ನಟ ವಿಜಯ್ ಮತ್ತು ಅವರ ಪತ್ನಿ ಸಂಗೀತ ಡೈವೋರ್ಸ್ ಪಡೆಯುತ್ತಿದ್ದಾರೆ, ಇದಕ್ಕೆ ನಟಿ ತ್ರಿಷಾ ಜೊತೆಗಿನ ಸಂಬಂಧವೇ ಕಾರಣ ಅಂತ ಸುದ್ದಿ ಹಬ್ಬಿತ್ತು. ಈಗ ಈ ಗಾಸಿಪ್‌ಗಳ ಬಗ್ಗೆ ಅಭಿಮಾನಿಯೊಬ್ಬರು ಗರಂ ಆಗಿದ್ದು, ಅವರ ಖಾಸಗಿ ಜೀವನದ ಚರ್ಚೆ ಮಾಡುವುದನ್ನು ವಿರೋಧಿಸಿದ್ದಾರೆ.

ತಮಿಳು ನಟ ದಳಪತಿ ವಿಜಯ್ ಮತ್ತು ಅವರ ಪತ್ನಿ ಸಂಗೀತ ಬೇರೆಯಾಗುತ್ತಿದ್ದಾರೆ ಅನ್ನೋ ಸುದ್ದಿ ಇಡೀ ತಮಿಳು ಚಿತ್ರರಂಗಕ್ಕೆ ಮತ್ತು ಅಭಿಮಾನಿಗಳಿಗೆ ದೊಡ್ಡ ಶಾಕ್ ಕೊಟ್ಟಿತ್ತು. ಸಂಗೀತ ಕಳುಹಿಸಿದ್ದಾರೆ ಎನ್ನಲಾದ ವಕೀಲರ ನೋಟಿಸ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಆ ನೋಟಿಸ್‌ನಲ್ಲಿ ಹಲವು ವಿಚಾರಗಳಿದ್ದರೂ, ವಿಜಯ್‌ಗೆ ಒಬ್ಬ ನಟಿಯ ಜೊತೆ ಅಕ್ರಮ ಸಂಬಂಧವಿದೆ ಅನ್ನೋ ಪಾಯಿಂಟ್ ಎಲ್ಲರ ಗಮನ ಸೆಳೆದಿತ್ತು. ಆ ನಟಿ ಯಾರು ಎಂಬ ಚರ್ಚೆ ಶುರುವಾಗಿ, ಕೊನೆಗೆ ಅದು ತ್ರಿಷಾ ಅಂತ ಸೋಶಿಯಲ್ ಮೀಡಿಯಾ ಬಳಕೆದಾರರೇ ಒಂದು ನಿರ್ಧಾರಕ್ಕೆ ಬಂದಿದ್ದರು.

Add Asianetnews Kannada as a Preferred SourcegooglePreferred

ಈ ಎಲ್ಲಾ ವಿವಾದಗಳು ಒಂದು ಕಡೆ ನಡೆಯುತ್ತಿದ್ದರೆ, ವಿಜಯ್ ತಮ್ಮ ಟಿವಿ‌ಕೆ (ತಮಿಳಗ ವೆಟ್ರಿ ಕಳಗಂ) ಪಕ್ಷದ ಕಾರ್ಯಕ್ರಮವೊಂದರಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದರು. 'ನನ್ನ ಸಮಸ್ಯೆಗಳನ್ನ ನಾನೇ ನೋಡಿಕೊಳ್ತೀನಿ' ಅಂತ ಅವರು ಹೇಳಿದ್ದರು. ಈಗ ತ್ರಿಷಾ-ವಿಜಯ್ ಬಗ್ಗೆ ಹಬ್ಬಿರುವ ಗಾಸಿಪ್‌ಗಳ ವಿರುದ್ಧ ಅಭಿಮಾನಿಯೊಬ್ಬರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಗಂಡ-ಹೆಂಡತಿ ನಡುವಿನ ಸಮಸ್ಯೆಯನ್ನು ಯಾಕೆ ಸಾರ್ವಜನಿಕವಾಗಿ ಚರ್ಚಿಸುತ್ತಿದ್ದೀರಿ ಎಂದು ಅವರು ಟೀಕಾಕಾರರನ್ನು ಪ್ರಶ್ನಿಸಿದ್ದಾರೆ.

ಯಾಕೆ ಇಷ್ಟೊಂದು ದ್ವೇಷ?

"ಅದು ಗಂಡ-ಹೆಂಡತಿ ನಡುವಿನ ವೈಯಕ್ತಿಕ ವಿಚಾರ. ಅದನ್ನ ಯಾಕೆ ಹೀಗೆ ಬೀದಿಗೆ ಎಳೆದು ತರುತ್ತಿದ್ದೀರಾ? ನಿಮಗೆ ಬೇರೆ ವಿಷಯಾನೇ ಸಿಗಲಿಲ್ವಾ? ಎರಡು ವರ್ಷದ ಮಗು ಮೇಲೆ ರೇ*ಪ್ ಆದಾಗ ನಿಮಗೆ ಅದು ಕೇಳಿಸಲಿಲ್ಲ. 'ಯಾಕೋ ಹೀಗೆ ಮಾಡ್ದೆ' ಅಂತ ಅವನಿಗೆ ಕಪಾಳಕ್ಕೆ ಹೊಡೆದು ಕೇಳೋಕೆ ನಿಮಗೆ ಆಗಲಿಲ್ಲ. ತ್ರಿಷಾ ಜೊತೆ ವಿಜಯ್ ಬರೋದು ನಿಮಗೆ ದೊಡ್ಡ ವಿಷಯನಾ? ಅವರಿಬ್ಬರೂ ಫ್ರೆಂಡ್ಸ್. ವರ್ಷಗಳಿಂದ ಒಟ್ಟಿಗೆ ನಟಿಸಿದ್ದಾರೆ. ಏನಿದು ತಮಿಳುನಾಡು? ವಿಜಯ್ ಕೂಡ ಒಬ್ಬ ಮನುಷ್ಯ ಅಲ್ವಾ? ಜನರಿಗೋಸ್ಕರ ರಾಜಕೀಯಕ್ಕೆ ಬರ್ತೀನಿ ಅಂದಿದ್ದಾರೆ. ಅವರ ಮೇಲೆ ಯಾಕೆ ಇಷ್ಟೊಂದು ದ್ವೇಷ?" ಅಂತ ಆ ಅಭಿಮಾನಿ ಪ್ರಶ್ನಿಸಿದ್ದಾರೆ.