಟರ್ಕಿ ಪುನರುಚ್ಚಾರ
ಭಾರತದ ವಿರುದ್ಧದ ದಾಳಿಗೆ ಬೆಂಬಲ ನೀಡಿದ್ದಕ್ಕಾಗಿ ಟರ್ಕಿ ಬಾಯ್ಕಾಟ್ ಎದುರಿಸುತ್ತಿದ್ದರೂ, ಪಾಕಿಸ್ತಾನಕ್ಕೆ ಬೆಂಬಲ ಮುಂದುವರೆಸುವುದಾಗಿ ಟರ್ಕಿ ಪ್ರಧಾನಿ ಹೇಳಿದ್ದಾರೆ. ಭಾರತದಿಂದ ನೆರವು ಪಡೆದಿದ್ದರೂ ಟರ್ಕಿ ಪಾಕಿಸ್ತಾನದ ಪರ ನಿಂತಿದೆ.
ಪೂರ್ತಿ ಓದಿಪಾಕ್ ಬೆನ್ನಿಗೆ ನಿಂತ ಟರ್ಕಿಗೆ ಭಾರತದಿಂದ ಆಘಾತ: 9 ವಿಮಾನ ನಿಲ್ದಾಣಗಳ ಒಪ್ಪಂದ ರದ್ದು!
ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದ್ದಕ್ಕೆ ಟರ್ಕಿಗೆ ಭಾರತದಿಂದ ದೊಡ್ಡ ಹೊಡೆತ. 9 ವಿಮಾನ ನಿಲ್ದಾಣಗಳಲ್ಲಿ ಸೇವೆ ಒದಗಿಸುತ್ತಿದ್ದ ಟರ್ಕಿ ಮೂಲದ ಕಂಪನಿಯ ಭದ್ರತಾ ಪರವಾನಗಿ ರದ್ದು.
ಒಂದೇ ತಿಂಗಳಲ್ಲಿ ₹2.5 ಕೋಟಿ ಒಡೆಯನಾದ ಮಲೆ ಮಹದೇಶ್ವರ; ಫಾರಿನ್ ಕರೆನ್ಸಿ, 2000 ನೋಟು ಪತ್ತೆ!
ಮಲೆ ಮಹದೇಶ್ವರ ಬೆಟ್ಟದಲ್ಲಿ ಕಳೆದ 29 ದಿನಗಳ ಹುಂಡಿ ಎಣಿಕೆಯಲ್ಲಿ 2.54 ಕೋಟಿ ರೂಪಾಯಿ ಸಂಗ್ರಹವಾಗಿದೆ. 69 ಗ್ರಾಂ ಚಿನ್ನ, 2 ಕೆಜಿ 770 ಗ್ರಾಂ ಬೆಳ್ಳಿ ಮತ್ತು 6 ವಿದೇಶಿ ನೋಟುಗಳು ಸಹ ಪತ್ತೆಯಾಗಿವೆ.
ಪೂರ್ತಿ ಓದಿಅಮರನಾಥ್ ಯಾತ್ರೆಗೆ ಪಹಲ್ಲಾಂ ಕ್ಯಾಂಪ್ ಸಿದ್ಧತೆ : ಜುಲೈ 3ರಿಂದ ಯಾತ್ರೆ ಶುರು
ಜುಲೈ 3 ರಿಂದ ಆರಂಭವಾಗುವ ಅಮರನಾಥ ಯಾತ್ರೆಗೆ ಪಹಲ್ಗಾಂ ಬೇಸ್ ಕ್ಯಾಂಪ್ ಸಿದ್ಧವಾಗುತ್ತಿದೆ. ಕುದುರೆಗಳ ನೋಂದಣಿ ಮತ್ತು ವಿಮಾ ಯೋಜನೆಗಳನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಜಾರಿಗೊಳಿಸಿದೆ.
ಪೂರ್ತಿ ಓದಿ