MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • ಕದನ ವಿರಾಮ ಮೇ.18ರವರೆಗೆ ವಿಸ್ತರಣೆ: ಮತ್ತೊಮ್ಮೆ ಭಾರತ-ಪಾಕ್ ಡಿಜಿಎಂಒ ಮಟ್ಟದ ಸಭೆ

ಕದನ ವಿರಾಮ ಮೇ.18ರವರೆಗೆ ವಿಸ್ತರಣೆ: ಮತ್ತೊಮ್ಮೆ ಭಾರತ-ಪಾಕ್ ಡಿಜಿಎಂಒ ಮಟ್ಟದ ಸಭೆ

ಭಾರತ-ಪಾಕಿಸ್ತಾನ ಗಡಿಯಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಕದನ ವಿರಾಮವನ್ನು ಮೇ 18, 2025 ರವರೆಗೆ ವಿಸ್ತರಿಸಲಾಗಿದೆ. ಡಿಜಿಎಂಒ ಮಟ್ಟದಲ್ಲಿ ಮತ್ತೊಂದು ಮಾತುಕತೆ ನಡೆಯಲಿದೆ.

2 Min read
Author : Gowthami K
Published : May 16 2025, 01:32 PM IST
Share this Photo Gallery
  • FB
  • TW
  • Linkdin
  • Whatsapp
15

ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಹಳ್ಳಿಗಳಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಉಭಯ ದೇಶಗಳ ಮಧ್ಯೆ ಎದ್ದಿದ್ದ ಉದ್ವಿಗ್ನತೆಯಿಂದಾಗಿ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗಿದ್ದ ಗ್ರಾಮಸ್ಥರು ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ. ಈ ನಡುವೆ  ಎರಡೂ ದೇಶಗಳು ಕದನ ವಿರಾಮವನ್ನು ಮೇ 18, 2025 ರವರೆಗೆ ವಿಸ್ತರಿಸಿವೆ.  ಇದರ ಜೊತೆಗೆ ಭಾರತ ಮತ್ತು ಪಾಕಿಸ್ತಾನ ದೇಶದ  ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ಮಟ್ಟದಲ್ಲಿ ಮತ್ತೊಂದು ಮಾತುಕತೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
 

25

 ಪಾಕಿಸ್ತಾನದ ಉಪ ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವ ಇಶಾಕ್ ದಾರ್  ಭಾರತ ಮತ್ತು ಪಾಕಿಸ್ತಾನದ ನಡುವೆ ಮೇ 10ರಂದು ಘೋಷಿಸಲಾಗಿದ್ದ ಕದನ ವಿರಾಮ ಒಪ್ಪಂದವನ್ನು ಮೇ 18 ರವರೆಗೆ ವಿಸ್ತರಿಸಲಾಗಿದೆ ಎಂದು ಘೋಷಿಸಿದ್ದಾರೆ. ಮೇ 12 ರಂದು ಉಭಯ ದೇಶಗಳ ಡಿಜಿಎಂಓ ಮಟ್ಟದ ಮೊದಲ ಸಭೆ ನಡೆದಿತ್ತು. ಸೇನಾ ಅಧಿಕಾರಿಗಳ ನಡುವೆ ಹಾಟ್‌ಲೈನ್ ಸಂವಹನ ನಡೆದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತ ಮತ್ತು ಪಾಕಿಸ್ತಾನಗಳು ನಿಯಂತ್ರಣ ರೇಖೆ (LoC) ಮತ್ತು ಗಡಿಭಾಗಗಳಲ್ಲಿ ಇರುವ ಪ್ರಕ್ಷ್ಯುಬ್ದ ವಾತಾವರಣವನ್ನು ಕ್ರಮೇಣ ಕಡಿಮೆ ಮಾಡಲು ಒಪ್ಪಿಕೊಂಡಿವೆ.  

Related Articles

Related image1
ಪಾಕ್‌ ಭಯೋತ್ಪಾದನೆ ನಿಲ್ಲದ ಹೊರತು ಸಿಂಧೂ ಜಲ ಒಪ್ಪಂದ ಪರಿಶೀಲನೆ ಇಲ್ಲ: ಜೈಶಂಕರ್
Related image2
ಭಾರತ ಧ್ವಂಸಗೊಳಿಸಿದ ಉಗ್ರರ ಶಿಬಿರ ಪಾಕ್‌ ಸರ್ಕಾರದಿಂದಲೇ ಮರುನಿರ್ಮಾಣ: ಐಎಂಎಫ್‌ ಸಾಲದ ಹಣದಲ್ಲಿ ಲಷ್ಕರ್‌ ಕೇಂದ್ರಕ್ಕೆ ಬೂಸ್ಟ್!
35

ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ ಘಟನೆ ಬಳಿಕ, ಭಾರತವು "ಆಪರೇಷನ್ ಸಿಂದೂರ್" ಹೆಸರಿನಲ್ಲಿ ಮೇ 7 ಮತ್ತು 8 ರಂದು ಪಾಕ್ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿತು. ಇದರ ಜೊತೆಗೆ ರಾಜತಾಂತ್ರಿಕ ಹಂತದಲ್ಲಿಯೂ ಗಂಭೀರ ಕ್ರಮಗಳನ್ನು ಕೈಗೊಂಡು, ದಶಕಗಳ ಕಾಲ ಜಾರಿಯಲ್ಲಿದ್ದ ಸಿಂಧೂ ನದಿ ಜಲ ಒಪ್ಪಂದವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಡ್ರೋನ್ ಹಾಗೂ ರಾಕೆಟ್ ದಾಳಿಗಳನ್ನು ನಡೆಸಿತು. ಆದರೆ ಭಾರತವು ಬಹುಪಾಲು ದಾಳಿಗಳನ್ನು ತಡೆಯಿತು ಮತ್ತು ತಿರುಗೇಟು ನೀಡಿತು.
 

45

ಮೇ 10 ರಂದು ಎರಡೂ ದೇಶಗಳು ಭೂಮಿ, ವಾಯು ಮತ್ತು ಜಲ ಗಡಿಯಲ್ಲಿ  ಎಲ್ಲಾ ಮಿಲಿಟರಿ ದಾಳಿಗಳನ್ನು ನಿಲ್ಲಿಸಲು ಒಪ್ಪಂದಕ್ಕೆ ಬಂದು ತಕ್ಷಣವೇ ಜಾರಿಗೊಳಿಸಿದರು. ಆದರೆ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಈ ಒಪ್ಪಂದವನ್ನು ಉಲ್ಲಂಘಿಸಿದ ಆರೋಪ ಎದುರಿಸಿತು. ಇತ್ತೀಚೆಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್, "ಪಾಕಿಸ್ತಾನ ಶಾಂತಿಯ ನಿಟ್ಟಿನಲ್ಲಿ ಮಾತುಕತೆಗೆ ಸಿದ್ಧ" ಎಂಬ ಉಲ್ಲೇಖದೊಂದಿಗೆ ಭಾರತವನ್ನು ಸಂವಾದಕ್ಕೆ ಆಹ್ವಾನಿಸಿದರು. ಇದಕ್ಕೂ ಮುನ್ನ, ಇಸ್ಲಾಮಾಬಾದ್, ಭಾರತವು ತೆಗೆದುಕೊಂಡ ಸಿಂಧೂ ಜಲ ಒಪ್ಪಂದ ಸ್ಥಗಿತ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಪತ್ರ ಬರೆದಿತ್ತು.
 

55

 ಮೋದಿ ಸ್ಪಷ್ಟ ಎಚ್ಚರಿಕೆ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು “ಆಪರೇಷನ್ ಸಿಂದೂರ್” ಕುರಿತಾಗಿ ನೀಡಿದ ಮೊದಲ ಪ್ರತಿಕ್ರಿಯೆಯಲ್ಲಿ, "ನೀರು ಮತ್ತು ರಕ್ತ ಒಂದೇ ಸಮಯದಲ್ಲಿ ಹರಿಯಲು ಸಾಧ್ಯವಿಲ್ಲ" ಎಂದು ಸ್ಪಷ್ಟವಾಗಿ ಎಚ್ಚರಿಸಿದರು. ಭಯೋತ್ಪಾದನೆ ನಿಲ್ಲದ ಹೊರತು ಭಾರತದ ಕಠಿಣ ನಿಲುವಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದರು. ಭಯೋತ್ಪಾದನೆ ಮತ್ತು ಮಾತುಕತೆ ಒಂದೇ ಸಮಯದಲ್ಲಿ ಸಾಧ್ಯವಿಲ್ಲ. ಭಯೋತ್ಪಾದನೆ ಮತ್ತು ವ್ಯಾಪಾರ ಕೂಡ ಒಂದೆಡೆ ನಡೆಯಲು ಸಾಧ್ಯವಿಲ್ಲ ಎಂಬುದು ಪಾಕಿಸ್ತಾನಕ್ಕೆ ಭಾರತದ ಸ್ಪಷ್ಟ ಸಂದೇಶ. ಭಾರತ ತನ್ನ ಮುಂದಿನ ಕ್ರಮಗಳನ್ನು ಪಾಕಿಸ್ತಾನದ ನಡವಳಿಕೆಗೆ ಅನುಗುಣವಾಗಿ ರೂಪಿಸಲಿದೆ. ಗಡಿಯಲ್ಲಿ ಶಾಂತಿ ಬಯಸುವ ಪ್ರಾಮಾಣಿಕತೆ ಪಾಕಿಸ್ತಾನದಿಂದ ಹೊರಬರುತ್ತದೆಯೇ ಇಲ್ಲವೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಆಪರೇಷನ್ ಸಿಂಧೂರ
ಜಮ್ಮು ಮತ್ತು ಕಾಶ್ಮೀರ
ಭಾರತೀಯ ಸೇನೆ
ಪಾಕಿಸ್ತಾನ

Latest Videos
Recommended Stories
Recommended image1
ವಿದ್ಯಾರ್ಥಿಗಳಿಗೆ ಲೈ0ಗಿಕ ಕಿರುಕುಳ, ಅವಿಮುಕ್ತೇಶ್ವರಾನಂದ ಸ್ವಾಮಿ ವಿರುದ್ಧ ಕೇಸ್‌ಗೆ ಕೋರ್ಟ್ ಸೂಚನೆ
Recommended image2
CBSE Exam: ಮ್ಯಾಥ್ಸ್ ಪೇಪರ್ ಟಫ್ ಇತ್ತು, ಸಿಬಿಎಸ್‌ನಿಂದ ಮೋಸ ಎಂದು ವಿದ್ಯಾರ್ಥಿಗಳ ಆಕ್ರೋಶ
Recommended image3
ಮುಂಬೈ ಬೀದಿಗಳಲ್ಲಿ 'ಟಾಕ್ಸಿಕ್' ನಟ ಯಶ್ ಹೆಂಡ್ತಿ ಹವಾ! ಕುತೂಹಲ ಮೂಡಿಸಿದ ರಾಧಿಕಾ ಪಂಡಿತ್ 'ಮುಂಬೈ ಡೈರೀಸ್' ಪೋಸ್ಟ್!
Related Stories
Recommended image1
ಪಾಕ್‌ ಭಯೋತ್ಪಾದನೆ ನಿಲ್ಲದ ಹೊರತು ಸಿಂಧೂ ಜಲ ಒಪ್ಪಂದ ಪರಿಶೀಲನೆ ಇಲ್ಲ: ಜೈಶಂಕರ್
Recommended image2
ಭಾರತ ಧ್ವಂಸಗೊಳಿಸಿದ ಉಗ್ರರ ಶಿಬಿರ ಪಾಕ್‌ ಸರ್ಕಾರದಿಂದಲೇ ಮರುನಿರ್ಮಾಣ: ಐಎಂಎಫ್‌ ಸಾಲದ ಹಣದಲ್ಲಿ ಲಷ್ಕರ್‌ ಕೇಂದ್ರಕ್ಕೆ ಬೂಸ್ಟ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved