Asianet Suvarna News Asianet Suvarna News

T20 World Cup:ದುಬೈನ ಬುರ್ಜ್ ಖಲೀಫಾದಲ್ಲಿ ಮಿಂಚಿದ ಟೀಂ ಇಂಡಿಯಾ ಜರ್ಸಿ!

  • ವಿಶ್ವದ ಅತೀ ಎತ್ತರದ  ಬುರ್ಜ ಖಲೀಫಾ ಕಟ್ಟದಲ್ಲಿ ಜರ್ಸಿ
  • ಭಾರತ ತಂಡದ ಟಿ20 ವಿಶ್ವಕಪ್ ಟೂರ್ನಿ ಜರ್ಸಿ ಅನಾವರಣ
  • ಲೈಟಿಂಗ್ ಮೂಲಕ ಐತಿಹಾಸಿಕ ಖಲೀಫಾ ಕಟ್ಟದ ಮೇಲೆ ಜರ್ಸಿ
     
Team India t20 World Cup jersey unveil with a projection on the iconic Burj Khalifa ckm
Author
Bengaluru, First Published Oct 14, 2021, 3:49 PM IST

ದುಬೈ(ಅ.14): IPL 2021 ಟೂರ್ನಿ ಅಂತಿಮ ಘಟ್ಟ ತಲುಪಿದೆ. ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್(CSK) ಹಾಗೂ ಕೋಲ್ಕತಾ ನೈಟ್ ರೈಡರ್ಸ್(KKR) ಮುಖಾಮುಖಿಯಾಗುತ್ತಿದೆ. ಇದೀಗ ಕ್ರಿಕೆಟ್ ಅಭಿಮಾನಿಗಳು ಐಪಿಎಲ್ ಫೈನಲ್(IPL Final) ಜೊತೆಗೆ ಟಿ20 ವಿಶ್ವಕಪ್(t20 World Cup) ಕೌಂಟ್‌ಡೌನ್ ಆರಂಭಿಸಿದ್ದಾರೆ. ಇದರ ಬೆನ್ನಲ್ಲೇ ಟೀಂ ಇಂಡಿಯಾ ಟಿ20 ವಿಶ್ವಕಪ್ ಟೂರ್ನಿ ಜರ್ಸಿ ದುಬೈನ ಐತಿಹಾಸಿಕ ಬುರ್ಜ್ ಖಲೀಫಾ ಕಟ್ಟದಲ್ಲಿ ಲೈಟಿಂಗ್ ಮೂಲಕ ತೋರಿಸಲಾಗಿದೆ. 

 

T20 World Cup: ಅಕ್ಷರ್ ಪಟೇಲ್‌ ಬದಲಿಗೆ ಟೀಂ ಇಂಡಿಯಾಗೆ ಸ್ಟಾರ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಎಂಟ್ರಿ..!

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾಗೆ ಅಧಿಕೃತ ಕಿಟ್ ಪ್ರಾಯೋಜಕತ್ವದ ಜವಾಬ್ದಾರಿ MPL ಹೊತ್ತುಕೊಂಡಿದೆ. ಇದೀಗ MPL ಬುರ್ಜ್ ಖಲೀಫಾದಲ್ಲಿ(Burj Khalifa) ಟೀಂ ಇಂಡಿಯಾ ಜರ್ಸಿಯನ್ನು(Team India jersey) ಲೈಟಿಂಗ್ ಮೂಲಕ ಹಾಕಲಾಗಿದೆ. ಈ ಮೂಲಕ ಅದ್ಧೂರಿಯಾಗಿ ಟೀಂ ಇಂಡಿಯಾ ಜರ್ಸಿ ಅನಾವರಣಗೊಂಡಿದೆ.

ಇದೇ ಮೊದಲ ಬಾರಿಗೆ ಬುರ್ಜ ಖಲೀಫಾದಲ್ಲಿ ಟೀಂ ಇಂಡಿಯಾ ಜರ್ಸಿ ಲೈಟಿಂಗ್ ಮೂಲಕ ನೀಡಲಾಗಿದೆ. ಬುಧವಾರ(ಅ.13) ಬಿಸಿಸಿಐ(BCCI) ಜರ್ಸಿ ಅನಾವರಣ ಮಾಡಿತ್ತು. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸೇರಿದಂತೆ ಹಲವು ಸಂದರ್ಭಗಳಲ್ಲಿ ಬುರ್ಜ್ ಖಲೀಫಾ ಲೈಟ್ ಮೂಲಕ ಭಾರತಕ್ಕೆ ಗೌರವ ಸೂಚಿಸಿದೆ. ಕೆಲ ಸಂದರ್ಭಗಳಲ್ಲಿ ಭಾರತದ ಗಣ್ಯರ ಫೋಟೋವನ್ನು ಅವರಿಗೆ ಶುಭಕೋರಲು ಲೈಟಿಂಗ್ ಪ್ರದರ್ಶನ ನೀಡಿದೆ. ಇದೀಗ ಈ ಸಾಲಿಗೆ ಟೀಂ ಇಂಡಿಯಾ ಜರ್ಸಿ ಕೂಡ ಸೇರಿಕೊಂಡಿದೆ.

T20 World Cup ಟೂರ್ನಿಗೆ ಟೀಂ ಇಂಡಿಯಾ ಹೊಸ ಜೆರ್ಸಿ ಅನಾವರಣ..!

ಟೀಂ ಇಂಡಿಯಾ ಹೊಸ ಜರ್ಸಿಗೆ ಬಿಲಿಯನ್ ಚೀಯರ್ಸ್ ಜರ್ಸಿ ಎಂದು ಬಿಸಿಸಿಐ ಕರೆದಿದೆ. ಬುರ್ಜ್ ಖಲೀಫಾ ಲೈಟಿಂಗ್ ಮೂಲದ ಟೀಂ ಇಂಡಿಯಾ ಜರ್ಸಿ ಅನಾವರಣ ಇದೀಗ ವಿಶ್ವಮಟ್ಟದಲ್ಲಿ ಭಾರಿ ಸದ್ದು ಮಾಡಿದೆ. 

ಈ ಬಾರಿ ಟಿ20 ವಿಶ್ವಕಪ್ 2021 ಟೂರ್ನಿ ಯುಎಇ ಹಾಗೂ ಒಮನ್‌ನಲ್ಲಿ ಆಯೋಜನೆಗೊಳ್ಳುತ್ತಿದೆ. ಅಕ್ಟೋಬರ್ 17 ರಿಂದ ಟಿ20 ವಿಶ್ವಕಪ್ ಟೂರ್ನಿ ಆಯೋಜನೆಯಾಗುತ್ತಿದೆ. ನವೆಂಬರ್ 14ರ ಫೈನಲ್ ಪಂದ್ಯದೊಂದಿಗೆ ಟೂರ್ನಿ ಅಂತ್ಯಗೊಳ್ಳಲಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಬದ್ಧವೈರಿ ಪಾಕಿಸ್ತಾನ ವಿರುದ್ದ ಆಡಲಿದೆ.

 

ಆಕ್ಟೋಬರ್ 24 ರಂದು ಭಾರತ ಹಾಗೂ ಪಾಕಿಸ್ತಾನ ತಂಡ ದುಬೈ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿದೆ. ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅತ್ತ ಪಾಕಿಸ್ತಾನ ಕ್ರಿಕೆಟಿಗರು, ಈಗಾಗಲೇ ಟೀಂ ಇಂಡಿಯಾ ಸೋಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತ ಮಣಿಸಿದರೆ ಭರ್ಜರಿ ಬಹುಮಾನ ನೀಡುವುದಾಗಿ ಘೋಷಿಸಿದೆ. ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ, ಆಟಗಾರರಿಗೆ ಬ್ಲಾಂಕ್ ಚೆಕ್ ರೆಡಿ ಇದೆ ಎಂದಿದ್ದಾರೆ.
 

Follow Us:
Download App:
  • android
  • ios