ಕೊನೆಗೂ ಮೆಟ್ರೋ ನೇಮಕಾತಿ ನಿಯಮ ಬದಲಿಸಿದ ಬಿಎಂಆರ್‌ಸಿಎಲ್: ಕನ್ನಡಿಗರ ಹೋರಾಟಕ್ಕೆ ದೊಡ್ಡ ಗೆಲುವು!
ನಮ್ಮ ಮೆಟ್ರೋ ನೇಮಕಾತಿಯಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ವಿರೋಧದ ನಂತರ, ಬಿಎಂಆರ್‌ಸಿಎಲ್ ತನ್ನ ಹಳೆಯ ನಿಯಮಗಳನ್ನು ಹಿಂಪಡೆದಿದೆ. ತರಬೇತಿ ಮತ್ತು ಅನುಭವದ ನಿಯಮಗಳನ್ನು ಸಡಿಲಿಸಿ ಕನ್ನಡಿಗರಿಗೆ ಅನುಕೂಲ ಮಾಡಿಕೊಡಲಾಗಿದೆ.

ನಮ್ಮ ಮೆಟ್ರೋದಲ್ಲಿ ‘ಟ್ರೈನ್ ಆಪರೇಟರ್’ ಹುದ್ದೆಗೆ ಆಹ್ವಾನಿಸಿರುವ ಅರ್ಜಿಯಲ್ಲಿ ಕನ್ನಡಿಗರಿಗೆ ಪ್ರಾಶಸ್ತ್ಯ ನೀಡದೆ ಅನ್ಯ ಭಾಷಿಕರಿಗೆ ಉದ್ಯೋಗ ಪಡೆಯಲು ಅನುಕೂಲ ಕಲ್ಪಿಸಲಾಗಿದೆ ಎಂಬ ಆಕ್ರೋಶದ ಬೆನ್ನಲ್ಲೇ ತನ್ನ ಹಳೆಯ ಷರತ್ತುಗಳನ್ನ BMRCL ವಾಪಸ್ ಪಡೆದಿದೆ.
ಟ್ರೈನ್ ಆಪರೇಟರ್ ಪೋಸ್ಟ್ ಗೆ ಅಪ್ಲಿಕೇಶನ್ ಹಾಕಬೇಕಾದರೆ. 3 ವರ್ಷ ಟ್ರೈನ್ ಆಪರೇಟ್ ಮಾಡಿರುವ ಅನುಭವವಿರಬೇಕೆಂದು ರೂಲ್ಸ್ ಮಾಡಿತ್ತು. BMRCL ನಿಯಮದಂತೆ ಹೈದರಾಬಾದ್ ಮತ್ತು ಚೆನೈ ಮೆಟ್ರೋದಲ್ಲಿ ಗುತ್ತಿಗೆ ಆಧಾರದಲ್ಲಿ ಟ್ರೈನ್ ಆಪರೇಟರ್ ಆಗಿ ಕೆಲಸ ಮಾಡುತ್ತಿರುವ ಟ್ರೈನ್ ಆಪರೇಟರ್ ಗಳು ಮಾತ್ರ ಅಪ್ಲಿಕೇಶನ್ ಹಾಕಲು ಅವಕಾಶ ಸಿಗುತ್ತದೆ. ಇದು ಕನ್ನಡಿಗರಿಗೆ ಮಾಡಿದ ದ್ರೋಹ ಎಂದು ಆಕ್ರೋಶ ವ್ಯಕ್ತವಾಗಿತ್ತು. ಮಾ.17ರಂದು BMRCL ಕಚೇರಿ ಮುಂದೆ ಕನ್ನಡಪರ ಹೋರಾಟಗಾರರಿಂದ ಪ್ರತಿಭಟನೆ ನಡೆದಿತ್ತು. ಕಡೆಗೂ ಮಣಿದ BMRCL, ಹಿಂದಿನ ಆದೇಶ ವಾಪಸ್ ತೆಗೆದುಕೊಂಡಿದೆ.
ಪ್ರಯಾಣಿಕರ ದರ ಏರಿಕೆ ಬೆನ್ನಲ್ಲೇ ಮೆಟ್ರೋ ಅಧಿಕಾರಿಗಳಿಗೆ ದುಬಾರಿ ಕಾರು: ಚರ್ಚೆಗೆ ಗ್ರಾಸ
ಘಟನೆಗೆ ಕಾರಣವಾಗಿದ್ದೇನು?
ಬೆಂಗಳೂರು ಮೆಟ್ರೋ ರೈಲು ನಿಗಮವು 50 ಟ್ರೈನ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ಆಸಕ್ತರು ಆನ್‌ಲೈನ್ ಮೂಲಕ ಏಪ್ರಿಲ್ 4 ಹಾಗೂ ಪ್ರಿಂಟ್‌ಕಾಪಿಯನ್ನು ಏಪ್ರಿಲ್ 9ರ ಸಂಜೆಯ ಒಳಗೆ ಸಲ್ಲಿಸಲು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿತ್ತು. ಆದರೆ, ಅರ್ಜಿ ಸಲ್ಲಿಕೆಯ ನಿಬಂಧನೆಯಲ್ಲಿ 38 ಗರಿಷ್ಠ ವಯಸ್ಸಿನ ಮೂರು ವರ್ಷ ಅನುಭವ ಇರುವವರಿಗೆ ಮಾತ್ರ ಅವಕಾಶ ಎಂದು ಹೇಳಿತ್ತು. ಕನ್ನಡ ಅರ್ಥೈಸಿಕೊಳ್ಳಲು, ಓದಲು, ಬರೆಯಲು ಬರುವವರಿಗೆ ಅವಕಾಶವಿದೆ. ಜೊತೆಗೆ ಬಾರದವರಿಗೆ ಒಂದು ವರ್ಷ ಕಾಲ ಅವಕಾಶವಿದ್ದು, ಅಷ್ಟರಲ್ಲಿ ಕನ್ನಡ ಕಲಿಯಬೇಕು. ಬಳಿಕ ಬಿಎಂಆರ್‌ಸಿಎಲ್ ನಡೆಸುವ ಕನ್ನಡ ಪರೀಕ್ಷೆಯಲ್ಲಿ ಪಾಸಾಗಬೇಕೆಂದು ಎಂದು ಕಟ್ಟುನಿಟ್ಟಾಗಿ ಹೇಳಿತ್ತು.
ಬಿಎಂಆರ್‌ಸಿಎಲ್ ಮಾನವ ಸಂಪನ್ಮೂಲ ವಿಭಾಗದಲ್ಲಿ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಅಧಿಕಾರಿಗಳಿದ್ದು, ಅವರು ತಮ್ಮವರಿಗೆ ಅನುಕೂಲ ಮಾಡಿಕೊಡಲು ಈ ರೀತಿ ಅರ್ಜಿ ಕರೆದಿದ್ದಾರೆ. ರಾಜ್ಯದ ಕನ್ನಡಿಗರು ಟ್ರೈನ್ ಆಪರೇಟರ್‌ಗಳಾಗಿ ಇಲ್ಲಿ ಕೆಲಸಕ್ಕೆ ಬಂದಲ್ಲಿ ನಮ್ಮ ಮಾತು ಕೇಳಲ್ಲ, ಕನ್ನಡಿಗ ಟ್ರೈನ್ ಆಪರೇಟರ್ ನೇಮಕವಾದರೆ ಯೂನಿಯನ್ ಮಾಡುತ್ತಾರೆ ಎಂದು ನಿಬಂಧನೆಯಲ್ಲಿ ಅನ್ಯರಿಗೆ ಅವಕಾಶ ಮಾಡಿಕೊಡಲಾಗಿದೆ. ಹಾಗಾಗಿ ತಕ್ಷಣ ಈ ನೇಮಕಾತಿ ಸುತ್ತೋಲೆಯನ್ನು ಹಿಂಪಡೆದು ಕನ್ನಡಿಗರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕೊಡಬೇಕು ಎಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಬಹುನಿರೀಕ್ಷಿತ ಬೆಂಗಳೂರು ಹಳದಿ ಮಾರ್ಗ ಮೆಟ್ರೋ ಸಂಚಾರ ಮೇ 2025ಕ್ಕೆ ಆರಂಭ!
ಬಿಎಂಆರ್‌ಸಿಎಲ್‌ನ ಈ ಕ್ರಮ ಕನ್ನಡಿಗ ಅಭ್ಯರ್ಥಿಗಳು, ಕನ್ನಡಪರ ಮೆಟ್ರೋ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿತ್ತು. ತಮಿಳುನಾಡಿನ ಚೆನ್ನೈ ಮತ್ತು ಆಂಧ್ರಪ್ರದೇಶದ ಹೈದರಾಬಾದ್ ಮೆಟ್ರೋದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಟ್ರೈನ್ ಆಪರೇಟರ್ಸ್‌ಗಳನ್ನು ಸೆಳೆಯಲು, ಅವರಿಗೆ ಅನುಕೂಲ ಮಾಡಿಕೊಡಲು ಈ ರೀತಿ ಕನ್ನಡೇತರರಿಗೂ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿದೆ. ಅನ್ಯ ಭಾಷಿಕರಿಗೆ ಕನ್ನಡ ಕಲಿಯಲು ಒಂದು ವರ್ಷ ಕಾಲಾವಕಾಶ ನೀಡುವ ಬದಲು ಕನ್ನಡಿಗರಿಗೆ ಒಂದಿಷ್ಟು ತಿಂಗಳ ಕಾಲ ಟ್ರೈನ್ ಆಪರೇಟರ್ ತರಬೇತಿ ನೀಡಿ ಉದ್ಯೋಗ ನೀಡಬೇಕು ಎಂದು ಬಿಎಂಆರ್‌ಸಿಎಲ್ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಒತ್ತಾಯಿಸಿದ್ದರು.