ಏಕಾಏಕಿ ರೌಡಿಗಳು ಮಗನ ಮೇಲೆ ದಾಳಿ ಮಾಡಿದ್ದಾರೆ. ಮಚ್ಚಿನ ದಾಳಿಯಾಗುತ್ತಿದ್ದಂತೆ ಎಚ್ಚೆತ್ತ ತಾಯಿ, ಪಕ್ಕದಲ್ಲಿದ್ದ ಕಲ್ಲು ಎತ್ತಿಕೊಂಡು ರೌಡಿಗಳನ್ನು ಓಡಿಸಿದ ಘಟನೆ ಸೆರೆಯಾಗಿದೆ. 

ಕೋಲ್ಹಾಪುರ(ಆ.19) ತಾಯಿ ಅದೆಂತಾ ಪರಿಸ್ಥಿತಿಯಲ್ಲೂ ಮಕ್ಕಳ ರಕ್ಷಣೆ ಮಾಡುತ್ತಾಳೆ. ಪ್ರಾಣ ಪಣಕ್ಕಿಟ್ಟು ಮಗಳ ಜೀವಕ್ಕೆ ಅಪಾಯ ಬರದಂತೆ ನೋಡಿಕೊಳ್ಳುತ್ತಾಳೆ. ಇದಕ್ಕೆ ಮತ್ತೊಂದು ಘಟನೆ ಸೇರಿಕೊಂಡಿದೆ. ತಾಯಿ ಜೊತೆ ಮಾತನಾಡುತ್ತಿರುವಾಗಲೇ ಮಗನ ಮೇಲೆ ಪುಡಿ ರೌಡಿಗಳು ಮಚ್ಚಿನಿಂದ ದಾಳಿ ಮಾಡಿದ್ದಾರೆ. ಒಂದೇ ಕ್ಷಣದಲ್ಲಿ ತಾಯಿ ಪ್ರತಿಕ್ರಿಯೆಸಿದ್ದಾಳೆ. ಪಕ್ಕದಲ್ಲಿದ್ದ ಕಲ್ಲು ಎತ್ತಿ ಇಬ್ಬರು ರೌಡಿಗಳನ್ನು ಓಡಿಸಿದ ಘಟನೆ ಮಹಾರಾಷ್ಟ್ರದ ಕೋಲ್ಹಾಪುರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೋ ಮಾತ್ರ ಭಾರಿ ವೈರಲ್ ಆಗುತ್ತಿದೆ.

ಈ ವಿಡಿಯೋ ತಾಯಿ ಹಾಗೂ ಮಗನ ಮಾತುಕತೆಯಿಂದ ಆರಂಭಗೊಳ್ಳುತ್ತಿದೆ. ಮಗ ಸ್ಕೂಟರ್ ಮೇಲೆ ಕುಳಿತುಕೊಂಡಿದ್ದರೆ, ಆತನ ತಾಯಿ ಪಕ್ಕದಲ್ಲೇ ನಿಂತುಕೊಂಡಿದ್ದಾರೆ. ಇಬ್ಬರು ಗಂಭೀರ ಚರ್ಚೆಯಲ್ಲಿರುವಾಗಲೇ ಸ್ಕೂಟರ್ ಮೂಲಕ ಇಬ್ಬರು ಪುಟಿ ರೌಡಿಗಳು ಆಗಮಿಸಿದ್ದಾರೆ. ವೇಗವಾಗಿ ಬಂದ ರೌಡಿಗಳು ಸ್ಕೂಟರ್ ಕೆಲವೇ ಅಂತರದಲ್ಲಿ ನಿಲ್ಲಿಸಿ ಅಷ್ಟೇ ವೇಗವಾಗಿ ಇಳಿದು ಬಂದಿದ್ದಾರೆ. 

ಕಣ್ಣೆದುರೇ ಪ್ರೀತಿಯ ಅಪ್ಪನ ಮೇಲೆ ದಾಳಿ: ಆಘಾತದಿಂದ ಕುಸಿದು ಬಿದ್ದ 14 ವರ್ಷದ ಪುತ್ರಿ ಸಾವು!

ತಾಯಿ ಹಾಗೂ ಮಗ ಇರವು ಕಡೆಗೆ ದೌಡಾಯಿಸಿದ ಈ ಪುಡಿ ರೌಡಿಗಳು ಹಿಂಬದಿಯಿಂದ ಮಗನ ಮೇಲೆ ಮಚ್ಚಿನಿಂದ ದಾಳಿ ಮಾಡಿದ್ದಾರೆ. ಈ ದಾಳಿಯಿಂದ ಕೆಲ ದೂರಕ್ಕೆ ಬಿದ್ದ ಮಗನ ಮತ್ತೆ ಏಳುವ ಮುನ್ನ ದಾಳಿ ಮಾಡಲು ಮುಂದಾಗಿದ್ದಾರೆ. ಆದರೆ ಪಕ್ಕದಲ್ಲಿದ್ದ ತಾಯಿ ಕಿರುಚಿಕೊಂಡು ಒಂದೇ ಕ್ಷಣಾರ್ಧದಲ್ಲಿ ಬಿದ್ದಿದ್ದ ಕಲ್ಲುಗಳನ್ನು ಎತ್ತಿಕೊಂಡಿದ್ದಾಳೆ. 

Scroll to load tweet…

ದಾಳಿಗೆ ಮುಂದಾದ ಪುಡಿ ರೌಡಿಗಳ ಮೇಲೆ ಕಲ್ಲಿನಿಂದ ದಾಳಿ ಮಾಡಿದ್ದಾಳೆ. ಅಷ್ಟರಲ್ಲೇ ಮಗ ಎದ್ದು ಬಂದು ಕಲ್ಲಿನ ಮೂಲಕ ಪ್ರತಿ ದಾಳಿ ನಡೆಸಿ ಇಬ್ಬರು ರೌಡಿಗಳನ್ನು ಓಡಿಸಿದ್ದಾರೆ. ಈ ಘಟನೆ ಹಾಡಹಗಲೇ ನಡೆದಿದೆ. ಜನಸಾಮಾನ್ಯರು ನಡೆದಾಡುತ್ತಿದ್ದರೆ, ಇತರ ವಾಹನಗಳು ಇದೇ ರಸ್ತೆ ಮೂಲಕ ಸಾಗುತ್ತಿತ್ತು. ಇದೇ ವೇಳೆ ಈ ದಾಳಿ ನಡೆದಿದೆ. ಈ ಘಟನೆ ನೋಡಿದ ಜನ ಬೆಚ್ಚಿ ಬಿದ್ದಿದ್ದಾರೆ. ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪುಡಿ ರೌಡಿಗಳ ಸ್ಕೂಟರ್ ವಶಕ್ಕೆ ಪಡೆದಿದ್ದಾರೆ ಅನ್ನೋ ಮಾಹಿತಿಗಳು ಕೇಳಿಬರುತ್ತಿದೆ. ಕೋಲ್ಹಾಪುರದ ಜೈಸಿಂಗಪುರದ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿರುವುದು ವರದಿಯಾಗಿದೆ. 

ಮಗನ ಮೇಲಿನ ದಾಳಿಯನ್ನು ತಪ್ಪಿಸಿದ ತಾಯಿ ಜೀವ ಉಳಿಸಿದ್ದಾಳೆ. ತಾಯಿ ಪ್ರೀತಿ, ಕಾಳಜಿಗೆ ಹಿಡಿದ ಕನ್ನಡಿಯಾಗಿದೆ. ಆದರೆ ಈ ಪುಡಿ ರೌಡಿಗಳ ದಾಳಿಗೆ ಕಾರಣವೇನು ಅನ್ನೋದು ಸ್ಪಷ್ಟವಾಗಿಲ್ಲ. 

ಹಸೀನಾ ಮಾತ್ರವಲ್ಲ ಕಿಡಿಗೇಡಿಗಳು ಬಾಂಗ್ಲಾ ಯಶಸ್ವಿ ನಾಯಕ ಮುಶ್ರಫೆ ಮನೆಯನ್ನೂ ಬಿಡಲಿಲ್ಲ!