11:46 PM (IST) Mar 17

ಬಿಡುಗಡೆಯಾಗಿದೆ Xiaomi 15 ಸೀರೀಸ್, ಮಾ.19ಕ್ಕೆ ಪ್ರಿ ಬುಕ್ ಮಾಡಿದರೆ ಭರ್ಜರಿ ಆಫರ್

ಶಓಮಿ 15 ಸೀರೀಸ್ ಬಿಡುಗಡೆಯಾಗಿದೆ. ಸುಧಾರಿತ ಕ್ಯಾಮರಾ ಸ್ಮಾರ್ಟ್ ಫೋನ್ ಪ್ರೀ ಬುಕ್ ಮಾಡಿದರೆ, ಉಚಿತ ಲೆಜೆಂಡ್ ಎಡಿಷನ್ ಫೋಟೋಗ್ರಫಿ ಕಿಟ್ ಸೇರಿದಂತೆ ₹21,999 ಮೌಲ್ಯದ ಪ್ರಯೋಜನ, 10,999 ಮೌಲ್ಯದ ಆಫರ್ ಸೇರಿದಂತೆ ಹಲವು ಪ್ರಯೋಜನ ನಿಮ್ಮದಾಗಲಿದೆ.

ಪೂರ್ತಿ ಓದಿ
11:11 PM (IST) Mar 17

ಕ್ಯಾನ್ಸರ್‌ಗೆ ತುತ್ತಾಗಿದ್ದೇನೆಂದು ಲವರ್‌ನಿಂದ 28 ಲಕ್ಷ ರೂ ಪೀಕಿ ಬ್ರೆಸ್ಟ್ ಸೈಝ್ ಸರ್ಜರಿ ಮಾಡಿಸಿದ ಚಾಲಕಿ

ಗರ್ಭಕಂಠ ಕ್ಯಾನ್ಸರ್ ಹಾಗೂ ಓವರಿಯನ್ ಕ್ಯಾನ್ಸರ್‌ಗೆ ತುತ್ತಾಗಿದ್ದೇನೆ. ಕೀಮೋ ಸೇರಿದಂತೆ ಒಂದಷ್ಟು ಚಿಕಿತ್ಸೆ ಪಡೆಯಬೇಕಿದೆ ಎಂದು ಬಾಯ್‌ಫ್ರೆಂಡ್‌ನಿಂದ ಬರೋಬ್ಬಬರಿ 28 ಲಕ್ಷ ರೂಪಾಯಿ ಪೀಕಿ, ಬ್ರೆಸ್ಡ್ ಸೈಝ್ ದೊಡ್ಡದು ಮಾಡಲು ಸರ್ಜರಿ ಮಾಡಿಸಿದ ಘಟನೆ ನಡೆದಿದೆ. ಈ ಚಾಲಕಿ ಕೊನೆಗೆ ಸಿಕ್ಕಿ ಬಿದ್ದಿದ್ದು ಹೇಗೆ?

ಪೂರ್ತಿ ಓದಿ
10:26 PM (IST) Mar 17

ಕೊನೆಗೂ ಮೆಟ್ರೋ ನೇಮಕಾತಿ ನಿಯಮ ಬದಲಿಸಿದ ಬಿಎಂಆರ್‌ಸಿಎಲ್‌: ಕನ್ನಡಿಗರ ಹೋರಾಟಕ್ಕೆ ದೊಡ್ಡ ಗೆಲುವು!

ನಮ್ಮ ಮೆಟ್ರೋ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ವಿರೋಧದ ನಂತರ, ಬಿಎಂಆರ್‌ಸಿಎಲ್ ತನ್ನ ಹಳೆಯ ನಿಯಮಗಳನ್ನು ಹಿಂಪಡೆದಿದೆ. ತರಬೇತಿ ಮತ್ತು ಅನುಭವದ ನಿಯಮಗಳನ್ನು ಸಡಿಲಿಸಿ ಕನ್ನಡಿಗರಿಗೆ ಅನುಕೂಲ ಮಾಡಿಕೊಡಲಾಗಿದೆ.

ಪೂರ್ತಿ ಓದಿ
10:14 PM (IST) Mar 17

ಭಾರ್ಗವಿ-ಅರ್ಜುನ್ ಅದ್ಧೂರಿ ರೊಮ್ಯಾನ್ಸ್… ಸಿನಿಮಾಕ್ಕಿಂತ ಸೀರಿಯಲ್’ಗಳೇ ಒಂದು ಕೈ ಮೇಲೆ!

ಭಾರ್ಗವಿ LLB ಸೀರಿಯಲ್ ಆರಂಭವಾಗಿ ಎರಡು ವಾರಗಳು ಕಳೆದಿವೆ ಅಷ್ಟೇ, ಅಷ್ಟರಲ್ಲೇ ಧಾರಾವಾಹಿ ತಂಡ ಅದ್ಧೂರಿಯಾದ ರೊಮ್ಯಾಂಟಿಕ್ ವಿಡೀಯೋ ರಿಲೀಸ್ ಮಾಡಿದೆ. 

ಪೂರ್ತಿ ಓದಿ
09:29 PM (IST) Mar 17

ಸುನಿತಾ ವಿಲಿಯಮ್ಸ್ ದೀರ್ಘ ಬಾಹ್ಯಾಕಾಶ ಯೋಜನೆಯ ಪಾಠ: ಭವಿಷ್ಯದ ಅನ್ವೇಷಣೆಗಳಿಗೆ ಹೊಸರೂಪ

ಸುನಿತಾ ವಿಲಿಯಮ್ಸ್ ಅವರ ಬಾಹ್ಯಾಕಾಶ ಯಾನ ಕೇವಲ ಎಂಟು ದಿನಗಳಿಗೆ ಸೀಮಿತವಾಗಿತ್ತು. ಆದರೆ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ವಿಸ್ತರಿಸಿತು. ಈ ಅನುಭವ ಮಾನವ ಸಹಿತ ಬಾಹ್ಯಾಕಾಶ ಯೋಜನೆಗಳ ಹಲವಾರು ಮುಖ್ಯ ಅಂಶಗಳತ್ತ ಬೆಳಕು ಚೆಲ್ಲಿದೆ.

ಪೂರ್ತಿ ಓದಿ
09:14 PM (IST) Mar 17

ಎಲ್ಲರೂ ಹೃದಯಾಳದಿಂದ ಪ್ರೀತಿಸುವ ಸ್ಟಾರ್ ಪುನೀತ್ ರಾಜ್‌ಕುಮಾರ್, ಅಪ್ಪು ನೆನೆದ ದಿನೇಶ್ ಕಾರ್ತಿಕ್

ಬೆಂಗಳೂರಿನ ಎಲ್ಲೇ ಹೋದರೂ ಪುನೀತ್ ರಾಜ್‌ಕುಮಾರ್ ಕಟೌಟ್, ಹೆಸರಿನ ಹೊಟೆಲ್, ಶಾಪ್ ಇದ್ದೇ ಇರುತ್ತೆ. ಎಲ್ಲರೂ ಹೃದಯಾಂತರಾಳದಿಂದ ಪ್ರೀತಿಸುವ ಏಕೈಕ ಸ್ಟಾರ್ ಪುನೀತ್ ರಾಜ್‌ಕುಮಾರ್ . ಇದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಆರ್‌ಸಿಬಿ ಕೋಚಿಂಗ್ ಸಿಬ್ಬಂದಿ ಪ್ಲೇಯರ್ ದಿನೇಶ್ ಕಾರ್ತಿಕ್ ಹೇಳಿದ ಮಾತು, ಅಪ್ಪು ಕುರಿತು ದಿನೇಶ್ ಕಾರ್ತಿಕ್ ಆಡಿದ ಮಾತುಗಳೇನು?

ಪೂರ್ತಿ ಓದಿ
08:26 PM (IST) Mar 17

ಬೆಂಗಳೂರಿನ ಟೆಕ್ಕಿಗೆ ಸಾಲುತಿಲ್ಲ 1.5 ಲಕ್ಷ ಸ್ಯಾಲರಿ, ಬದುಕಿನ ಪಯಣದಲ್ಲಿ ನಿಮಗೂ ಹೀಗೆ ನಾ?

ಬೆಂಗಳೂರಿನಲ್ಲಿ ಟೆಕ್ಕಿ. ತಿಂಗಳಿಗೆ 1.5 ಲಕ್ಷ ರೂ ಸಂಬಳ. ಆದರೆ ಕುಟುಂಬ ನಿರ್ವಹಿಸಲು ಸಾಲುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾನೆ. ಅರೆ ಲಕ್ಷ ಸಂಬಳ ಎಣಿಸುವರೇ ಹೀಗೆ ಹೇಳಿದರೆ ಸಾವಿರದಲ್ಲಿರುವವರು ಏನು ಮಾಡಬೇಕು ಅನ್ನೋ ಪ್ರಶ್ನೆ ಮೂಡುವುದು ಸಹಜ. ಆದರೆ ಟೆಕ್ಕಿ ಹೇಳಿದ ಮುಂದಿನ ಭಾಗ ಹಲವರ ಬದುಕಿಗೆ ಅನ್ವಯವಾಗುತ್ತೆ.

ಪೂರ್ತಿ ಓದಿ
08:19 PM (IST) Mar 17

1984 ಸಿಖ್ ವಿರೋಧಿ ದಂಗೆ: ದೆಹಲಿ ಹೈಕೋರ್ಟ್‌ನಿಂದ ವರದಿ ಕೇಳಿದ ಸುಪ್ರೀಂ ಕೋರ್ಟ್‌

1984 ಸಿಖ್ ವಿರೋಧಿ ದಂಗೆಗಳು: 1984ರ ಸಿಖ್ ವಿರೋಧಿ ದಂಗೆಗಳ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ದೆಹಲಿ ಹೈಕೋರ್ಟ್‌ನಿಂದ ಪ್ರೋಗ್ರೆಸ್ ರಿಪೋರ್ಟ್ ಕೇಳಿದೆ. ವಜಾಗೊಂಡ ಅರ್ಜಿಗಳ ಬಗ್ಗೆ ಎಸ್‌ಎಲ್‌ಪಿ ದಾಖಲಿಸುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ. ಮುಂದಿನ ವಿಚಾರಣೆ ಮಾರ್ಚ್ 25ಕ್ಕೆ ನಿಗದಿಯಾಗಿದೆ.

ಪೂರ್ತಿ ಓದಿ
08:09 PM (IST) Mar 17

ಅಭಿಮಾನಿಗಳಿಗಾಗಿ ವಿಕಾಶ್ -ನಿಶಾ ಡುಯೆಟ್…. ಬೇಗನೆ ಗುಡ್ ನ್ಯೂಸ್ ಹೇಳ್ಬಿಡಿ ಅಂತಿದ್ದಾರೆ ಫ್ಯಾನ್ಸ್

ಅಣ್ಣಯ್ಯ ಸೀರಿಯಲ್ ಖ್ಯಾತಿಯ ವಿಕಾಶ್ ಉತ್ತಯ್ಯ ಮತ್ತು ನಿಶಾ ರವಿಕೃಷ್ಣನ್ ಮತ್ತೊಂದು ಹಾಡಿಗೆ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದ್ದು, ಇಬ್ಬರು ಲವ್ ಮಾಡ್ತಿದ್ದಾರೆ ಎನ್ನುವ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ. 

ಪೂರ್ತಿ ಓದಿ
07:30 PM (IST) Mar 17

ಮನೆಗೆ ಮರಳಲು ಸಜ್ಜಾದ ಸುನಿತಾ ವಿಲಿಯಮ್ಸ್: ಸಾಗರದಲ್ಲಿ ಇಳಿದ ನಂತರದ ಹಂತಗಳೇನು?

ತಾಂತ್ರಿಕ ದೋಷದಿಂದ ವಿಳಂಬವಾದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ತಂಡ ಮಾರ್ಚ್ 19ಕ್ಕೆ ಭೂಮಿಗೆ ಮರಳಲಿದ್ದಾರೆ. ಸ್ಪೇಸ್ಎಕ್ಸ್ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್ ಮೂಲಕ ಫ್ಲೋರಿಡಾದಲ್ಲಿ ಇಳಿಯಲಿದ್ದಾರೆ.

ಪೂರ್ತಿ ಓದಿ
07:22 PM (IST) Mar 17

ಒಸಾಮಾ ಬಿನ್ ಲಾಡೆನ್ ಲ್ಯಾಪ್‌ಟಾಪ್‌ನಲ್ಲಿ ಬಾಲಿವುಡ್ ಹಾಡುಗಳು!

ಒಸಾಮಾ ಬಿನ್ ಲಾಡೆನ್ ನನ್ನ ಫ್ಯಾನ್ ಅಂದಾಗ ಅಲ್ಕಾ ಯಾಜ್ಞಿಕ್ ರಿಯಾಕ್ಷನ್ ಕೊಟ್ಟಿದ್ದು, 'ಅವನಲ್ಲೂ ಒಬ್ಬ ಕಲಾವಿದ ಇದ್ದ!' ಲಾಡೆನ್ ಲ್ಯಾಪ್‌ಟಾಪ್‌ನಲ್ಲಿ ಅವರ ಹಾಡುಗಳು ಸಿಕ್ಕಿದ್ದವು. ಅಲ್ಕಾ ಇಂಡಸ್ಟ್ರಿ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ.

ಪೂರ್ತಿ ಓದಿ
07:08 PM (IST) Mar 17

ಭಾರತದಲ್ಲಿ ಅನ್ನದಾತ ಸಾಲ ಪಡೆಯಲು ಏನು ಮಾಡಬೇಕು? ಅರ್ಹತೆಗಳೇನು?

ಸಾಲದ ಹೊರೆ ತಾಳಲಾರದೇ ರೈತರು ಸಾವಿಗೆ ಶರಣಾದ ಸುದ್ದಿಗಳು ಆಗಾಗ ಕೇಳುತ್ತೇವೆ. ಖಾಸಗಿ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯೋ ಬದಲು ಸರಕಾರದಿಂದಲೇ ಸಾಲ ಪಡೆದರೆ ಅನ್ನದಾತ ನೆಮ್ಮದಿಯಾಗಿರಬಹುದು. ಹೀಗೆ ಸರ್ಕಾರದಿಂದ ಸಾಲ ಪಡೆಯಲು ಏನು ಮಾಡಬೇಕು? ಯಾವ ದಾಖಲೆ ಇರಬೇಕು?

ಪೂರ್ತಿ ಓದಿ
06:52 PM (IST) Mar 17

ನವೆಂಬರ್ 30 ರ ನಂತರ OTP ಸ್ಥಗಿತಗೊಳ್ಳುವುದೇ? TRAI ಹೇಳುವುದೇನು?

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ TRAI ಯ ತೀವ್ರ ಕ್ರಮದಿಂದ ಈ ವರ್ಷದ ನವೆಂಬರ್ 30 ರ ನಂತರ OTP ವ್ಯವಸ್ಥೆ ಸ್ಥಗಿತಗೊಳ್ಳಲಿದೆ ಎಂದು ಮಾಹಿತಿ ಲಭ್ಯವಾಗಿದೆ.

ಪೂರ್ತಿ ಓದಿ
06:50 PM (IST) Mar 17

ಈ ದಿನಾಂಕದಂದು ಹುಟ್ಟಿದವರಿಗೆ ಎರಡು ಮದುವೆ ಇಲ್ಲವೇ ಮತ್ತೊಂದು ಸಂಬಂಧ ಹೆಚ್ಚು! ಯಾವುದದು ಸಂಖ್ಯೆ?

ಸಂಖ್ಯಾಶಾಸ್ತ್ರದ ಪ್ರಕಾರ ಈ ವ್ಯಕ್ತಿಗಳಿಗೆ ಎರಡು ಮದುವೆಯಾಗುವ ಸಾಧ್ಯತೆ ಇದೆ, ಇಲ್ಲವೇ ವಿವಾಹೇತರ ಸಂಬಂಧ ಇರುವ ಸಾಧ್ಯತೆ ಹೆಚ್ಚು. ಯಾವ ಸಂಖ್ಯೆಯಲ್ಲಿ ಹುಟ್ಟಿದವರು ಗೊತ್ತಾ? 

ಪೂರ್ತಿ ಓದಿ
05:56 PM (IST) Mar 17

ಮ್ಯೂಚುವಲ್ ಫಂಡ್ ಎಂದರೇನು, ಹೂಡಿಕೆ ಹೇಗೆ? ಗೊತ್ತಿಲ್ಲದವರಿಗೆ ಇಲ್ಲಿದೆ ಸ್ಪಷ್ಟ ಮಾಹಿತಿ

ಮ್ಯೂಚುವಲ್ ಫಂಡ್ ಆರಂಭಿಕರಿಗಾಗಿ ಗೈಡ್: ನೀವು 500 ರೂಪಾಯಿಗಳಿಂದ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಪ್ರಾರಂಭಿಸಬಹುದು. ನಾವು ನಿಮಗಾಗಿ ಮ್ಯೂಚುವಲ್ ಫಂಡ್ ಬಗ್ಗೆ ಅಗತ್ಯ ಮಾಹಿತಿಯನ್ನು ತಂದಿದ್ದೇವೆ. ಇದರಲ್ಲಿ ನೀವು ಹೇಗೆ ಹೂಡಿಕೆ ಮಾಡುವುದು, ಎಷ್ಟು ರೀತಿಯ ಫಂಡ್‌ಗಳಿವೆ ಮತ್ತು ತೆರಿಗೆ ನಿಯಮಗಳು ಏನು ಎಂಬುದನ್ನು ತಿಳಿಯಬಹುದು.

ಪೂರ್ತಿ ಓದಿ
05:34 PM (IST) Mar 17

ಮನೆಕೆಲಸಕ್ಕೆ ಜನ ಸಿಕ್ತಿಲ್ಲಾ ಎನ್ನೋ ಕೊರಗಾ? 15 ನಿಮಿಷದಲ್ಲೇ ಮನೆಬಾಗಿಲಿಗೆ- ಗಂಟೆಗೆ ಕೇವಲ 49 ರೂ!

ಮನೆ ಕೆಲಸಕ್ಕೆ ಕೆಲಸದವರು ಸಿಗದೇ ಪರದಾಡುತ್ತಿರುವವರಿಗೆ ಅರ್ಬನ್ ಕಂಪನಿಯು 'ಇನ್‌ಸ್ಟಾ ಮೇಡ್ಸ್' ಎಂಬ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಇದು 15 ನಿಮಿಷಗಳಲ್ಲಿ ಮನೆಯ ಕೆಲಸದವರನ್ನು ಬುಕಿಂಗ್ ಮಾಡುವ ಸೌಲಭ್ಯವನ್ನು ಒದಗಿಸುತ್ತದೆ.

ಪೂರ್ತಿ ಓದಿ
05:02 PM (IST) Mar 17

ಶುಕ್ರನ ತುಲಾ ರಾಶಿಯಲ್ಲಿ ಚಂದ್ರ, ಈ 3 ರಾಶಿಗೆ ಶ್ರೀಮಂತಿಕೆ, ಸಂಪತ್ತು

 ಇಂದು ಬೆಳಗಿನ ಜಾವ 1:15 ಕ್ಕೆ, ಅಧಿಪತಿ ಚಂದ್ರನು ತುಲಾ ರಾಶಿಗೆ ಸಾಗಿದ್ದಾನೆ. ಸಂಪತ್ತು, ಸಮೃದ್ಧಿ, ಐಷಾರಾಮಿ ಜೀವನ ಮತ್ತು ಭೌತಿಕ ಸಂತೋಷವನ್ನು ನೀಡುವ ಗ್ರಹವಾದ ತುಲಾ ರಾಶಿಯ ಅಧಿಪತಿ ಶುಕ್ರ ಎಂದು ಪರಿಗಣಿಸಲಾಗಿದೆ.

ಪೂರ್ತಿ ಓದಿ
04:58 PM (IST) Mar 17

ಸ್ಯಾಂಡ್​ವಿಚ್​ ತಿನ್ನುವಾಗ ಕ್ಯಾನ್ಸರ್ ಪತ್ತೆ! ಚಿಕ್ಕ ನಿರ್ಲಕ್ಷ್ಯ ಜೀವಕ್ಕೇ ಅಪಾಯ: ಕೆಲವೇ ದಿನಗಳ ಅತಿಥಿಯ ಮನಕಲಕುವ ಘಟನೆ...

ಸ್ಯಾಂಡ್​ವಿಚ್​ ತಿನ್ನುವಾಗ ವ್ಯಕ್ತಿಯೊಬ್ಬರಿಗೆ ಕ್ಯಾನ್ಸರ್ ಅರಿವಿಗೆ ಬಂದಿದೆ. ನಾವು ಮಾಡುವ ನಿರ್ಲಕ್ಷ್ಯ ಹೇಗೆ ಜೀವವನ್ನೇ ಕಸಿದುಕೊಳ್ಳಬಹುದು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಏನಿದು ಸ್ಟೋರಿ?

ಪೂರ್ತಿ ಓದಿ
04:55 PM (IST) Mar 17

ಮ್ಯಾಂಗೋ ಜ್ಯೂಸ್‌ಗಾಗಿ ಮೊಬೈಲ್ ಕಸಿದು ಡೀಲ್ ಮಾಡಿದ ಕೋತಿ: ವೀಡಿಯೋ ಸಖತ್ ವೈರಲ್‌

ವೃಂದಾವನದಲ್ಲಿ ಕೋತಿಯೊಂದು ವ್ಯಕ್ತಿಯ ಮೊಬೈಲ್ ಕಸಿದು ಕಟ್ಟಡದ ಮೇಲೆ ಕುಳಿತಿತು. ಯುವಕ ಮ್ಯಾಂಗೋ ಜ್ಯೂಸ್ ಕೊಟ್ಟು ಮೊಬೈಲ್ ವಾಪಸ್ ಪಡೆದಿದ್ದು, ಈ ವಿಡಿಯೋ ವೈರಲ್ ಆಗಿದೆ.

ಪೂರ್ತಿ ಓದಿ
04:28 PM (IST) Mar 17

ಆಟೋ ಡ್ರೈವರ್ ಆಗಿದ್ದ ಬಿಂದು ಜೀರಾ ಡ್ರಿಂಕ್ ಕಂಪನಿ ಒಡೆಯ ರೋಲ್ಸ್ ರಾಯ್ಸ್ ಮಾಲೀಕ

ದಕ್ಷಿಣ ಕನ್ನಡದ ಪುಟ್ಟ ಊರಿನಲ್ಲಿ ಆರಂಭಿಸಿದ ಬಿಂದು ಜೀರಾ ಮಸಾಲ ಡ್ರಿಂಕ್ ಇದೀಗ ಭಾರತದ ಅತೀ ದೊಡ್ಡ ಸಾಫ್ಟ್ ಡ್ರಿಂಕ್ ಬೆವರೇಜ್ ಕಂಪನಿಗಳಲ್ಲಿ ಒಂದಾಗಿದೆ. ಆಟೋ ಡ್ರೈವರ್ ಆಗಿದ್ದ ಬಿಂದು ಕಂಪನಿ ಮಾಲೀಕ ಇದೀಗ ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರು ಖರೀದಿಸಿದ್ದಾರೆ. ಇದರ ಬೆಲೆ, ಮಾಲೀಕನ ಸ್ಫೂರ್ತಿಯ ಪಯಣ ಇಲ್ಲಿದೆ.

ಪೂರ್ತಿ ಓದಿ