07:42 PM (IST) May 17

ಪಾಕ್ ಬೆಂಬಲಿಸಿದ ಟರ್ಕಿ, ಅಜರ್‌ಬೈಜಾನ್‌ನಿಂದ ಬಟ್ಟೆ ಆಮದು ನಿಲ್ಲಿಸಿದ ಬೆಂಗಳೂರು ವ್ಯಾಪಾರಿ

ಪಾಕಿಸ್ತಾನ ಹಾಗೂ ಭಯೋತ್ಪಾದಕತೆ ಬೆಂಬಲಿಸಿದ ಟರ್ಕಿ ಹಾಗೂ ಅಜರ್‌ಬೈಜನ್ ವಿರುದ್ಧ ಭಾರತದಲ್ಲಿ ಅಭಿಯಾನ ಹೆಚ್ಚಾಗಿದೆ. ಇದೀಗ ಬೆಂಗಳೂರು ವ್ಯಾಪಾರಿ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಟರ್ಕಿ ಹಾಗೂ ಅಜರ್‌ಬೈಜಾನ್‌ನಿಂದ ಬಟ್ಟೆ ಆಮದು ಮಾಡಿಕೊಳ್ಳುವುದನ್ನು ಬೆಂಗಳೂರು ವ್ಯಾಪಾರಿಗಳು ಸ್ಥಗಿತಗೊಳಿಸಿದ್ದಾರೆ.

ಪೂರ್ತಿ ಓದಿ
04:12 PM (IST) May 17

Story of BrahMos: ಅಬ್ದುಲ್‌ ಕಲಾಂ ಕಂಡ ಕನಸು, ವಾಜಪೇಯಿ ಕಾಲದಲ್ಲಿ ನನಸು!

ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯ ಇತಿಹಾಸ, ಅಭಿವೃದ್ಧಿ ಮತ್ತು ಜಾಗತಿಕ ಮಾರಾಟದ ಬಗ್ಗೆ ಈ ಲೇಖನ ಒಳನೋಟಗಳನ್ನು ನೀಡುತ್ತದೆ. ಕ್ಷಿಪಣಿ ತಂತ್ರಜ್ಞಾನದಲ್ಲಿ ಭಾರತದ ಸ್ವಾವಲಂಬನೆಯ ಪ್ರಯಾಣ ಮತ್ತು ಅದರ ಯಶಸ್ಸಿನ ಕಥೆಯನ್ನು ಇದು ವಿವರಿಸುತ್ತದೆ.

ಪೂರ್ತಿ ಓದಿ
03:52 PM (IST) May 17

ಮಾಜಿ ಸಚಿವೆ ಸ್ಮೃತಿ ಇರಾನಿ ದೇಶಕ್ಕಾಗಿ ಬಹುದೊಡ್ಡ ನಿರ್ಧಾರ: ಶ್ಲಾಘನೆಗಳ ಮಹಾಪೂರ

ಮಾಜಿ ಸಚಿವೆ ಸ್ಮೃತಿ ಇರಾನಿ ಅವರು ದೇಶಕ್ಕಾಗಿ, ನಮ್ಮ ಸೇನೆಗಾಗಿ ಬಹುದೊಡ್ಡ ನಿರ್ಧಾರ ಪ್ರಕಟಿಸಿದ್ದಾರೆ. ಅವರ ಈ ನಿರ್ಧಾರಕ್ಕೆ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ. ಏನದು ನಿರ್ಧಾರ?

ಪೂರ್ತಿ ಓದಿ
03:35 PM (IST) May 17

ಪಾಕಿಸ್ತಾನಕ್ಕೆ ಬೆಂಬಲ ಕೊಟ್ಟ ಟರ್ಕಿಗೆ ಸರಿಯಾಗಿಯೇ ಛಡಿ ಏಟು ಕೊಟ್ಟ ಭಾರತ! ಇದು ಆಕ್ಚುಲೀ ಆಗ್ಬೇಕಿತ್ತು!

ಭಾರತ-ಪಾಕಿಸ್ತಾನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, Zee5 ಸೇರಿದಂತೆ OTT ಪ್ಲಾಟ್‌ಫಾರ್ಮ್‌ಗಳು ಟರ್ಕಿಶ್ ಸಿನಿಮಾ ಮತ್ತು ಸರಣಿಗಳನ್ನು ತೆಗೆದುಹಾಕುತ್ತಿವೆ. ಟರ್ಕಿ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವುದೇ ಇದಕ್ಕೆ ಕಾರಣ. ಸರ್ಕಾರದ ನಿರ್ದೇಶನವಿಲ್ಲದೆಯೇ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಪೂರ್ತಿ ಓದಿ
02:58 PM (IST) May 17

ರಾಜಕಾರಣದ ಹಿಂಬಾಲಿಗೆ ಬಂದ ಡಿ.ಕೆ. ಸುರೇಶ್; ಬಮೂಲ್ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ

ಮಾಜಿ ಸಂಸದ ಡಿಕೆ ಸುರೇಶ್ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಒತ್ತಡದ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಚುನಾವಣೆಯಲ್ಲಿ ಯಾವುದೇ ರಾಜಕೀಯ ಕುತೂಹಲವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪೂರ್ತಿ ಓದಿ
02:00 PM (IST) May 17

ಹೊಟ್ಟೆಯಲ್ಲೊಂದು ಮಗು, ಮಡಿಲಲ್ಲಿ 2ರ ಕಂದ: ಕಾರ್ಗಿಲ್​ ಯುದ್ಧದಲ್ಲಿ ಧುಮುಕಿದ ಕ್ಯಾಪ್ಟನ್​ ಯಶಿಕಾ ಕಥೆ ಕೇಳಿ...

ಕಾರ್ಗಿಲ್​ ಯುದ್ಧದ ಸಮಯದಲ್ಲಿ ಎರಡು ತಿಂಗಳ ಗರ್ಭಿಣಿಯಾಗಿದ್ದ ಕ್ಯಾಪ್ಟನ್​ ಯಶಿಕಾ ಹತ್ವಾಲ್‌ ತ್ಯಾಗಿ ತಮ್ಮ 2 ವರ್ಷದ ಕಂದನ ಜೊತೆಗೇ ಹೋದ ಘಟನೆ ಅವರ ಬಾಯಲ್ಲೇ ಕೇಳಿ...

ಪೂರ್ತಿ ಓದಿ
01:57 PM (IST) May 17

ಬಡವರ ತಟ್ಟೆಗೆ ಪಡಿತರ: ಯೋಗಿ ಸರ್ಕಾರದಿಂದ ಭರ್ಜರಿ ಘೋಷಣೆ

ಪಡಿತರ ವ್ಯವಸ್ಥೆ ಬಲಪಡಿಸಲು ಯೋಗಿ ಸರ್ಕಾರ ₹179.42 ಕೋಟಿ ಅನುದಾನ ಬಿಡುಗಡೆ ಮಾಡಿದೆ. ತಂತ್ರಜ್ಞಾನ ಬಳಸಿ ಪಾರದರ್ಶಕತೆ ಹೆಚ್ಚಿಸಿ, ಎಲ್ಲರಿಗೂ ಪಡಿತರ ತಲುಪಿಸುವ ಗುರಿ ಹೊಂದಿದೆ.

ಪೂರ್ತಿ ಓದಿ
12:25 PM (IST) May 17

ಬಲೂಚಿಸ್ತಾನದ 80% ನಿಯಂತ್ರಣ ಕಳೆದುಕೊಂಡ ಪಾಕಿಸ್ತಾನ: ಬಲೂಚ್ ನಾಯಕ

ಭಾರತ ನಮ್ಮನ್ನ ಬೆಂಬಲಿಸಿದ್ರೆ, ನಮ್ಮ ಬಾಗಿಲು ತೆರೆಯುತ್ತೇವೆ ಅಂತ ಮಿರ್ ಯಾರ್ ಹೇಳಿದ್ದಾರೆ. ಸ್ವಾತಂತ್ರ್ಯ ಘೋಷಣೆ ಬಳಿಕ ಪಾಕ್ ಸೇನೆಗೆ ಪ್ರದೇಶದಲ್ಲಿ ನಿಯಂತ್ರಣವಿಲ್ಲ ಅಂತ ಬಲೂಚ್ ನಾಯಕರು ಹೇಳ್ತಾರೆ.

ಪೂರ್ತಿ ಓದಿ
10:51 AM (IST) May 17

ಭಾರತ-ಪಾಕಿಸ್ತಾನ ಸಂಘರ್ಷದ ಬಗ್ಗೆ ಜಗತ್ತಿನ ದೇಶಗಳಿಗೆ ಮಾಹಿತಿ ನೀಡುವ ನಿಯೋಗದಲ್ಲಿ ಶಶಿ ತರೂರ್‌, ಕನಿಮೋಳಿ

ಭಾರತ-ಪಾಕಿಸ್ತಾನ ಸಂಘರ್ಷದ ಕುರಿತು ಪ್ರಮುಖ ವಿದೇಶಿ ಸರ್ಕಾರಗಳಿಗೆ ಮಾಹಿತಿ ನೀಡಲು ಏಳು ಸರ್ವಪಕ್ಷ ಸಂಸತ್ ನಿಯೋಗಗಳನ್ನು ರಚಿಸಲಾಗಿದೆ. ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಒಂದು ನಿಯೋಗವನ್ನು ಮುನ್ನಡೆಸಲಿದ್ದಾರೆ. ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಭಾರತದ ಪ್ರತೀಕಾರದ ಆಪರೇಷನ್ ಸಿಂಧೂರ್ ನಂತರ ಈ ನಿಯೋಗಗಳು ವಿದೇಶ ಪ್ರವಾಸ ಕೈಗೊಳ್ಳಲಿವೆ.

ಪೂರ್ತಿ ಓದಿ
08:24 AM (IST) May 17

ಮತ್ತೆ ಪಾಕಿಸ್ತಾನಕ್ಕೆ ಅನುಕೂಲವಾಗುವಂತೆ ಹೇಳಿಕೆ ನೀಡಿದ ಮೆಹಬೂಬಾ ಮುಫ್ತಿ

Indus Waters Treaty: ಪಾಕಿಸ್ತಾನದೊಂದಿಗಿನ ಸಿಂಧು ಜಲ ಒಪ್ಪಂದ ತಡೆಹಿಡಿದ ನಂತರ, ಭಾರತವು ನೀರನ್ನು ಬಳಸಿಕೊಳ್ಳುವ ಬಗ್ಗೆ ಒಮರ್ ಅಬ್ದುಲ್ಲಾ ಅವರ ಪ್ರಸ್ತಾವನೆಯನ್ನು ಮೆಹಬೂಬಾ ಮುಫ್ತಿ ವಿರೋಧಿಸಿದ್ದಾರೆ. ಇದು ಪಾಕಿಸ್ತಾನ ಪರ ಹೇಳಿಕೆ ಎಂದು ಒಮರ್ ಟೀಕಿಸಿದ್ದಾರೆ. ಮುಫ್ತಿಯವರು ಮಾತುಕತೆಗೆ ಒತ್ತು ನೀಡಿದ್ದಾರೆ.

ಪೂರ್ತಿ ಓದಿ