ಪ್ರವಾಸಕ್ಕೆ ಮಗನ ಜೊತೆ ತೆರಳಿದ ಮಹಿಳೆ ದಿಢೀರ್ ಕಾರ್ಗಿಲ್ ಗಡಿಯಲ್ಲಿ ನಾಪತ್ತೆಯಾಗಿದ ಘಟನೆ ನಡೆದಿದೆ. ಮಗ ಕಾರ್ಗಿಲ್ ಪಟ್ಟಣದ ಹೊಟೆಲ್‌ನಲ್ಲಿದ್ದರೆ ತಾಯಿ ನಾಪತ್ತೆಯಾಗಿದ್ದಾರೆ. ಇತ್ತ ತಾಯಿಗಾಗಿ ಮಗ ಕಾಯುತ್ತಿದ್ದರೆ, ತನಿಖೆ ಕೆಲ ಸ್ಫೋಟಕ ಮಾಹಿತಿ ಕಲೆ ಹಾಕಿದೆ.
ಪುಣೆ(ಮೇ.16) ಭಾರತ ಹಾಗೂ ಪಾಕಿಸ್ತಾನ ಗಡಿ ಸಂಘರ್ಷದ ನಡುವೆ ಮಹತ್ವದ ಬೆಳೆವಣಿಗೆಯೊಂದು ನಡೆದಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಣೆಯಾಗಿದೆ. ಆದರೆ ಗಡಿಯಲ್ಲಿನ ಉದ್ವಿಘ್ನ ವಾತಾವರಣ ಕಡಿಮೆಯಾಗಿಲ್ಲ. ಜಮ್ಮು ಮತ್ತು ಕಾಶ್ಮೀರದ ಉದ್ದಕ್ಕೂ ಉಗ್ರರ ವಿರುದ್ದ ಕಾರ್ಯಾಚರಣೆ ನಡೆಯುತ್ತಿದೆ. ಇದರ ನಡುವೆ ಪ್ರವಾಸಕ್ಕೆ ಕಾರ್ಗಿಲ್‌ಗೆ ತೆರಳಿದ ನಾಗ್ಪುರದ ಮಹಿಳೆಯೊಬ್ಬರು ನಾಪತ್ತೆಯಾದ ಘಟನೆ ನಡೆದಿದೆ. ಮಗನ ಜೊತೆ ಪ್ರವಾಸಕ್ಕೆ ತೆರಳಿದ ಮಹಿಳೆ ಕಾರ್ಗಿಲ್ ಪಟ್ಟಣದಲ್ಲಿ ಹೊಟೆಲ್ ರೂಂ ಬುಕ್ ಮಾಡಿದ್ದಾಳೆ. ಮಗನ ಹೊಟೆಲ್‌ನಲ್ಲಿ ಬಿಟ್ಟು ಹೊರಗಡೆ ಹೋದ ಮಹಿಳೆ ಮರಳಿ ಬರಲೇ ಇಲ್ಲ. ಇದೀಗ ಮಹಿಳೆಗಾಗಿ ಹುಡುಕಾಟ ಆರಂಭಗೊಂಡಿದೆ. ಇತ್ತಮ ತಾಯಿಗಾಗಿ ಮಗನ ಕಾಯುತ್ತಿದ್ದರೆ, ತನಿಖೆ ಕೆಲ ಸ್ಫೋಟಕ ಸುಳಿವು ನೀಡುತ್ತಿದೆ.
ಮಗನ ಹೊಟೆಲ್‌ನಲ್ಲಿ ಬಿಟ್ಟು ತೆರಳಿದ ಮಹಿಳೆ
ಮೇ 09ರಂದು ಮಹಿಳೆ ಹಾಗೂ ಆತನ 15 ವರ್ಷದ ಮಗನ ಜೊತೆ ಲಡಾಖ್ ಪ್ರಾಂತ್ಯದ ಕಾರ್ಗಿಲ್‌ಗೆ ಪ್ರವಾಸಕ್ಕೆ ತೆರಳಿದ್ದಾಳೆ. ಕಾರ್ಗಿಲ್ ಪಟ್ಟಣಕ್ಕೆ ಆಗಮಿಸಿದ ಮಹಿಳೆ ಹೊಟೆಲ್ ರೂಂ ಬುಕ್ ಮಾಡಿದ್ದಾಳೆ. ಹೊಟೆಲ್ ಕೊಠಡಿಯಲ್ಲಿ ಮಗನ ಬಿಟ್ಟು ಮಹಿಳೆ ತೆರಳಿದ್ದಾಳೆ. ಈ ಮಹಿಳೆ ಕಾರ್ಗಿಲ್‌ನಲ್ಲಿರುವ ಭಾರತದ ಕೊನೆಯ ಗ್ರಾಮ ಹಂಡರ್ನಬನ್‌ಗೆ ತೆರಳಿದ್ದಾರೆ. ಆದರೆ ಎಷ್ಟು ಹೊತ್ತಾದರೂ ಮಹಿಳೆ ಮರಳಿ ಹೊಟೆಲ್‌ಗೆ ಬರಲಿಲ್ಲ. ಇತ್ತ ತಾಯಿಗಾಗಿ ಕಾಯುತ್ತಿದ್ದ 15 ವರ್ಷದ ಬಾಲಕ ಆತಂಕಗೊಂಡಿದ್ದಾನೆ. ರಾತ್ರಿಯಾದರೂ ಮರಳಿ ಬಾರದ ಹಿನ್ನಲೆಯಲ್ಲಿ ಹೊಟೆಲ್ ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಹೊಟೆಲ್‌ಗೆ ಆಗಮಿಸಿ ಬಾಲಕನ ವಶಕ್ಕೆ ಪಡೆದಿದ್ದಾರೆ. ಬಳಿಕ ಮಾಹಿತಿ ಕಲೆ ಹಾಕಿ ಕೊನೆಯ ಗ್ರಾಮದಲ್ಲಿ ಹುಡುಕಾಟ ಆರಂಭಿಸಿದೆ.
ಅನುಮಾನ ಹೆಚ್ಚಿಸಿದ ಸ್ಫೋಟಕ ಮಾಹಿತಿ
ಪೊಲೀಸರು ಬಾಲಕನ ವಶಕ್ಕೆ ಪಡೆದು ಕೆಲ ಮಾಹಿತಿ ಕೇಳಿದ್ದಾರೆ. ಕಳೆದ ಕೆಲದಿನಗಳಿಂದ ಬಾಲಕ ಹಾಗೂ ಆತನ ತಾಯಿ ಇಬ್ಬರು ಪ್ರವಾಸದಲ್ಲಿದ್ದಾರೆ. ಕಾರ್ಗಿಲ್‌ಗೆ ಆಗಮಿಸುವ ಮೊದಲು ಪಂಜಾಬ್‌ಗೆ ಪ್ರವಾಸ ಮಾಡಿರುವುದಾಗಿ ಬಾಲಕ ಹೇಳಿದ್ದಾನೆ. ಇತ್ತ ಗಡಿ ಗ್ರಾಮಕ್ಕೆ ತೆರಳಿ ಬಳಿಕ ನಾಪತ್ತೆಯಾಗಿರವು ಕಾರಣ ಇದು ಪೊಲೀಸರಿಗೆ ಅನುಮಾನ ಹೆಚ್ಚಿಸಿದೆ. ಈ ಮಹಿಳೆ ಭಾರತದಲ್ಲಿ ಪಾಕಿಸ್ತಾನದ ಗೂಢಚರ್ಯೆಯಾಗಿ ಕೆಲಸ ಮಾಡಿರುವ ಸಾಧ್ಯತೆ ಇದೆ ಅನ್ನೋ ಅನುಮಾನ ವ್ಯಕ್ತಪಡಿಸಿದ್ದಾರೆ. ಮಹಿಳೆಯ ಪ್ರವಾಸ ಹಾಗೂ ಕೊನೆಯ ನಡೆ ಈ ಅನುಮಾನಕ್ಕೆ ಕೆಲ ಸುಳಿವು ನೀಡಿದೆ.
ಗಂಡನಿಂದ ಡಿವೋರ್ಸ್ ಪಡೆದ ಮಹಿಳೆಯ ನಿಗೂಢ ನಡೆ
ನಾಪತ್ತೆಯಾಗಿರುವ ಮಹಿಳೆ ಕುರಿತು ಪೊಲೀಸರು ನಾಗ್ಪುರದಲ್ಲಿರುವ ಕುಟುಂಬವನ್ನು ಸಂಪರ್ಕಿಸಿದೆ. ಆದರೆ ಕೆಲವೇ ಕೆಲವು ಮಾಹಿತಿ ಮಾತ್ರ ಪೊಲೀಸರಿಗೆ ಸಿಕ್ಕಿದೆ. ಈ ಪೈಕಿ ಒಂದು ವರ್ಷ ದ ಹಿಂದೆ ಡಿವೋರ್ಸ್ ಪಡೆದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮಗನ ಜೊತೆಗಿರುವ ಈ ಮಹಿಳೆ ವಯಸ್ಸು 36. ಮೊದಲು ಟೈಲರ್ ಆಗಿ ಕೆಲಸ ಮಾಡಿದ್ದ ಈ ಮಹಿಳೆ ಬಳಿಕ ಮುಂಬೈ ಹಾಗೂ ನಾಗ್ಪುರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡಿದ್ದಾರೆ. ಕೆಲ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.ಈ ಉದ್ಯಮವನ್ನು ಈಕೆಯ ಸಹೋದರಿಯರು ನೋಡಿಕೊಳ್ಳುತ್ತಿದ್ದಾರೆ. ಇತ್ತ ಬಾಲಕ ಆತಂಕಗೊಂಡಿದ್ದಾನೆ. ಹೀಗಾಗಿ ಪೊಲೀಸರು ಬಾಲಕನ ಹೆಚ್ಚಿನ ವಿಚಾರಣೆ ಮಾಡಿಲ್ಲ. ಕಾನೂನು ಪ್ರಕ್ರಿಯೆ ಮುಗಿಸಿ ಬಾಲಕನನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುತ್ತದೆ. ಇತ್ತ ಮಹಿಳೆಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದೆ. ಇದುವರೆಗೂ ಮಹಿಳೆ ಕುರಿತು ಯಾವುದೇ ಸುಳಿವು ಸಿಕ್ಕಿಲ್ಲ. ಗಡಿ ಗ್ರಾಮಸ್ಥಱ ಜೊತೆಗೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.


