Asianet Suvarna News Asianet Suvarna News

ದಂಪತಿ ಜಗಳ ಬಿಡಿಸಲು ಬಂದ ಪೊಲೀಸಪ್ಪನೇ ವಿಲನ್, ಪತ್ನಿ ಜೊತೆ ಕಾನ್ಸ್‌ಸ್ಟೇಬಲ್ ಕಳ್ಳಾಟ ಸೆರೆ ಹಿಡಿದ ಪತಿ!

ಗಂಡ ಹೆಂಡತಿ ಜಗಳವನ್ನು ಬಿಡಿಸಲು ಬಂದ ಪೊಲೀಸ್ ಪೇದೆಗೆ ಈ ಮಹಿಳೆ ಜೊತೆಗೆ ಲವ್ವಿ ಡವ್ವಿ ಶುರು ಮಾಡಿದ್ದಾನೆ. ಪತ್ನಿ ಹಾಗೂ ಪೊಲೀಸ್ ಬೆಡ್ ರೂಂನಲ್ಲೇ ಸಿಕ್ಕಿ ಬಿದ್ದಿದ್ದಾರೆ. ಇವರ ವಿಡಿಯೋ ಪೋಸ್ಟ್ ಮಾಡಿದ ಬೆನ್ನಲ್ಲೇ ಪೊಲೀಸ್ ಅಮಾನತ್ತಾಗಿದ್ದಾರೆ.

UP Police constable suspended after husband catch cheating wife and cops in bedroom ckm
Author
First Published Aug 18, 2024, 10:43 PM IST | Last Updated Aug 18, 2024, 10:43 PM IST

ಅಮ್ರೊಹ(ಆ.18) ಪತಿ ಪತ್ನಿ ನಡುವಿನ ಜಗಳ, ಕ್ರೌರ್ಯ, ವಿಚ್ಚೇದನ ಪ್ರಕರಣಗಳ ಸಂಖ್ಯೆ ಇತ್ತೀಚೆಗೆ ಹೆಚ್ಚು. ಹೀಗೆ ದಂಪತಿಗಳಿಬ್ಬರು ಜಗಳವಾಡಿದ್ದಾರೆ. ಈ ಜಗಳ ಬಿಡಿಸಲು ಪೊಲೀಸ್ ಆಗಮಿಸಿದ್ದಾನೆ. ಆದರೆ ದಂಪತಿಗಳ ಜಗಳ ಬಿಡಿಸಿ ಒಂದು ಮಾಡಬೇಕಿದ್ದ ಪೊಲೀಸ್‌, ಮಹಿಳೆ ಜೊತೆಗೆ ಲವ್ವಿ ಡವ್ವಿ ಶುರು ಮಾಡಿದ್ದಾನೆ. ಗಂಡನ ವಿರುದ್ಧ ಕಿಡಿ ಕಾರುತ್ತಿದ್ದ ಮಹಿಳೆ ಜೊತೆಗೆ ಕಳ್ಳಾಟ ಶುರುಮಾಡಿದ ಪೊಲೀಸ್ ರೆಡ್ ಹ್ಯಾಂಡ್ ಆಗಿ ಗಂಡನ ಕೈಗೆ ಸಿಕ್ಕಿಬಿದ್ದಾರೆ. ಬೆಡ್ ರೂಂನಲ್ಲಿರುವಾಗಲೇ ಪತಿ ಆಗಮಿಸಿ ವಿಡಿಯೋ ರೆಕಾರ್ಡ ಮಾಡಿದ್ದಾನೆ. ಬಳಿಕ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾನೆ. ಇಷ್ಟೇ ಅಲ್ಲ ಪೊಲೀಸ್ ಪೇದೆ ಅಮಾನತ್ತಾಗಿದ್ದರೆ, ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹದಲ್ಲಿ ನಡೆದಿದೆ.

ಈ ದಂಪತಿ ಮದುವೆಯಾದ ಕೆಲ ದಿನಗಳಲ್ಲೇ ಜಗಳ ಶುರು ಮಾಡಿದ್ದಾರೆ. ಕೆಲ ತಿಂಗಳ ಕಾಲ ಜಗಳ ಸಣ್ಣ ಮಟ್ಟದಲ್ಲಿತ್ತು. ಬರು ಬರುತ್ತಾ ಈ ಜಗಳ ಜೋರಾಗಿದೆ. ಹೀಗಾಗಿ ಪೊಲೀಸರಿಗೆ ಪತ್ನಿ ದೂರು ನೀಡಿದ್ದಾಳೆ. ಪತ್ನಿಗೆ ಬೇರೆ ಸಂಬಂಧವಿದೆ ಅನ್ನೋದು ಪತಿಯ ಆರೋಪ. ಈ ದಂಪತಿಗಳ ಜಗಳ ಬಿಡಿಸಲು ಪೊಲೀಸ್ ಪೇದೆ ನರೇಶ್ ಕುಮಾರ್ ಆಗಮಿಸಿದ್ದಾನೆ. ಮೊದಲೇ ಪತಿಯಿಂದ ಆಕ್ರೋಶಗೊಂಡ ಪತ್ನಿ, ಇತ್ತ ತಾರಕಕ್ಕೇರಿದ ಜಗಳ. ಈ ಸಂದರ್ಭ ಸದುಪಯೋಗ ಪಡಿಸಿಕೊಂಡ ನರೇಶ್ ಕುಮಾರ್, ಈ ಮಹಿಳೆ ಜೊತೆ ಲವ್ವಿ ಡವ್ವಿ ಶುರು ಮಾಡಿದ್ದಾನೆ.

ಮಹಿಳಾ ಪೊಲೀಸ್ ಜೊತೆ ಇನ್ಸ್‌ಪೆಕ್ಟರ್ ಪತಿಯ ರಾಸಲೀಲೆ ರೆಡ್‌ಹ್ಯಾಂಡ್ ಆಗಿ ಹಿಡಿದ ಪತ್ನಿ, ದೃಶ್ಯ ಸೆರೆ!

ಪತಿಯ ಅನುಮಾನ ಹೆಚ್ಚಾಗಿದೆ. ಇದೇ ವಿಚಾರಕ್ಕಾಗಿ ಜಗಳ ಮತ್ತಷ್ಟು ಜೋರಾಗಿದೆ. ಜಗಳವಾಡಿ ಪತಿ ಹೊರಗೆ ಹೋದ ಬೆನ್ನಲ್ಲೇ ಜಗಳ ಬಿಡಿಸಲು ಇದೇ ಪೊಲೀಸ್ ಪೇದೆ ನರೇಶ್ ಮನೆಯಲ್ಲಿ ಹಾಜರಾಗಿದ್ದಾನೆ. ನೇರವಾಗಿ ಬೆಡ್‌ರೂಂಗೆ ತೆರಳಿದ ಪೊಲೀಸ್ ಹಾಗೂ ಮಹಿಳೆ ಅಸಭ್ಯ ಭಂಗಿಯಲ್ಲಿರುವಾಗಲೇ ಪತಿ ಆಗಮಿಸಿದ್ದಾನೆ. 

ವಿಡಿಯೋ ರೆಕಾರ್ಡ್ ಮಾಡಿದ್ದ ಮಾತ್ರವಲ್ಲ, ಬಾಗಿಲು ಹಾಕಿ ಇಬ್ಬರನ್ನು ಲಾಕ್ ಮಾಡಿದ್ದಾನೆ. ಬಳಿಕ ಇಬ್ಬರಿಗೂ ಮಂಗಳರಾತಿ ಮಾಡಿದ್ದಾನೆ. ಇಷ್ಟೇ ಅಲ್ಲ. ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಉತ್ತರ ಪ್ರದೇಶ ಪೊಲೀಸರಿಗೆ ಟ್ಯಾಗ್ ಮಾಡಲಾಗಿದೆ.ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ಎಲ್ಲೆಡೆ ಹರಿದಾಡಿದೆ. ಯುಪಿ ಪೊಲೀಸರಿಗೆ ತೀವ್ರ ಮುಖಭಂಗವಾಗಿದೆ. ದಂಪತಿಗಳ ಜಗಳ ಬಿಡಿಸಲು ಆಗಮಿಸಿದ ಪೊಲೀಸ್ ಇಲ್ಲಿ ವಿಲನ್ ಅನ್ನೋ ಮಾತುಗಳು ಕೇಳತೊಡಗಿದೆ. 

 

 

ವಿಡಿಯೋ ವೈರಲ್ ಬೆನ್ನಲ್ಲೇ ಉತ್ತರ ಪ್ರದೇಶ ಪೊಲೀಸ್, ಪೇದೆ ನರೇಶ್‌ನನ್ನು ಅಮಾನತ್ತು ಮಾಡಿದ್ದಾರೆ. ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ. 

ಅಕ್ರಮ ಸಂಬಂಧಕ್ಕೆ ಮಕ್ಕಳ ಮುಂದೆ ಮಹಿಳೆ ಮರಕ್ಕೆ ಕಟ್ಟಿ ಕೂದಲು ಕತ್ತರಿಸಿ ಕ್ರೌರ್ಯ, ಇದು ಪಂಚಾಯತ್ ಆಜ್ಞೆ!
 

Latest Videos
Follow Us:
Download App:
  • android
  • ios