ಕಲರ್ಸ್ ಕನ್ನಡದಲ್ಲಿ 'ಭಾರ್ಗವಿ LLB' ಧಾರಾವಾಹಿ ಪ್ರಾರಂಭವಾಗಿದ್ದು, ಅರ್ಜುನ್ ಮತ್ತು ಭಾರ್ಗವಿಯ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿದೆ. ಈ ನಡುವೆ ಅರ್ಜುನ್ ಮತ್ತು ಭಾರ್ಗವಿಯ ಪ್ರೀತಿ ಹೇಗೆ ಚಿಗುರುತ್ತದೆ ಎಂಬುದೇ ಕಥೆಯ ತಿರುಳು. ಹಾಡು ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.

ಕಲರ್ಸ್ ಕನ್ನಡದಲ್ಲಿ (Colors Kannada) ಭಾರ್ಗವಿ LLB ಸೀರಿಯಲ್ ಈಗಷ್ಟೇ ಆರಂಭವಾಗಿದೆ. ಆದರೆ ಅಷ್ಟರಲ್ಲಾಗಲೇ ಸೀರಿಯಲ್ ನಲ್ಲಿ ಯುಗಳ ಗೀತೆಯೂ ತಯಾರಾಗಿದೆ. ಅರ್ಜುನ್ ಮತ್ತು ಭಾರ್ಗವಿ ರೊಮ್ಯಾಂಟಿಕ್ ಹಾಡು ಸೋಶಿಯಲ್ ಮಿಡಿಯಾದಲ್ಲಿ (social media) ಸಖತ್ ಸೌಂಡ್ ಮಾಡ್ತಿದೆ. ಲವ್ ಶುರುವಾಗುವ ಮುನ್ನವೇ, ಸೀರಿಯಲ್ ಆರಂಭವಾದ ತಕ್ಷಣ ರೊಮ್ಯಾಂಟಿಕ್ ಹಾಡು (romantic song) ರಿಲೀಸ್ ಮಾಡಿ ಸಿನಿಮಾಕ್ಕಿಂತ ಸೀರಿಯಲ್ ಗಳೇ ಒಂದು ಕೈ ಮೇಲೆ ಎಂದು ತೋರಿಸಿಕೊಟ್ಟಿದೆ. 

ಲವ್, ಆಕ್ಷನ್, ಫ್ಯಾಮಿಲಿ ಡ್ರಾಮಾ; ಹೇಗಿತ್ತು ಭಾರ್ಗವಿ LLB ಧಾರಾವಾಹಿಯ ಫಸ್ಟ್ ಎಪಿಸೋಡ್?

ಈಗಾಗಲೇ ಸೀರಿಯಲ್ ಪ್ರೊಮೋ (serial promo) ನೋಡಿದವರ್ಗೆ ಕಥೆ ಏನು ಅನ್ನೋದು ಗೊತ್ತಾಗಿದೆ ಅಲ್ವಾ? ಭಾರ್ಗವಿಯ ತಂದೆ ಲಾಯರ್, ಅವರನ್ನು ಕೋರ್ಟಿನಲ್ಲಿ ಅವಮಾನಿಸಿ ತಲೆ ತಗ್ಗಿಸುವ ಹಾಗೆ ಮಾಡಿ ವಕೀಲ ವೃತ್ತಿಯನ್ನೇ ತೊರೆಯುವಂತೆ ಮಾಡಿದ ಲಾಯರ್ ಜೆಪಿ ಪಾಟೀಲ್. ಧಾರಾವಾಹಿಯ ವಿಲನ್ ಕೂಡ ಆತನೇ… ತನ್ನ ವೃತ್ತಿಜೀವನದಲ್ಲಿ ಸೋಲನ್ನೇ ಕಾಣದ, ಗೆಲ್ಲಲು ಏನು ಬೇಕಾದರೂ ಮಾಡುವ ವಕೀಲ ಜೆಪಿ ಪಾಟೀಲ್. ನಾಯಕಿ ಭಾರ್ಗವಿ ಅದಕ್ಕೆ ತದ್ವಿರುದ್ಧ. ಅನ್ಯಾಯದ ವಿರುದ್ಧ ಯಾವಾಗಲೂ ಸಿಡಿದೇಳುವ ಭಾರ್ಗವಿ, ಅಧಿಕಾರ, ಹಣ, ಪ್ರಭಾವ ಯಾವುದಕ್ಕೂ ಬೆಲೆ ಕೊಡದೆ, ಸದಾ ನ್ಯಾಯದ ಪರ ನಿಲ್ಲುವ ದಿಟ್ಟೆ ಭಾರ್ಗವಿ. ತಂದೆ ಅವಮಾನ ಎದುರಿಸಿದ ಅದೇ ಲಾಯರ್ ಎದುರು ತಾನು ಎದುರಾಗಿ ನಿಂತು, ಕೇಸನ್ನು ಗೆಲ್ಲಲು ಪ್ರಯತ್ನಿಸುವ ಮಧ್ಯಮ ವರ್ಗದ ಲಾಯರ್ ಜೀವನದ ಕಥೆ ಇದು. 

ಅಮೃತಧಾರೆ ಪೆದ್ದು ಮಲ್ಲಿ, ಭಾರ್ಗವಿ ಆದ್ಮೇಲೆ ಹೀಗೆಲ್ಲಾ ಬದಲಾದ್ಲಾ? ವಿಡಿಯೋ ನೋಡಿ ಫ್ಯಾನ್ಸ್​ ಸುಸ್ತು!

ಭಾರ್ಗವಿಯ ಜೀವನಕ್ಕೆ ಎಂಟ್ರಿ ಕೊಡುವ ಹುಡುಗನೇ, ಜೆಪಿ ಪಾಟೀಲ್ ನ ಮಗ ಅರ್ಜುನ್ ಪಾಟೀಲ್ (Arjun Patel). ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರೂ ಸಹೃದಯಿಯಾಗಿರುವ ಅರ್ಜುನ್ ಗೆ ಭಾರ್ಗವಿ ಮೇಲೆ ಮೊದಲ ನೋಟದಲ್ಲೇ ಲವ್ ಆಗುತ್ತೆ. ಭಾರ್ಗವಿಯ ಒಳ್ಳೆಯ ಗುಣಗಳೆಲ್ಲವನ್ನೂ ಅರ್ಜುನ್ ಇಷ್ಟ ಪಡುತ್ತಾನೆ. ಜೊತೆಗೆ ಅಪ್ಪನಿಗೆ ಕೇಸ್ ನಲ್ಲಿ ಎದುರು ನಿಂತಿರುವ ಹುಡುಗಿ ಭಾರ್ಗವಿ ಅನ್ನೋದು ತಿಳಿಯದೇ ಅವಳ ಮೇಲೆ ದ್ವೇಷವನ್ನು ಸಹ ಹೊಂದಿದ್ದಾನೆ. ಇವರಿಬ್ಬರ ನಡುವೆ ಪ್ರೀತಿ ಹೇಗಾಗುತ್ತೆ? ಅನ್ನೋದು ಕಥೆ. ಆದರೆ ಇದೀಗ ಒನ್ ಸೈಡ್ ಲವ್ ಅರ್ಜುನ್ ಕಡೆಯಿಂದ ಶುರುವಾಗಿರೋದು ಅಷ್ಟೇ, ಅಷ್ಟರಲ್ಲಿಯೇ ಧಾರಾವಾಹಿಯಿಂದ ಹೊಸದೊಂದು ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿದೆ. ಹಾಡನ್ನು ತಂಡ ಬಹಳ ಅದ್ಧೂರಿಯಾಗಿಯೇ ರಿಲೀಸ್ ಮಾಡಿದೆ. ಹಾಡು ನೋಡಿರೋರು, ಇದು ಮೂವಿನ ಸೀರಿಯಲ್ ಆ? ಒಂದೂ ಗೊತ್ತಾಗ್ತಾ ಇಲ್ಲ. ಎಲ್ಲನೂ ಒಂದೇ ರೀತಿಯಾಗಿದೆ ಎಂದಿದ್ದಾರೆ. ಅವಾರ್ಡ್ ಕೊಡಿ ವಿಡಿಯೋ ಎಡಿಟರ್ಸ್ ಗೆ ಸೂಪರ್ ಆಗಿದೆ ವಿಡಿಯೋ ಎಂದಿದ್ದಾರೆ. 

View post on Instagram