Asianet Suvarna News Asianet Suvarna News

100 ಕೋಟಿ ಲಸಿಕೆಗೆ ವಿಶೇಷ ಸಂಭ್ರಮ: ದೇಶವನ್ನುದ್ದೇಶಿಸಿ ಮೋದಿ ಭಾಷಣ ಸಾಧ್ಯತೆ?

* ದೇಶಾದ್ಯಂತ ಕಾರ್ಯಕ್ರಮ ಆಯೋಜನೆಗೆ ಸರ್ಕಾರದ ಸಿದ್ಧತೆ

* 100 ಕೋಟಿ ಲಸಿಕೆಗೆ ವಿಶೇಷ ಸಂಭ್ರಮ

* ದೇಶವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಸಾಧ್ಯತೆ

Centre Plans Outreach To Mark 100 Crore Jabs Focus On Poll Bound States pod
Author
Bangalore, First Published Oct 14, 2021, 7:36 AM IST
  • Facebook
  • Twitter
  • Whatsapp

ನವದೆಹಲಿ(ಅ.14): ದೇಶದಲ್ಲಿ ಕೋವಿಡ್‌ ಲಸಿಕೆ(Covid 19 Vaccine) ವಿತರಣೆ 100 ಕೋಟಿ ದಾಟಿದ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಲು ಕೇಂದ್ರ ಆರೋಗ್ಯ ಸಚಿವಾಲಯ(Health Ministry) ಸಿದ್ಧತೆ ನಡೆಸಿದೆ. ಬುಧವಾರದವರೆಗೆ ದೇಶಾದ್ಯಂತ 96.75 ಕೋಟಿ ಜನರಿಗೆ ಕೋವಿಡ್‌ ಲಸಿಕೆ ವಿತರಿಸಲಾಗಿದೆ. ಈಗ ದೈನಂದಿನ ನೀಡುತ್ತಿರುವ ಲೆಕ್ಕಾಚಾರವೇ ಮುಂದುವರೆದರೆ ಮುಂದಿನ ಸೋಮವಾರ ಅಥವಾ ಮಂಗಳವಾರದ ವೇಳೆಗೆ ದೇಶದಲ್ಲಿ 100 ಕೋಟಿ ಡೋಸ್‌ ಲಸಿಕೆ ವಿತರಣೆಯ ದಾಖಲೆ ನಿರ್ಮಾಣವಾಗುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ(narendra Modi) ಅವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಭಾಷಣದಲ್ಲಿ ಅವರು ಪ್ರಮುಖವಾಗಿ ಕೋವಿಡ್‌ ಲಸಿಕೆ ಅಭಿವೃದ್ಧಿಪಡಿಸಿದ ಸಂಸ್ಥೆಗಳು, ಲಸಿಕೆ ವಿತರಣೆಯಲ್ಲಿ ನೆರವಾದ ಆರೋಗ್ಯ ಕಾರ್ಯಕರ್ತರು(Health Workers), ವೈದ್ಯಕೀಯ ಸಿಬ್ಬಂದಿ ಮತ್ತು ಲಸಿಕೆ ಪಡೆದ ಜನರನ್ನು ಸ್ಮರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಇದರ ಜೊತೆಗೆ ಕೇಂದ್ರ ಆರೋಗ್ಯ ಸಚಿವಾಲಯವು ದೇಶಾದ್ಯಂತ ನಾನಾ ರೀತಿಯ ಕಾರ್ಯಕ್ರಮ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ. ಅದರಲ್ಲಿ ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡ ಕಾರ್ಯಕ್ರಮ ಆಯೋಜನೆ ಬಗ್ಗೆ ಚಿಂತನೆ ನಡೆಸಿದೆ. ಜೊತೆಗೆ ಕೋವಿಡ್‌ ವಿರುದ್ಧ ಹೋರಾಟದಲ್ಲಿ ಮಡಿದ ಕೋವಿಡ್‌ ವಾರಿಯ​ರ್‍ಸ್ಗಳನ್ನು ಹೇಗೆ ಗೌರವಿಸಬಹುದು ಎಂಬುದರ ಬಗ್ಗೆ ಸಲಹೆ ಕೊಡಿ ಎಂದು ಸಚಿವಾಲಯದ ಅಧಿಕಾರಿಗಳಿಗೆ ಕೇಂದ್ರ ಆರೋಗ್ಯ ಖಾತೆ ಸಚಿವ ಮನ್ಸುಖ ಮಾಂಡವೀಯ ಸೂಚಿಸಿದ್ದಾರೆ.

ಜೊತೆಗೆ ಅಂದಿನ ಕಾರ್ಯಕ್ರಮದಲ್ಲಿ ಕೋವಿಡ್‌ ವಾರಿಯರ್‌ಗಳ ಹೋರಾಟವನ್ನು ಗುರುತಿಸುವ ಸಲುವಾಗಿ ಅವರಿಗೆ ವಿಶೇಷ ಗೌರವ ನೀಡುವ ಕುರಿತು ಸರ್ಕಾರ ಘೋಷಣೆಯೊಂದನ್ನು ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಮತ್ತೊಂದೆಡೆ ಆಡಳಿತಾರೂಡ ಬಿಜೆಪಿಯ ಕಾರ್ಯಕರ್ತರು ದೇಶಾದ್ಯಂತ 100 ಕೋಟಿ ಲಸಿಕೆ ವಿತರಣೆಯನ್ನು ಸಂಭ್ರಮಾಚರಣೆ ರೂಪದಲ್ಲಿ ಆಚರಿಸಲು ನಿರ್ಧರಿಸಿದ್ದಾರೆ. ಅಲ್ಲದೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಗೌರವಿಸುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಾಧ್ಯತೆ ಇದೆ.

Follow Us:
Download App:
  • android
  • ios