ವೃಂದಾವನದಲ್ಲಿ ಕೋತಿಯೊಂದು ವ್ಯಕ್ತಿಯ ಮೊಬೈಲ್ ಕಸಿದು ಕಟ್ಟಡದ ಮೇಲೆ ಕುಳಿತಿತು. ಯುವಕ ಮ್ಯಾಂಗೋ ಜ್ಯೂಸ್ ಕೊಟ್ಟು ಮೊಬೈಲ್ ವಾಪಸ್ ಪಡೆದಿದ್ದು, ಈ ವಿಡಿಯೋ ವೈರಲ್ ಆಗಿದೆ.

ಸಾಮಾನ್ಯವಾಗಿ ಬಹುತೇಕ ಎಲ್ಲಾ ತೀರ್ಥಕ್ಷೇತ್ರಗಳಲ್ಲಿ ಪ್ರವಾಸಿ ತಾಣಗಳಲ್ಲಿ ಕೋತಿಗಳ ಹಾವಳಿ ವಿಪರೀತವಾಗಿರುತ್ತದೆ. ಅಲ್ಲಿಗೆ ಬರುವ ಪ್ರವಾಸಿಗರು ಈ ಕೋತಿಗಳ ಕಾರಣಕ್ಕೆ ಭಯದಿಂದ ಓಡಾಡುತ್ತಾರೆ. ಕೋತಿಗಳು ಪ್ರವಾಸಿಗರ ಕೈಯಲ್ಲಿದ್ದ ಕಂಡ ಕಂಡ ವಸ್ತುಗಳನ್ನು ಕಸಿದು ಕಾಣದಂತೆ ಮಾಯವಾಗಿ ಬಿಡುತ್ತವೆ ಇದರಿಂದ ಪ್ರವಾಸಿಗರು ಪರದಾಡುವಂತಾಗುತ್ತದೆ. ಕೆಲವೊಮ್ಮೆ ಕೋತಿಗಳು ಪ್ರವಾಸಿಗರ ಸ್ಮಾರ್ಟ್‌ಫೋನ್ ಮೇಲೂ ಕನ್ನ ಹಾಕಿ ಕೈಯಿಂದ ಕಸಿದುಕೊಂಡು ಓಡಿ ಬಿಡುತ್ತವೆ. ಅದೇ ರೀತಿ ಈಗ ಇಲ್ಲೊಂದು ಕಡೆ ಕೋತಿಯೊಂದು ವ್ಯಕ್ತಿಯ ಮೊಬೈಲ್ ಕಸಿದು ಪರಾರಿಯಾಗಿದ್ದು, ಸೀದಾ ಹೋಗಿ ಕಟ್ಟಡವೇರಿ ಕುಳಿತುಕೊಂಡಿದೆ. ಇದರಿಂದ ಮೊಬೈಲ್ ಕಳೆದುಕೊಂಡ ಯುವಕನೋರ್ವ ಕಂಗಾಲಾಗಿದ್ದು, ಕೋತಿಯ ಕೈಯಲ್ಲಿರುವ ಮೊಬೈಲ್ ವಾಪಸ್ ಪಡೆಯಲು ಹರ ಸಾಹಸ ಮಾಡಿದ್ದಾನೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮಂಗನಾಟಕ್ಕೆ ಶ್ರೀಲಂಕಾ ಸುಸ್ತು: ಅಂದು ಲಂಕಾ ದಹನ- ಇಂದು ದೇಶಾದ್ಯಂತ ಕತ್ತಲೋ ಕತ್ತಲು! ಆಗಿದ್ದೇನು?

ಅಂದಹಾಗೆ ಈ ಘಟನೆ ವೃಂದಾವನದಲ್ಲಿ ನಡೆದಿದೆ. ಕೋತಿಯ ಕೈಯಿಂದ ಮೊಬೈಲ್ ಮರಳಿ ಪಡೆಯಲು ಯುವಕ ಬಳಿಕ ಮ್ಯಾಂಗೋ ಜ್ಯೂಸ್ ಕೊಡಿಸಿದ್ದಾನೆ. ಮ್ಯಾಂಗೋ ಜ್ಯೂಸ್ ಮೇಲೆ ಎಸೆಯುತ್ತಿದ್ದಂತೆ ಕೋತಿ ಕೈಯಲ್ಲಿದ್ದ ಮೊಬೈಲನ್ನು ಕೆಳಗೆಸೆದಿದೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ತುಂಟಾಟದ ಕೋತಿಯೊಂದು ಸ್ಯಾಮ್‌ಸಂಗ್ ಎಸ್ 25 ಅಲ್ಟ್ರಾವನ್ನು ಕಸಿದುಕೊಂಡಿದೆ. ಆದರೆ ಅಚ್ಚರಿ ಎಂಬಂತೆ ಮ್ಯಾಂಗೋ ಜ್ಯೂಸ್ ನೀಡುತ್ತಿದ್ದಂತೆ ಫೋನನ್ನು ಅದು ಮರಳಿಸಿದೆ. ಕೋತಿಯ ಈ ವ್ಯವಹಾರದ ಡೀಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಖತ್ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ಹಲವು ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ. 

ಇನ್ಮುಂದೆ ಹುಡುಗರಿಗೆ ಲೇ ಕೋತಿ ಎನ್ನಬೇಡಿ; ಚೀನಾ ಹುಡುಗಿಯರಿಗೆ ಕಪಿಚೇಷ್ಟೆ ಹುಡುಗರು ತುಂಬಾ ಇಷ್ಟವಂತೆ!

ಅಲ್ಲಿ ಇದು ಒಳ್ಳೆಯ ವ್ಯಾಪಾರ, ಮಾವಿನ ಹಣ್ಣಿನ ಅಂಗಡಿ ಮತ್ತು ಹುಡುಗ ಯಾವಾಗಲೂ ಅಲ್ಲಿರುವುದನ್ನು ಗಮನಿಸಿ. ಮತ್ತು ನೀವು ನಿಮ್ಮ ಐಟಂ ಅನ್ನು ಮರಳಿ ಪಡೆದ ನಂತರ ಅವರು 100-200 ರೂ ಚಾರ್ಜ್ ಮಾಡ್ತಾರೆ ಎಂದು ವೀಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮಥುರಾದ ವೃಂದಾವನದಲ್ಲಿ ಇದೊಂದು ದೊಡ್ಡ ಹಗರಣ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಸಖತ್ ವೈರಲ್ ಆಗಿದ್ದು, ಕೋತಿಯ ಚಾಣಾಕ್ಷತನಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ವೈರಲ್ ಆದ ವೀಡಿಯೋ ಇಲ್ಲಿದೆ ನೋಡಿ

View post on Instagram