ಗರ್ಭಕಂಠ ಕ್ಯಾನ್ಸರ್ ಹಾಗೂ ಓವರಿಯನ್ ಕ್ಯಾನ್ಸರ್‌ಗೆ ತುತ್ತಾಗಿದ್ದೇನೆ. ಕೀಮೋ ಸೇರಿದಂತೆ ಒಂದಷ್ಟು ಚಿಕಿತ್ಸೆ ಪಡೆಯಬೇಕಿದೆ ಎಂದು ಬಾಯ್‌ಫ್ರೆಂಡ್‌ನಿಂದ ಬರೋಬ್ಬಬರಿ 28 ಲಕ್ಷ ರೂಪಾಯಿ ಪೀಕಿ, ಬ್ರೆಸ್ಡ್ ಸೈಝ್ ದೊಡ್ಡದು ಮಾಡಲು ಸರ್ಜರಿ ಮಾಡಿಸಿದ ಘಟನೆ ನಡೆದಿದೆ. ಈ ಚಾಲಕಿ ಕೊನೆಗೆ ಸಿಕ್ಕಿ ಬಿದ್ದಿದ್ದು ಹೇಗೆ?

ಲಂಡನ್(ಮಾ.17) ಪ್ರೀತಿ ಪ್ರೇಮದಲ್ಲಿ ಮೋಸ ಮಾಡಿದ ಪ್ರಕರಣಗಳು ದಿನವೂ ವರದಿಯಾಗುತ್ತದೆ. ಆದರೆ ಪ್ರತಿ ದಿನ ಹೊಸ ಹೊಸ ರೂಪದಲ್ಲಿ ಪ್ರಕರಣಗಳು ಹೊರಬೀಳುತ್ತಿದೆ. ವಿಶೇಷ ಅಂದರೆ ಇಲ್ಲೊಬ್ಬಳು ಚಾಲಾಕಿ, ತನಗೆ ಗರ್ಭಕಂಠ ಕ್ಯಾನ್ಸರ್, ಓವರಿಯನ್ ಕ್ಯಾನ್ಸರ್ ಎಂದು ಹೇಳಿ ಬಾಯ್‌ಫ್ರೆಂಡ್‌ನಿಂದ ಬರೋಬ್ಬರಿ 28 ಲಕ್ಷ ರೂಪಾಯಿ ಪೀಕಿದ್ದಾಳೆ. ಇಷ್ಟೇ ಅಲ್ಲ ಈ ಹಣವನ್ನು ತನ್ನ ಸ್ತನ ಗಾತ್ರ ದೊಡ್ಡದು ಮಾಡಿಸಿಕೊಳ್ಳುವ ಸರ್ಜರಿಗೆ ಬಳಸಿಕೊಂಡಿದ್ದಾಳೆ. ಇದೀಗ ಈ ಚಾಲಕಿ ಸಿಕ್ಕಿಬಿದ್ದಿದ್ದು ಹಲವರನ್ನು ಅಚ್ಚರಿಗೊಳಿಸಿದೆ.

35 ವರ್ಷದ ಮಹಿಳೆ ಹೆಸರು ಲೌರಾ ಮೆಕ್‌ಫೆರ್ಸನ್. ಈ ಘಟನೆ ನಡೆದಿರುವುದು ಲಂಡನ್‌ನಲ್ಲಿ. ಈಕೆಗೆ 12 ವರ್ಷದ ಮಗಳಿದ್ದಾಳೆ. ಆದರೆ ಕಳೆದ ಹಲವು ವರ್ಷಗಳಿಂದ ಜಾನ್ ಲಿಯೋನಾರ್ಡ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಳು. ಜಾನ್ ಲಿಯಾನಾರ್ಡ್ ಜನಪ್ರಿಯ ಚಾರಿಟೇಬಲ್ ಟ್ರಸ್ಟ್ ಕಂಪನಿ ನಡೆಸುತ್ತಿದ್ದ. ಅಗತ್ಯ ಬಿದ್ದವರಿಗೆ ಆರ್ಥಿಕ ನೆರವು ಸೇರಿದಂತೆ ಹಲವು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ. ತನ್ನ ಮಾದಕತೆಯಿಂದ ಈತನ ಬಲೆಗೆ ಬೀಳಿಸಿದ್ದ ಲೌರಾ, ರಿಲೇಶನ್‌ಶಿಪ್‌ನಲ್ಲಿ ತನ್ನ ತನ ಮನ ಅರ್ಪಿಸಿದ್ದಳು. ಆದರೆ ಧನ ಮಾತ್ರ ಆತನಿಂದ ಪೀಕಿದ್ದಳು.

ʼನಿಮಗೆಲ್ಲ ಹಾಲು ಕುಡಿದಷ್ಟು ಖುಷಿ ಆಗಿರಬಹುದು, ನಾನ್‌ ಮದುವೆ ಆಗಲ್ಲʼ; ಕಿಪ್ಪಿ ಕೀರ್ತಿಗೆ ಬ್ರೇಕಪ್

ಲೌರ ಹಾಗೂ ಜಾನ್ ರಿಲೇಶನ್‌ಶಿಪ್ ಗೌಪ್ಯವಾಗಿ ಇರಲಿಲ್ಲ. ಲಂಡನ್‌ನಲ್ಲಿ ರಿಲೇಶನ್‌ಶಿಪ್ ದೊಡ್ಡ ವಿಚಾರವೂ ಅಲ್ಲ. ಆದರೆ ಇದರ ನಡುವೆ ಲೌರಾ ತನಗೆ ಗರ್ಭಕಂಠ ಕ್ಯಾನ್ಸರ್ ಸೇರಿದಂತೆ ಒಂದೆರೆಡ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದೇನೆ ಎಂದು ಜಾನ್‌ನಿಂದ ದೂರ ಉಳಿದಿದ್ದಳು. ಕ್ಯಾನ್ಸರ್ ಚಿಕಿತ್ಸೆಗೆ ಹೆಚ್ಚಿನ ಹಣ ಖರ್ಚಾಗುತ್ತಿದೆ. ತನ್ನಲ್ಲಿದ್ದ ಎಲ್ಲಾ ಉಳಿತಾಯ ಮುಗಿದಿದೆ. ಇನ್ನು ಚಿಕಿತ್ಸೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಜಾನ್ ಬಳಿ ಹೇಳಿಕೊಂಡಿದ್ದಾಳೆ. ಆದರೆ ಧೈರ್ಯ ತುಂಬಿದ ಜಾನ್, ಚಿಕಿತ್ಸೆಗೆ ನೆರವು ನೀಡುವ ಭರವಸೆ ನೀಡಿದ್ದ.

ಈಕಗೂ ಇದೇ ಬೇಕಿತ್ತು. ಕ್ಯಾನ್ಸರ್‌ಗೆ ಚಿಕಿತ್ಸೆಗೆ ಹಂತ ಹಂತವಾಗಿ ಹಣ ಪಡೆದಿದ್ದಾಳೆ. ಕೀಮೋಥೆರಪಿ ಸೇರಿದಂತೆ ಹಂತ ಹಂತವಾಗಿ ಚಿಕಿತ್ಸೆ ಹಣ ಪಡೆದುಕೊಂಡಿದ್ದಾಳೆ. ಬರೋಬ್ಬರಿ 28 ಲಕ್ಷ ರೂಪಾಯಿ ಹಣವನ್ನು ಬಾಯ್‌ಫ್ರೆಂಡ್‌ನಿಂದ ಪಡೆದುಕೊಂಡಿದ್ದಾಳೆ. ಮತ್ತೆ ಮತ್ತೆ ಹಣ ಪಡೆಯಲು ಮುಂದಾಗಿದ್ದಾಳೆ. ಗೆಳತಿ ಬೇಗ ಗುಣಮುಖವಾಗಲಿ ಎಂದು ಆಕೆಯ ಹತ್ತಿರದ ಆಸ್ಪತ್ರೆಯಲ್ಲಿ ಕೀಮೋಥೆರಪಿ ಸೇರಿದಂತೆ ಕ್ಯಾನ್ಸರ್ ಚಿಕಿತ್ಸೆಗೆ ಎಲ್ಲವನ್ನೂ ಬುಕ್ ಮಾಡಿದ್ದ. 

ಆದರೆ ಈಕೆ ಮಾತ್ರ ಹಣ ಪಡೆದು ಬಳಿಕ ಆತ ಬುಕ್ ಮಾಡಿದ ಆಸ್ಪತ್ರೆಗೆ ತೆರಳಿ ಸ್ತನ ಗಾತ್ರ ದೊಡ್ಡದು ಮಾಡಲು, ಹೊಟ್ಟೆ ಕರಗಿಸಲು ಸೇರಿದಂತೆ ಇತರ ಬ್ಯೂಟಿ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಇದರ ನಡುವೆ ಬಾಯ್‌ಫ್ರೆಂಡ್ ಕ್ಯಾನ್ಸರ್ ಚಿಕಿತ್ಸೆ ಹೇಗಾಗುತ್ತಿದೆ? ಲೌರಾ ಹೇಗಿದ್ದಾಳೆ ಎಂದು ತಿಳಿದುಕೊಳ್ಳಲು ಆಸ್ಪತ್ರೆಗೆ ಕರೆ ಮಾಡಿದ್ದಾನೆ. ಈ ವೇಳೆ ಈಕೆ ಕ್ಯಾನ್ಸರ್‍ಗೆ ಯಾವುದೇ ಚಿಕಿತ್ಸೆ ಪಡೆದುಕೊಂಡಿಲ್ಲ, ಕೇವಲ ಸ್ತನ ಸೈಝ್ ಹೆಚ್ಚಿಸಲು ಸರ್ಜರಿ ಮಾಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ. 

ಇಷ್ಟಕ್ಕೇ ಸುಮ್ಮನಾಗದ ಜಾನ್, ದೂರು ದಾಖಲಿಸಿದ್ದಾನೆ. ಈ ಪ್ರಕರಣ ತನಿಖೆ ನಡೆಸಿದ ಕೋರ್ಟ್, ವರದಿಯನ್ನು ಕೋರ್ಟ್‌‌ಗೆ ಸಲ್ಲಿಸಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಲೌರಾಗೆ ತಪ್ಪತಸ್ಥೆ ಎಂದು ವರದಿ ನೀಡಿದೆ. ಇಷ್ಟೇ ಅಲ್ಲ ಲೌರಾ ಮೋಸಗಾರ್ತಿ ಎಂದಿದ್ದಾಳೆ. ಈಕೆ ಬಾಯ್‌‌ಫ್ರೆಂಡ್ ಮಾತ್ರವಲ್ಲ, ಕುಟುಂಬಸ್ಥರು, ತನ್ನ ಮಗಳು ಸೇರಿದಂತೆ ಹಲವರಿಗೆ ಈ ರೀತಿ ಸುಳ್ಳು ಹೇಳಿ ಭಾವನೆಗಳ ಜೊತೆ ಆಟವಾಾಡಿದ್ದಾಳೆ ಎಂದು ಕೋರ್ಟ್ ಹೇಳಿದೆ.

ನಿವೇದಿತಾ ಎದುರೇ ಬಾಡಿ ಬಿಲ್ಡ್​ ಗುಟ್ಟು ರಟ್ಟು ಮಾಡಿದ ಚಂದನ್​ ಶೆಟ್ಟಿ -ಹೊಸ ಜೀವನದ ಬಗ್ಗೆ ಹೇಳಿದ್ದೇನು?