11:10 PM (IST) Jul 02

India News Live 2nd July: ಗಂಡನಿಗೆ ಕಚ್ಚಿದ ಹಾವು; ಟಿವಿ ನೋಡಿ ಬಾಯಿಂದ ವಿಷ ಹೀರಿದ ಪತ್ನಿ! ಆಮೇಲಾಗಿದ್ದೇ ಬೇರೆ ಕಥೆ

ರೈತರೊಬ್ಬರಿಗೆ ಹಾವು ಕಚ್ಚಿದಾಗ, ಅವರ ಪತ್ನಿ ಟಿವಿಯಲ್ಲಿ ನೋಡಿದ್ದನ್ನು ನೆನಪಿಸಿಕೊಂಡು ಬಾಯಿಯಿಂದ ವಿಷವನ್ನು ಹೀರಿ ತೆಗೆದಿದ್ದಾರೆ. ಹಾವು ಕಚ್ಚಿದಾಗ ಬಾಯಿಯಿಂದ ವಿಷ ಹೀರುವುದು ಅಪಾಯಕಾರಿ ಎಂದು ವೈದ್ಯರು ಎಚ್ಚರಿಸಿದ್ದಾರೆ.

Read Full Story
10:13 PM (IST) Jul 02

India News Live 2nd July: 44 ಸಾವಿರ ರೂ. ಡಿಸ್ಕೌಂಟ್ ಜೊತೆ RVX ಎಲೆಕ್ಟ್ರಿಕ್ ಬೈಕ್ ಬಿಡುಗಡೆ; 160 ಕಿ.ಮೀ ಮೈಲೇಜ್

ರಿವೋಲ್ಟ್‌ ಮೋಟಾರ್ಸ್, ಹೊಸ ರಿವೋಲ್ಟ್ ಆರ್‌ವಿಎಕ್ಸ್ ಎಲೆಕ್ಟ್ರಿಕ್ ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಬೈಕ್ 160 ಕಿ.ಮೀ ಮೈಲೇಜ್, 90 ಕಿ.ಮೀ ಗರಿಷ್ಠ ವೇಗ, ಮತ್ತು 3.24 kWh ಪೋರ್ಟಬಲ್ ಬ್ಯಾಟರಿಯನ್ನು ಹೊಂದಿದೆ.

Read Full Story
10:09 PM (IST) Jul 02

India News Live 2nd July: ತಲೈವಾ ಫ್ಯಾನ್ಸ್‌ಗೆ ಗುಡ್ ನ್ಯೂಸ್! 'ಜೈಲರ್ 2' ರಿಲೀಸ್ ಡೇಟ್ ಫಿಕ್ಸ್ - ಆದ್ರೆ ಇನ್ನೊಂದು ಬಿಗ್ ಟ್ವಿಸ್ಟ್!

ಸಿನಿಮಾ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಜೈಲರ್ 2' ಸಿನಿಮಾ ನವರಾತ್ರಿ ಹಬ್ಬಕ್ಕೆ ಅಕ್ಟೋಬರ್ 15 ರಂದು ತೆರೆಗೆ ಬರಲಿದೆ. ಸನ್ ಪಿಕ್ಚರ್ಸ್ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ.

Read Full Story
09:08 PM (IST) Jul 02

India News Live 2nd July: Daveigh Chase - 'ದಿ ರಿಂಗ್' ನಟಿಯ ಸಾವಿನ ರಹಸ್ಯ ಬಯಲು - ಏಡ್ಸ್‌ನಿಂದ ಕೊನೆಯುಸಿರೆಳೆದ ಡೇವೀ ಚೇಸ್

Lilo & Stitch Voice Actress: ಹಾಲಿವುಡ್ ನಟಿ ಡೇವೀ ಚೇಸ್ ಅವರ ಸಾವಿಗೆ ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್ (ಏಡ್ಸ್) ಕಾರಣ ಎಂದು ಲಾಸ್ ಏಂಜಲೀಸ್ ಕರೋನರ್ ಕಚೇರಿ ಖಚಿತಪಡಿಸಿದೆ.

Read Full Story
09:03 PM (IST) Jul 02

India News Live 2nd July: ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದ್ರೂ ಭಾರತದಲ್ಲಿಲ್ಲ ಎಂದಿದ್ಯಾಕೆ ಪುರಿ?

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಮುಂದುವರಿದರೂ, ಈ ಹಿಂದೆ ದುಬಾರಿ ಬೆಲೆಗೆ ಖರೀದಿಸಿದ ತೈಲದಿಂದಾದ ನಷ್ಟವನ್ನು ತೈಲ ಕಂಪನಿಗಳು ಇನ್ನೂ ಸರಿದೂಗಿಸುತ್ತಿವೆ ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

Read Full Story
08:58 PM (IST) Jul 02

India News Live 2nd July: ಕುಂಭಮೇಳದ ವೈರಲ್​ ಲೇಡಿ ಮೊನಾಲಿಸಾ ಪತಿ ಫರ್ಮಾನ್​ಗೆ ಸಿಕ್ಕಿಲ್ಲ ಬೇಲ್​! ಯಾವುದೇ ಕ್ಷಣದಲ್ಲಿ ಅರೆಸ್ಟ್

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾಳ ಪತಿ ಮೊಹಮ್ಮದ್ ಫರ್ಮಾನ್, ಅಪ್ರಾಪ್ತೆಯನ್ನು ಮದುವೆಯಾದ ಆರೋಪ ಎದುರಿಸುತ್ತಿದ್ದಾರೆ. ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಪೋಕ್ಸೋ ಕಾಯ್ದೆಯಡಿ ಮಧ್ಯಪ್ರದೇಶ ಪೊಲೀಸರು ಯಾವುದೇ ಕ್ಷಣದಲ್ಲಿ ಅವರನ್ನು ಬಂಧಿಸುವ ಸಾಧ್ಯತೆಯಿದೆ.
Read Full Story
08:28 PM (IST) Jul 02

India News Live 2nd July: ರಾಹುಲ್‌ ದ್ರಾವಿಡ್ ಪುತ್ರನ ಅಬ್ಬರ - 360° ಬ್ಯಾಟಿಂಗ್‌ನಿಂದ ಗಮನ ಸೆಳೆದ ಸಮಿತ್, ವಿಡಿಯೋ

ಮಹಾರಾಜ ಟ್ರೋಫಿ ಟಿ20 ಪಂದ್ಯದಲ್ಲಿ, ರಾಹುಲ್ ದ್ರಾವಿಡ್ ಪುತ್ರ ಸಮಿತ್ ದ್ರಾವಿಡ್ ಅವರ ಉತ್ತಮ ಪ್ರದರ್ಶನದ ನೆರವಿನಿಂದ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡವು ಹುಬ್ಬಳ್ಳಿ ಟೈಗರ್ಸ್ ವಿರುದ್ಧ 2 ರನ್‌ಗಳ ರೋಚಕ ಜಯ ಸಾಧಿಸಿತು. ಈ ಪಂದ್ಯದಲ್ಲಿ ಹುಬ್ಬಳ್ಳಿ ನಾಯಕ ಮಯಾಂಕ್ ಅಗರ್ವಾಲ್ ಗಾಯಗೊಂಡರು.
Read Full Story
08:06 PM (IST) Jul 02

India News Live 2nd July: ಮಹಿಳೆಯರ ಒಳ ಉಡುಪಿನ ಹುಕ್‌ ತೆಗೆದು ಗಿನ್ನೆಸ್‌ ದಾಖಲೆ ಬರೆದ! ವಿಡಿಯೋ ನೋಡಿ ಸುಸ್ತಾದ ಜನರು

ಟರ್ಕಿಯ ವ್ಯಕ್ತಿಯೊಬ್ಬ ಒಂದು ನಿಮಿಷದಲ್ಲಿ ಒಂದೇ ಕೈಯಿಂದ 100 ಮಹಿಳೆಯರ ಬ್ರಾ ಹುಕ್‌ಗಳನ್ನು ತೆಗೆದು ಹೊಸ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾನೆ. 2013ರ 91 ಬ್ರಾಗಳ ಹಿಂದಿನ ದಾಖಲೆಯನ್ನು ಮುರಿದ ಈ ವಿಚಿತ್ರ ಸಾಧನೆಯು ಇದೀಗ ಅಧಿಕೃತವಾಗಿ ದಾಖಲೆ ಪುಸ್ತಕ ಸೇರಿದೆ.
Read Full Story
08:05 PM (IST) Jul 02

India News Live 2nd July: ಕಡಿಮೆ ಬೆಲೆಯಲ್ಲಿ ಪವರ್‌ಫುಲ್ ಬ್ಯಾಟರಿ, HD ಕ್ವಾಲಿಟಿ ಕ್ಯಾಮೆರಾವುಳ್ಳ ಸ್ಮಾರ್ಟ್‌ಫೋನ್‌ಗಳು

ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸುತ್ತಿದ್ದರೆ, ಈ ಲೇಖನ ನಿಮಗಾಗಿ. ಅಧಿಕ ಫೀಚರ್‌ಗಳನ್ನು ಹೊಂದಿರುವ ನಾಲ್ಕು ಅತ್ಯುತ್ತಮ ಫೋನ್‌ಗಳ ಮಾಹಿತಿ ನೀಡಲಾಗಿದೆ. ಈ ಫೋನ್‌ಗಳು ದೈತ್ಯ ಬ್ಯಾಟರಿ, ಉತ್ತಮ ಕ್ಯಾಮೆರಾ ಮತ್ತು ಬಲಿಷ್ಠ ಪ್ರೊಸೆಸರ್‌ಗಳನ್ನು ಒಳಗೊಂಡಿವೆ.

Read Full Story
07:52 PM (IST) Jul 02

India News Live 2nd July: ಸಂಸದೆಯ ಮನೆಯಲ್ಲಿ 27 ಕೆಜಿ ಚಿನ್ನದ ಒಳ ಉಡುಪು, 927 ಕೋಟಿ ನಗದು! ಜಾಗತಿಕ ಸಂಚಲನ

ಇರಾಕ್‌ನ ಬಗ್ದಾದ್‌ನಲ್ಲಿ ಸಂಸದೆ ಹಿಂದ್ ಅಲ್-ಅಬ್ಬಾಸಿ ಅವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ, ಅಧಿಕಾರಿಗಳು 927 ಕೋಟಿ ರೂಪಾಯಿ ನಗದು ಮತ್ತು 27 ಕೆ.ಜಿ ತೂಕದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಈ ಚಿನ್ನದಲ್ಲಿ ಚಿನ್ನದ ಒಳ ಉಡುಪುಗಳು ಸೇರಿವೆ.

Read Full Story
07:45 PM (IST) Jul 02

India News Live 2nd July: Veena Nagda - 7 ರೂಪಾಯಿಗೆ ಮೆಹೆಂದಿ ಹಾಕ್ತಿದ್ದ ಹುಡುಗಿ, ಇಂದು ಬಾಲಿವುಡ್ ಸ್ಟಾರ್‌ಗಳೇ ಕಾಯ್ತಾರೆ!

ಕೆಲವೊಮ್ಮೆ ಜೀವನದ ದಿಕ್ಕನ್ನೇ ಬದಲಿಸಲು ಒಂದೇ ಒಂದು ಹೊಗಳಿಕೆ ಸಾಕು. ಬಾಲಿವುಡ್‌ನ ಖ್ಯಾತ ಮೆಹೆಂದಿ ಕಲಾವಿದೆ ವೀಣಾ ನಾಗ್ಡಾ ಅವರ ಕಥೆಯೂ ಇದೇ ರೀತಿ ಇದೆ. ಕೇವಲ 6-7 ರೂಪಾಯಿಗೆ ಮೆಹೆಂದಿ ಹಾಕುತ್ತಿದ್ದ ವೀಣಾ..

Read Full Story
06:18 PM (IST) Jul 02

India News Live 2nd July: ಅಲ್ಲಿಯೂ ಇಲ್ಲ, ಇಲ್ಲಿಯೂ ಬೇಡ; ಯಾರಿಗೂ ಬೇಡವಾದ ಹಾರ್ದಿಕ್? CSK & MIನಿಂದ ಹೇಳಿಕೆ

ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್ ಕೈಬಿಡಲಿದೆಯೇ? ಕಳಪೆ ಪ್ರದರ್ಶನದ ನಂತರ ತಂಡದ ಅಚ್ಚರಿಯ ಹೇಳಿಕೆ ಮತ್ತು ಇತರ ತಂಡಗಳ ಸ್ಪಷ್ಟನೆ ಬಗ್ಗೆ ಸಂಪೂರ್ಣವಾಗಿ ತಿಳಿಯಿರಿ.

Read Full Story
06:09 PM (IST) Jul 02

India News Live 2nd July: ಇರಾಕ್ ಸಂಸದೆ ಮನೆಯಲ್ಲಿ ಕಂತೆ ಕಂತೆ ಹಣ, 27 ಕೆಜಿ ಬಂಗಾರ, ಬಂಗಾರದ ಒಳ ಉಡುಪು ಪತ್ತೆ!

ಇರಾಕ್‌ನಲ್ಲಿ ನಡೆದ ಬೃಹತ್ ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆಯಲ್ಲಿ, ಸಂಸದೆ ಅಲಿಯಾ ನಾಸಿಫ್ ಸೇರಿದಂತೆ ಹಲವು ಉನ್ನತಾಧಿಕಾರಿಗಳನ್ನು ಬಂಧಿಸಲಾಗಿದೆ. ದಾಳಿಯ ವೇಳೆ ಕೋಟ್ಯಂತರ ರೂಪಾಯಿ ನಗದು, ಅಪಾರ ಚಿನ್ನ ಪತ್ತೆಯಾಗಿದ್ದು, ಹಣವನ್ನು ನೆಲದಡಿಯಲ್ಲಿ ಹೂತಿಡಲಾಗಿತ್ತು. ಇದೇ ವೇಳೆ, ಮತ್ತೋರ್ವ ಸಂಸದೆ ಹಿಂದ್ ಅಲ್ ಅಬ್ಬಾಸಿ ಮನೆಯಲ್ಲಿ ಚಿನ್ನದ ಒಳಉಡುಪು ಸಿಕ್ಕಿದೆ ಎಂಬ ಸುದ್ದಿ ವೈರಲ್ ಆಗಿದೆ.
Read Full Story
06:04 PM (IST) Jul 02

India News Live 2nd July: ಮಳೆಗಾಲದಲ್ಲಿ ಈ ಕಪ್ಪೆಗಳು ಬಣ್ಣ ಬದಲಿಸೋದ್ಯಾಕೆ? ಕಪ್ಪೆಗಳ ಚಿನ್ನದ ಬಣ್ಣದ ರಹಸ್ಯ

ಆಂಧ್ರಪ್ರದೇಶದ ಕೈಕಲೂರಿನಲ್ಲಿ ಅಪರೂಪದ ಹಳದಿ ಕಪ್ಪೆಗಳು ಕಾಣಿಸಿಕೊಂಡಿವೆ. ಇವು ಇಂಡಿಯನ್ ಬುಲ್ ಫ್ರಾಗ್ ಆಗಿದ್ದು, ಮಳೆಗಾಲದಲ್ಲಿ ಸಂತಾನೋತ್ಪತ್ತಿಗಾಗಿ ಗಂಡು ಕಪ್ಪೆಗಳು ಹೆಣ್ಣನ್ನು ಆಕರ್ಷಿಸಲು ತಮ್ಮ ಬಣ್ಣವನ್ನು ಬದಲಾಯಿಸುತ್ತವೆ. ಪರಿಸರ ಮಾಲಿನ್ಯದಿಂದಾಗಿ ಈ ಜೀವಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ಕುರಿತ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.

Read Full Story
05:29 PM (IST) Jul 02

India News Live 2nd July: Obsession - ಬಾಕ್ಸಾಫೀಸ್ ಲೂಟಿ ಮಾಡಿದ ಹಾರರ್ ಸಿನಿಮಾ ಈಗ OTTಯಲ್ಲಿ! ಆದರೆ ನೋಡಲು ಈ ಷರತ್ತು ಅನಿವಾರ್ಯ

Obsession ಸಿನಿಮಾದ ಡಿವಿಡಿ, ಬ್ಲೂ-ರೇ ಮತ್ತು 4K UHD ಆವೃತ್ತಿಗಳನ್ನು ಜುಲೈ 14 ರಂದು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ. ಅಲ್ಲದೆ, ಪೀಕಾಕ್ ಸ್ಟ್ರೀಮಿಂಗ್ ಸೇವೆಯಲ್ಲೂ ಇದು ಲಭ್ಯವಾಗುವ ನಿರೀಕ್ಷೆಯಿದೆ.

Read Full Story
05:20 PM (IST) Jul 02

India News Live 2nd July: ಶಾರುಕ್ ಖಾನ್ ಕನಸು ನನಸು; 2028ರ ಲಾಸ್ ಏಂಜಲೀಸ್‌ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸ್ಟೇಡಿಯಂ ಕಟ್ಟಿದ ಕಿಂಗ್ ಖಾನ್

ಬಾಲಿವುಡ್ ನಟ ಶಾರುಕ್ ಖಾನ್, ಮೇಜರ್ ಲೀಗ್ ಕ್ರಿಕೆಟ್ ಸಹಯೋಗದೊಂದಿಗೆ ಲಾಸ್ ಏಂಜಲೀಸ್‌ನಲ್ಲಿ ವಿಶ್ವದರ್ಜೆಯ ಕ್ರಿಕೆಟ್ ಸ್ಟೇಡಿಯಂ ಅನ್ನು ಅನಾವರಣಗೊಳಿಸಿದ್ದಾರೆ. ಈ ಮೈದಾನವು ಲಾಸ್ ಏಂಜಲೀಸ್ ನೈಟ್ ರೈಡರ್ಸ್ ತಂಡದ ತವರು ಮೈದಾನವಾಗಲಿದ್ದು, 2028ರ ಒಲಿಂಪಿಕ್ಸ್ ಪಂದ್ಯಗಳಿಗೆ ಆತಿಥ್ಯ ವಹಿಸುವ ನಿರೀಕ್ಷೆಯಿದೆ.
Read Full Story
05:17 PM (IST) Jul 02

India News Live 2nd July: National Award Winners - 'ಛತ್ರಪತಿ ಶಿವಾಜಿ ಮಹಾರಾಜ್'ಗೆ ಇಬ್ಬರು ರಾಷ್ಟ್ರ ಪ್ರಶಸ್ತಿ ವಿಜೇತರ ಆಗಮನ; ರಿಷಬ್ ಶೆಟ್ಟಿ ಚಿತ್ರಕ್ಕೆ ಮುಗಿಲು ಮುಟ್ಟಿದ ನಿರೀಕ್ಷೆ!

'ಛತ್ರಪತಿ ಶಿವಾಜಿ ಮಹಾರಾಜ್' ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕರು. ಜೊತೆಗೆ, ಮುಖ್ಯ ಭೂಮಿಕೆಯಲ್ಲಿ ನಟರಾದ ಅರ್ಜುನ್ ರಾಂಪಾಲ್ ಮತ್ತು ವಿವೇಕ್ ಒಬೆರಾಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗ ಈ ಹೊಸ ಬೆಳವಣಿಗೆ ಆಗಿದ್ದು, ಅದೇನು ಅಂತ ನೋಡಿ..

Read Full Story
05:02 PM (IST) Jul 02

India News Live 2nd July: RRR ಬಳಿಕ ರಾಜಮೌಳಿಗೆ ಮತ್ತೊಂದು ವಿಶ್ವಮಟ್ಟದ ಗೌರವ - ಎಲ್ಲರೂ ಹೆಮ್ಮೆಪಡುವ ಸುದ್ದಿ!

Rajamouli France Honour: ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರಿಗೆ ಫ್ರಾನ್ಸ್‌ನಲ್ಲಿ ಅಪರೂಪದ ಗೌರವ ಸಿಕ್ಕಿದೆ. ಫ್ರಾನ್ಸ್‌ನ ಲಿಯಾನ್ ನಗರದಲ್ಲಿರುವ ಲ್ಯೂಮಿಯೆರ್ ಮ್ಯೂಸಿಯಂಗೆ ರಾಜಮೌಳಿ ಭೇಟಿ ನೀಡಿದ್ದರು. 

Read Full Story
04:42 PM (IST) Jul 02

India News Live 2nd July: ಮೊಬೈಲ್‌ನಲ್ಲಿ ಮಾತನಾಡುತ್ತಾ ಮ್ಯಾನ್‌ಹೋಲ್‌ಗೆ ಬಿದ್ದ ವ್ಯಕ್ತಿ; ಗುತ್ತಿಗೆದಾರರನ ವಿರುದ್ಧ ಕ್ರಮ

ಭಾರೀ ಮಳೆಯಿಂದಾಗಿ, ಫೋನ್‌ನಲ್ಲಿ ಮಾತನಾಡುತ್ತಾ ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು 55 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಖಾಸಗಿ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಕಠಿಣ ಕ್ರಮದ ಭರವಸೆ ನೀಡಿದೆ.

Read Full Story
04:38 PM (IST) Jul 02

India News Live 2nd July: ಭಾರತೀಯ ರೈಲ್ವೇಯಿಂದ ಮಹತ್ವದ ಘೋಷಣೆ - ಅಡ್ವಾನ್ಸ್ ರೈಲು ಟಿಕೆಟ್ ಬುಕ್ಕಿಂಗ್ ಮಾಡುವವರು ಈ ಸುದ್ದಿ ತಪ್ಪದೇ ನೋಡಿ

ಬೆಂಗಳೂರು: ಭಾರತೀಯ ರೈಲ್ವೇ ಪ್ರಯಾಣಿಕರು ನೂರು ದಿನಕ್ಕೂ ಹೆಚ್ಚಿನ ಕಾಲ ಮುಂಗಡವಾಗಿ ಟಿಕೆಟ್ ಬುಕ್ ಮಾಡುವವರು ಓದಲೇಬೇಕಾದ ಸುದ್ದಿಯಿದೆ. ಯಾಕೆಂದರೆ ಈ ವಿಚಾರದಲ್ಲಿ ಭಾರತೀಯ ರೈಲ್ವೇ ಇದೀಗ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.

Read Full Story