10:24 PM (IST) Mar 09

India Latest News Live 9 March 2026ರಂಜಾನ್ ತಿಂಗಳಲ್ಲೇ 3ನೇ ಪವಿತ್ರ ಅಲ್ ಅಕ್ಸಾ ಮಸೀದಿ ಬಂದ್ ಮಾಡಿಸಿದ ಇಸ್ರೇಲ್, ಕಾರಣವೇನು?

ರಂಜಾನ್ ತಿಂಗಳಲ್ಲೇ 3ನೇ ಪವಿತ್ರ ಅಲ್ ಅಕ್ಸಾ ಮಸೀದಿ ಬಂದ್ ಮಾಡಿಸಿದ ಇಸ್ರೇಲ್, ಕಾರಣವೇನು? ಜೆರುಸಲೇಂನಲ್ಲಿರುವ ಈ ಮಸೀದಿ ಇಸ್ರೇಲ್ ಸರ್ಕಾರದ ವ್ಯಾಪ್ತಿಯಲ್ಲಿದೆ. ಇದೀಗ ಈ ಮಸೀದಿಯನ್ನು ಇಸ್ರೇಲ್ ಬಂದ್ ಮಾಡಿಸಿದೆ.

Read Full Story
09:58 PM (IST) Mar 09

India Latest News Live 9 March 2026IDBI ಬ್ಯಾಂಕ್‌ನಿಂದ ನೇಮಕಾತಿ ಕರೆ - 1300 ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವೀಧರರ ಭವಿಷ್ಯ ಬದಲಾಗುವುದೇ?

IDBI ಬ್ಯಾಂಕ್ ದೇಶಾದ್ಯಂತ 1300 ಜೂನಿಯರ್ ಅಸಿಸ್ಟೆಂಟ್ ಮ್ಯಾನೇಜರ್ (JAM) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಯಾವುದೇ ವಿಭಾಗದಲ್ಲಿ ಪದವಿ ಪಡೆದ 20 ರಿಂದ 25 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ.
Read Full Story
09:55 PM (IST) Mar 09

India Latest News Live 9 March 2026ಯಾವುದೇ ಕಾರಣಕ್ಕೂ ಈ ಒಂದು ಬೆರಳಿಗೆ ಚಿನ್ನದ ಉಂಗುರ ಹಾಕ್ಬೇಡಿ - 21 ದಿನ ನೀವೇ ಟೆಸ್ಟ್​ ಮಾಡಿ ನೋಡಿ!

ಜ್ಯೋತಿಷ ಶಾಸ್ತ್ರದ ಪ್ರಕಾರ, ಒಂದು ಬೆರಳು ಶನಿ ಮಹಾತ್ಮನಿಗೆ ಸಂಬಂಧಿಸಿದ್ದಾಗಿದ್ದು, ಈ ಬೆರಳಿಗೆ ಚಿನ್ನದ ಉಂಗುರವನ್ನು ಧರಿಸುವುದರಿಂದ ಕೆಲಸ ಕಾರ್ಯಗಳಲ್ಲಿ ವಿಳಂಬ, ನಿರಾಸೆ ಮತ್ತು ನಿಧಾನಗತಿಯ ಪ್ರಗತಿ ಉಂಟಾಗಬಹುದು. 21 ದಿನಗಳ ಕಾಲ ಉಂಗುರವನ್ನು ತೆಗೆದು ವ್ಯತ್ಯಾಸವನ್ನು ಗಮನಿಸಿ ಎನ್ನುತ್ತಾರೆ ಅವರು.

Read Full Story
08:44 PM (IST) Mar 09

India Latest News Live 9 March 2026ಭಾರತೀಯ ಸೇನೆ ಅಗ್ನಿವೀರ್ ನೇಮಕಾತಿ 2026 - 25000 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಭಾರತೀಯ ಸೇನೆಯು ಅಗ್ನಿವೀರ್ ಜನರಲ್ ಡ್ಯೂಟಿ, ಟ್ರೇಡ್ಸ್‌ಮನ್, ಮತ್ತು ಕ್ಲರ್ಕ್ ಸೇರಿದಂತೆ 25,000ಕ್ಕೂ ಹೆಚ್ಚು ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. 10ನೇ ಅಥವಾ 12ನೇ ತರಗತಿ ಪಾಸಾದ 17.5 ರಿಂದ 22 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯು ಆನ್‌ಲೈನ್ ಪರೀಕ್ಷೆ ಮತ್ತು ನೇಮಕಾತಿ ರ‍್ಯಾಲಿಯನ್ನು ಒಳಗೊಂಡಿರುತ್ತದೆ.
Read Full Story
08:22 PM (IST) Mar 09

India Latest News Live 9 March 2026ರಾಮೇಶ್ವರಂ ಕೆಫೆಯಲ್ಲಿ ಇಡ್ಲಿ ಸಾಂಬಾರ್‌ ಸವಿದ ಮುಖೇಶ್‌ ಅಂಬಾನಿ!

ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಅವರು ತಮ್ಮ ಕಿರಿಯ ಮಗ ಅನಂತ್ ಮತ್ತು ಸೊಸೆ ರಾಧಿಕಾ ಮರ್ಚೆಂಟ್ ಅವರೊಂದಿಗೆ ಮುಂಬೈನ 'ರಾಮೇಶ್ವರಂ ಕೆಫೆ'ಗೆ ಭೇಟಿ ನೀಡಿದ್ದರು. ಶತಕೋಟ್ಯಾಧಿಪತಿಯಾದರೂ ಸಾಮಾನ್ಯರಂತೆ ಕೆಫೆಗೆ ಬಂದ ಅವರ ಸರಳತೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read Full Story
07:55 PM (IST) Mar 09

India Latest News Live 9 March 2026ಫ್ರೀ ಬಸ್​ ಜೊತೆ ಮಹಿಳೆಯರಿಗೆ ಚಿನ್ನ, ದುಡ್ಡು , ರೇಷ್ಮೆ ಸೀರೆ, ಸಿಲಿಂಡರ್‌ ಎಲ್ಲವೂ ಉಚಿತ- ಏನಿದು ಸ್ಕೀಮ್​?

 'ತಮಿಳಿಗ ವೆಟ್ರಿ ಕಳಗಂ' ಪಕ್ಷದ ಮೂಲಕ 'ಅಣ್ಣನ್ ಸೀರ್' ಎಂಬ ವಿಶೇಷ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಡಿ ಮದುವೆಗೆ 8 ಗ್ರಾಂ ಚಿನ್ನ, ವರ್ಷಕ್ಕೆ 6 ಉಚಿತ ಸಿಲಿಂಡರ್‌ಗಳು ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯದಂತಹ ಹಲವು ಉಚಿತ ಕೊಡುಗೆಗಳನ್ನು ನೀಡುವ ಭರವಸೆ ನೀಡಿದ್ದಾರೆ. 

Read Full Story
07:55 PM (IST) Mar 09

India Latest News Live 9 March 2026ಅಮಾನ್ ಗುಪ್ತಾ 'ಮ್ಯಾಜಿಕ್' - 3.75 ಕೋಟಿಯ ಬಿಸಿನೆಸ್ ಈಗ 1,100 ಕೋಟಿ ರೂಪಾಯಿ ಸಾಮ್ರಾಜ್ಯ!

ಶಾರ್ಕ್ ಟ್ಯಾಂಕ್ ಇಂಡಿಯಾದ ಪ್ರಮುಖ ಹೂಡಿಕೆದಾರ ಅಮಾನ್ ಗುಪ್ತಾ, ತಾವು ಬೆಂಬಲಿಸಿದ ಸ್ಟಾರ್ಟ್‌ಅಪ್‌ಗಳ ಯಶೋಗಾಥೆಯನ್ನು ಹಂಚಿಕೊಂಡಿದ್ದಾರೆ. 'ಲೆಟ್ಸ್ ಟ್ರೈ' ಮತ್ತು 'EM5 ಪರ್ಫ್ಯೂಮ್' ನಂತಹ ಕಂಪನಿಗಳು ಅವರ ಹೂಡಿಕೆಯ ನಂತರ ಮೌಲ್ಯ ಮತ್ತು ಆದಾಯದಲ್ಲಿ ಅಗಾಧ ಬೆಳವಣಿಗೆ ಕಂಡಿವೆ. 

Read Full Story
07:38 PM (IST) Mar 09

India Latest News Live 9 March 2026ನಿಷ್ಠೆ ಇದ್ದರೂ ಕೆಲಸಕ್ಕೆ ಸಿಗದ ಮನ್ನಣೆ - ರಾಜೀನಾಮೆ ಬಳಿಕ ಕಂಪೆನಿಯೊಳಗೆ ವೈರಲ್ ಆದ ಉದ್ಯೋಗಿಯ ಕಥೆ!

ಹನ್ನೊಂದು ವರ್ಷಗಳ ಕಾಲ ನಿಷ್ಠೆಯಿಂದ ದುಡಿದರೂ ಬಡ್ತಿ ಮತ್ತು ಮನ್ನಣೆ ಸಿಗದ ಉದ್ಯೋಗಿಯೊಬ್ಬರ ಕಥೆಯಿದು. ಕಚೇರಿ ರಾಜಕೀಯದಿಂದ ದೂರವಿದ್ದ ಅವರು, ಹೊಸ ಉದ್ಯೋಗಿಗೆ ತರಬೇತಿ ನೀಡಿದ ನಂತರ ತಮ್ಮ ಮೌಲ್ಯವನ್ನು ಅರಿತುಕೊಂಡು ರಾಜೀನಾಮೆ ನೀಡುತ್ತಾರೆ. ಅವರ ಈ ನಿರ್ಧಾರ ಮತ್ತು ಅದರ ನಂತರದ ಘಟನೆಗಳು ಕೆಲಸದ ಸ್ಥಳದಲ್ಲಿನ ನಿಷ್ಠೆಯ ಮೌಲ್ಯದ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story
07:31 PM (IST) Mar 09

India Latest News Live 9 March 2026Car Discount - 1 ಲೀಟರ್‌ಗೆ 27.97 ಕಿಮೀ ಮೈಲೇಜ್, 1 ಲಕ್ಷ ರೂಪಾಯಿ ಡಿಸ್ಕೌಂಟ್ ಇರುವ ಎಸ್‌ಯುವಿ ಆಫರ್ ಮಿಸ್ ಮಾಡ್ಕೋಬೇಡಿ!

ಟೊಯೋಟಾ ಹೈರೈಡರ್‌ ಮೇಲೆ 1 ಲಕ್ಷ ರೂಪಾಯಿವರೆಗೆ ಭರ್ಜರಿ ಡಿಸ್ಕೌಂಟ್ ಘೋಷಿಸಲಾಗಿದೆ. ಸೆಲ್ಫ್ ಚಾರ್ಜಿಂಗ್ ಸ್ಟ್ರಾಂಗ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಈ ಕಾರು, ಪ್ರತಿ ಲೀಟರ್‌ಗೆ 27.97 ಕಿ.ಮೀ. ಮೈಲೇಜ್ ನೀಡುತ್ತದೆ ಮತ್ತು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ.
Read Full Story
07:24 PM (IST) Mar 09

India Latest News Live 9 March 2026Salim Khan Health Update - ಸಲ್ಮಾನ್ ಖಾನ್ ತಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಯಾವಾಗ? ಇಲ್ಲಿದೆ ಲೇಟೆಸ್ಟ್ ಅಪ್‌ಡೇಟ್

ಸಲ್ಮಾನ್ ಖಾನ್ ಅವರ 90 ವರ್ಷದ ತಂದೆ ಸಲೀಂ ಖಾನ್, ಸಣ್ಣ ಬ್ರೈನ್ ಹೆಮರೇಜ್ ಕಾರಣ ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಸುಮಾರು 14 ದಿನಗಳಿಂದ ಅವರು ಆಸ್ಪತ್ರೆಯಲ್ಲಿದ್ದಾರೆ. ಇದೀಗ ಅವರ ಆರೋಗ್ಯದ ಬಗ್ಗೆ ಹೊಸ ಅಪ್‌ಡೇಟ್ ಬಂದಿದೆ.

Read Full Story
07:06 PM (IST) Mar 09

India Latest News Live 9 March 2026Aishwarya Lekshmi - 'ಸ್ನಾನ ಮಾಡ್ತಿದ್ದಾಗ ಬಂದ್ರಾ' ಅಂದ್ರು... ಟ್ರೋಲ್‌ಗಳಿಗೆ ನಟಿ ಕೊಟ್ಟ ಸಖತ್ ಉತ್ತರವೇನು!

ನಟಿ ಐಶ್ವರ್ಯ ಲಕ್ಷ್ಮಿ ಇತ್ತೀಚೆಗೆ ಒಂದು ಕಾರ್ಯಕ್ರಮದಲ್ಲಿ ಹಾಕಿದ್ದ ಡ್ರೆಸ್‌ನಿಂದಾಗಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಹಳದಿ ಬಣ್ಣದ ಸ್ಟ್ರಾಪ್‌ಲೆಸ್, ಸ್ಲೀವ್‌ಲೆಸ್ ಡ್ರೆಸ್ ಹಾಕಿಕೊಂಡು ಅವರು ಒಂದು ಉದ್ಘಾಟನಾ ಸಮಾರಂಭಕ್ಕೆ ಬಂದಿದ್ದರು.

Read Full Story
06:56 PM (IST) Mar 09

India Latest News Live 9 March 2026ಜನನಾಯಗನ್ ರೀ-ಸೆನ್ಸಾರ್, ಸಿಗುತ್ತಾ ಗ್ರೀನ್ ಸಿಗ್ನಲ್? ಟಾಕ್ಸಿಕ್‌​ಗೂ ಮುನ್ನ ಜನನಾಯಗನ್ ರಿಲೀಸ್?

ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರ 'ಜನನಾಯಗನ್' ಸೆನ್ಸಾರ್ ವಿವಾದಕ್ಕೆ ಸಿಲುಕಿತ್ತು. ಇಂದು ಚಿತ್ರದ ಮರು-ಸೆನ್ಸಾರ್ ನಡೆಯಲಿದ್ದು, ಅದರ ಭವಿಷ್ಯ ನಿರ್ಧಾರವಾಗಲಿದೆ. ಇದರ ನಡುವೆ ವಿಜಯ್ ಅವರ ವೈಯಕ್ತಿಕ ಜೀವನದ ವಿವಾದಗಳು ಅವರ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಬಹುದೇ ಎಂಬ ಚರ್ಚೆಯೂ ನಡೆಯುತ್ತಿದೆ.
Read Full Story
06:34 PM (IST) Mar 09

India Latest News Live 9 March 2026'2 ವರ್ಷದ ಮಗು ಮೇಲೆ ರೇ*ಪ್ ಆದಾಗ ಕೇಳಲಿಲ್ಲ, ಇವರ ಬಗ್ಗೆ ಯಾಕೆ ಮಾತಾಡ್ತೀರಾ?' - ವಿಜಯ್ ಅಭಿಮಾನಿಯ ಖಡಕ್ ಪ್ರಶ್ನೆ

ನಟ ವಿಜಯ್ ಮತ್ತು ಅವರ ಪತ್ನಿ ಸಂಗೀತ ಡೈವೋರ್ಸ್ ಪಡೆಯುತ್ತಿದ್ದಾರೆ, ಇದಕ್ಕೆ ನಟಿ ತ್ರಿಷಾ ಜೊತೆಗಿನ ಸಂಬಂಧವೇ ಕಾರಣ ಅಂತ ಸುದ್ದಿ ಹಬ್ಬಿತ್ತು. ಈಗ ಈ ಗಾಸಿಪ್‌ಗಳ ಬಗ್ಗೆ ಅಭಿಮಾನಿಯೊಬ್ಬರು ಗರಂ ಆಗಿದ್ದು, ಅವರ ಖಾಸಗಿ ಜೀವನದ ಚರ್ಚೆ ಮಾಡುವುದನ್ನು ವಿರೋಧಿಸಿದ್ದಾರೆ.

Read Full Story
06:22 PM (IST) Mar 09

India Latest News Live 9 March 2026ನವವಧುವಿಗೆ ಗಿಫ್ಟ್ - ‘ಇದು ನಂದೇ ಕಥೆ..’ ಎಂದಿದ್ದ ರಶ್ಮಿಕಾ ಮಂದಣ್ಣ..!

ನವವಧು ರಶ್ಮಿಕಾ ಮಂದಣ್ಣ ಅವರಿಗೆ 'ದಿ ಗರ್ಲ್ ಫ್ರೆಂಡ್' ಚಿತ್ರದ ಮನೋಜ್ಞ ನಟನೆಗಾಗಿ ತೆಲಂಗಾಣ ಸರ್ಕಾರದ ಗದ್ದರ್ ಫಿಲ್ಮ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ. ವಿಜಯ್ ದೇವರಕೊಂಡ ಜೊತೆಗಿನ ಮದುವೆಯ ನಂತರ ಬಂದ ಈ ಗೌರವ ಅವರ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.

Read Full Story
06:19 PM (IST) Mar 09

India Latest News Live 9 March 2026Prabhas ಅವರ 'ಈಶ್ವರ್' ಚಿತ್ರಕ್ಕೆ ಅಲ್ಲು ಅರ್ಜುನ್ ಫಸ್ಟ್ ಚಾಯ್ಸ್ ಆಗಿದ್ರಾ? ಮಿಸ್ ಆಗಿದ್ದೇಗೆ?

ರೆಬಲ್ ಸ್ಟಾರ್ ಪ್ರಭಾಸ್ ಅವರ ಚೊಚ್ಚಲ ಚಿತ್ರ 'ಈಶ್ವರ್'ಗೆ ಅಲ್ಲು ಅರ್ಜುನ್ ಕೂಡ ಆಡಿಷನ್ ಕೊಟ್ಟಿದ್ದರು ಅನ್ನೋದು ನಿಮಗೆ ಗೊತ್ತಾ? ಮಾಸ್ ಕಟೌಟ್ ಮತ್ತು ಫಿಸಿಕ್ ಸರಿಹೊಂದಲ್ಲ ಎಂಬ ಕಾರಣಕ್ಕೆ ನಿರ್ದೇಶಕರು ಅಲ್ಲು ಅರ್ಜುನ್ ಅವರನ್ನು ತಿರಸ್ಕರಿಸಿ, ಪ್ರಭಾಸ್ ಅವರನ್ನು ಆಯ್ಕೆ ಮಾಡಿದ್ದರಂತೆ.

Read Full Story
06:16 PM (IST) Mar 09

India Latest News Live 9 March 2026ಮೂರನೇ ಬಾರಿಗೆ 5 ಮರಿಗಳಿಗೆ ಜನ್ಮ ನೀಡಿದ ಆಫ್ರಿಕಾದಿಂದ ತಂದ ಚೀತಾ ಜ್ವಾಲಾ, 50 ದಾಟಿದ ಸಂಖ್ಯೆ

ಮೂರನೇ ಬಾರಿಗೆ 5 ಮರಿಗಳಿಗೆ ಜನ್ಮ ನೀಡಿದ ಆಫ್ರಿಕಾದಿಂದ ತಂದ ಚೀತಾ ಜ್ವಾಲಾ, 50 ದಾಟಿದ ಸಂಖ್ಯೆ, ಕುನೋ ರಾಷ್ಟ್ರೀಯ ಅಭಯಾರಣ್ಯದಲ್ಲಿ ಇದೀಗ ಜ್ವಾಲಾ ಚೀತಾ ಮರಿಗಳ ಸದ್ದು ಕೇಳಿಸುತ್ತಿದೆ. ಕೇಂದ್ರ ಸಚಿವ ವಿಡಿಯೋ ಪೋಸ್ಟ್ ಮಾಡಿದ್ದಾರೆ.

Read Full Story
05:19 PM (IST) Mar 09

India Latest News Live 9 March 2026'ಹೊರಗಿನ ಜಗತ್ತಿಗೆ ನಾನು ಹೇಗೇ ಕಂಡರೂ ..' - ವಿಶ್ವಕಪ್ ಗೆಲ್ಲಿಸಿ ಪತ್ನಿಗೆ ಭಾವನಾತ್ಮಕ ಪತ್ರ ಬರೆದ ಸಂಜು ಸ್ಯಾಮ್ಸನ್

ಟಿ20 ವಿಶ್ವಕಪ್ ಗೆದ್ದ ನಂತರ, ಟೀಂ ಇಂಡಿಯಾ ಆಟಗಾರ ಸಂಜು ಸ್ಯಾಮ್ಸನ್ ತಮ್ಮ ಯಶಸ್ಸಿನ ಶ್ರೇಯವನ್ನು ಪತ್ನಿ ಚಾರುಲತಾಗೆ ಸಲ್ಲಿಸಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಟೂರ್ನಿಯಲ್ಲಿ 321 ರನ್ ಗಳಿಸಿ, ಅತಿ ಹೆಚ್ಚು ಸಿಕ್ಸರ್‌ಗಳ ದಾಖಲೆ ಬರೆದ ಸಂಜು ಸ್ಯಾಮ್ಸನ್.

Read Full Story
05:14 PM (IST) Mar 09

India Latest News Live 9 March 2026ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ರಾಧಿಕಾ ಸಿನಿಮಾ - 10 ದಿನಕ್ಕೆ ಇಷ್ಟೊಂದು ಕೋಟಿ ಕಲೆಕ್ಷನ್?

ರಾಧಿಕಾ ಶರತ್‌ಕುಮಾರ್ ನಟನೆಯ 'ತಾಯಿ ಕಿಳವಿ' ಸಿನಿಮಾ ಥಿಯೇಟರ್‌ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಕೇವಲ 10 ದಿನಗಳಲ್ಲಿ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.

Read Full Story
05:02 PM (IST) Mar 09

India Latest News Live 9 March 2026ಮಹಿಳಾ ಸ್ಕೂಬಾ ಡೈವರ್‌ನ ಎಲ್ಲೆಂದರಲ್ಲಿ ಮುಟ್ಟಿ ಕಿರುಕುಳ ಕೊಟ್ಟ ತರಬೇತುದಾರ, ವಿಡಿಯೋ ಬಹಿರಂಗ

ಮಹಿಳಾ ಸ್ಕೂಬಾ ಡೈವರ್‌ನ ಎಲ್ಲೆಂದರಲ್ಲಿ ಮುಟ್ಟಿ ಕಿರುಕುಳ ಕೊಟ್ಟ ತರಬೇತುದಾರ, ವಿಡಿಯೋ ಬಹಿರಂಗವಾಗಿದೆ. ಯುವತಿ ಸ್ಕೂಬಾ ಡೈವಿಂಗ್ ಮಾಡುವ ವೇಳೆ ಈ ಘಟನೆ ನಡೆದಿದೆ. ಇದೀಗ ಭಾರಿ ಆಕ್ರೋಶಗಳು ವ್ಯಕ್ತವಾಗಿದೆ.

Read Full Story
04:59 PM (IST) Mar 09

India Latest News Live 9 March 2026ನೇಮಕಾತಿಯ ಕರಾಳ ಮುಖ - ಅಸಭ್ಯವಾಗಿ ಉತ್ತರಿಸಿದ ಹೆಚ್‌ಆರ್, ವೈರಲ್ ಆದ ವಾಟ್ಸಾಪ್ ಚಾಟ್

ಉದ್ಯೋಗಾಕಾಂಕ್ಷಿಯೊಬ್ಬರು ನೇಮಕಾತಿ ಪ್ರತಿನಿಧಿಯೊಂದಿಗೆ ನಡೆದ ವಾಟ್ಸಾಪ್ ಸಂಭಾಷಣೆಯನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಸಂಬಳದ ಮಾತುಕತೆ ವೇಳೆ, HR ಪ್ರತಿನಿಧಿಯು "ನೀವು ಅಷ್ಟು ಸಂಬಳ ನೀಡುವಷ್ಟು ಒಳ್ಳೆಯವರಲ್ಲ" ಎಂದು ಅಸಭ್ಯವಾಗಿ ಉತ್ತರಿಸಿದ್ದು, ಈ ಘಟನೆ ನೇಮಕಾತಿ ಪ್ರಕ್ರಿಯೆಯಲ್ಲಿನ ವೃತ್ತಿಪರತೆಯ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story