- Home
- News
- India News
- India news live: ಡೆಲ್ಲಿ ಕ್ಯಾಪಿಟಲ್ಸ್ಗೆ ಹ್ಯಾಟ್ರಿಕ್ ಗೆಲುವಿನ ಗುರಿ; ಆದ್ರೆ ಗುಜರಾತ್ ಟೈಟಾನ್ಸ್ ಎದುರು ಮ್ಯಾಚ್ ನಡಿಯೋದೇ ಅನುಮಾನ!
India news live: ಡೆಲ್ಲಿ ಕ್ಯಾಪಿಟಲ್ಸ್ಗೆ ಹ್ಯಾಟ್ರಿಕ್ ಗೆಲುವಿನ ಗುರಿ; ಆದ್ರೆ ಗುಜರಾತ್ ಟೈಟಾನ್ಸ್ ಎದುರು ಮ್ಯಾಚ್ ನಡಿಯೋದೇ ಅನುಮಾನ!

ನವದೆಹಲಿ: ತಮಿಳುನಾಡಿನ ಕಲ್ಪಾಕಂ ಅಣು ವಿದ್ಯುತ್ ಸ್ಥಾವರದಲ್ಲಿನ ಸಂಪೂರ್ಣ ಸ್ವದೇಶಿ ನಿರ್ಮಿತ ಪ್ರೋಟೋಟೈಪ್ ಫಾಸ್ಟ್ ಬೀಡರ್ ರಿಯಾಕ್ಟರ್ (ಪಿಎಫ್ ಬಿಆರ್) ಇದೀಗ ನಿರ್ಣಾಯಕ ಹಂತ ತಲುಪಿದ್ದು, ಪರಮಾಣು ವಿದಳನ ಪ್ರಕ್ರಿಯೆ ಆರಂಭಿಸಿದೆ. ಇದನ್ನು ಪರಮಾಣು ವಿದ್ಯುತ್ ಉತ್ಪಾದನೆಯ ದೊಡ್ಡ ಮೈಲುಗಲ್ಲು ಎಂದೇ ಪರಿಗಣಿಸಲಾಗಿದೆ. ರಷ್ಯಾ ಬಳಿಕ ಈ ಸಾಧನೆ ಮಾಡಿದ 2ನೇ ದೇಶ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ. ಇಂಧನ ದಹಿಸುತ್ತಲೇ ಇಂಧನ ಸೃಷ್ಟಿಸುವ ಘಟಕ ಇದಾಗಿದ್ದು, ಫಾಸ್ಟ್ ಬೀಡರ್ ಘಟಕ ಹೊಂದಿದ ವಿಶ್ವದ 2ನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಯಾಕೆ ಮಹತ್ವ?
ತ.ನಾಡಿನ ಕಲ್ಪಾಕಂ ಘಟಕ ಸಂಪೂರ್ಣ ಸ್ವದೇಶಿ ವಿನ್ಯಾಸ, ಮತ್ತು ಸ್ವದೇಶಿ ನಿರ್ಮಿತವಾಗಿದೆ.
ಘಟಕದಲ್ಲಿ ಯುರೇನಿಯಂ ಬಳಕೆ ಬಳಿಕ ಲಭ್ಯವಾಗುವ ಪ್ಲುಟೋನಿಯಂ ಮರು ಬಳಕೆ ಮಾಡಲಾಗುತ್ತದೆ.
ವಿದ್ಯುತ್ ಉತ್ಪತ್ತಿಗೆ ಕಡಿಮೆ ಯುರೇನಿಯಂ ಸಾಕಾಗುವುದು ಹಾಗೂ ತ್ಯಾಜ್ಯವೂ ಕಡಿಮೆ
ಸದ್ಯ ರಿಯಾಕ್ಟರ್ನಲ್ಲಿ ಅಣು ವಿದಳನ ಕ್ರಿಯೆ ಸುಸ್ಥಿರ ಹಂತಕ್ಕೆ ತಲುಪಿದೆ. ಈ ಎಲ್ಲಾ ಕಾರಣಗಳಿಂದ ಇದು ಮಹತ್ವ ಪಡೆದಿದೆ.
India news live Aprilಡೆಲ್ಲಿ ಕ್ಯಾಪಿಟಲ್ಸ್ಗೆ ಹ್ಯಾಟ್ರಿಕ್ ಗೆಲುವಿನ ಗುರಿ; ಆದ್ರೆ ಗುಜರಾತ್ ಟೈಟಾನ್ಸ್ ಎದುರು ಮ್ಯಾಚ್ ನಡಿಯೋದೇ ಅನುಮಾನ!
India news live Aprilಹೋರ್ಮುಜ್ನಿಂದ ಇರಾನ್ಗೆ ಪ್ರತಿ ತಿಂಗಳು 42000 ಕೋಟಿ ಆದಾಯ - 15 ದಿನದಲ್ಲಿ 2ನೇ ಸಲ ಇಂಧನ ದರ ಏರಿಸಿದ ಚೀನಾ
India news live AprilIPL 2026 - ನಿನ್ನೆ ತಡರಾತ್ರಿ ನಡೆದ ರಾಜಸ್ಥಾನ ರಾಯಲ್ಸ್-ಮುಂಬೈ ಇಂಡಿಯನ್ಸ್ ನಡುವಿನ ಮ್ಯಾಚ್ ಗೆದ್ದಿದ್ದು ಯಾರು?
India news live Aprilಹೋರ್ಮುಜ್ ಜಲಸಂಧಿ ತೆರೆಯಬೇಕೆಂಬ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗೊತ್ತುವಳಿಗೆ ರಷ್ಯಾ, ಚೀನಾ ಬ್ರೇಕ್
ಅಮೆರಿಕದ ದಾಳಿಯಿಂದಾಗಿ ಇರಾನ್ ಹೋರ್ಮುಜ್ ಜಲಸಂಧಿ ಮುಚ್ಚಿದ್ದು, ಇದನ್ನು ತೆರೆಯಲು ವಿಶ್ವಸಂಸ್ಥೆಯಲ್ಲಿ ಮಂಡಿಸಿದ ಗೊತ್ತುವಳಿಗೆ ರಷ್ಯಾ ಮತ್ತು ಚೀನಾ ವಿಟೋ ಚಲಾಯಿಸಿವೆ. ಈ ನಡುವೆ, ಸರ್ವನಾಶದ ಎಚ್ಚರಿಕೆ ನೀಡಿದ ಅಮೆರಿಕದೊಂದಿಗೆ ಇರಾನ್ ಮಾತುಕತೆಯ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಿದೆ ಎಂದು ವರದಿಯಾಗಿದೆ.