ಆಲಿಯಾ ರಣಬೀರ್‌ಗಿಂತ ಹೆಚ್ಚು ಟ್ಯಾಲೆಂಟೆಡ್? ಗರ್ಲ್‌ಫ್ರೆಂಡ್ ಬಗ್ಗೆ ನಟ ಏನು ಭಾವಿಸುತ್ತಾರೆ?
ಆಲಿಯಾ ಭಟ್ (Alia Bhatt) ಹಾಗೂ ರಣಬೀರ್ ಕಪೂರ್ (Ranbir Kapoor)ಬಾಲಿವುಡ್‌ನ (Bollywood)ಮೊಸ್ಟ್ ಫೇಮಸ್ ಯಂಗ್ ಕಪಲ್‌ಗಳು. ಬಹಳ ಸಮಯದಿಂದ ಡೇಟಿಂಗ್ ಮಾಡುತ್ತಿರುವ ಈ ಸ್ಟಾರ್ಸ್ ಶೀಘ್ರದಲ್ಲೇ ಹಸೆಮಣೆ ಏರಲು ತಯಾರಿ ನೆಡೆಸುತ್ತಿದ್ದಾರೆ ಎನ್ನಲಾಗಲಿದೆ. ರಣಬೀರ್ ಕಪೂರ್ ಒಮ್ಮೆ ತನ್ನ ಗರ್ಲ್‌ಫ್ರೆಂಡ್ ಆಲಿಯಾ ಭಟ್ ಒಬ್ಬ Over Acheiver ಎಂದು ಹೇಳಿದ್ದರು, ಆಲಿಯಾ ಭಟ್ ರಣಬೀರ್ ಕಪೂರ್ ಗಿಂತ ಹೆಚ್ಚು ಟ್ಯಾಲೆಂಟೆಡಾ? ಇಲ್ಲಿದೆ ವಿವರ.
ಆಲಿಯಾ ಭಟ್ ಯಾವಾಗಲೂ ರಣಬೀರ್ ಕಪೂರ್ ಅವರನ್ನು ಹೊಗಳುವುದು ಕಂಡುಬರುತ್ತದೆ. ಆದರೆ ಕೆಲವು ತಿಂಗಳುಗಳ ಹಿಂದೆ ರಾಜೀವ್ ಮಸಂದ್ ಅವರ ಸಂದರ್ಶನದಲ್ಲಿ ರಣಬೀರ್ ಕಪೂರ್ ಅಪರೂಪಕ್ಕೊಮ್ಮೆ ಆಲಿಯಾ ಭಟ್ ಬಗ್ಗೆ ಮಾತನಾಡುತ್ತಿದ್ದರು.
ಇಂಟರ್‌ವ್ಯೂವ್‌ನಲ್ಲಿ ರಣಬೀರ್ ಆಲಿಯಾರನ್ನು ತಮ್ಮ 'ಗರ್ಲ್ ಫ್ರೆಂಡ್ ' ಎಂದು ಸಂಬೋಧಿಸಿದರು. ರಣಬೀರ್ ಕಪೂರ್ ರಾಜೀವ್ ಮಸಂದ್ ಅವರ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಬಹಿರಂಗಪಡಿಸಿದರು.
ರಣಬೀರ್ ಸಂದರ್ಶನದಲ್ಲಿ,ಕೊರೋನಾ ವೈರಸ್ ಇಲ್ಲದಿದ್ದರೆ ಇಷ್ಟರಲ್ಲಿ ತನ್ನ ಗೆಳತಿ ಆಲಿಯಾ ಭಟ್ ಅವರನ್ನು ಮದುವೆಯಾಗುತ್ತಿದ್ದೆ ಎಂದು ಹೇಳಿದರು. ರಣಬೀರ್ ಕಪೂರ್ ಆಲಿಯಾರನ್ನು ತನ್ನ ಗೆಳತಿ ಎಂದು ಸಂಬೋಧಿಸಿದ್ದು ಇದೇ ಮೊದಲು.
ಸಂದರ್ಶನದಲ್ಲಿ ಅವರ ವೈಯಕ್ತಿಕ ಗುರಿಗಳ ಬಗ್ಗೆ ಕೇಳಿದಾಗ, ಅದು ಮದುವೆ ಎಂದು ಅವರು ಹೇಳಿದರು ಮತ್ತು ಸಾಂಕ್ರಾಮಿಕ ರೋಗವು ನಮ್ಮ ಜೀವನಕ್ಕೆ ಬರದಿದ್ದರೆ ಅದು ಈಗಾಗಲೇ ಆಗುತ್ತಿತ್ತು ಎಂದು ರಣಬೀರ್ ಹೇಳಿದರು.
ರಣಬೀರ್ ತನ್ನ ಲಾಕ್‌ಡೌನ್ ಅನ್ನು ಹೇಗೆ ಕಳೆದರು ಎಂದು ಕೇಳಿದಾಗ, ನಟ ತನ್ನ ಗೆಳತಿ ಆಲಿಯಾ ಭಟ್ ಒಬ್ಬ overachiever ಎಂದು ಹೇಳಿದರು. ಅವಳು ಬಹುಶಃ ಗಿಟಾರ್‌ನಿಂದ ಹಿಡಿದು ಸ್ಕ್ರೀನ್ ರೈಟಿಂಗ್ ವರೆಗಿನ ಪ್ರತಿಯೊಂದು ಆನ್‌ಲೈನ್ ತರಗತಿ ತೆಗೆದುಕೊಂಡಿದ್ದಳು. ಯಾವಾಗಲೂ ಅವಳ ಪಕ್ಕದಲ್ಲಿ ನಾನು underachiever ಭಾವಿಸುತ್ತೇನೆ ಎಂದು ನಟ ಹೇಳಿದರು.
ರಣಬೀರ್ ಅವರ 39 ನೇ ಹುಟ್ಟುಹಬ್ಬ ಆಚರಿಸಲು ಅಲಿಯಾ ಭಟ್ ರಣಬೀರ್ ಕಪೂರ್ ರಾಜಸ್ಥಾನದಲ್ಲಿದ್ದರು. ಆಲಿಯಾ ಭಟ್ ತನ್ನ ಇನ್‌ಸ್ಟಾಗ್ರಾಮ್ ಫೇಜ್‌ನಲ್ಲಿ ಹಂಚಿಕೊಂಡ ಫೋಟೋದಲ್ಲಿ ಈ ಜೋಡಿ ತುಂಬಾ ಸುಂದರವಾಗಿ ಕಾಣುತ್ತಾರೆ.
ಕೆಲಸದ ಮುಂಭಾಗದಲ್ಲಿ, ರಣಬೀರ್ ಕಪೂರ್ ಯಶ್ ರಾಜ್ ಫಿಲ್ಮ್ಸ್‌ನ ಶಂಶೇರಾ ಮತ್ತು ಅಯಾನ್ ಮುಖರ್ಜಿಯ ಬ್ರಹ್ಮಾಸ್ತ್ರ ಸಿನಿಮಾವನ್ನು ಹೊಂದಿದ್ದಾರೆ, ಬ್ರಹ್ಮಾಸ್ತ್ರದಲ್ಲಿ ಅವರು ಆಲಿಯಾ ಭಟ್ ಜೊತೆ ನಟಿಸಲಿದ್ದಾರೆ. ಆಲಿಯಾ ಭಟ್ ತನ್ನ ಆಕೌಂಟ್‌ನಲ್ಲಿ ಅನೇಕ ದೊಡ್ಡ-ಬಜೆಟ್ ಚಿತ್ರಗಳನ್ನು ಹೊಂದಿದ್ದಾರೆ. ಅವರು ಡಾರ್ಲಿಂಗ್ಸ್,RRR,ಗಂಗೂಬಾಯಿ ಕಾಥಿಯಾವಾಡಿ ಮತ್ತು ಮುಂತಾದ ಸಿನಿಮಾಗಳಲ್ಲಿ ನಟಿಸಲಿದ್ದಾರೆ.