Asianet Suvarna News Asianet Suvarna News

ಮಾಜಿ ಪಿಎಂ ಡಾ. ಸಿಂಗ್ ಅನಾರೋಗ್ಯ, ಬೇಗ ಗುಣಮುಖರಾಗಿ ಎಂದು ಹಾರೈಸಿದ ಮೋದಿ!

* ಮಾಜಿ ಪಿಎಂ ಮನಮೋಹನ್ ಸಿಂಗ್‌ಗೆ ಅನಾರೋಗ್ಯ

* ಏಮ್ಸ್ ಆಸ್ಪತ್ಎಗೆ ದಾಖಲಾದ ಡಾ. ಸಿಂಗ್

* ಶೀಘ್ರ ಗುಣಮುಖರಾಗಿ ಎಂದ ಪಿಎಂ ಮೋದಿ

PM Wishes Speedy Recovery For Manmohan Singh, In Hospital With Fever pod
Author
Bangalore, First Published Oct 14, 2021, 3:25 PM IST

ನವದೆಹಲಿ(ಅ.14): ಮಾಜಿ ಪ್ರಧಾನಿ ಡಾ.ಮನಮೋಹನ್(Dr. Manmohan Singh) ಸಿಂಗ್ ಅವರ ಆರೋಗ್ಯ ಹದಗೆಟ್ಟಿದೆ. ಜ್ವರ ಮತ್ತು ದೌರ್ಬಲ್ಯದಿಂದಾಗಿ ಅವರನ್ನು ಬುಧವಾರ ದೆಹಲಿಯ ಏಮ್ಸ್ ಗೆ ದಾಖಲಿಸಲಾಗಿದೆ. 88 ವರ್ಷದ ಡಾ.ಸಿಂಗ್ ಅವರಿಗೆ ಏಮ್ಸ್ ನ(AIIMS) ಕಾರ್ಡಿಯೋ ನ್ಯೂರೋ ಟವರ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೀಗಿರುವಾಗ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ(mansukh Mandaviya) ಏಮ್ಸ್‌ಗೆ ಭೇಟಿ ನೀಡಿ ಡಾ. ಸಿಂಗ್ ಭೇಟಿಯಾಗಿದ್ದಾರೆ. ಇದೇ ವೇಳೆ ಅವರಿಗೆ ಚಿಕಿತ್ಸೆ ನೀಡುವ ವೈದ್ಯರೊಂದಿಗೂ ಚರ್ಚೆ ನಡೆಸಿದ್ದಾರೆ. ಸದ್ಯ ಅವರ ಸ್ಥಿತಿ ಸ್ಥಿರವಾಗಿದ್ದು, ಅವರಿಗೆ ದ್ರವ ಆಹಾರವನ್ನು ನೀಡಲಾಗುತ್ತಿದೆ.

ಮೋದಿ ಟ್ವೀಟ್

ಇನ್ನು ಇತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ(Narendra Modi) ಟ್ವೀಟ್ ಮಾಡಿ ಮನಮೋಹನ್ ಸಿಂಗ್ ಶೀಘ್ರವಾಗಿ ಚೇತರಿಸಿಕೊಳ್ಳುವಂತೆ ಹಾರೈಸಿದ್ದು, ಡಾ. ಮನಮೋಹನ್ ಸಿಂಗ್‌ರವರ ಉತ್ತಮ ಆರೋಗ್ಯ, ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತೇನೆ ಎಂದು ಬರೆದಿದ್ದಾರೆ.

ಡಾ.ಸಿಂಗ್ ಪರೀಕ್ಷಿಸಲು ವೈದ್ಯಕೀಯ ಮಂಡಳಿಯ ರಚನೆ

ಮನಮೋಹನ್ ಅವರನ್ನು ಪರೀಕ್ಷಿಸಲು ದೆಹಲಿ ಏಮ್ಸ್ ನಲ್ಲಿ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿದೆ. ಇದನ್ನು ನಿರ್ದೇಶಕ ರಣದೀಪ್ ಗುಲೇರಿಯಾ ಮುನ್ನಡೆಸುತ್ತಿದ್ದಾರೆ. ಮನಮೋಹನ್ ಸಿಂಗ್‌ರವರು ನರರೋಗ ವೈದ್ಯ ಅಚಲ್ ಶ್ರೀವಾಸ್ತವ ಮತ್ತು ಹೃದಯ ವೈದ್ಯ ನಿತೀಶ್ ನಾಯಕ್ ನಿಗಾದಲ್ಲಿದ್ದಾರೆ.

ಏಪ್ರಿಲ್‌ನಲ್ಲಿ ಕೊರೋನಾ ಸೋಂಕು

ಮನಮೋಹನ್ ಸಿಂಗ್ ಅವರು ಏಪ್ರಿಲ್ 19 ರಂದು ಕರೋನಾ ಸೋಂಕಿಗೆ ಒಳಗಾದರು. ಆಗಲೂ ಅವರನ್ನು ಏಮ್ಸ್ ಗೆ ಸೇರಿಸಲಾಗಿತ್ತು. 10 ದಿನಗಳ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಇದಾದ ಬಳಿಕ ಮಾರ್ಚ್ 4 ಮತ್ತು ಏಪ್ರಿಲ್ 3 ರಂದು ಕೋವಿಡ್ ಲಸಿಕೆಯನ್ನು ತೆಗೆದುಕೊಂಡಿದ್ದರು.

ಎರಡು ಬೈಪಾಸ್ ಸರ್ಜರಿ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ಗೆ ಈವರೆಗೆ ಒಟ್ಟು ಎರಡು ಬೈಪಾಸ್ ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿದೆ. 1990 ರಲ್ಲಿ ಯುಕೆಯಲ್ಲಿ ಒಂದು ಸರ್ಜರಿ ನಡೆದಿದ್ದರೆ, 2009 ರಲ್ಲಿ ಏಮ್ಸ್ ನಲ್ಲಿ ಎರಡನೇ ಬಾರಿ ಬೈಪಾಸ್ ಸರ್ಜರಿ ನಡೆದಿತ್ತು.

2004 ರಿಂದ 14 ರವರೆಗೆ ಪ್ರಧಾನ ಮಂತ್ರಿ

ಮನಮೋಹನ್ ಸಿಂಗ್ ಪ್ರಸ್ತುತ ರಾಜಸ್ಥಾನದ ರಾಜ್ಯಸಭಾ ಸದಸ್ಯರಾಗಿದ್ದಾರೆ ಎಂಬುವುದು ಉಲ್ಲೇಖನೀಯ. ಅವರು 2004 ರಿಂದ 2014 ರವರೆಗೆ ದೇಶದ ಪ್ರಧಾನಿಯಾಗಿದ್ದರು. ಅವರು ದೇಶದ ಹೆಸರಾಂತ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರು. ಡಾ. ಮನಮೋಹನ್ ಸಿಂಗ್, ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್, ದೇಶದ ಹಣಕಾಸು ಮಂತ್ರಿಯೂ ಆಗಿದ್ದಾರೆ.

Follow Us:
Download App:
  • android
  • ios