Asianet Suvarna News Asianet Suvarna News

ಕೋಟಿಗೊಬ್ಬ ಚಿತ್ರಕ್ಕೆ 4 ಕೋಟಿ ರೂ ವಿಘ್ನ, 100 ಕೋಟಿ ಲಸಿಕೆಗೆ ವಿಶೇಷ ಸಂಭ್ರಮ; ಅ.14ರ ಟಾಪ್ 10 ಸುದ್ದಿ!

ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರಕ್ಕೆ 4 ಕೋಟಿ ರೂಪಾಯಿ ವಿಘ್ನ ಎದುರಾಗಿದೆ. ಹೀಗಾಗಿ ಚಿತ್ರ ಬಿಡಗೆಯಾಗಿಲ್ಲ. ರಾಜೀನಾಮೆಗೆ ಒತ್ತಾಯಿಸಿದ ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಟಾಪ್ ಲೆಸ್ ನಟಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. 100 ಕೋಟಿ ಲಸಿಕೆಗೆ ವಿಶೇಷ ಸಂಭ್ರಮಕ್ಕೆ ಭಾರತ ರೆಡಿ, ಡಾ.ಸಿಂಗ್ ಗುಣಮುಖರಾಗಲು ಹಾರೈಸಿದ ಮೋದಿ ಸೇರಿದಂತೆ ಅಕ್ಟೋಬರ್ 14ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 
Kotigobba 3 release delayed to India vaccination drive top 10 News of October 14 ckm
Author
Bengaluru, First Published Oct 14, 2021, 4:43 PM IST
  • Facebook
  • Twitter
  • Whatsapp

ಮಾಜಿ ಪಿಎಂ ಡಾ. ಸಿಂಗ್ ಅನಾರೋಗ್ಯ, ಬೇಗ ಗುಣಮುಖರಾಗಿ ಎಂದು ಹಾರೈಸಿದ ಮೋದಿ!

Kotigobba 3 release delayed to India vaccination drive top 10 News of October 14 ckm

ಮಾಜಿ ಪ್ರಧಾನಿ ಡಾ.ಮನಮೋಹನ್(Dr. Manmohan Singh) ಸಿಂಗ್ ಅವರ ಆರೋಗ್ಯ ಹದಗೆಟ್ಟಿದೆ. ಜ್ವರ ಮತ್ತು ದೌರ್ಬಲ್ಯದಿಂದಾಗಿ ಅವರನ್ನು ಬುಧವಾರ ದೆಹಲಿಯ ಏಮ್ಸ್ ಗೆ ದಾಖಲಿಸಲಾಗಿದೆ. 88 ವರ್ಷದ ಡಾ.ಸಿಂಗ್ ಅವರಿಗೆ ಏಮ್ಸ್ ನ(AIIMS) ಕಾರ್ಡಿಯೋ ನ್ಯೂರೋ ಟವರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೊಮ್ಮಾಯಿ ರಾಜೀನಾಮೆಗೆ ಸಿದ್ದು ಒತ್ತಾಯ: ನಿಮ್ಮಿಂದ ಕಲಿಯುವ ಅಗತ್ಯ ಇಲ್ಲವೆಂದ ಸಿಎಂ!

Kotigobba 3 release delayed to India vaccination drive top 10 News of October 14 ckm

ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ನೈತಿಕ ಪೊಲೀಸ್‌ಗಿರಿ(Moral Policing) ಬಗ್ಗೆ ನೀಡಿರುವ ಹೇಳಿಕೆ ಸದ್ಯ ಭಾರೀ ಸದ್ದು ಮಾಡುತ್ತಿದೆ.

ಅಡುಗೆ ಎಣ್ಣೆ ಬೆಲೆ ಶೀಘ್ರ 15 ರು. ಇಳಿಕೆ!

Kotigobba 3 release delayed to India vaccination drive top 10 News of October 14 ckm

 ಗಗನಕ್ಕೇರಿರುವ ಕಚ್ಚಾತೈಲ ಬೆಲೆ(Crude Oil) ಇಳಿಕೆ ನಿಟ್ಟಿನಲ್ಲಿ, ಕಚ್ಚಾ ಖಾದ್ಯದ ಮೇಲಿನ ಮೂಲ ಆಮದು ಸುಂಕ ರದ್ದು ಮಾಡುವ, ಸಂಸ್ಕರಿತ ಎಣ್ಣೆಯ ಮೇಲಿನ  ಸೀಮಾ ಸುಂಕ(Customs duty) ಮತ್ತು ಕೃಷಿ ಸೆಸ್‌ ಅನ್ನು ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 

T20 World Cup:ದುಬೈನ ಬುರ್ಜ್ ಖಲೀಫಾದಲ್ಲಿ ಮಿಂಚಿದ ಟೀಂ ಇಂಡಿಯಾ ಜರ್ಸಿ!

Kotigobba 3 release delayed to India vaccination drive top 10 News of October 14 ckm

IPL 2021 ಟೂರ್ನಿ ಅಂತಿಮ ಘಟ್ಟ ತಲುಪಿದೆ. ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್(CSK) ಹಾಗೂ ಕೋಲ್ಕತಾ ನೈಟ್ ರೈಡರ್ಸ್(KKR) ಮುಖಾಮುಖಿಯಾಗುತ್ತಿದೆ. ಇದೀಗ ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಫೈನಲ್(IPL Final) ಜೊತೆಗೆ ಟಿ20 ವಿಶ್ವಕಪ್(t20 World Cup) ಕೌಂಟ್‌ಡೌನ್ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಟಿ20 ವಿಶ್ವಕಪ್ ಟೂರ್ನಿ ಜರ್ಸಿ ದುಬೈನ ಐತಿಹಾಸಿಕ ಬುರ್ಜ್ ಖಲೀಫಾ ಕಟ್ಟದಲ್ಲಿ ಲೈಟಿಂಗ್ ಮೂಲಕ ತೋರಿಸಲಾಗಿದೆ. 

ಡಿಸ್ಟ್ರಿಬ್ಯೂಟರ್ 4 ಕೋಟಿ ಕೈ ಎತ್ತಿದಾನೆ, ಕೋಟಿಗೊಬ್ಬ-3 ರಿಲೀಸ್‌ಗೆ ವಿಘ್ನ

Kotigobba 3 release delayed to India vaccination drive top 10 News of October 14 ckm

:ನಟ ಸುದೀಪ್‌ ಅಭಿನಯದ ‘ಕೋಟಿಗೊಬ್ಬ 3’ ಹಾಗೂ ದುನಿಯಾ ವಿಜಯ್‌ ನಟಿಸಿ ನಿರ್ದೇಸಿಸಿರುವ ‘ಸಲಗ’ ಚಿತ್ರಗಳು ದಸರಾ ಹಬ್ಬದ ಅಂಗವಾಗಿ ರಾಜ್ಯಾದ್ಯಾಂತ ತೆರೆ ಕಾಣಲು ಸಜ್ಜಾಗಿತ್ತು. ಕಾರಣಾಂತರದಿಂದ ಕೋಟಿಗೊಬ್ಬ-3 ರಿಲೀಸ್  ಆಗುತ್ತಿಲ್ಲ.  ಇಬ್ಬರು ಸ್ಟಾರ್‌ ನಟರ ಎರಡು ಬಿಗ್‌ ಬಜೆಟ್‌ನ ದೊಡ್ಡ ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿತ್ತು

ಆಲಿಯಾ ರಣಬೀರ್‌ಗಿಂತ ಹೆಚ್ಚು ಟ್ಯಾಲೆಂಟೆಡ್‌? ಗರ್ಲ್‌ಫ್ರೆಂಡ್‌ ಬಗ್ಗೆ ನಟ ಏನು ಭಾವಿಸುತ್ತಾರೆ?

Kotigobba 3 release delayed to India vaccination drive top 10 News of October 14 ckm

ಆಲಿಯಾ ಭಟ್‌ (Alia Bhatt) ಹಾಗೂ ರಣಬೀರ್‌ ಕಪೂರ್‌ (Ranbir Kapoor)ಬಾಲಿವುಡ್‌ನ (Bollywood)ಮೊಸ್ಟ್‌ ಫೇಮಸ್‌ ಯಂಗ್‌ ಕಪಲ್‌ಗಳು. ಬಹಳ ಸಮಯದಿಂದ ಡೇಟಿಂಗ್‌ ಮಾಡುತ್ತಿರುವ ಈ ಸ್ಟಾರ್ಸ್‌ ಶೀಘ್ರದಲ್ಲೇ ಹಸೆಮಣೆ ಏರಲು ತಯಾರಿ ನೆಡೆಸುತ್ತಿದ್ದಾರೆ ಎನ್ನಲಾಗಲಿದೆ. ರಣಬೀರ್ ಕಪೂರ್ ಒಮ್ಮೆ ತನ್ನ ಗರ್ಲ್‌ಫ್ರೆಂಡ್‌ ಆಲಿಯಾ ಭಟ್ ಒಬ್ಬ Over Acheiver ಎಂದು ಹೇಳಿದ್ದರು,  ಆಲಿಯಾ ಭಟ್ ರಣಬೀರ್ ಕಪೂರ್ ಗಿಂತ ಹೆಚ್ಚು  ಟ್ಯಾಲೆಂಟೆಡಾ? ಇಲ್ಲಿದೆ ವಿವರ.

ಟಾಪ್‌ಲೆಸ್‌ ಫೋಟೋ‌: ನಟಿಯ ತರಾಟೆ ತೆಗೆದುಕೊಂಡ ನೆಟ್ಟಿಗರು

Kotigobba 3 release delayed to India vaccination drive top 10 News of October 14 ckm

Bollywood ನಟಿ ಇಶಾ ಗುಪ್ತಾ (Esha Gupta)  Instagram ನಲ್ಲಿ ತಮ್ಮ ಟಾಪ್ ಲೆಸ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ ಹಾಘೂ ಸೋಶಿಯಲ್‌ ಮಿಡೀಯಾದಲ್ಲಿ ಬಾರೀ ಚರ್ಚೆಯಾಗುತ್ತಿದೆ. ನೆಟ್ಟಿಗ್ಗರು ನಟಿಯನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡುತ್ತಿದ್ದಾರೆ. ಅನೇಕರು ಅಸಭ್ಯವಾದ ಕಾಮೆಂಟ್‌  ಸಹ ಮಾಡಿದ್ದಾರೆ

100 ಕೋಟಿ ಲಸಿಕೆಗೆ ವಿಶೇಷ ಸಂಭ್ರಮ: ದೇಶವನ್ನುದ್ದೇಶಿಸಿ ಮೋದಿ ಭಾಷಣ ಸಾಧ್ಯತೆ?

Kotigobba 3 release delayed to India vaccination drive top 10 News of October 14 ckm

ದೇಶದಲ್ಲಿ ಕೋವಿಡ್‌ ಲಸಿಕೆ(Covid 19 Vaccine) ವಿತರಣೆ 100 ಕೋಟಿ ದಾಟಿದ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಲು ಕೇಂದ್ರ ಆರೋಗ್ಯ ಸಚಿವಾಲಯ(Health Ministry) ಸಿದ್ಧತೆ ನಡೆಸಿದೆ. ಬುಧವಾರದವರೆಗೆ ದೇಶಾದ್ಯಂತ 96.75 ಕೋಟಿ ಜನರಿಗೆ ಕೋವಿಡ್‌ ಲಸಿಕೆ ವಿತರಿಸಲಾಗಿದೆ. ಈಗ ದೈನಂದಿನ ನೀಡುತ್ತಿರುವ ಲೆಕ್ಕಾಚಾರವೇ ಮುಂದುವರೆದರೆ ಮುಂದಿನ ಸೋಮವಾರ ಅಥವಾ ಮಂಗಳವಾರದ ವೇಳೆಗೆ ದೇಶದಲ್ಲಿ 100 ಕೋಟಿ ಡೋಸ್‌ ಲಸಿಕೆ ವಿತರಣೆಯ ದಾಖಲೆ ನಿರ್ಮಾಣವಾಗುವ ಸಾಧ್ಯತೆ ಇದೆ.
 
Follow Us:
Download App:
  • android
  • ios