ವೈರಲ್ ವಿಡಿಯೋವೊಂದರಲ್ಲಿ, ಯುವಕನೊಬ್ಬ ಹಿಂದೂ ಹುಡುಗಿಯರನ್ನು ಪ್ರೀತಿಸುವ ನಾಟಕವಾಡಿ ಮೋಸ ಮಾಡಲು ತನಗೆ ಮಸೀದಿಯಿಂದ ಹಣ ಸಿಗುತ್ತದೆ ಎಂದು ಒಪ್ಪಿಕೊಂಡಿದ್ದಾನೆ. ಹುಡುಗಿಯನ್ನು ಮದುವೆಯಾದರೆ ಅಥವಾ ಗರ್ಭಿಣಿಯಾಗಿಸಿ ಬಿಟ್ಟರೆ ಲಕ್ಷಾಂತರ ರೂಪಾಯಿ ಸಿಗುತ್ತದೆ ಎಂದು ಕುರಾನ್ ಮೇಲೆ ಆಣೆ ಮಾಡಿ ಹೇಳಿರುವ ಆಘಾತಕಾರಿ ವಿಷಯವನ್ನು ಈ ಲೇಖನ ವಿವರಿಸುತ್ತದೆ.

ದಿ ಕೇರಳ ಸ್ಟೋರಿ ಸಿನಿಮಾ ನೋಡಿದವರಿಗೆ ಲವ್​ ಜಿಹಾದ್​ ಯಾವ ರೀತಿಯಲ್ಲಿ ಕೆಲಸ ಮಾಡುತ್ತಿದೆ ಈ ದೇಶದಲ್ಲಿ ಎನ್ನುವುದು ತಿಳಿಯುತ್ತದೆ. ಆದರೆ ಇವೆಲ್ಲವೂ ಬೋಗಸ್​, ಇಂಥದ್ದು ನಡೆಯುತ್ತಲೇ ಇಲ್ಲ, ಎಲ್ಲವೂ ಕಪೋಕಲ್ಪಿತ ಎಂದು ಒಂದಷ್ಟು ಮಂದಿ ಹೇಳುತ್ತಿದ್ದಾರೆ. ಅದರ ನಡುವೆಯೇ, ದುಬಾರಿ ಕಾರು, ಬೈಕ್​ ತಂದು, ಹೀರೋಗಳ ರೀತಿಯಲ್ಲಿ ಹೇರ್​ಸ್ಟೈಲ್​ ಮಾಡಿಕೊಂಡು ಕಾಲೇಜಿನ ಎದುರು ನಿಂತರೆ ಅಂಥವರನ್ನು ನೋಡಿ ಮರುಳಾಗುವ ಹಿಂದೂ ಹುಡುಗಿರೂ ಕಮ್ಮಿಯೇನಿಲ್ಲ. ಅವರೇ ಇವರ ಟಾರ್ಗೆಟ್​. ಇಂಥ ಸಹಸ್ರಾರು ಕಥೆಗಳು ಬೆಳಕಿಗೆ ಬಂದಿವೆ. ತಾವು ಮೋಸ ಹೋಗಿ ಮಗುವಿನ ಜೊತೆ ಬೀದಿಪಾಲಾದ ಮೇಲೆ ಮೀಡಿಯಾಗಳ ಮುಂದೆ ಬಂದು ಅತ್ತು ಕರೆದವರಿದ್ದಾರೆ. ಬೀದಿ ಹೆಣವಾದವರಿದ್ದಾರೆ. ಇತ್ತ ಅಪ್ಪ-ಅಮ್ಮನಿಗೂ ಬೇಡದ ಮಗಳಾಗಿ ಪ್ರತಿನಿತ್ಯ ನರಕವನ್ನು ನೋಡುತ್ತಿರುವ ಎಷ್ಟೋ ಹೆಣ್ಣುಮಕ್ಕಳು ಧೈರ್ಯ ಮಾಡಿ ಮುಂದೆ ಬಂದು ತಮ್ಮ ಕಥೆಯನ್ನು ಹೇಳಿಕೊಂಡವರಿದ್ದಾರೆ.

ಹಿಂದೂ ಹುಡುಗಿ ಪಟಾಯಿಸಲು ಭರ್ಜರಿ ಆಫರ್​

ಆದರೆ ಇವೆಲ್ಲಾ ಸುಳ್ಳು ಎನ್ನುವವರ ನಡುವೆ, ಈ ಯುವಕ, ತನಗೆ ಹಿಂದೂ ಹುಡುಗಿಯರನ್ನು ಪಟಾಯಿಸಲು, ಮದ್ವೆಯಾಗದೇ ಮಗು ಮಾಡಿ ಬೀದಿ ಪಾಲು ಮಾಡಲು ಅಥವಾ ಆಕೆಯನ್ನು ಮತಾಂತರಗೊಳಿಸುವ ಎಷ್ಟು ಹಣ ಸಂದಾಯವಾಗುತ್ತಿದೆ ಎನ್ನುವುದನ್ನು ಬಾಯಿಬಿಟ್ಟಿದ್ದು, ಇದರ ವಿಡಿಯೋ ವೈರಲ್​ ಆಗುತ್ತಿದೆ. ಇಂಥದ್ದನ್ನು ನೋಡಿಯಾದರೂ ಹಿಂದೂ ಹೆಣ್ಣುಮಕ್ಕಳು ಎಚ್ಚೆತ್ತುಕೊಳ್ಳಿ, ಎಲ್ಲರಂಥವನಲ್ಲ ನನ್ನ.... ಎಂದು ಮೋಸ ಹೋಗಬೇಡಿ ಎಂದು ಕಮೆಂಟ್ಸ್​ಗಳ ಸುರಿಮಳೆಯಾಗುತ್ತಿದೆ.

ಕುರಾನ್​ ಮೇಲಾಣೆ

ಈ ವೈರಲ್​ ವಿಡಿಯೋದಲ್ಲಿ ಯುವಕ ಬೆಚ್ಚಿಬೀಳುವ ಮಾಹಿತಿ ಕೊಟ್ಟಿದ್ದಾನೆ. ಪ್ರತಿ ತಿಂಗಳೂ ಹಿಂದೂ ಹುಡುಗಿಯನ್ನು ಪಟಾಯಿಸಲು 50 ಸಾವಿರ ರೂಪಾಯಿ ಸಿಗುತ್ತದೆ. ಅವಳನ್ನು ಮದುವೆಯಾದರೆ 5 ಲಕ್ಷ ರೂಪಾಯಿ ಸಿಗುತ್ತದೆ. ಹುಡುಗಿಯನ್ನು ಅಲ್ಲಿ ಇಲ್ಲಿ ಕರೆದುಕೊಂಡು ಹೋಗಲು (ಐಷಾರಾಮಿ ಜೀವನದ ಆಸೆ ತೋರಿಸಲು) ದೊಡ್ಡ ದೊಡ್ಡ ಗಾಡಿಗಳನ್ನು ಅವರೇ ಅರೇಂಜ್​ ಮಾಡುತ್ತಾರೆ. ಇವೆಲ್ಲವೂ ನಮಗೆ ಮಸೀದಿಯಿಂದ ಆರ್ಡರ್​ ಆಗುತ್ತದೆ. ಹುಡುಗಿಯನ್ನು ಮದುವೆಯಾಗಲೇಬೇಕೆಂದು ಇಲ್ಲ. ಮಗು ಮಾಡಿ ಅವಳನ್ನು ಬಿಟ್ಟರೂ ಐದು ಲಕ್ಷ ಸಿಗುತ್ತದೆ. ಕುರಾನ್​ನ ಮೇಲಾಣೆ ಎಂದಿದ್ದಾನೆ ಈ ಯುವಕ.

ಮಸೀದಿಯಿಂದ ಆರ್ಡರ್​

ಈ ಯುವಕ, ಹಿಂದೂ ಯುವತಿಯೊಬ್ಬಳನ್ನು ಕರೆದುಕೊಂಡು ಬಂದಿದ್ದ. ಆ ಸಮಯದಲ್ಲಿ ಇವನನ್ನು ಹಿಡಿದಿದ್ದಾರೆ. ಆ ಸಮಯದಲ್ಲಿ ಯುವಕ ಎಲ್ಲವನ್ನೂ ಬಾಯಿ ಬಿಟ್ಟಿದ್ದಾನೆ. ಕುರಾನ್​ನ ಮೇಲಾಣೆ. ನಾನು ಹೇಳುವುದೆಲ್ಲಾ ಸತ್ಯ. ಇವಳನ್ನು ಪಟಾಯಿಸಲು ಮಸೀದಿಯಿಂದ ಸಂದೇಶ ಬಂದಿತ್ತು. ಅದಕ್ಕೆ ನನಗೆ ತಿಂಗಳಿಗೆ 50 ಸಾವಿರ ಕೊಡ್ತಾರೆ. ಇವಳನ್ನು ಮದುವೆಯಾಗುವ ಉದ್ದೇಶ ನನಗೆ ಇರಲಿಲ್ಲ. ಮಗು ಮಾಡಿ ಬಿಡುವ ಉದ್ದೇಶವಿತ್ತು. ಅದಕ್ಕಾಗಿ ನನಗೆ 5 ಲಕ್ಷ ರೂಪಾಯಿ ಸಿಗುತ್ತದೆ ಎಂದಿದ್ದಾನೆ. the.indian.angle ಇನ್​ಸ್ಟಾಗ್ರಾಮ್​ನಲ್ಲಿ ಇದರ ವಿಡಿಯೋ ಶೇರ್​ ಮಾಡಲಾಗಿದೆ ನೋಡಿ.

View post on Instagram