11 ಮಂದಿ ಪ್ರಯಾಣಿಸುತ್ತಿದ್ದ ATR 42 ವಿಮಾನ ನಾಪತ್ತೆ, ಪರ್ವತ ಬಳಿ ಅವಶೇಷಗಳು ಪತ್ತೆಯಾಗಿದ್ದು ಪತನಗೊಂಡಿರುವುದಾಗಿ ವರದಿಯಾಗಿದೆ. ದಿಢೀರ್ ವಿಮಾನದ ಸಂಪರ್ಕ ಕಡಿತಗೊಂಡಿತ್ತು. ಭಾರಿ ಕಾರ್ಯಾಚರಣೆ ವೇಳೆ ಅವಶೇಷಗಳು ಪತ್ತೆಯಾಗಿದೆ. 

ಜಕರ್ತಾ (ಜ.17) ಏರ್ ಇಂಡಿಯಾ ವಿಮಾನ ದುರಂತದ ಬಳಿಕ ಹಲವು ಘಟನೆಗಳು ನಡೆದಿದೆ. ಟೇಕ್ ಆಫ್ , ಲ್ಯಾಂಡಿಂಗ್ ವೇಳೆ ವಿಮಾನ ಪತನ, ಹಾರಾಟದ ವೇಳೆ ಎದುರಾದ ತಾಂತ್ರಿಕ ಸಮಸ್ಯೆಗಳಿಂದ ಕ್ರಾಶ್ ಲ್ಯಾಂಡಿಂಗ್ ಸೇರಿದಂತೆ ಹಲವು ಆತಂಕಕಾರಿ ಬೆಳವಣಿಗೆಗಳು ನಡೆದಿದೆ. ಅದರಲ್ಲೂ ಇತ್ತೀಚೆಗೆ ವಿಮಾನದಲ್ಲಿ ತಾಂತ್ರಿಕ ಸಮಸ್ಯೆಗಳು ಹೆಚ್ಚು ಸದ್ದು ಮಾಡುತ್ತಿದೆ. ಇದೀಗ 11 ಮಂದಿ ಪ್ರಯಾಣಿಸುತ್ತಿದ್ದ ಇಂಡೋನೇಷಿಯಾ ATR 42 ಪತನಗೊಂಡಿರುವುದಾಗಿ ವರದಿಯಾಗಿದೆ. ಟೇಕ್ ಆಫ್ ಆದ ಕೆಲ ಹೊತ್ತಲ್ಲೇ ವಿಮಾನ ಸಂಪರ್ಕ ಕಡಿದುಕೊಂಡಿದೆ. ಹೀಗಾಗಿ ರಕ್ಷಣಾ ತಂಡಗಳು ತೀವ್ರ ಕಾರ್ಯಾಚರಣೆ ವೇಳೆ ಪರ್ವತ ಬಳಿಕ ಅವಶೇಷಗಳು ಪತ್ತೆಯಾಗಿದೆ. ಈ ದುರಂತ ಇಂಡೋನೇಷಿಯಾದ ಮಕಾಸಾರ್ ಬಳಿ ನಡೆದಿದೆ.

11 ಮಂದಿ ಪ್ರಯಾಣಿಸುತ್ತಿದ್ದ ವಿಮಾನ

ಇಂಡೋನೇಷಿಯಾ ಮರಿನ್ ಅಫೈರ್ಸ್ ಹಾಗೂ ಫಿಶರಿಸ್ ಇಲಾಖೆಯ ವಿಮಾನ ಇದಾಗಿದೆ. ಮಕಾಸಾರ್ ವಿಮಾನ ನಿಲ್ದಾದಿಂದ 20 ಕಿಲೋಮೀಟರ್ ದೂರದಲ್ಲಿ ಈ ವಿಮಾನದ ಅವಶೇಷಗಳು ಪತ್ತೆಯಾಗಿದೆ. ಆದರೆ ವಿಮಾನದ ಸುಳಿವಿಲ್ಲ. 11 ಮಂದಿಯನ್ನು ಹೊತ್ತು ಪ್ರಯಾಣಿಸುತ್ತಿದ್ದ ವಿಮಾನ 1:17 pm ರ ವೇಳೆಗೆ ಸಂಪರ್ಕ ಕಡಿದುಕೊಂಡಿದೆ. ರೇಡಾರ್ ಸಂಪರ್ಕದಲ್ಲಿದ್ದ ವಿಮಾನ ಏಕಾಏಕಿ ಸಂಪರ್ಕ ಕಡಿದುಕೊಂಡಿದೆ. ವಿಮಾನ ಟ್ರಾಕ್ ಮಾಡುವ ಪ್ರಯತ್ನ ಮಾಡಲಾಗಿದೆ. ಆದರೆ ಪತ್ತೆಯಾಗಿಲ್ಲ. ಹೀಗಾಗಿ ತಕ್ಷಣವೇ ಸರ್ಚ್ ಆಪರೇಶನ್ ಆರಂಭಗೊಡಿದೆ.

ವಿಮಾನದಲ್ಲಿ ಒಟ್ಟು 11 ಮಂದಿ ಪ್ರಯಾಣಿಕರಿದ್ದರು. ಈ ಪೈಕಿ 8 ಮಂದಿ ವಿಮಾನದ ಸಿಬ್ಬಂದಿಗಳು ಹಾಗೂ ಮೂವರು ಪ್ರಯಾಣಿಕರಿದ್ದರು. ದಟ್ಟ ಮಂಜಿನ ಕಾರಣದಿಂದ ಕಾರ್ಯಾಚರಣೆಗೂ ಅಡ್ಡಿಯಾಗಿದೆ. ಮಕಾಸಾರ್‌ನಿಂದ 20 ಕಿಲೋಮೀಟರ್ ದೂರದಲ್ಲಿರುವ ಮೌಂಟ್ ಬುಲು ಸರೌಂಗ್ ಪರ್ವತದ ಬಳಿ ಇಂಡೋನೇಷಿಯಾ ATR 42-500 ವಿಮಾನದ ಅವಶೇಷಗಳು ಪತ್ತೆಯಾಗಿದೆ.

ದಟ್ಟ ಮಂಜಿನ ಕಾರಣ ಯಾವುದು ಸ್ಪಷ್ಟವಾಗಿಲ್ಲ. ಆದರೆ ವಿಮಾನದ ಅವಶೇಷಗಳು ಪತ್ತೆಯಾಗಿದೆ. ಈ ಅವಶೇಷಗಳಿಂದ ಬೆಂಕಿ ಜ್ವಾಲೆಯೂ ಕಾಣಿಸಿಕೊಂಡಿದೆ. ವಿಮಾನ ಪತನದ ಕುರಿತು ಅಧಿಕೃತ ಮಾಹಿತಿಗಳು ಹೊರಬಂದಿಲ್ಲ. ನಾಪತ್ತೆಯಾಗಿರುವ ವಿಮಾನದ ಅವಶೇಷಗಳು ಮಾತ್ರ ಪತ್ತೆಯಾಗಿದೆ.

ಮಕಸಾರ್ ವಿಮಾನ ನಿಲ್ದಾಣದತ್ತ ಆಗಮಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ ಇಂಡೋನೇಷಿಯಾ ATR 42-500 ವಿಮಾನ ಪತನಗೊಂಡಿದೆ ಎಂದು ವರದಿ ಮಾಡಿದೆ. ವಿಮಾನದಲ್ಲಿರುವ 11 ಮಂದಿಯೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

Scroll to load tweet…