ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಬರಸಿಡಿಲು ಎರಗಿದೆ. ಮಲಗಿಕೊಂಡು ರಸಗುಲ್ಲಾ ತಿಂದಿದ್ದಾನೆ. ಕೆಲವೇ ಹೊತ್ತಲ್ಲಿ ಬಾಲಕ ಮೃತಪಟ್ಟ ದಾರುಣ ಘಟನೆ ನಡೆದಿದೆ. ಇದ್ದ ಏಕೈಕ ಮಗನ ಕಳೆದುಕೊಂಡ ದಂಪತಿ ಆಕ್ರಂದನಕ್ಕೆ ಉತ್ತರವೇ ಇಲ್ಲದಾಗಿದೆ.

ರಾಂಚಿ(ಆ.20) ರಕ್ಷಾ ಬಂಧನ ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬ ಇದ್ದ ಏಕೈಕ ಮಗನ ಕಳೆದುಕೊಂಡು ಕಂಗಾಲಾಗಿದೆ. ಸಂಬಂಧಿಕರು ಆಗಮಿಸಿದಾಗ ತಂದಿದ್ದ ರಸಗುಲ್ಲಾ ತಿಂದ 17 ವರ್ಷದ ಬಾಲಕ ಕೆಲವೇ ಕ್ಷಣಗಳಲ್ಲಿ ಮೃತಪಟ್ಟ ಘಟನೆ ಜಾರ್ಖಂಡ್‌ನ ಪತಮ್ಹುಲಿಯಾ ಗ್ರಾಮದಲ್ಲಿ ನಡೆದಿದೆ. ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಿಲ್ಲ. ಮಲಗಿಕೊಂಡು ತಿಂದ ರಸಗುಲ್ಲಾ ಗಂಟಲಿನಲ್ಲಿ ಸಿಲುಕಿದೆ. ಪರಿಣಾಮ ತೀವ್ರ ಅಸ್ವಸ್ಥಗೊಂಡ ಬಾಲಕ ಉಸಿರುಗಟ್ಟಿ ಮೃತಪಟ್ಟಿದ್ದಾನೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾನುವಾರ ಪತಮ್ಹುಲಿಯಾ ಗ್ರಾಮದ ನಿವಾಸಿ ಸುಜಿತ್ ಸಿಂಗ್ ಮನೆಗೆ ಕುಟುಂಬಸ್ಥರು ಆಗಮಿಸಿದ್ದರು. ಮರುದಿನ ರಕ್ಷಾ ಬಂಧನ ಕಾರಣ ಸಂಬಂಧಿ ರೋಹಿಣಿ ಸಿಂಗ್ ಆಗಮಿಸಿದ್ದಾರೆ. ಈ ವೇಳೆ ವಿಶೇಷ ರಸಗುಲ್ಲಾ ತಂದಿದ್ದಾರೆ. ಭಾನುವಾರ ಎಲ್ಲರು ಮಾತುಕತೆ ಹರಟೆ ನಡೆಸಿದ್ದಾರೆ. ಈ ವೇಳೆ ಸುಜಿತ್ ಸಿಂಗ್ ಪುತ್ರ ಅಮಿತ್ ಸಿಂಗ್ ಕೂಡ ಮನೆಯಲ್ಲಿ ಕುಟುಂಬಸ್ಥರ ಜೊತೆ ಕಾಲ ಕಳೆದಿದ್ದಾನೆ. ಇದೇ ವೇಳೆ ಅಂಕಲ್ ತಂದಿದ್ದ ವಿಶೇಷ ರಸಗುಲ್ಲಾ ಸವಿಯಲು ಮುಂದಾಗಿದ್ದಾರೆ.

ಮಗನ ಮೇಲೆ ಮಚ್ಚಿನಿಂದ ದಾಳಿ ಮಾಡಿದ ರೌಡಿಗಳನ್ನು ಕಲ್ಲಿನಿಂದ ಓಡಿಸಿದ ತಾಯಿ, ವಿಡಿಯೋ ಸೆರೆ!

ಮಲಗಿಕೊಂಡು ಮೊಬೈಲ್ ನೋಡುತ್ತಿದ್ದ ಅಮಿತ್ ಸಿಂಗ್, ಹಾಗೇ ರಸಗುಲ್ಲಾ ಬಾಯಿಗೆ ಹಾಕಿದ್ದಾನೆ. ಆದರೆ ಮಲಗಿದ್ದ ಕಾರಣ ರಸಗುಲ್ಲಾ ಗಂಟಲಿಗೆ ಸಿಲುಕಿ ಕೊಂಡಿದೆ. ತಕ್ಷಣವೇ ಬಾಲಕ ಅಸ್ವಸ್ಥನಾಗಿದ್ದಾನೆ. ಸಂಬಂಧಿ ರೋಹಿಣಿ ಸಿಂಗ್ ಕೆಲ ಪ್ರಯತ್ನ ನಡೆಸಿದರೂ ಗಂಟಲಿನಿಂದ ರಸಗುಲ್ಲಾ ಅಲ್ಲೆ ಬಾಕಿಯಾಗಿದೆ. ಅಷ್ಟರಲ್ಲೇ ಬಾಲಕ ತೀವ್ರ ಅಸ್ವಸ್ಥಗೊಂಡಿದ್ದಾನೆ. ಕುಸಿದು ಬಿದ್ದ ಬಾಲಕ ವಾಂತಿ ಮಾಡಿದ್ದಾನೆ. 

ತಕ್ಷಣವೇ ಬಾಲಕನ ಎತ್ತಿಕೊಂಡು ಆಸ್ಪತ್ರೆ ದಾಖಲಿಸಿದ್ದಾರೆ. ಅಷ್ಟರೊಳಗೆ ಬಾಲಕ ಮೃತಪಟ್ಟಿದ್ದಾನೆ. ವೈದ್ಯರು ಬಾಲಕ ಮೃತಪಟ್ಟಿರುವುದು ಖಚಿತಪಡಿಸಿದ್ದಾರೆ. ಕೇವಲ 10 ರಿಂದ 15 ನಿಮಿಷದಲ್ಲಿ ಬಾಲಕ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ವರದಿಯಾಗಿದೆ. ಸುಜಿತ್ ಸಿಂಗ್ ದಂಪತಿಯ ಏಕೈಕ ಮಗ ದುರಂತ ಅಂತ್ಯಕಂಡಿದ್ದಾನೆ. ಮಗನ ಕಳೆದುಕೊಂಡು ಕುಟುಂಬ ಕಂಗಾಲಾಗಿದೆ. ಪೋಷಕರು ಆಕ್ರಂದನ ನಿಲ್ಲುತ್ತಿಲ್ಲ. ಸಂಭ್ರಮದ ಸಿಹಿ ವಿಷವಾಗಿ ಪರಿಣಿಸಿ ಜೀವವನ್ನೇ ಬಲಿ ಪಡೆದಿದೆ.

ಈ ಘಟನೆ ಕುಟುಂಬದಲ್ಲಿ ಆಘಾತ ತಂದಿದೆ. 17 ವರ್ಷದ ಬಾಲಕ ಈ ರೀತಿ ದುರಂತ ಅಂತ್ಯವನ್ನು ಯಾರಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಐಎಎಸ ಅಧಿಕಾರಿಯಾಗಬೇಕು ಎಂದು ಕನಸು ಕಂಡಿದ್ದ ಅಮಿತ್ ಸಿಂಗ್ ದುರಂತ ಅಂತ್ಯ ಗ್ರಾಮಸ್ಥರಿಗೂ ತೀವ್ರ ನೋವು ತರಿಸಿದೆ. ಇಡೀ ಗ್ರಾಮವೇ ಶೋಕಾಚರಣೆಯಲ್ಲಿದೆ.

ದಂಪತಿ ಜಗಳ ಬಿಡಿಸಲು ಬಂದ ಪೊಲೀಸಪ್ಪನೇ ವಿಲನ್, ಪತ್ನಿ ಜೊತೆ ಕಾನ್ಸ್‌ಸ್ಟೇಬಲ್ ಕಳ್ಳಾಟ ಸೆರೆ ಹಿಡಿದ ಪತಿ!