11:11 PM (IST) Apr 01

India Latest News Live 1 April 2026IPL 2026 - ಸೋಲಿನ ದವಡೆಯಿಂದ ಪಾರಾದ ಡೆಲ್ಲಿ ಕ್ಯಾಪಿಟಲ್ಸ್; ಲಖನೌಗೆ ತವರಿನಲ್ಲೇ ಮರ್ಮಾಘಾತ!

142 ರನ್‌ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್, 26 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಇಂಪ್ಯಾಕ್ಟ್ ಆಟಗಾರ ಸಮೀರ್ ರಿಜ್ವಿ ಅವರ ಅಜೇಯ ಅರ್ಧಶತಕ ಹಾಗೂ ಟ್ರಿಸ್ಟಿನ್ ಸ್ಟಬ್ಸ್ ಅವರ ಸಮಯೋಚಿತ ಆಟದಿಂದ ಡೆಲ್ಲಿ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ಲಖನೌಗೆ ತವರಿನಲ್ಲೇ ಆಘಾತ ನೀಡಿತು.
Read Full Story
10:22 PM (IST) Apr 01

India Latest News Live 1 April 2026ಸ್ಥಳೀಯರನ್ನು ರಾತ್ರೋರಾತ್ರಿ ಶ್ರೀಮಂತರನ್ನಾಗಿ ಮಾಡಿದ ನೋಯ್ಡಾ ಏರ್‌ಪೋರ್ಟ್ - ಹೆಲಿಕಾಪ್ಟರ್ ಖರೀದಿಸಿದ ರೈತ

ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡ ಭೂಮಿಗೆ ಭಾರಿ ಮೊತ್ತದ ಪರಿಹಾರ ದೊರೆತಿದೆ. ಇದರಿಂದಾಗಿ, ಭೂಮಿ ನೀಡಿದ ರೈತರೊಬ್ಬರು 15 ಕೋಟಿ ರೂ. ಪರಿಹಾರ ಪಡೆದು ಹೆಲಿಕಾಪ್ಟರ್ ಖರೀದಿಸಿದ ವಿಚಾರ ಈಗ ಭಾರಿ ಸುದ್ದಿಯಾಗುತ್ತಿದೆ.

Read Full Story
10:10 PM (IST) Apr 01

India Latest News Live 1 April 2026'ನೀನೇ ಹಿಂಗಿದ್ದೀಯಾ ಅಂದ್ಮೆಲೇ, ನಿನ್ನ ಮಗಳು ಹೇಗಿರಬೇಡ..10 ಸಾವಿರ ಕೊಡ್ತೆನೆ ಅವಳ ಕಳಿಸು' ASI ಕಾಮದಾಸೆಗೆ ಬೆಚ್ಚಿಬಿದ್ದ ಮಹಿಳೆ

ಮಹಾರಾಷ್ಟ್ರದ ಅಕೋಲಾದಲ್ಲಿ, ಸಹಾಯಕ ಪೊಲೀಸ್ ಉಪನಿರೀಕ್ಷಕ ರಾಜೇಶ್ ಜಾಧವ್ ಅವರು ವಶದಲ್ಲಿದ್ದ ಮಹಿಳೆಯ ಮಗಳನ್ನು ಲೈಂಗಿಕ ಸುಖಕ್ಕಾಗಿ ಕಳುಹಿಸುವಂತೆ ಬೇಡಿಕೆಯಿಟ್ಟಿದ್ದಾರೆ. ಈ ಘಟನೆಯ ನಂತರ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ. 

Read Full Story
09:48 PM (IST) Apr 01

India Latest News Live 1 April 2026ಚಿರಂಜೀವಿ ಜೊತೆಗಿನ ಇಂಡಸ್ಟ್ರಿ ಹಿಟ್ ಸಿನಿಮಾ ಮಿಸ್ ಮಾಡಿಕೊಂಡ ಟಬು - ಆ ಸ್ಟಾರ್ ನಟಿಯೇ ಕಾರಣವಾದ್ರಾ?

ನಟಿ ಟಬು ಬಾಲಿವುಡ್‌ನಲ್ಲಿ ಹೆಚ್ಚು ಸಕ್ರಿಯರಾಗಿದ್ದರೂ, ತೆಲುಗಿನಲ್ಲಿ ದೊಡ್ಡ ಸ್ಟಾರ್ ಆಗುವ ಅವಕಾಶವನ್ನು ಕಳೆದುಕೊಂಡರು. ಅದ್ರಲ್ಲೂ ಚಿರಂಜೀವಿ ಜೊತೆಗಿನ ಇಂಡಸ್ಟ್ರಿ ಹಿಟ್ ಸಿನಿಮಾವನ್ನು ಮಿಸ್ ಮಾಡಿಕೊಂಡರು.

Read Full Story
09:12 PM (IST) Apr 01

India Latest News Live 1 April 2026ಆ ಸಿನಿಮಾದಲ್ಲಿ ನಟಿಸಿದ್ದು ನನ್ನ ಕೆರಿಯರ್‌ನ ಅತಿದೊಡ್ಡ ತಪ್ಪು - ನಯನತಾರಾ ಓಪನ್ ಮಾತು

ತಮಿಳಿನ ಬ್ಲಾಕ್‌ಬಸ್ಟರ್ ಹಿಟ್ ಆಗಿದ್ದ ಒಂದು ಸಿನಿಮಾದಲ್ಲಿ ನಟಿಸಿದ್ದು ನಾನು ಮಾಡಿದ ಅತಿದೊಡ್ಡ ತಪ್ಪು ಎಂದು ನಟಿ ನಯನತಾರಾ ಸಂದರ್ಶನವೊಂದರಲ್ಲಿ ಓಪನ್ ಆಗಿ ಹೇಳಿಕೊಂಡಿದ್ದಾರೆ. ಆ ಸಿನಿಮಾ ಯಾವುದು? ಇಲ್ಲಿದೆ ವಿವರ.

Read Full Story
08:56 PM (IST) Apr 01

India Latest News Live 1 April 2026ಇರಾನ್‌ ಮುಂದೆ ಮಂಡಿಯೂರಿದ ಅಮೆರಿಕ? - ಶೀಘ್ರದಲ್ಲೇ ಕದನ ವಿರಾಮ, ಸಂಚಲನ ಮೂಡಿಸಿದ ಡೊನಾಲ್ಡ್ ಟ್ರಂಪ್ ಪೋಸ್ಟ್‌

ಡೊನಾಲ್ಡ್ ಟ್ರಂಪ್ ತಮ್ಮ ಹೊಸ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಇರಾನ್ ಕದನ ವಿರಾಮಕ್ಕಾಗಿ ಯಾಚಿಸುತ್ತಿದೆ ಎಂದು ಹೇಳಿದ್ದಾರೆ. ಹೊರ್ಮುಜ್ ಜಲಸಂಧಿಯನ್ನು ಮುಕ್ತಗೊಳಿಸುವುದೊಂದೇ ಕದನ ವಿರಾಮಕ್ಕೆ ಇರುವ ಏಕೈಕ ಷರತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read Full Story
08:07 PM (IST) Apr 01

India Latest News Live 1 April 2026FASTag ವಾರ್ಷಿಕ ಪಾಸ್‌ ದರ ಹೆಚ್ಚಳ, ಈಗಾಗಲೇ ಪಾಸ್‌ ಖರೀದಿ ಮಾಡಿದವರಿಗೂ ತಟ್ಟುತ್ತಾ ಬೆಲೆ ಏರಿಕೆ ಬಿಸಿ, ಇಲ್ಲಿದೆ ಡೀಟೇಲ್ಸ್‌..

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಖಾಸಗಿ ವಾಹನಗಳ ಫಾಸ್ಟ್ಯಾಗ್ ವಾರ್ಷಿಕ ಪಾಸ್ ಬೆಲೆಯನ್ನು ಏಪ್ರಿಲ್ 1 ರಿಂದ ₹3,075 ಕ್ಕೆ ಹೆಚ್ಚಿಸಿದೆ. ಈ ಹೊಸ ದರವು, ಹೊಸದಾಗಿ ಪಾಸ್ ಖರೀದಿಸುವವರಿಗೆ ಅಥವಾ ನವೀಕರಿಸುವವರಿಗೆ ಮಾತ್ರ ಅನ್ವಯಿಸುತ್ತದೆ.

Read Full Story
07:51 PM (IST) Apr 01

India Latest News Live 1 April 2026ವೈರಲ್ ಆಯ್ತು ಗ್ಲೋಬಲ್ ಸ್ಟಾರ್ ಅಧ್ಯಾತ್ಮಿಕ ಪಯಣ; ಸುವರ್ಣ ಮಂದಿರದಲ್ಲಿ 'ಸೇವೆ' ಮಾಡ್ತಿರೋ ಪ್ರಿಯಾಂಕಾ ಚೋಪ್ರಾ!

ಈ ಹಿಂದೆ ಅಯೋಧ್ಯೆ ರಾಮ ಮಂದಿರಕ್ಕೂ ಭೇಟಿ ನೀಡಿದ್ದ ಪ್ರಿಯಾಂಕಾ, ಈಗ ಸುವರ್ಣ ಮಂದಿರಕ್ಕೆ ಭೇಟಿ ನೀಡುವ ಮೂಲಕ ತಮ್ಮ ಅಧ್ಯಾತ್ಮಿಕ ಪಯಣವನ್ನು ಮುಂದುವರಿಸಿದ್ದಾರೆ. ಕೇವಲ ಗ್ಲಾಮರ್ ಲೋಕಕ್ಕೆ ಸೀಮಿತವಾಗದೆ, ಪೂಜೆ, ಪುನಸ್ಕಾರ ಮತ್ತು ಜನಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಅವರು ಇತರರಿಗೆ ಮಾದರಿಯಾಗಿದ್ದಾರೆ.

Read Full Story
07:22 PM (IST) Apr 01

India Latest News Live 1 April 2026ಆಹಾರ ಕದ್ದಿದ್ದಕ್ಕಾಗಿ ಪುಟ್ಟ ಹುಡುಗನನ್ನು 5 ಗಂಟೆಗಳ ಕಾಲ ಡೀಪ್‌ ಫ್ರೀಜರ್‌ನಲ್ಲಿ ಲಾಕ್‌ ಮಾಡಿದ ಅಂಗಡಿ ಮಾಲೀಕ!

ಉತ್ತರ ಪ್ರದೇಶದ ಹಾಪುರ್‌ನಲ್ಲಿ, ಆಹಾರ ಕಳ್ಳತನದ ಆರೋಪದ ಮೇಲೆ 7 ವರ್ಷದ ಬಾಲಕನನ್ನು ಅಂಗಡಿ ಮಾಲೀಕನೊಬ್ಬ ಐದು ಗಂಟೆಗಳ ಕಾಲ ಡೀಪ್ ಫ್ರೀಜರ್‌ನಲ್ಲಿ ಕೂಡಿಹಾಕಿದ್ದಾನೆ. ಈ ಅಮಾನವೀಯ ಘಟನೆಯ ವಿಡಿಯೋ ವೈರಲ್ ಆದ ನಂತರ, ಸ್ಥಳೀಯರು ಬಾಲಕನನ್ನು ರಕ್ಷಿಸಿದ್ದಾರೆ.

Read Full Story
06:52 PM (IST) Apr 01

India Latest News Live 1 April 2026ಪಶ್ಚಿಮ ಏಷ್ಯಾದಿಂದ ಶುಭಸುದ್ದಿ - ಯುದ್ಧದ ನಡುವೆಯೂ ಭಾರತದ ನೆರವಿಗೆ ಬಂದ ಇರಾನ್

Iran Sends Crude Oil to India After 7 Years Amid Middle East War ಯುದ್ಧದ ಉದ್ವಿಗ್ನತೆಯ ನಡುವೆಯೂ, ಇರಾನ್ ಏಳು ವರ್ಷಗಳ ಸುದೀರ್ಘ ವಿರಾಮದ ನಂತರ ಭಾರತಕ್ಕೆ ಕಚ್ಚಾ ತೈಲವನ್ನು ಹೊತ್ತ ಹಡಗನ್ನು ಕಳುಹಿಸಿದೆ. 'ಪಿಂಗ್ ಶುನ್' ಹೆಸರಿನ ಈ ಹಡಗು ಸುಮಾರು 5 ಲಕ್ಷ ಬ್ಯಾರಲ್ ತೈಲವನ್ನು ತರುತ್ತಿದೆ.

Read Full Story
06:49 PM (IST) Apr 01

India Latest News Live 1 April 2026ಬಾಕ್ಸ್ ಆಫೀಸ್‌ನಲ್ಲಿ 'ಧುರಂಧರ್ 2' ಧೂಳೆಬ್ಬಿಸಿದೆ - 800 ಕೋಟಿ ದಾಟಿದ ಚಿತ್ರಕ್ಕೆ ವಿಕ್ಕಿ ಕೌಶಲ್ ಫಿದಾ!

ಧುರಂಧರ್ 2 ಚಿತ್ರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ. ಈ ಸಾಲಿಗೆ ಈಗ ನಟ ವಿಕ್ಕಿ ಕೌಶಲ್ ಕೂಡ ಸೇರಿದ್ದು, ಸೋಶಿಯಲ್ ಮೀಡಿಯಾದಲ್ಲಿ ಚಿತ್ರತಂಡವನ್ನು ಮನಸಾರೆ ಹೊಗಳಿದ್ದಾರೆ.

Read Full Story
06:39 PM (IST) Apr 01

India Latest News Live 1 April 2026'ಧುರಂಧರ್' ಎರಡೂ ಭಾಗಗಳನ್ನೂ ಒಟ್ಟಿಗೇ ನೋಡುವ ಚಾನ್ಸ್.. 9 ಗಂಟೆಗಳನ್ನು ಥಿಯೇಟರ್‌ನಲ್ಲಿ ಕಳೆಯಲು ನೀವು ರೆಡಿನಾ?

ಹಿಂದೆ 'ಬಾಹುಬಲಿ' ಸಿನಿಮಾವನ್ನು 'ಬಾಹುಬಲಿ ದಿ ಎಪಿಕ್' ಹೆಸರಿನಲ್ಲಿ ಎರಡೂ ಭಾಗಗಳನ್ನು ಸೇರಿಸಿ ರಿಲೀಸ್ ಮಾಡಲಾಗಿತ್ತು. ಈಗ ರಣವೀರ್ ಅಭಿಮಾನಿಗಳು ಕೂಡ ಅದೇ ರೀತಿಯ ನಿರೀಕ್ಷೆಯಲ್ಲಿದ್ದಾರೆ. ಸದ್ಯಕ್ಕಂತೂ ಹಾಂಕಾಂಗ್ ಸಿನಿಪ್ರಿಯರಿಗೆ ಈ 'ಧುರಂಧರ್ ಮ್ಯಾರಾಥಾನ್' ಮಸ್ತ್ ಮನರಂಜನೆ ನೀಡಲು ಸಜ್ಜಾಗಿದೆ. ಭಾರತದಲ್ಲೂ ಇಂಥದ್ದೊಂದು ಪ್ರದರ್ಶನ ನಡೆಯುತ್ತಾ?

Read Full Story
06:21 PM (IST) Apr 01

India Latest News Live 1 April 2026ಕೇರಳ ಸಮೀಕ್ಷೆ - 'ದೇವರ ನಾಡಲ್ಲಿ' ಪಿಣರಾಯಿ ವಿಜಯನ್ ಪತನ? ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ ಅಧಿಕಾರ

ಮುಂದಿನ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೇರಲಿದೆ ಎಂದು ಮನೋರಮಾ ನ್ಯೂಸ್ ಸಿ-ವೋಟರ್ ಸಮೀಕ್ಷೆ ಭವಿಷ್ಯ ನುಡಿದಿದೆ. 140 ಸ್ಥಾನಗಳ ಪೈಕಿ ಯುಡಿಎಫ್ 69-81 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದ್ದು, ಆಡಳಿತಾರೂಢ ಎಲ್‌ಡಿಎಫ್ 57-69 ಸ್ಥಾನಗಳಿಗೆ ಸೀಮಿತವಾಗಲಿದೆ. 

Read Full Story
06:20 PM (IST) Apr 01

India Latest News Live 1 April 2026ತನ್ನಂತೆ ಇರುವವನ ಕರೆಸಿ ಸ್ನೇಹಿತನಿಗೆ ಏಪ್ರಿಲ್ ಫೂಲ್ ಮಾಡಿದ ಸಚಿನ್ ತೆಂಡೂಲ್ಕರ್

ಏಪ್ರಿಲ್ ಫೂಲ್ ದಿನದಂದು, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ತಮ್ಮಂತೆಯೇ ಕಾಣುವ ವ್ಯಕ್ತಿಯನ್ನು ಬಳಸಿ ಆತ್ಮೀಯ ಸ್ನೇಹಿತನಿಗೆ ಪ್ರಾಂಕ್ ಮಾಡಿದ್ದಾರೆ. ಸಚಿನ್ ಎಂದು ಭಾವಿಸಿ ಸ್ನೇಹಿತ ಅವರನ್ನು ತಬ್ಬಿಕೊಂಡಾಗ, ನಡೆದ ಘಟನೆಯನ್ನು ಸಚಿನ್ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Read Full Story
06:01 PM (IST) Apr 01

India Latest News Live 1 April 2026ಕಸಬ್​ ಒಬ್ಬ ಜಂಟಲ್​ಮನ್, ಪಾಕ್​ ತುಂಬಾ ಒಳ್ಳೆ ದೇಶ​ ಎಂದ ಶಾರುಖ್ - ಬಾಲಿವುಡ್​ ಬಾದ್​ಶಾಹ್​ನ ವಿಡಿಯೋ ನೋಡಿ

ನಟ ಶಾರುಖ್ ಖಾನ್ ಅವರ ಹಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಒಂದರಲ್ಲಿ ಅವರು 26/11ರ ಮುಂಬೈ ದಾಳಿಯ ಉಗ್ರ ಕಸಬ್‌ನನ್ನು 'ಜಂಟಲ್‌ಮನ್' ಎಂದು ಕರೆದಿದ್ದರೆ, ಮತ್ತೊಂದರಲ್ಲಿ ಪಾಕಿಸ್ತಾನದ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
Read Full Story
05:28 PM (IST) Apr 01

India Latest News Live 1 April 2026ಹೆಣ ಹೊರುವುದೇ ಮಕ್ಕಳಿಗೆ ಆಟ - ಗಾಜಾದ ಭೀಕರ ಚಿತ್ರಣ ತೆರೆದಿಟ್ಟ ಪುಟಾಣಿಗಳ ಎದೆ ಝಲ್ಲೆನಿಸುವ ವಿಡಿಯೋ

ಮೂರು ವರ್ಷಗಳಿಂದ ನಡೆಯುತ್ತಿರುವ ಇಸ್ರೇಲ್-ಗಾಜಾ ಯುದ್ಧವು ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರಿದೆ. ಹುಟ್ಟಿನಿಂದಲೇ ಹಿಂಸೆ ಮತ್ತು ಸಾವನ್ನು ನೋಡುತ್ತಿರುವ ಈ ಮಕ್ಕಳಿಗೆ, ಯುದ್ಧವೇ ಸಾಮಾನ್ಯ ಜೀವನವಾಗಿದೆ. ಇತ್ತೀಚೆಗೆ ವೈರಲ್ ಆದ ವಿಡಿಯೋವೊಂದರಲ್ಲಿ, ಮಕ್ಕಳು ಗೊಂಬೆಯನ್ನು ಹೆಣದಂತೆ ಹೊತ್ತು ಸಾಗಿಸುವ ಆಟವಾಡುತ್ತಿರುವುದು ಯುದ್ಧದ ಕರಾಳತೆಯನ್ನು ಮತ್ತು ಕಳೆದುಹೋದ ಮುಗ್ಧತೆಯನ್ನು ತೋರಿಸುತ್ತದೆ.
Read Full Story
05:28 PM (IST) Apr 01

India Latest News Live 1 April 2026ಏಷಿಯನ್ ಬುಕ್ ಆಫ್ ರೆಕಾರ್ಡ್ಸ್ ಸೇರಿದ ದಿನೇಶ್ ಕಾರ್ತಿಕ್ ಐಕಾನಿಕ್ ಜರ್ಸಿ ನಂ.19

ಗ್ರಾಂಡ್ 7 ಸ್ಪೋರ್ಟ್ಸ್ ಮೀಟ್‌ನ ಅಧ್ಯಕ್ಷತೆ ವಹಿಸಿದ್ದ ಚೆನ್ನೈಸ್ ಅಮಿರ್ತಾ ಗ್ರೂಪ್‌ನ ಅಧ್ಯಕ್ಷರಾದ ಆರ್.ಬೂಮೀನಾಥನ್ ಅವರು ಮಾತಾಡಿ ದಿನೇಶ್ ಕಾರ್ತಿಕ್ ಈ ದಾಖಲೆಯು ವಿದ್ಯಾರ್ಥಿಗಳಲ್ಲಿ ದೃಢತೆ, ಪರಿಶ್ರಮ ಹಾಗೂ ಆತ್ಮವಿಶ್ವಾಸದ ಮೌಲ್ಯಗಳನ್ನು ಉತ್ತೇಜಿಸಲು ನೆರವಾಗುತ್ತದೆ ಎಂದಿದ್ದಾರೆ. ಏನಿದು ಜರ್ಸಿ ನಂ.19 ಸ್ಪೆಷಾಲಿಟಿ? ನೋಡಿ..

Read Full Story
05:12 PM (IST) Apr 01

India Latest News Live 1 April 2026ಮದುವೆ ಇಲ್ಲ ಮಲೆಯಾಳಂ ಚಿತ್ರರಂಗವೇ ನನಗೆಲ್ಲಾ! ಅನುಷ್ಕಾ ಶೆಟ್ಟಿ ಫ್ಯಾನ್ಸ್‌ಗೆ ಗುಡ್ ನ್ಯೂಸ್

ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ, 'ಕಥನಾರ್ - ದಿ ವೈಲ್ಡ್ ಸೋರ್ಸೆರರ್' ಎಂಬ ಮಲಯಾಳಂ ಚಿತ್ರದ ಮೂಲಕ ಮತ್ತೆ ತೆರೆಗೆ ಮರಳುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಈ ಹಾರರ್-ಫ್ಯಾಂಟಸಿ ಚಿತ್ರದ ಟ್ರೈಲರ್, ಅನುಷ್ಕಾ ಅವರ ಹೊಸ ಲುಕ್ ಅನ್ನು ಬಹಿರಂಗಪಡಿಸಿದ್ದು, ಚಿತ್ರವು 15 ಭಾಷೆಗಳಲ್ಲಿ ತೆರೆಕಾಣಲಿದೆ.
Read Full Story
05:05 PM (IST) Apr 01

India Latest News Live 1 April 2026ನಿನ್ನ ರಸಗುಲ್ಲಾಕ್ಕೆ ಬೆಂಕಿ ಹಾಕಾ ಎಂದ ವಧು- ವರ ಕಿಡಿಕಿಡಿ - ಆಮೇಲೆ ಆಗಿದ್ದೇನು? ವಿಡಿಯೋ ವೈರಲ್​

ವಧುವೊಬ್ಬಳು ವರನಿಗೆ ರಸಗುಲ್ಲಾ ತಿನ್ನಿಸಲು ಮುಂದಾದಾಗ ಆತ ನಿರಾಕರಿಸುತ್ತಾನೆ. ನಂತರ ವರನು ತಿನ್ನಿಸಲು ಬಂದಾಗ ವಧು ಮುಖ ತಿರುಗಿಸುತ್ತಾಳೆ. ಇದರಿಂದ ಕೋಪಗೊಂಡ ವರನು ರಸಗುಲ್ಲಾಗಳನ್ನು ಎಸೆದು ಹೋಗುವ ಫನ್ನಿ ವಿಡಿಯೋವೊಂದು ವೈರಲ್ ಆಗಿದೆ.
Read Full Story
04:57 PM (IST) Apr 01

India Latest News Live 1 April 2026ಕೆಜಿಎಫ್ ಬಾಕ್ಸಾಫೀಸ್​ ಕೋಟೆ ಕೆಡವಿದ ರಣ್ವೀರ್ ಸಿಂಗ್! ಧುರಂಧರ್ 2 ಮುಂದೆ ಬಾಹುಬಲಿ, ಪುಷ್ಪ ರೆಕಾರ್ಡ್ ನುಚ್ಚುನೂರು!

'ಧುರಂಧರ್-2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಎರಡು ಭಾಗಗಳಿಂದ ಒಟ್ಟು 2,700 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ, ಈ ಚಿತ್ರವು 'ಬಾಹುಬಲಿ', 'ಪುಷ್ಪ', ಮತ್ತು 'ಕೆಜಿಎಫ್' ಸರಣಿಗಳ ಒಟ್ಟು ಗಳಿಕೆಯ ದಾಖಲೆಗಳನ್ನು ಮುರಿದುಹಾಕಿದೆ. ಭಾರತದ ಸ್ಪೈ ಏಜೆಂಟ್ ಕಥೆಯುಳ್ಳ ಈ ಸಿನಿಮಾ ದೇಶಾದ್ಯಂತ ದೊಡ್ಡ ಸಂಚಲನ ಮೂಡಿಸಿದೆ.
Read Full Story