Bigg Boss ಷೋ ತೆರೆಮರೆಯ ರೋಚಕ ರಹಸ್ಯವಿದು! ಅಸಲಿಗೆ ಅಲ್ಲಿ ನಡೆಯೋದೇನು, ನಡೆಸೋರು ಯಾರು?
ಬಿಗ್ ಬಾಸ್ ಕಾರ್ಯಕ್ರಮವನ್ನು ಕಲರ್ಸ್ ವಾಹಿನಿಯವರು ನಡೆಸಿಕೊಡುತ್ತಾರೆ ಎಂದು ಹಲವರು ಭಾವಿಸಿದ್ದಾರೆ, ಆದರೆ ಇದರ ಹಿಂದಿನ ಅಸಲಿ ನಿರ್ಮಾಣ ಸಂಸ್ಥೆ ಎಂಡೆಮೋಲ್ ಶೈನ್ ಇಂಡಿಯಾ. ಈ ಫ್ರೆಂಚ್ ಮೂಲದ ಕಂಪನಿಯೇ ಸ್ಪರ್ಧಿಗಳ ಸೌಲಭ್ಯ, ಸಂಭಾವನೆ ಸೇರಿದಂತೆ ಎಲ್ಲವನ್ನೂ ನಿರ್ವಹಿಸುತ್ತದೆ.

ಕೆಲವೇ ಗಂಟೆಗಳು ಬಾಕಿ
ಕನ್ನಡದ ಬಿಗ್‌ಬಾಸ್ 12ರ (Bigg Boss Kannada 12) ಷೋ ಫಿನಾಲೆಗೆ ಇನ್ನು ಕೆಲವೇ ಗಂಟೆಗಳು ಬಾಕಿ ಇವೆ. ನಾಳೆ ಅಂದರೆ ಜನವರಿ 18ರಂದು ಗ್ರ್ಯಾಂಡ್ ಫಿನಾಲೆ ಇದ್ದು, ವಿನ್ನರ್ ಯಾರು ಎಂದು ಗೊತ್ತಾಗಲಿದೆ.
ಯಾವ ಭಾಷೆಗಳಲ್ಲಿ ಪ್ರಸಾರ?
ಬಿಗ್‌ಬಾಸ್ ಕನ್ನಡ ಮಾತ್ರವಲ್ಲದೇ, ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಮರಾಠಿ ಭಾಷೆಗಳಲ್ಲಿಯೂ ಸಹ ಪ್ರಸಾರ ಆಗುತ್ತದೆ. ಬಿಗ್‌ಬಾಸ್ ಸದ್ಯ ಕಲರ್ಸ್ ವಾಹಿನಿಗಳಲ್ಲಿ ಪ್ರಸಾರ ಆಗ್ತಿರುವ ಕಾರಣದಿಂದ ಇದನ್ನು ನಡೆಸಿಕೊಡುವವರು ಕಲರ್ಸ್ ವಾಹಿನಿಯವರು ಎಂದುಕೊಂಡವರೇ ಹೆಚ್ಚು. ಆದರೆ ಇದರ ಗುಟ್ಟೇ ಬೇರೆ ಇದೆ.
ಎಲ್ಲವನ್ನೂ ನೀಡುವವರು ಇವರೇ
ಅಷ್ಟಕ್ಕೂ ಬಿಗ್‌ಬಾಸ್ ನಡೆಸಿಕೊಡುವವರು, ಸ್ಪರ್ಧಿಗಳಿಗೆ ಎಲ್ಲಾ ರೀತಿಯ ಸೌಲಭ್ಯ ನೀಡುವವರು, ದುಡ್ಡು ಸೇರಿದಂತೆ ಮನೆಯಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ನಡೆಸುವವರು ವಾಹಿನಿಯವರಲ್ಲ, ಬದಲಿಗೆ ವಾಹಿನಿ ಅದನ್ನು ಪರ್ಚೇಸ್ ಮಾಡಿರುತ್ತದೆ ಅಷ್ಟೇ.
ಅಸಲಿ ಬಾಸ್ ಯಾರು?
ಹಾಗಿದ್ದರೆ ಎಲ್ಲಾ ಭಾಷೆಗಳ ಅಸಲಿ ಬಾಸ್ ಯಾರು ಎಂದು ನೋಡುವುದಾದರೆ, ಎಲ್ಲಾ ಭಾಷೆಗಳ ಬಿಗ್‌ಬಾಸ್ ಷೋಗೆ ಬಾಸ್ ಎಂಡೆಮೋಲ್ ಶೈನ್ ಇಂಡಿಯಾ (ಈಗ ಇದು ಬನಿಜಯ್ ಏಷ್ಯಾದ ಭಾಗವಾಗಿದೆ). ಭಾರತದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ, ಬಿಗ್ ಬಾಸ್ ಫ್ರಾಂಚೈಸ್‌ನ ಹಿಂದಿನ ನಿರ್ಮಾಣ ಸಂಸ್ಥೆ ಇದೇ.
ಫ್ರೆಂಚ್ ಕಂಪನಿ
ಎಂಡೆಮೋಲ್ ಶೈನ್ ಗ್ರೂಪ್ ಡಚ್ ಕಂಪನಿಗಳಿಂದ ಹುಟ್ಟಿಕೊಂಡಿರುವಂಥದ್ದು. ಇದು ಮೊದಲು ನೆದರ್ಲೆಂಡ್ನಲ್ಲಿ ಪ್ರಧಾನ ಕಚೇರಿ ಹೊಂದಿತ್ತು. ಬಿಗ್ ಬ್ರದರ್ ನಂತಹ ಕಾರ್ಯಕ್ರಮಗಳಿಗೆ ಅದು ಹೆಸರುವಾಸಿಯಾಗಿದೆ, ಆದರೆ ಇದು 2020 ರಲ್ಲಿ ಜಾಗತಿಕ ಬನಿಜಯ್ ಗ್ರೂಪ್‌ನ ಭಾಗವಾಯಿತು, ಇದು ಫ್ರೆಂಚ್ ಕಂಪನಿಯಾಗಿದೆ, ಆದ್ದರಿಂದ ಇದರ ಬೇರುಗಳು ಡಚ್ ಆದರೆ ಇದು ಈಗ ಫ್ರೆಂಚ್ ಮಾಧ್ಯಮ ದೈತ್ಯನ ವಿಭಾಗವಾಗಿದೆ.
ಎಲ್ಲಾ ಸೌಲಭ್ಯ ನೀಡೋದು ಇವರೇ
ಸ್ಪರ್ಧಿಗಳು ತಮ್ಮ ಬಟ್ಟೆಗಳನ್ನು ತರುವುದು ಬಿಟ್ಟರೆ, ಉಳಿದೆಲ್ಲಾ ಸೌಲಭ್ಯಗಳನ್ನು ಸ್ಪರ್ಧಿಗಳಿಗೆ ನೀಡುವುದು ಇದೇ ಸಂಸ್ಥೆ ಎನ್ನಲಾಗಿದೆ. ಮಾತ್ರವಲ್ಲದೇ ಸ್ಪರ್ಧಿಗಳಿಗೆ ವಾರಕ್ಕೊಮ್ಮೆ ಹಣ ನೀಡಲಾಗುತ್ತದೆ. ಅವರವರ ಘನತೆ, ಅವರಿಗೆ ಇರುವ ಆದಾಯ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ಪ್ರತಿಯೊಬ್ಬರಿಗೆ ವಿಭಿನ್ನ ಸಂಭಾವನೆ ನೀಡಲಾಗುತ್ತದೆ. ಇದನ್ನು ಗುಟ್ಟಾಗಿ ಇಡಲಾಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

