ನೀವು IMPS ಹಣ ವರ್ಗಾವಣೆ, ಎಟಿಎಂನಿಂದ ವಿಥ್‌ಡ್ರಾ ಮಾಡ್ತೀರಾ? ಫೆ.15ರಿಂದ SBI ಹೊಸ ನಿಯಮ
ನೀವು IMPS ಹಣ ವರ್ಗಾವಣೆ, ಎಟಿಎಂನಿಂದ ವಿಥ್‌ಡ್ರಾ ಮಾಡ್ತೀರಾ? ಫೆಬ್ರವರಿ 15ರಿಂದ ಶುಲ್ಕ ಹೆಚ್ಚಳವಾಗುತ್ತಿದೆ. ಎಟಿಎಂ ಮೂಲಕ ಹಣ ಹಿಂಪಡೆಯುವುದು, ಐಪಿಎಂಪಿಸ್ ಮೂಲಕ ಹಣ ವರ್ಗಾವಣೆ ಮಾಡುವುದಕ್ಕೂ ಚಾರ್ಜ್ ಅನ್ವಯ.

ಫೆಬ್ರವರಿ 15ರಿಂದ ಹೊಸ ನೀತಿ
ದೇಶದ ಅತೀ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗ್ರಾಹಕರ ಟ್ರಾನ್ಸಾಕ್ಷನ್ ಪರಿಷ್ಕರಿಸಿದೆ. ಇದು ಪ್ರತಿ ದಿನ ಗ್ರಾಹಕರ ತಮ್ಮ ವಹಿವಾಟುಗಳ ಮೇಲೆ ಪರಿಣಾಮ ಬೀರಲಿದೆ. ಫೆಬ್ರವರಿ 15 ರಿಂದ ಐಎಂಪಿಎಸ್ ಮೂಲಕ ಹಣ ವರ್ಗಾವಣೆ, ಎಟಿಎಂ ಮೂಲಕ ಹಣ ವಿಥ್‌ಡ್ರಾ ಮಾಡುವಾಗ ಶುಲ್ಕ ಪಾವತಿಸಬೇಕು.
ಐಎಂಪಿಎಸ್ ಹಣ ವರ್ಗಾವಣೆ
ಬಹುತೇಕರು ಹಣ ವರ್ಗಾವಣೆಗೆ ಐಎಂಪಿಎಸ್ ವಿಧಾನ ಆಯ್ಕೆ ಮಾಡುತ್ತಾರೆ. IMPS ಮೂಲಕ ಹಣ ತಕ್ಷಣ ವರ್ಗಾವಣೆಯಾಗುತ್ತದೆ. IMPS ಮೂಲಗ ಗರಿಷ್ಠ 5 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಲು ಸಾಧ್ಯ. ಇದೀಗ ಎಸ್‌ಬಿಐ ಬ್ಯಾಂಕ್ ತನ್ನ ಗ್ರಾಹಕರಿಗೆ 25,000 ರೂಪಾಯಿ ವರೆಗಿನ ಹಣ ವರ್ಗಾವಣೆಗೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಜನ ಸಾಮಾನ್ಯರು ಕಡಿಮೆ ಮೊತ್ತದ ಅಂದರೆ 25,000 ರೂಪಾಯಿವರೆಗೆ ಯಾವುದೇ ಶುಲ್ಕ ಇರುವುದಿಲ್ಲ. ಎಸ್‌ಬಿಐ ಇಂಟರ್ನೆಟ್ ಬ್ಯಾಂಕಿಂಗ್, ಯೋನೋ ಆ್ಯಪ್, ಮೊಬೈಲ್ ಬ್ಯಾಂಕಿಂಗ್ ಮೂಲಕ ಗರಿಷ್ಠ 25,000ರೂ ವರೆಗೆ ಫ್ರಿ.
IMPS ವರ್ಗಾವಣೆ ಶುಲ್ಕದ ವಿವರ
25,000 ರೂಪಾಯಿಗಿಂತ ಮೇಲ್ಪಟ್ಟು IMPS ಮೂಲಕ ಹಣ ವರ್ಗಾವಣೆ ಮಾಡಲು ಶುಲ್ಕ ಅನ್ವಯವಾಗಲಿದೆ.ಶುಲ್ಕದ ವಿವರ ಇಲ್ಲಿದೆ
25,000 ರೂಪಾಯಿಯಿಂದ 1 ಲಕ್ಷ ರೂ ವರೆಗೆ : 2 ರೂಪಾಯಿ + GST
1 ಲಕ್ಷ ರೂಪಾಯಿಯಿಂದ 2 ಲಕ್ಷ ರೂ ವರೆಗೆ: 6 ರೂಪಾಯಿ + GST
2 ಲಕ್ಷ ರೂಪಾಯಿಯಿಂದ 6 ಲಕ್ಷ ರೂ ವರೆಗೆ : 10 ರೂಪಾಯಿ + GST
ಬ್ರಾಂಚ್ ಮೂಲಕ IMPS ವರ್ಗಾವಣೆ
ಎಸ್‌ಬಿಐ ಬ್ಯಾಂಕ್ ಮೂಲಕ ಐಎಂಪಿಎಸ್ ಹಣ ವರ್ಗಾವಣೆಗೆ 2 ರೂಪಾಯಿಯಿಂದ 20 ರೂಪಾಯಿ ಜೊತೆಗೆ ಜಿಎಸ್‌ಟಿ ಶುಲ್ಕ ವಿಧಿಸಲಾಗುತ್ತದೆ. ಈ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇದು ಸದ್ಯ ಇರುವ ಶುಲ್ಕ ನೀತಿಯೇ ಮುಂದುವರಿಯಲಿದೆ.
ಬ್ರಾಂಚ್ ಮೂಲಕ IMPS ವರ್ಗಾವಣೆ
ಎಟಿಎಂ ಹಣ ವಿಥ್‌ಡ್ರಾ ನೀತಿ
ಎಟಿಎಂ ಹಣ ವಿಥ್‌ಡ್ರಾ ನೀತಿ ಡಸೆಂಬರ್ 1, 2025ರಿಂದ ಜಾರಿಗೆ ಬಂದಿದೆ. ಎಸ್‌ಬಿಐ ಗ್ರಾಹಕರು ತಮ್ಮ ಉಚಿತ ಟ್ರಾನ್ಸಾಕ್ಷನ್ ಲಿಮಿಟ್ ಮುಗಿದ ಬಳಿಕ ಎಟಿಎಂ ಮೂಲಕ ಹಣ ಪಡೆಯುವಾಗ ಪ್ರತಿ ಟ್ರಾನ್ಸಾಕ್ಷನ್‌ಗೆ 23 ರೂಪಾಯಿ + GST ಅನ್ವಯವಾಗಲಿದೆ. ಈ ಹಿಂದೆ ಸ್ಯಾಲರಿ ಖಾತೆಗಳಿಗೆ ಅನ್‌ಲಿಮಿಟೆಡ್ ಟ್ರಾನ್ಸಾಕ್ಷನ್ ನೀಡಲಾಗಿತ್ತು. ಆದರೆ ಇದೀಗ ತಿಂಗಳಿಗೆ ಗರಿಷ್ಠ 10 ಟ್ರಾನ್ಸಾಕ್ಷನ್ ಮಾತ್ರ ಉಚಿತವಾಗಿ ನೀಡಲಾಗುತ್ತದೆ.
ಎಟಿಎಂ ಹಣ ವಿಥ್‌ಡ್ರಾ ನೀತಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

