10:37 PM (IST) Oct 28

India Latest News Live 28 October 2026 'ಇಂದೇ ಟ್ರೀಟ್‌ಮೆಂಟ್‌ ಕೊಡಿಸಿ, ಇದರಲ್ಲಿ ತಡ ಮಾಡ್ಬೇಡಿ' - ದೇವಸ್ಥಾನದ ಮುಂದೆ ಬಡ ಮಹಿಳೆಯ ಸಂಕಷ್ಟಕ್ಕೆ ತಕ್ಷಣ ಮಿಡಿದ ಅನಂತ್‌ ಅಂಬಾನಿ!

ಜಿಯೋ ಐಪಿಒ ಯಶಸ್ಸಿನ ಹಿನ್ನೆಲೆಯಲ್ಲಿ ಮುಂಬೈನ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ಅನಂತ್ ಅಂಬಾನಿ ಅವರು ಕಣ್ಣೀರಿಡುತ್ತಿದ್ದ ಬಡ ಮಹಿಳೆಯೊಬ್ಬಳ ಕಷ್ಟಕ್ಕೆ ಮಿಡಿದಿದ್ದಾರೆ. ಆಕೆಯ ತಾಯಿಯ ತುರ್ತು ಶಸ್ತ್ರಚಿಕಿತ್ಸೆಗೆ ತಕ್ಷಣವೇ ಸಂಪೂರ್ಣ ವೈದ್ಯಕೀಯ ನೆರವು ಒದಗಿಸುವಂತೆ ತಮ್ಮ ತಂಡಕ್ಕೆ ಆದೇಶಿಸಿದ್ದಾರೆ.

Read Full Story
10:16 PM (IST) Oct 28

India Latest News Live 28 October 2026 ಜಿಯೋ ದಾಖಲೆ ಐಪಿಒ ಸಂಭ್ರಮ; ನೀಲಿ ಬೆಳಕಲ್ಲಿ ಮಿಂದೆದ್ದ ಮುಖೇಶ್ ಅಂಬಾನಿಯ 'ಆಂಟಿಲಿಯಾ' ಬಂಗಲೆ!

ಜಿಯೋ ಪ್ಲಾಟ್‌ಫಾರ್ಮ್ಸ್‌ನ ಐಪಿಒ ಷೇರು ಮಾರುಕಟ್ಟೆಯಲ್ಲಿ ಐತಿಹಾಸಿಕ ದಾಖಲೆ ಬರೆದಿದೆ. ಈ ಯಶಸ್ಸನ್ನು ಮುಖೇಶ್ ಅಂಬಾನಿ ತಮ್ಮ 'ಆಂಟಿಲಿಯಾ' ನಿವಾಸವನ್ನು ಜಿಯೋದ ನೀಲಿ ಬಣ್ಣದ ಲೈಟಿಂಗ್ಸ್‌ನಿಂದ ಅಲಂಕರಿಸಿ ಸಂಭ್ರಮಿಸಿದ್ದಾರೆ. ಅಲ್ಲದೆ, 'ಥ್ಯಾಂಕ್ ಯು ಇಂಡಿಯಾ' ಎಂಬ ಸಂದೇಶದ ಮೂಲಕ ದೇಶದ ಜನತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Read Full Story
09:47 PM (IST) Oct 28

India Latest News Live 28 October 2026 RCB ಮತ್ತಷ್ಟು ಸ್ಟ್ರಾಂಗ್, ತಂಡ ಸೇರಿದ ನಾಲ್ವರು ಹೊಸ ಆಟಗಾರ್ತಿಯರು; ಯಾರು ಎಷ್ಟು ಲಕ್ಷ ಹಣಕ್ಕೆ ಬಂದರು?

WPL-2027 ಮಿನಿ ಹರಾಜಿನಲ್ಲಿ ಆರ್‍‌ಸಿಬಿ ತಂಡವು ನಾಲ್ಕು ಹೊಸ ಆಟಗಾರ್ತಿಯರನ್ನು ಖರೀದಿಸಿ ಮತ್ತಷ್ಟು ಬಲಿಷ್ಠವಾಗಿದೆ. ನಾಯಕಿ ಸ್ಮೃತಿ ಮಂಧಾನ ಯುವ ಪ್ರತಿಭೆಗಳಿಗೆ ಮಣೆಹಾಕುವ ಬಗ್ಗೆ ಒಲವು ತೋರಿದ್ದಾರೆ. ಹಳೆಯ 13 ಆಟಗಾರ್ತಿಯರನ್ನು ಉಳಿಸಿಕೊಂಡು ಹೊಸಬರ ಸೇರ್ಪಡೆಯೊಂದಿಗೆ ತಂಡವು ಸಜ್ಜಾಗಿದೆ.

Read Full Story
09:13 PM (IST) Oct 28

India Latest News Live 28 October 2026 'ನನ್ನ ಆ 2 ಸಿನಿಮಾಗಳನ್ನು ನೋಡು ಸಾಕು'.. ಸಹನಟಿಗೆ ಹೀಗ್ಯಾಕೆ ಹೇಳಿದ್ದು ಕೀರ್ತಿ ಸುರೇಶ್? ಹಿಂದಿರೋ ಅಸಲಿಯತ್ತೇನು?

ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ನಟಿ ಕೀರ್ತಿ ಸುರೇಶ್, ತಮಿಳು, ತೆಲುಗು, ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು, ತಮ್ಮ ಪ್ರತಿಭೆಗೆ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದಾರೆ. ಆದರೆ, ಆ 2 ಸಿನಿಮಾಗಳನ್ನೇ ನೋಡುವಂತೆ ಹೇಳಿದ್ಯಾಕೆ?

Read Full Story
08:43 PM (IST) Oct 28

India Latest News Live 28 October 2026 ನ್ಯೂಜಿಲೆಂಡ್ ODI ಸರಣಿಗೂ ಮುನ್ನ ಸಂಕಷ್ಟದಲ್ಲಿ ಭಾರತ ತಂಡ; ಕನ್ನಡಿಗ ಔಟ್, ಬದಲಿ ಆಟಗಾರ ಯಾರು?

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನವೇ ಗಾಯದ ಸಮಸ್ಯೆಯಿಂದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇವರ ಬದಲಿಗೆ ಜಮ್ಮು ಮತ್ತು ಕಾಶ್ಮೀರದ ವೇಗಿ ಆಕಿಬ್ ನಬಿ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಭಾರತ ಈಗಾಗಲೇ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ.
Read Full Story
08:26 PM (IST) Oct 28

India Latest News Live 28 October 2026 ಥ್ರಿಲ್ಲರ್ ಸಿನಿಮಾ ಪ್ರಿಯರೇ, ಈ ಲಿಸ್ಟ್ ನಿಮ್ಮದು - ಕಾದಂಬರಿ ಆಧಾರಿತ 5 ಬೆಸ್ಟ್ ಸಿನಿಮಾಗಳಿವು!

ಜನಪ್ರಿಯ ಕಾದಂಬರಿಗಳ ಆಧಾರದ ಮೇಲೆ ತಯಾರಾದ 5 ಬೆಸ್ಟ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಲಿಸ್ಟ್ ಇಲ್ಲಿದೆ. ಊಹಿಸಲಾಗದ ಟ್ವಿಸ್ಟ್‌ಗಳು ಹಾಗೂ ಮೈಂಡ್ ಬೆಂಡಿಂಗ್ ಕಥೆಗಳಿರುವ ಈ ಸಿನಿಮಾಗಳು ಒಟಿಟಿಯಲ್ಲಿ ಲಭ್ಯವಿವೆ. ಥ್ರಿಲ್ಲರ್ ಪ್ರಿಯರು ಖಂಡಿತ ನೋಡಲೇಬೇಕಾದ ಸಿನಿಮಾಗಳಿವು.
Read Full Story
07:10 PM (IST) Oct 28

India Latest News Live 28 October 2026 Ramayana Release - ಭಾರತ ಮಾತ್ರವಲ್ಲ, ಭಾರತೀಯ ಮಹಾಕಾವ್ಯ 'ರಾಮಾಯಣ' ಸಿನಿಮಾ ನೋಡಲಿವೆ 100ಕ್ಕೂ ಹೆಚ್ಚು ದೇಶಗಳು!

‘ರಾಮಾಯಣ’ ಸಿನಿಮಾ ಕೇವಲ ದೊಡ್ಡ ಬಜೆಟ್‌ನ ಚಿತ್ರವಾಗಿ ಮಾತ್ರವಲ್ಲದೆ, ಭಾರತೀಯ ಪರಂಪರೆಯನ್ನು ವಿಶ್ವದ ಮುಂದೆ ಪರಿಚಯಿಸುವ ಪ್ರಯತ್ನವಾಗಿಯೂ ಗಮನ ಸೆಳೆಯುತ್ತಿದೆ. ಪ್ರೇಕ್ಷಕರ ನಿರೀಕ್ಷೆಗಳು ಹೆಚ್ಚಿರುವ ಹಿನ್ನೆಲೆಯಲ್ಲಿ, ಕಥೆಯ ಭಾವನಾತ್ಮಕ ಆಳ, ಪಾತ್ರಗಳ ಚಿತ್ರಣ ಮತ್ತು ದೃಶ್ಯ ವೈಭವವನ್ನು ತೆರೆಯ ಮೇಲೆ ನೋಡಲು ಸಿದ್ಧರಾಗಿ!

Read Full Story
07:09 PM (IST) Oct 28

India Latest News Live 28 October 2026 ಅಮ್ಮ ಶ್ರೀದೇವಿ ನಿಧನರಾದಾಗ ನನಗಾಗಿ ಲಂಡನ್ ಓದು ಬಿಟ್ಟು ಬಂದಿದ್ದ - ಜಾನ್ವಿ ಕಪೂರ್ ಭಾವುಕ

ತಾಯಿ ಶ್ರೀದೇವಿ ನಿಧನರಾದಾಗ ಶಿಖರ್ ಪಹಾರಿಯಾ ತಮ್ಮ ಓದಿಗೆ ವಿರಾಮ ನೀಡಿ ಬೆಂಬಲವಾಗಿ ನಿಂತಿದ್ದರು ಎಂದು ಜಾನ್ವಿ ಕಪೂರ್ ನೆನಪಿಸಿಕೊಂಡಿದ್ದಾರೆ. ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಹಂಚಿಕೊಂಡ ಈ ಭಾವುಕ ಘಟನೆ..

Read Full Story
06:19 PM (IST) Oct 28

India Latest News Live 28 October 2026 ಧೋನಿಗೆ ಕ್ಯಾಪ್ಟನ್ಸಿ, ರೋಹಿತ್‌ಗೆ ಇಲ್ಲ ಚಾನ್ಸ್! ವೈಭವ್, ಅಭಿಷೇಕ್‌ಗೆ ಕ್ಲೀನ್‌ ಬೋಲ್ಡ್ ಆದ ಅನಯಾ ಬಂಗಾರ್

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಪುತ್ರಿ ಅನಯಾ ಬಂಗಾರ್ ತಮ್ಮ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ 11 ತಂಡವನ್ನು ಪ್ರಕಟಿಸಿದ್ದಾರೆ. ಈ ವಿಶೇಷ ತಂಡದಲ್ಲಿ ಪುರುಷ ಹಾಗೂ ಮಹಿಳಾ ಕ್ರಿಕೆಟಿಗರಿಬ್ಬರಿಗೂ ಸ್ಥಾನ ನೀಡಲಾಗಿದ್ದು, ಎಂಎಸ್ ಧೋನಿ ನಾಯಕರಾಗಿದ್ದಾರೆ. ಸಚಿನ್, ಕೊಹ್ಲಿ ಸೇರಿದಂತೆ ಹಲವು ದಿಗ್ಗಜರು ಈ ತಂಡದಲ್ಲಿದ್ದಾರೆ.
Read Full Story
06:12 PM (IST) Oct 28

India Latest News Live 28 October 2026 ಅನಿರುದ್ಧ್-ಕಾವ್ಯಾ ಮಾರನ್ ಮದುವೆ ಸುದ್ದಿ ಮತ್ತೆ ವೈರಲ್ - ಹಾಟ್ ಟಾಪಿಕ್ ವೆಡ್ಡಿಂಗ್ ಕಾರ್ಡ್‌ನಲ್ಲಿ ಏನಿದೆ?

ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್ ಮತ್ತು ಕಾವ್ಯಾ ಮಾರನ್ ಅವರ ಮದುವೆ ಕಾರ್ಡ್ ಎನ್ನಲಾದ ವಿಡಿಯೋ ವೈರಲ್ ಆಗಿದೆ. ನವೆಂಬರ್ 21ರಂದು ಚೆನ್ನೈನಲ್ಲಿ ಆರತಕ್ಷತೆ ನಡೆಯಲಿದೆ ಎಂಬ ವರದಿಗಳ ಕುರಿತ ವಿವರ ಇಲ್ಲಿದೆ.

Read Full Story
05:24 PM (IST) Oct 28

India Latest News Live 28 October 2026 1942ರಲ್ಲಿ ಹಿಟ್ಲರ್‌ಗೆ ಸುಭಾಷ್ ಚಂದ್ರ ಬೋಸ್ ಹೇಳಿದ್ದೇನು? ಪ್ರಭಾಸ್ ‘ಫೌಜಿ’ ಟೀಸರ್‌ನಿಂದ ಶುರುವಾದ ಹೊಸ ವಿವಾದವೇನು?

ನಟ ಪ್ರಭಾಸ್ ಅಭಿನಯದ 'ಫೌಜಿ' ಚಿತ್ರದ ಟೀಸರ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು ಕಾಲ್ಪನಿಕವಾಗಿ ಚಿತ್ರಿಸಿರುವುದಕ್ಕೆ ಅವರ ಕುಟುಂಬ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಟೀಸರ್ ಹಿಂಪಡೆಯಲು ಮತ್ತು ಸೆನ್ಸಾರ್ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳಲು ನೇತಾಜಿ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Read Full Story
05:23 PM (IST) Oct 28

India Latest News Live 28 October 2026 11 ಸಾವಿರ ರೂಪಾಯಿಯ ಕ್ಯಾನ್ಸರ್‌ ಇಂಜೆಕ್ಷನ್‌ಗೆ ₹1.3 ಲಕ್ಷ ಬಿಲ್, ಈ ಹಗಲು ದರೋಡೆಗೆ ಏನ್‌ ಹೇಳ್ತೀರಿ? ಖಾಸಗಿ ಆಸ್ಪತ್ರೆಗಳಿಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆ!

11,000 ರೂ. ಬೆಲೆಯ ಕ್ಯಾನ್ಸರ್ ಇಂಜೆಕ್ಷನ್‌ಗೆ 1.3 ಲಕ್ಷ ಬಿಲ್ ವಿಧಿಸಿದ ಖಾಸಗಿ ಆಸ್ಪತ್ರೆಗಳ ಕ್ರಮವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಖಂಡಿಸಿದೆ. ಔಷಧಗಳ ದರ ನಿಯಂತ್ರಣ ಮತ್ತು ಲಾಭದ ಮಿತಿ ನಿಗದಿ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿದೆ.

Read Full Story
05:18 PM (IST) Oct 28

India Latest News Live 28 October 2026 'ದಕ್ಷಿಣದ ಸಿನಿಮಾಗಳಲ್ಲಿ ಬಾಲಿವುಡ್ ನಟಿಯರಿಗೆ ಹೆಚ್ಚಿನ ಅವಕಾಶ ಏಕೆ?' ಸಂಚಲನ ಸೃಷ್ಟಿಸಿದ ನಟಿ ರಾಧಿಕಾ ಆಪ್ಟೆ ಹೇಳಿಕೆ!

ರಾಧಿಕಾ ಆಪ್ಟೆ ಅವರ ಈ ಅಭಿಪ್ರಾಯಗಳು ಚಿತ್ರರಂಗದಲ್ಲಿ ಪ್ರತಿಭೆಗೆ ಆದ್ಯತೆ ನೀಡುವುದು, ಮೈಬಣ್ಣದ ಆಧಾರದ ಮೇಲಿನ ತಾರತಮ್ಯವನ್ನು ಪ್ರಶ್ನಿಸುವುದು ಮತ್ತು ಸ್ಥಳೀಯ ಕಲಾವಿದರಿಗೆ ಸೂಕ್ತ ಅವಕಾಶ ಕಲ್ಪಿಸುವುದರ ಅಗತ್ಯವನ್ನು ಮತ್ತೆ ಮುನ್ನೆಲೆಗೆ ತಂದಿವೆ. ಇದೆಂಥಾ ಚರ್ಚೆ ಹುಟ್ಟುಹಾಕಿದೆ ನೋಡಿ..

Read Full Story
05:17 PM (IST) Oct 28

India Latest News Live 28 October 2026 ಮಾನ್ ಸಾಗರ್ ಸರೋವರದಲ್ಲಿ ತೇಲುವ ಜೈಪುರದ ನಿಗೂಢ ಅರಮನೆ, ಜೈಪುರದ ‘ಜಲ್ ಮಹಲ್’ ಸೌಂದರ್ಯವೇ ಅದ್ಭುತ

ರಾಜಸ್ಥಾನದ ಜೈಪುರದಲ್ಲಿರುವ ಜಲ್ ಮಹಲ್ ಮಾನ್ ಸಾಗರ್ ಸರೋವರದ ಮಧ್ಯದಲ್ಲಿರುವ ಒಂದು ಐತಿಹಾಸಿಕ ಅರಮನೆಯಾಗಿದೆ. ಐದು ಅಂತಸ್ತುಗಳ ಈ ಕಟ್ಟಡದ ನಾಲ್ಕು ಅಂತಸ್ತುಗಳು ನೀರಿನೊಳಗೆ ಮುಳುಗಿರುವುದು ಇದರ ಅತ್ಯಂತ ವಿಶಿಷ್ಟ ಆಕರ್ಷಣೆಯಾಗಿದೆ. ಇದು ಇತಿಹಾಸ, ವಾಸ್ತುಶಿಲ್ಪ ಮತ್ತು ಪ್ರಕೃತಿಯ ಅಪೂರ್ವ ಸಂಗಮವಾಗಿದೆ.
Read Full Story
05:02 PM (IST) Oct 28

India Latest News Live 28 October 2026 ನವೆಂಬರ್ 1ರ ಕಾಂಗ್ರೆಸ್‌ನ ದೆಹಲಿ ಚಲೋ ರ್ಯಾಲಿ ಪ್ಲಾನ್ ಹಾಳುಮಾಡಿದ ವಿಧಾನಪರಿಷತ್ ಚುನಾವಣಾ ಫಲಿತಾಂಶ!

ಇಂಡಿಯಾ ಮೈತ್ರಿಕೂಟವು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಮಹಾಭಿಯಾನ ಮತ್ತು ದೆಹಲಿಯಲ್ಲಿ ಬೃಹತ್ ರ‍್ಯಾಲಿ ನಡೆಸಲು ಸಿದ್ಧತೆ ನಡೆಸಿದೆ. ಆದರೆ ನಾಲ್ಕು ರಾಜ್ಯಗಳ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದ್ದು, ಈ ಫಲಿತಾಂಶವು ಒಕ್ಕೂಟದ ಯೋಜನೆಗಳನ್ನು ತಲೆಕೆಳಗು ಮಾಡಿದೆ..

Read Full Story
04:52 PM (IST) Oct 28

India Latest News Live 28 October 2026 ಇಂಜೆಕ್ಷನ್ ಸೂಜಿ ನೋಡ್ತಿದ್ದಂತೆ ಓಟ ಕಿತ್ತ ಪಾರ್ಶ್ವವಾಯು ಭಿಕ್ಷುಕ! ಖದೀಮನ ನಾಟಕ ಬಯಲು ಮಾಡಿದ ಯುವಕನ ವಿಡಿಯೋ ವೈರಲ್

ಪಾರ್ಶ್ವವಾಯು ಬಂದಂತೆ ನಟಿಸುತ್ತಿದ್ದ ಭಿಕ್ಷುಕನೊಬ್ಬ ಯುವಕನೊಬ್ಬ ಇಂಜೆಕ್ಷನ್ ಕೊಡಲು ಬಂದಾಗ ಎದ್ದು ಓಡಿರುವ ವಿಡಿಯೋ ವೈರಲ್ ಆಗಿದೆ. ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಬ್ಬಿಬ್ಬಾದ ಭಿಕ್ಷುಕ, ಸೂಜಿ ನೋಡಿದ ತಕ್ಷಣವೇ ಓಟ ಕಿತ್ತಿದ್ದಾನೆ. ಈ ಕಪಟಿ ಭಿಕ್ಷುಕನ ಬಣ್ಣ ಬಯಲಾಗಿದ್ದು, ನೆಟ್ಟಿಗರು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.
Read Full Story
04:31 PM (IST) Oct 28

India Latest News Live 28 October 2026 ದೀಪಾವಳಿ ಹಬ್ಬಕ್ಕೆ ಭರ್ಜರಿ ಗಿಫ್ಟ್ ಕೊಟ್ಟ ಕೇಂದ್ರ ಸರ್ಕಾರ, ಸ್ಯಾಲರಿಯಲ್ಲಿ ಶೇ.3ರಷ್ಟು ಡಿಎ ಹೆಚ್ಚಳ

ದೀಪಾವಳಿ ಹಬ್ಬ ಆಗಮಿಸುತ್ತಿದೆ. ಹಬ್ಬದ ತಯಾರಿಯಲ್ಲಿರುವ ಜನರಿಗೆ ಕೇಂದ್ರ ಸರ್ಕಾರ ಭರ್ಜರಿ ಉಡುಗೊರೆ ನೀಡಿದೆ. ಶೇಕಡಾ 3ರಷ್ಟು ಡಿಎ ಹೆಚ್ಚಳ ಘೋಷಣೆ ಹೊರಬಿದ್ದಿದೆ. ಇದು ನೌಕರರು ಹಾಗೂ ಪಿಂಚಣಿದಾರರಿಗೆ ಬಂಪರ್ ಕೊಡುಗೆಯಾಗಿದೆ.

Read Full Story
04:27 PM (IST) Oct 28

India Latest News Live 28 October 2026 ಟಾಟಾ ಹಿಂದಿಕ್ಕಿದ ರಿಲಯನ್ಸ್; 30 ಲಕ್ಷ ಕೋಟಿ ರೂ. ಮೌಲ್ಯದೊಂದಿಗೆ ದೇಶದ ನಂ.1 ಬಿಸಿನೆಸ್ ಗ್ರೂಪ್!

ಜಿಯೋ ಪ್ಲಾಟ್‌ಫಾರ್ಮ್ಸ್‌ ಷೇರು ಮಾರುಕಟ್ಟೆಯಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದು, ಟಾಟಾ ಗ್ರೂಪ್ ಅನ್ನು ಹಿಂದಿಕ್ಕಿ 30 ಲಕ್ಷ ಕೋಟಿ ರೂ. ಮೌಲ್ಯದೊಂದಿಗೆ ಮುನ್ನುಗ್ಗಿದೆ. ಐಪಿಒ ಬೆಲೆಗಿಂತ ಶೇ. 21.36ರಷ್ಟು ಲಾಭದೊಂದಿಗೆ ಪಟ್ಟಿಯಾಗಿರುವ ಜಿಯೋ, ರಿಲಯನ್ಸ್ ನಂತರದ ಎರಡನೇ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಿದೆ. ಬ್ರೋಕರೇಜ್ ಸಂಸ್ಥೆಗಳು ನೀಡಿದ್ದ ಗುರಿಯನ್ನೂ ಮೀರಿ ಇದು ಹೂಡಿಕೆದಾರರಿಗೆ ಭಾರೀ ಲಾಭ ತಂದುಕೊಟ್ಟಿದೆ.

Read Full Story
04:06 PM (IST) Oct 28

India Latest News Live 28 October 2026 WPL ಹರಾಜಿನಲ್ಲಿ ಹಣದ ಹೊಳೆ, ಸ್ಮೃತಿ ಮಂಧಾನಗೆ ₹3.40 ಕೋಟಿ! ಟಾಪ್ 5 ದುಬಾರಿ ಆಟಗಾರ್ತಿಯರ ಪಟ್ಟಿ ಇಲ್ಲಿದೆ ನೋಡಿ!

ಮಹಿಳಾ ಪ್ರೀಮಿಯರ್ ಲೀಗ್‌ (WPL) ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಆಟಗಾರ್ತಿಯರ ಸಂಭಾವನೆ ಗಣನೀಯವಾಗಿ ಏರಿಕೆಯಾಗಿದೆ. ಸ್ಮೃತಿ ಮಂಧಾನ ಸೇರಿದಂತೆ ಹಲವು ಆಟಗಾರ್ತಿಯರು ಕೋಟಿಗಟ್ಟಲೆ ಮೊತ್ತಕ್ಕೆ ಹರಾಜಾಗಿದ್ದಾರೆ. ಟಾಪ್ ಐವರ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.

Read Full Story
04:01 PM (IST) Oct 28

India Latest News Live 28 October 2026 ಟೆನಿಸ್‌ ಟ್ರೇನಿಂಗ್‌ ಸೆಂಟರ್‌ಗಾಗಿ ಮೀಸಲಿಟ್ಟ ಜಾಗವನ್ನು ಮಸೀದಿ ಕಟ್ಟಲು ನೀಡಿದ ಸಾನಿಯಾ ಮಿರ್ಜಾ, ಅಜರುದ್ದೀನ್‌ರಿಂದ ಶಂಕುಸ್ಥಾಪನೆ

ಹೈದರಾಬಾದ್‌ನಲ್ಲಿ ಟೆನಿಸ್ ಅಕಾಡೆಮಿ ನಿರ್ಮಿಸಲು ಉದ್ದೇಶಿಸಿದ್ದ ತಮ್ಮ ಸ್ವಂತ ಜಾಗದಲ್ಲಿ ಸಾನಿಯಾ ಮಿರ್ಜಾ ಮಸೀದಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಮೊಹಮ್ಮದ್ ಅಜರುದ್ದೀನ್ ಅವರಿಂದ ಶಂಕುಸ್ಥಾಪನೆ ನೆರವೇರಿದ್ದು, ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಶುರುವಾಗಿವೆ.

Read Full Story