- Home
- News
- India News
- India Latest News Live: ರಸ್‌ಮಲೈ ಅಣ್ಣಾಮಲೈ ಪ್ರಚಾರ ಮಾಡಿದ ಕಡೆ ಬಿಜೆಪಿಗರಿಗೆ ಗೆಲುವು; ರಾಜ್‌ಠಾಕ್ರೆಗೆ ಭಾರೀ ಮುಖಭಂಗ
LIVE NOW
India Latest News Live: ರಸ್‌ಮಲೈ ಅಣ್ಣಾಮಲೈ ಪ್ರಚಾರ ಮಾಡಿದ ಕಡೆ ಬಿಜೆಪಿಗರಿಗೆ ಗೆಲುವು; ರಾಜ್‌ಠಾಕ್ರೆಗೆ ಭಾರೀ ಮುಖಭಂಗ

ಸಾರಾಂಶ
ಮುಂಬೈ: ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಅವರನ್ನು ರಸ್‌ಮಲೈ ಎಂದು ಅಣಕಿಸಿದ್ದ ಎಂಎನ್‌ಎಸ್ ಮುಖ್ಯಸ್ಥ ರಾಜ್ ರಾಕ್ರೆಗೆ ಅದೇ ಹೇಳಿಕೆ ತಿರುಗುಬಾಣವಾಗಿದೆ.
ಇತ್ತೀಚೆಗೆ ಅಣ್ಣಾಮಲೈ ಪ್ರಚಾರ ಮಾಡಿದ್ದ ಮುಂಬೈನ ಮಲಾಡ್ ಪಶ್ಚಿಮ ಕ್ಷೇತ್ರದ ವಾರ್ಡ್ ನಂ. 35 ಮತ್ತು 47 ಎರಡೂ ಕಡೆ ಬಿಜೆಪಿಯ ಅಭ್ಯರ್ಥಿಗಳು ಗೆಲುವು ಕಂಡಿದ್ದಾರೆ. ಇದರ ಬೆನ್ನಲ್ಲೇ ಮಹಾರಾಷ್ಟ್ರ ಬಿಜೆಪಿ ನಾಯಕರು ರಸ್‌ಮಲೈ ಫೋಟೋ ಹಂಚಿಕೊಂಡು ರಾಜ್‌ಗೆ ಟಾಂಗ್ ನೀಡಿದ್ದಾರೆ. ಮತ್ತೊಂದೆಡೆ ಬೆಂಗಳೂರಿನ ಬಿಜೆಪಿ ಸಂಸದ ಪಿ.ಸಿ.ಮೋಹನ್ ಕೂಡಾ ನಾನು ಇಂದು ರಸ್‌ಮಲೈ ಆರ್ಡರ್ ಮಾಡಿದ್ದೇನೆ ಎಂದು ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮುಂಬೈ ಬಗ್ಗೆ ಮಾತನಾಡಲು ಅಣ್ಣಾಮಲೈ ಯಾರು? ಆತ ರಸ್‌ಮಲೈ ಎಂದೆಲ್ಲಾ ರಾಜ್ ವ್ಯಂಗ್ಯವಾಡಿದ್ದರು.