ಗಂಡನಿಗೆ ಕಚ್ಚಿದ ಹಾವು; ಟಿವಿ ನೋಡಿ ಬಾಯಿಂದ ವಿಷ ಹೀರಿದ ಪತ್ನಿ! ಆಮೇಲಾಗಿದ್ದೇ ಬೇರೆ ಕಥೆ
ರೈತರೊಬ್ಬರಿಗೆ ಹಾವು ಕಚ್ಚಿದಾಗ, ಅವರ ಪತ್ನಿ ಟಿವಿಯಲ್ಲಿ ನೋಡಿದ್ದನ್ನು ನೆನಪಿಸಿಕೊಂಡು ಬಾಯಿಯಿಂದ ವಿಷವನ್ನು ಹೀರಿ ತೆಗೆದಿದ್ದಾರೆ. ಹಾವು ಕಚ್ಚಿದಾಗ ಬಾಯಿಯಿಂದ ವಿಷ ಹೀರುವುದು ಅಪಾಯಕಾರಿ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಬಾಯಿಯಿಂದ ವಿಷ ಹೀರಿದ ಪತ್ನಿ
ರೈತರೊಬ್ಬರಿಗೆ ಹಾವು ಕಚ್ಚಿದ್ದನ್ನು ನೋಡಿ ಗಾಬರಿಗೊಂಡ ಆತನ ಪತ್ನಿ, ಹಿಂದೆಂದೋ ಟಿವಿಯಲ್ಲಿ ನೋಡಿದ್ದನ್ನು ನೆನಪಿಸಿಕೊಂಡು, ಗಾಯದಿಂದ ವಿಷವನ್ನು ಬಾಯಿಯಿಂದ ಹೀರಿ ತೆಗೆದಿದ್ದಾರೆ. ಬಾಯಿಯಿಂದ ವಿಷ ಹೀರಿದ ಬಳಿಕ ಆಮೇಲೆ ಆಗಿದ್ದು ಬೇರೆ? ಈ ಬಗ್ಗೆ ಜಿಮು ನ್ಯೂಸ್ ವರದಿ ಮಾಡಿದೆ.
ಇಬ್ಬರ ದೇಹದಲ್ಲಿಯೂ ಹಾವಿನ ಅಂಶ
ಗಂಡನಿಂದ ವಿಷ ಹೀರಿದ ಬಳಿಕ ಮಹಿಳೆಯ ಆರೋಗ್ಯ ಸ್ಥಿತಿಯೂ ಗಂಭೀರವಾಗಿತ್ತು. ಸೌತ್ ಚೈನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಚೀನಾದ ನೈಋತ್ಯ ಭಾಗದ ಯನನ್ ಪ್ರಾಂತ್ಯದ ಯುವಾನ್‌ಯಾಂಗ್ ಕೌಂಟಿ ಎಂಬಲ್ಲಿ ಈ ಘಟನೆ ನಡೆದಿದೆ. ಹಾವು ಕಚ್ಚಿದ ಕೂಡಲೇ ಗಾಯದ ಜಾಗ ಊದಿಕೊಂಡು ರೈತನಿಗೆ ತಲೆಸುತ್ತು ಮತ್ತು ನಿತ್ರಾಣ ಶುರುವಾಗಿತ್ತು. ಇದನ್ನು ನೋಡುತ್ತಿದ್ದಂತೆ ರೈತನ ಪತ್ನಿ, ಹಾವು ಕಚ್ಚಿದ ಭಾಗದಿಂದ ವಿಷವನ್ನು ಹೀರಿ ತೆಗೆದಿದ್ದಾರೆ. ನಂತರ ರೈತನನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು.
ಆ್ಯಂಟಿವೆನಮ್ ಸಿರಮ್ ಚುಚ್ಚುಮದ್ದು
ಇದಾದ ಕೆಲವೇ ಗಂಟೆಗಳಲ್ಲಿ ಮಹಿಳೆಗೂ ಬಾಯಿ, ನಾಲಿಗೆ, ಮುಖ ಮತ್ತು ಕೈಕಾಲುಗಳಲ್ಲಿ ಜುಮ್ಮೆನಿಸುವ ಅನುಭವ ಆಗಿದೆ. ಮರುದಿನ ಮಹಿಳೆ ಆರೋಗ್ಯದಲ್ಲಿಯೂ ವ್ಯತ್ಯಾಸ ಕಂಡು ಬಂದಿದೆ. ಕೂಡಲೇ ಕುಟುಂಬಸ್ಥರು ಮಹಿಳೆಯನ್ನು ಹಾಂಗ್‌ಹೇ ಪ್ರಿಫೆಕ್ಚರ್ ನಂ. 3 ಪೀಪಲ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಪರೀಕ್ಷಿಸಿದಾಗ ದಂಪತಿಯಲ್ಲಿ ಸ್ಥಳೀಯ ನಾಗರಹಾವಿನ ಪ್ರಬೇಧದ ವಿಷದಂಶ ಪತ್ತೆಯಾಗಿದೆ. ನಂತರ ಇಬ್ಬರಿಗೂ ಆ್ಯಂಟಿವೆನಮ್ ಸಿರಮ್ ಚುಚ್ಚುಮದ್ದು ನೀಡಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್
ಚಿಕಿತ್ಸೆ ನೀಡಿದರೂ ಇಬ್ಬರ ಆರೋಗ್ಯದಲ್ಲಿ ಕೊಂಚ ಸುಧಾರಣೆ ಕಂಡು ಬಂದಿತ್ತು. ಆದರ, ಕೆಲವು ದಿನಗಳ ನಂತರ ತಜ್ಞರ ನಿರಂತರ ಚಿಕಿತ್ಸೆಯ ನಂತರ ಇಬ್ಬರೂ ಚೇತರಿಸಿಕೊಂಡು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಚೀನಾದ ಪತ್ರಿಕೆಗಳು ವರದಿ ಮಾಡಿವೆ.
ಇಂತಹ ಮೂರ್ಖತನ ಬೇಡ
ಹಾವು ಕಚ್ಚಿದಾಗ ವಿಷವನ್ನು ಬಾಯಿಯಿಂದ ಹೀರುವುದು ಕೇವಲ ಒಂದು ತಪ್ಪು ಕಲ್ಪನೆ. ಇದು ತುಂಬಾ ಅಪಾಯಕಾರಿ ಎಂದು ವೈದ್ಯರು ಎಚ್ಚರಿಸಿದ್ದಾರೆ. ಗಾಯದಿಂದ ಬಾಯಿಯ ಮೂಲಕ ವಿಷ ಹೀರುವಾಗ, ಬಾಯಿಯೊಳಗಿನ ಲೋಳೆಪೊರೆಯಲ್ಲಿರುವ ಸೂಕ್ಷ್ಮ ರಕ್ತನಾಳಗಳ ಮೂಲಕ ವಿಷವು ರಕ್ಷಕನ ರಕ್ತಕ್ಕೆ ಸೇರುತ್ತದೆ. ಹೀಗೆ ಮಾಡೋದರಿಂದ ವಿಷ ದೇಹಕ್ಕೆ ವಿಸ್ತರಣೆಯಾಗುತ್ತದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

